ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ.ಖಾಜಪ್ಪ ತಂದೆ ಶರಣಪ್ಪ ನಡುವಿನಕೇರಿ ವಯ:55 ವರ್ಷ ಸಾ:ನಿಂಬಾಳ ತಾ:ಆಳಂದ ನಾವು ಊಟ ಮಾಡಿಕೊಂಡು ದಿನಾಂಕ:19/05/2013 ರಂದು ರಾತ್ರಿ 9:30 ಗಂಟೆಯ ಸುಮಾರಿಗೆ ಮಲಗಿಕೊಂಡಿರುವಾಗ ಮಧ್ಯರಾತ್ರಿ 1 -00 ಗಂಟೆಯ ಸುಮಾರಿಗೆ ಮನೆಯಲ್ಲಿರುವ ಪೆಟ್ಟಿಗೆಗೆಳನ್ನು ಯಾರೋ ತೆಗೆದುಕೊಂಡು ಹೋಗಿದ್ದು, ಅದರಲಿಟ್ಟಿದ್ದ ನಗದು ಹಣ 14,000/- ರೂಪಾಯಿಗಳು ಕಳ್ಳತನವಾಗಿದ್ದು, ಮತ್ತು ನಮ್ಮ ಗ್ರಾಮದ ಶಿವರಾಯ ಪಟೇದ ಇವರ ಮನೆಯಲ್ಲಿನ ಅರ್ಧ ತೊಲೆ ಬಂಗಾರ ಅ.ಕಿ.10,500/- ಬಂಗಾರ ಕಳ್ಳತನ ಮಾಡಿದ್ದು ಹೀಗೆ ಒಟ್ಟು 24,500/- ರೂಪಾಯಿಗಳ ಮೌಲ್ಯದ್ದು ಯಾರೋ ಕಳ್ಳರೂ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:43/2013 ಕಲಂ: 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಗೃಹಿಣೆ ಮೇಲೆ ಹಲ್ಲೆ ಪ್ರಕರಣ :
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:20/05/2013 ರಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಒಬ್ಬಳೆ ಇರುವಾಗ ಶಾಂತಪ್ಪ ತಂದೆ ನಿಂಗಣ್ಣಾ ಜಿಡ್ಡಿಮನಿ ಇತನು ನನ್ನ ಮನೆಯೊಳಗೆ ಬಂದು ಅವಾಚ್ಯವಾಗಿ ಬೈದು ನನ್ನ ಅಂಗಾಂಗಳಿಗೆ ಮುಟ್ಟಿ ಮೈಮೇಲಿನ ಕುಪ್ಪಸ ಹರಿದಿರುತ್ತಾನೆ.ನಾನು ಬಿಡಿಸಿಕೊಂಡು ಚಿರಾಡುತ್ತಾ ಮನೆಯಿಂದ ಹೊರಗೆ ಬರುತ್ತಿರುವಾಗ ನನ್ನ ಹೊಟ್ಟೆಯ ಮೇಲೆ ಒದ್ದಿರುತ್ತಾನೆ. ಹಾಗೂ ಕೈಯಿಂದ ಕಪಾಳದ ಮೇಲೆ ಹೊಡೆದಿರುತ್ತಾನೆ. ನಾನು ಚೀರಾಡುತ್ತಿದ್ದಾಗ ಅವನ ಹೆಂಡತಿ ಶ್ರೀದೇವಿ ಬಂದು ನನ್ನ ಗಂಡನ ಮಾನ ಹಾಳ ಮಾಡುತಿ ಅಂತಾ ಬೈದಿರುತ್ತಾಳೆ. ಅವನ ತಮ್ಮನಾದ ಮಲ್ಲಪ್ಪ ಜಿಡ್ಡಿಮನಿ ಇತನು ಸಹ ಬಂದು ಬೇದರಿಕೆ ಹಾಕಿರುತ್ತಾನೆ. ಕಾರಣ ಅವರೆಲ್ಲರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ನೊಂದ 30 ವರ್ಷದ ಹೆಣ್ಣು ಮಗಳು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:44/2013 ಕಲಂ: 323,341,354,448,504,506(2),509 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment