Police Bhavan Kalaburagi

Police Bhavan Kalaburagi

Saturday, March 23, 2013

GULBARGA DISTRICT REPORTED CRIMES

ಅತ್ಯಾಚಾರ ಪ್ರಕರಣ:
ವಾಡಿ ಪೊಲೀಸ್ ಠಾಣೆ;ದಿನಾಂಕ:21-03-2013 ರಂದು ರಂದು ರಾತ್ರಿ ಊಟ ಮಾಡಿದ ನಂತರ ನಾನು ಮನೆಯ ಮುಂದೆ ಅಂಗಳದಲ್ಲಿ ಮಲಗಿದ್ದು, ರಾತ್ರಿ 11-30 ಗಂಟೆಯ ಸುಮಾರಿಗೆ ನಮ್ಮ ಮನೆಯ ಹತ್ತಿರವಿರುವ ರುದ್ರಪ್ಪಾ ತತ್ಯಾಂದೆ ಯಲ್ಲಪ್ಪ  ಗಡ್ಡಿಮನಿ ವಯಾ|| 30 ವರ್ಷ ಸಾ|| ಕೊಂಚುರ ತಾ||ಚಿತಾಪೂರ ಇತನು ನನ್ನ ಹತ್ತಿರ ಬಂದವನೆ ಒಮ್ಮೆಲೆ ನನ್ನ ಬಾಯಿ ಒತ್ತಿ ಹೀಡಿದು ಚೀರಾಡಿದರೆ ಹೊಡೆಯುತ್ತೆನೆ ಅಂತಾ ನನ್ನನ್ನು ಏಳೆದುಕೊಂಡು ಹೋಗಿ ಗುಡಿಯ ಕಟ್ಟೆಯ ಮೇಲೆ ಮಲಗಲು ಹೇಳಿದನು ನಾನು ಮಲಗುವದಿಲ್ಲಾ ಅಂತಾ ತಲೆ ಆಲ್ಲಾಡಿಸಿದರು ಕೂಡಾ ಕಟ್ಟೆಯ ಮೇಲೆ ಒತ್ತಾಯ ಮಾಡಿ ಮಲಗಿಸಿ ನಾನೆ ನಿನಗೆ ಆಳುತ್ತೆನೆ, ನಿನಗೆ ಮದುವೆಯಾಗುತ್ತೆನೆ ಅಂತಾ ಹೇಳಿ ಜಭರಿ ಸಂಭೋಗ ಮಾಡಿದನು. ನಾನು ಅಳುತ್ತಾ ಅಲ್ಲಿಂದ ನಮ್ಮ ಮನೆಯ ಅಂಗಳದಲ್ಲಿ ಬಂದು ಮಲಗಿದೆನು. ಮುಂಜಾನೆ ನಮ್ಮ ತಂದೆಗೆ ಮತ್ತು ನಮ್ಮ ದೊಡ್ಡಮ್ಮಳಾದ ರತ್ನಮ್ಮಾಳಿಗೆ ವಿಷಯ ತಿಳಿಸಿದೆನು. ನನಗೆ ಮದುವೆಯಾಗುತ್ತೆನೆ ಅಂತಾ ಜಬರದಸ್ತಿಯಿಂದ ಸಂಭೋಗ ಮಾಡಿದವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ನೊಂದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:42/2013 ಕಲಂ, 506, 376 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ಶಿವಶಂಕರ ತಂದೆ ದೌಲಪ್ಪ ಹತ್ತರಗಿ ವಯಾ|| 52 ಸಾ|| ಮಲ್ಲಿಕಾರ್ಜುನ ಗುಡಿ ಹತ್ತಿರ ಹೀರಾಪೂರ ರವರು ನಾನು ದಿನಾಂಕ:21-03-13 ರಂದು ಸಂಜೆ 7-00 ಗಂಟೆ ಸುಮಾರಿಗೆ ಬಿದ್ದಾಪೂರ ಕಾಲೋನಿಯ ಉದ್ಯಾನ ವೈನ ಶಾಪದ ಹಿಂದಿನ ಖುಲ್ಲಾ ಜಾಗೆಯಲ್ಲಿ ಕುಡಿಯುತ್ತಾ ಕುಳಿತಾಗ ಸುದೋಧನ, ಶರಣಪ್ಪ ಸಾ:ಇಬ್ಬರು ಸಿದ್ದಾರ್ಥ ನಗರ ಗುಲಬರ್ಗಾ ಇವರು ಬಂದು, ಬೇರೆ ಕಡೆಯಿಂದ ಮಧ್ಯ ಖರೀದಿ ಮಾಡಿಕೊಂಡು ಇಲ್ಲಿ ಬಂದು ಕುಡಿಯುತ್ತೀ ಮಗನೇ ಅಂತಾ ಅವಾಚ್ಯವಾಗಿ ಬೈದು ಕಲ್ಲಿನಿಂದ ಬಲ ತಲೆಯ ಮೇಲೆ  ಮತ್ತು ಕೈಯಿಂದ ಬೆನ್ನ ಮೇಲೆ ಹೊಡೆದು ರಕ್ತಗಾಯ ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 147/2013 ಕಲಂ, 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.


No comments: