ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ನನ್ನ ತಂದೆಯಾದ ಚನ್ನಮಲ್ಲಪ್ಪಾ ಇವರು ದಿನಾಂಕ:09-05-2013 ರಂದು ಬೆಳಿಗ್ಗೆ 9-30 ಗಂಟೆಗೆ ಕೇಂದ್ರ ಬಸ್ ನಿಲ್ದಾಣದ ಎದುರಿನ ರಸ್ತೆ ದಾಟುತ್ತಿರುವಾಗ ಟಂಟಂ ನಂಬರ ಕೆಎ-32 ಎ-64 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಡಿಕ್ಕಿ ಪಡಿಸಿದ್ದರಿಂದ ಭಾರಿಗಾಯವಾಗಿರುತ್ತದೆ ಮಾತನಾಡುವ ಸ್ಥಿತಿಯಲ್ಲಿರುವದಿಲ್ಲ ಅಂತಾ ಆತನ ಮಗನಾದ ಸುಭಾಶ ತಂದೆ ಚನ್ನಮಲ್ಲಪ್ಪಾ ಪಾಟೀಲ ಉ:ಸೆಕ್ಯೂರಟಿ ಗಾರ್ಡ ಸಾ:ಹನುಮಾನ ದೇವಸ್ಥಾನದ ಹತ್ತಿರ ಬಿದ್ದಾಪೂರ ಕಾಲೋನಿ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:34/2013 ಕಲಂ:279,338ಐಪಿಸಿ ಸಂಗಡ 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment