Police Bhavan Kalaburagi

Police Bhavan Kalaburagi

Saturday, March 16, 2013

GULBARGA DISTRICT REPORTED CRIMES


ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ದಿನಾಂಕ: 29/01/2013 ರಂದು 9:30 ಎಎಮ್ ಕ್ಕೆ ನನ್ನ ದ್ಚಿಚಕ್ರ ವಾಹನ ಹಿರೋ ಹೊಂಡ ಸ್ಪ್ಲೆಂಡರ ನಂ:ಕೆಎ-25 ಆರ್-3716 ಚೆಸ್ಸಿ ನಂ:01ಸಿ20ಸಿ-05800 ಇಂಜಿನ ನಂ:01ಸಿ18ಎಮ್-08393 ನೇದ್ದು ಗುಲಬರ್ಗಾದ ಕೇಂದ್ರ ಬಸ್ ನಿಲ್ದಾಣದ  ಹೊರಗಡೆ ನಿಲ್ಲಿಸಿ ಒಳಗಡೆ ಹೋಗಿ ಬರುವಷ್ಟರಲ್ಲಿ ನನ್ನ ವಾಹನ ನಾನು ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ಎಲ್ಲಾಕಡೆ ಹುಡುಕಾಡಿ ಪರಿಚಯಸ್ಥರಲ್ಲಿ ವಿಚಾರಿಸಲಾಗಿ ಎಲ್ಲಿಯು ನನ್ನ ವಾಹನದ ಬಗ್ಗೆ ಮಾಹಿತಿ ಸಿಕ್ಕಿರುವದಿಲ್ಲ. ಯಾರೋ ಕಳ್ಳರು ನನ್ನ ಹಿರೊ ಹೊಂಡ ಸ್ಪ್ಲೆಂಡರ ಮೋಟಾರ ಸೈಕಲ್  ಅ.ಕಿ. 25000=00 ರೂ ಬೆಲೆಬಾಳುವ ವಾಹನವು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಸಿದ್ರಾಮ ತಂದೆ ಚಂದ್ರಕಾಂತ ಪಟ್ನೆ ವಯಾ:24 ಉ:ವಿದ್ಯಾರ್ಥಿ ಸಾ:ಕೈಲಾಶನಗರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:39/2012 ಕಲಂ:379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ:ಶ್ರೀ ಮರೆಪ್ಪ ತಂದೆ ಪೀರಪ್ಪ ನಡುವಿನಮನಿ ಸಾ:ಮಲ್ಲಾ (ಬಿ) ತಾ: ಜೇವರ್ಗಿ ರವರು ನಾನು ದಿನಾಂಕ: 15-03-2013 ರಂದು ಸಾಯಾಂಕಾಲ 4-00 ಗಂಟೆಯ ಸುಮಾರಿಗೆ ಮಲ್ಲಾ (ಬಿ) ಗ್ರಾಮದ ಶರಣಪ್ಪ ಅವಂಟಗಿ ಇವರ ಹೊಟೆಲದ ಮುಂದೆ ಕುಡಿಯುವ ನೀರಿನ ಪೈಪ್ ಒಡೆದ ವಿಷಯದಲ್ಲಿ ಮಲ್ಲಪ್ಪ ತಂದೆ ಗುಂಡಪ್ಪ ಬೇವನೂರ ಇತನು ಜಗಳ ತೆಗೆದು ಬಾರಕೊಲ ಗುಣಿಯಿಂದ ತಲೆಗೆ ಹೊಡೆದು ರಕ್ತಗಾಯಗೊಳಿಸಿ ಜಾತಿ ನಿಂದನೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ. ಠಾಣೆ ಗುನ್ನೆ ನಂ:39/2013 ಕಲಂ 324. 504. 506 ಐ.ಪಿ.ಸಿ ಸಂ 3(1)(10) ಎಸ್.ಸಿ/ಎಸ.ಟಿ ಪಿ.ಎ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: