ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ;ದಿನಾಂಕ:19-05-2013 ರಂದು ರಾತ್ರಿ 11-15 ಗಂಟೆಗೆ ರಿಬ್ಬನಲ್ಲಿ-ವಾಘ್ದಾರಿ ರಾಜ್ಯ ಹೆದ್ದಾರಿಯ ಸೇಡಂನ ಹೆಚ್.ಡಿ.ಎಫ್.ಸಿ. ಬ್ಯಾಂಕ ಹತ್ತಿರ ಒಬ್ಬ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರು ಸೈಕಲ್ ಚಾಲಕನಾದ ಮುರಗೇಂದ್ರ ತಂದೆ ಮಲ್ಲಣ್ಣ ನಾಯ್ಕೊಡಿ ವಯ:30 ವರ್ಷ, ಉ:ಒಕ್ಕಲುತನ, ಜಾ:ಕಬ್ಬಲಿಗೇರ, ಸಾ:ಊಡಗಿ ಗ್ರಾಮದವನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಸೇಡಂ ಬಸ್ ನಿಲ್ದಾಣದ ಕಡೆಯಿಂದ ಚಲಾಯಿಸಿಕೊಂಡು ಬಂದು ರೋಡಿನ ಎಡಭಾಗಕ್ಕೆ ಇರುವ ಬ್ರಿಡ್ಜ್ ಗೆ ಡಿಕ್ಕಿ ಪಡಿಸಿ ಮೋಟಾರು ಸೈಕಲದೊಂದಿಗೆ ಬಿದ್ದಿದ್ದರಿಂದ ಭಾರಿರಕ್ತಗಾಯವಾಗಿರುತ್ತದೆ. ಸದರಿ ಮೋಟಾರು ಸೈಕಲ್ ನಂಬರ್ ನೋಡಲು ಅದು ಹೊಸದಾಗಿ ಇರುವದರಿಂದ ಪಾಸಿಂಗ್ ನಂಬರ್ ಬಿದ್ದಿರುವದಿಲ್ಲ. ಅದರ ಚೆಸ್ಸಿ ನಂಬರ್ ನೋಡಲು MBLHA10AMDHB08897 ನೇದ್ದಾಗಿರುತ್ತದೆ. ಕಾರಣ ಮೋಟಾರು ಸೈಕಲ್ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಶ್ರೀ, ದೇವಿಂದ್ರಕುಮಾರ ಹೆಚ್.ಸಿ ಸೇಡಂ ಪೊಲೀಸ್ ಠಾಣೆ ರವರು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ-127-2012 ಕಲಂ-279, 338 ಐಪಿಸಿ ನೇದ್ದರಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment