Police Bhavan Kalaburagi

Police Bhavan Kalaburagi

Saturday, April 6, 2013

GULBARGA DISTRICT REPORTED CRIMES


ಕೊಲೆ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ: ದಿನಾಂಕ:05.04.2013 ರಂದು  ಸಾಯಂಕಾಲ 4.00 ಗಂಟೆ ಸುನಾರಿಗೆ ಕೊಂಕನಳ್ಳಿ ಗುರುಲಿಂಗಪ್ಪಾ ತಂದೆ ನೀಲಕಂಠ ಬಿರಾದಾರ ರವರ ಮನೆಗೆ ಹಣ ತೆಗೆದುಕೊಂಡು ಬರುತ್ತೆನೆ ಅಂತಾ ನನ್ನ ತಾಯಿಯಾದ ಮಲ್ಲಮ್ಮ  ಇವಳು ಹೋಗಿದ್ದಳು, ದಿನಾಂಕ:06-04-2013 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ನಮ್ಮೂರ ಗ್ರಾಮ ಪಂಚಾಯತ ಹತ್ತಿರ ತೋಗರಿ ಕಟ್ಟಿಗೆಗಳ ಪಕ್ಕದಲ್ಲಿ ಅಯ್ಯಾಪ್ಪಾ ಸಾಹುಕಾರ ಇವರ ಹೋಲದಲ್ಲಿ ಒಬ್ಬಳಿಗೆ ಹೊಡೆದು ಹಾಕಿರುತ್ತಾರೆ, ಅಂತಾ ವಿಷಯ ಕೇಳಿ ನನ್ನ ತಮ್ಮನಾದ ಚೆನ್ನಬಸಪ್ಪಾ ಇತನು ಹೋಗಿ ನೋಡಲು  ನನ್ನ ತಾಯಿ ಮಲ್ಲಮ್ಮನ ಶವ ಇರುತ್ತದೆ. ನನ್ನ ತಾಯಿಗೆ ಕಲ್ಲುಗಳಿಂದ ಮುಖದ  ಮೇಲೆ &  ತಲೆಗೆ ಹೋಡೆದು ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾರೆ,  ನನ್ನ ತಾಯಿಯು ಆಸ್ತಿ ಸಂಬಂದ ಕೇಸು ಹಾಕಿದ್ದಕ್ಕೆ  ನನ್ನ ಮಾವನವರಾದ 1] ನಿಂಗಪ್ಪಾ ತಂದೆಬೀರಪ್ಪಾ ಪೂಜಾರಿ, 2] ರಾಜಶೇಖರ ತಂದೆ ಬೀರಪ್ಪಾ ಪೂಜಾರಿ ಸಾ:ಇಬ್ಬೂರು ನೀಲಹಳ್ಳಿ ರವರು ನನ್ನ ತಾಯಿಗೆ ಆಸ್ತಿ ವಿಷಯದಲ್ಲಿ ಹೊಡೆದು ಕೊಲೆ ಮಾಡಿರುತ್ತಾರೆ, ಅಂತಾ ಕು|| ಪವಿತ್ರಾ ತಂದೆ ಬೀರಪ್ಪಾ ಪೂಜಾರಿ ವ: 16 ವರ್ಷ ಉ:ವಿಧ್ಯಾರ್ಥಿನಿ  ಜಾತಿ:ಕುರುಬರ್ ಸಾ: ನೀಲಹಳ್ಳಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ   ಗುನ್ನೆ ನಂ:32/2013 ಕಲಂ, 302 ಸಂಗಡ 34 ಐ.ಪಿ.ಸಿ.  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ;
ಕಮಲಾಪೂರ ಪೊಲೀಸ್ ಠಾಣೆ:ಶ್ರೀ,  ಜರನಪ್ಪ ತಂದೆ ತಿಪ್ಪಾರೆಡ್ಡಿ ಕಮರೆಡ್ಡಿ ಸಾ|| ದಾಸರವಾಡಿ ತಾ||ಬಸವ ಕಲ್ಯಾಣ ಜಿ|| ಬೀದರ  ರವರು ನಾನು ಮತ್ತು ಹಣಮಂತಪ್ಪ ತಂದೆ ನಿಂಗಪ್ಪ ಗೊಲ್ಲರ ರವರು ಮೋಟರ್ ಸೈಕಲ್ ನಂ: ಕೆಎ-01-ಇ.ಹೆಚ್- 6441 ನೇದ್ದರ ಮೇಲೆ ದಿನಾಂಕ:05/04/2013 ರಂದು ಮುಡಬಿಯಲ್ಲಿ ನಮ್ಮ ಸಂಭಂದಿಕರ ಮದುವೆ ನಿಶ್ಚಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಮಲಾಪೂರ ಮಾರ್ಗವಾಗಿ ಹೋಗುತ್ತಿರುವಾಗ ಹಣಮಂತಪ್ಪಾ ಇತನು ಮೋಟರ್ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಅಪಘಾತ ಪಡಿಸಿದ್ದರಿಂದ ನನಗೆ ಮತ್ತು ಹಣಮಂತಪ್ಪ ಇವರಿಗೆ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2013 ಕಲಂ, 279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: