ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ, ಅವಿನಾಶ ತಂದೆ ದಿಗಂಬರರಾವ ಕುಲಕರ್ಣಿ ಸಾ: ನ್ಯೂ ರಾಘವೇಂದ್ರ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:30-03-2013 ರಂದು ಸಾಯಂಕಾಲ 7-00 ಗಂಟೆಗೆ ಬಸ್ಸ ಸ್ಟ್ಯಾಂಡ (ಕೇಂದ್ರ) ಎದುರುಗಡೆ ಮಾಹಾರಾಜ ಹೊಟೇಲ ಎದುರುಗಡೆ ಹಿರೋ ಹೊಂಡಾ ಡಿಯೋ ಮೋಟಾರ ಸೈಕಲ್ ಕೆಎ-32 ವಾಯ್-8166 ನೇದ್ದು ನಿಲ್ಲಿಸಿ ಚಹಾ ಕುಡಿದು ಬಂದು ನೋಡಲು, ನಿಲ್ಲಿಸಿದ ಸ್ಥಳದಲ್ಲಿ ನನ್ನ ಮೋಟಾರ ಸೈಕಲ್ ಇರಲಿಲ್ಲ. ಯಾರೋ ಕಳ್ಳರು ನನ್ನ ಮೋಟಾರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಅವಿನಾಶ ರವರು ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ:49/2013 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ದಿನಾಂಕ:06/04/2013 ರಂದು ಮಧ್ಯಾಹ್ನ ನನ್ನ ತಮ್ಮನಾದ ಉಮೇಶ ತಂದೆ ಕರೆಪ್ಪ ವಾರಿ, ಮತ್ತು ಆತನ ಗೆಳೆಯ ಇಮ್ರಾನ್ ತಂದೆ ಇಸ್ಮಾಯಿಲ ನಾಯಿಕೊಡಿ ಇಬ್ಬರು ಸಿಂದಗಿಯಲ್ಲಿರುವ ನಮ್ಮ ದೊಡಮ್ಮನಾದ ಶಾರದಭಾಯಿ ಮನೆಗೆ ಮೋಟಾರ ಸೈಕಲ್ ನಂ:ಕೆಎ-32-ಇಬಿ-7273 ನೇದ್ದರ ಮೇಲೆ ಹೊರಟಿದ್ದು, ಮದ್ಯಾಹ್ನ 3-50 ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 218 ರ ಮೇಲೆ ಬಿಲ್ಲಾಡ ಕ್ರಾಸ ಹತ್ತಿರ ಹೋಗುತ್ತಿದ್ದಾಗ ಕೆಎ-47-2394 ನೇದ್ದರ ಟೆಂಪೊ ಚಾಲಕನು ಎದುರುಗಡೆಯಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿದರ ಪರಿಣಾಮ ಉಮೇಶ ಇತನಿಗೆ ತಲೆಗೆ ಬಾರಿ ರಕ್ತ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ, ಇಮ್ರಾನ ತಂದೆ ಇಸ್ಮಾಯಿಲ್ ನಾಯಿಕೋಡಿ ಇತನಿಗೆ ತಲೆಗೆ ಮತ್ತು ಹಣೆಗೆ ಬಾರಿ ರಕ್ತಗಾಯವಾಗಿದ್ದರಿಂದ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಕೆ ಮಾಡಲಾಗಿದೆ. ಅಂತಾ ಮೃತನ ಅಣ್ಣನಾದ ಶ್ರೀ ಶಿವಾನಂದ ತಂದೆ ಕರೆಪ್ಪ ವಾರಿ ಸಾ:ಯಡ್ರಾಮಿ ತಾ:ಜೇವರ್ಗಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:45/2013 ಕಲಂ.279, 338,304 (ಎ), ಸಂ 187 ಐ ಎಮ್ ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
No comments:
Post a Comment