Police Bhavan Kalaburagi

Police Bhavan Kalaburagi

Friday, May 10, 2013

GULBARGA DISTRICT REPORTED CRIMES


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ಶ್ರೀ.ಚಂದ್ರಪ್ಪ ತಂದೆ ಬಿಚ್ಚಪ್ಪ ಹಲಗೆ ಸಾ:ತೆಲ್ಕೂರ ಗ್ರಾಮ, ತಾ:ಸೇಡಂ ರವರು ನಿನ್ನೆ ದಿನಾಂಕ:08-05-2013 ರಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ. ಶರಣಪ್ರಕಾಶ ಪಾಟೀಲ್ ಜಯಗಳಿಸಿರುವದರಿಂದ ನನ್ನ ಮಗ ಶ್ಯಾಮಸುಂದರ ಇತನು ಗ್ರಾಮದಲ್ಲಿ ಪಟಾಕಿ ಹಚ್ಚಿ ಸಂಭ್ರಚಾರಣೆ ಮಾಡುತ್ತಿದ್ದಾಗ, ನಮ್ಮೂರಿನ ಅಯ್ಯಣ್ಣಗೌಡ ಪೊಲೀಸ್ ಪಾಟೀಲ್ ಇವರು ನನ್ನ ಮಗನೊಂದಿಗೆ ತಕರಾರು ಮಾಡಿದ್ದರು. ರಾತ್ರಿ 8-30 ಗಂಟೆಗೆ ನಾನು ಮತ್ತು ನನ್ನ ಮಕ್ಕಳಾದ ಶ್ಯಾಮಸುಂದರ ಹಾಗೂ ಸುಂದರ ಮತ್ತು ನನ್ನ ಹೆಂಡತಿಯಾದ ಗಂಗಮ್ಮ ಎಲ್ಲರೂ ಮನೆಯಲ್ಲಿದ್ದಾಗ ನಮ್ಮೂರಿನ  ಅಯ್ಯಣಗೌಡ ತಂದೆ ವೀರಶೆಟ್ಟಿ ಪೊಲೀಸ್ ಪಾಟೀಲ್, ಶರಣಪ್ಪ ತಂದೆ ನಾಗಣ್ಣ ಔಂಟಗಿ, ಜಗಪ್ಪ ತಂದೆ ಬಸವರಾಜ ಔಂಟಗಿ, ಅನೀಲ ತಂದೆ ನಾಗಣ್ಣ ಔಂಟಗಿ,ಶರಣು ತಂದೆ ಅಮರಪ್ಪ ಅವರಾದಿ,ಗಣೇಶ ತಂದೆ ಭೀಮರಾಯ ಹುಗಾರ,ಗೋಪಾಲ ತಂದೆ ಈರಪ್ಪ ಬುಡನೂರ, ಮಾರುತಿ ತಂದೆ ಭೀಮಶಪ್ಪ ಪತ್ತಿ, ಹಣಮಂತ ತಂದೆ ಭೀಮಶಪ್ಪ ಪತ್ತಿ ರವರೆಲ್ಲರೂ ಕೂಡಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು ಯಾಕೆ ನಿಂದನೆ ಮಾಡುತ್ತಿದ್ದಿರಿ ಅಂತ ಕೇಳಿದಾಗ ಅವರೆಲ್ಲರೂ ಹೊಡೆದು ಜಾತಿ ನಿಂದನೆ ಮಾಡಿದರು. ಜಗಳ ಬಿಡಿಸಲು ಬಂದ ನನ್ನ ಮಗನಾದ  ಸುಂದರ ಮತ್ತು ನನ್ನ ಹೆಂಡತಿಗೆ ಹೊಡೆದು ಜಾತಿ ನಿಂದನೆ ಅಪಮಾನ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:117/2012 ಕಲಂ-143, 147, 323, 504, 506, 354 ಸಂಗಡ 149 ಐಪಿಸಿ ಮತ್ತು  3(I)(X) SC/ST PA Act 1989 ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ನಿಂಬರ್ಗಾ ಪೊಲೀಸ್ ಠಾಣೆ:ನನ್ನ ತಂಗಿಯಾದ ಪಾರುಬಾಯಿ ಇವಳಿಗೆ 9  ವರ್ಷದ ಹಿಂದೆ ನಾಮದೇವ ತಂದೆ ಪುನ್ನು ರಾಠೋಡ ಸಾ|| ಮಾಡಿಯಾಳ ತಾಂಡಾ ಇವನೊಂದಿಗೆ ಮದುವೆ ಮಾಡಿಕೊಟ್ಟಿರುತ್ತೆವೆ. ನಂತರ ಪಾರುಬಾಯಿ ಇವಳ ಗಂಡ, ಅತ್ತೆ, ಮಾವ ಮತ್ತು ಮೈದುನರು ಕೂಡಿ ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವದಿಲ್ಲ, ಹೊಲದ ಕೆಲಸ ಸರಿಯಾಗಿ ಮಾಡಲು ಬರುವದಿಲ್ಲ ಅಂತ ಅವಾಚ್ಯ ಶಬ್ದಗಳಿಂದ ಕೈಯಿಂದ ಹೊಡೆ ಬಡೆ ಮಾಡಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದರಿಂದ ಸದರಿಯವರ ಕಿರುಕುಳ ತಾಳಲಾರದೆ ದಿನಾಂಕ:06-05-2013 ರಂದು ಮಧ್ಯಾಹ್ನ 3-00 ಗಂಟೆ ಹೊಲದಲ್ಲಿ ಕ್ರಿಮಿನಾಶಕ ಎಣ್ಣೆ ಕುಡಿದು ಉಪಚಾರ ಕುರಿತು ಆಸ್ಪತ್ರೆಗೆ ದಾಖಲ ಮಾಡಲಾಗಿದೆ ಅಂತಾ  ಶ್ರೀ ರಾಮಚಂದ್ರ ತಂದೆ ಧನಸಿಂಗ ಚವ್ಹಾಣ  ಸಾ|| ಬೋರುಟಿ ಝಾಪು ತಾಂಡಾ, ತಾ|| ಅಕ್ಕಲಕೊಟ, ಜಿ|| ಸೊಲ್ಲಾಪೂರ          ಮಹಾರಾಷ್ಟ್ರ ರಾಜ್ಯ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:53/2013 ಕಲಂ, 498 (ಎ) 323, 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ :
ಸೇಡಂ ಪೊಲೀಸ್ ಠಾಣೆ: ಶ್ರೀ. ಸಿದ್ದಪ್ಪ ತಂದೆ ದೇವಿಂದ್ರಪ್ಪ ಅವರಾದಿ ಸಾ:ತೆಲ್ಕೂರ ಗ್ರಾಮ, ತಾ:ಸೇಡಂರವರು ನಾನು ಮತ್ತು ನಮ್ಮೂರ ಜಗಪ್ಪ ತಂದೆ ಸಿದ್ದಪ್ಪ ಕೊಂಡಂಪಳ್ಳಿ ಇಬ್ಬರು ಕೂಡಿಕೊಂಡು ಹೊಲದಿಂದ ದಿನಾಂಕ:09-05-2013 ರಂದು ಸಾಯಂಕಾಲ 6-00 ಗಂಟೆಗೆ ಮನೆಗೆ ಬರುವಾಗ ನಾವು ಚುನಾವಣೆಯಲ್ಲಿ ಬಿ.ಜೆ.ಪಿ. ಪಾರ್ಟಿಯ ಕಡೆ ಪ್ರಚಾರ ಮಾಡಿದ್ದರಿಂದ ಅದೇ ವೈಮನಸ್ಸು ಇಟ್ಟುಕೊಂಡು ನಾವು ಹೊಲದಿಂದ ಮನೆಗೆ ಬರುವಾಗ ಹರಿಜನ್ ಓಣಿಯಲ್ಲಿ ಶೇಖಪ್ಪ ತಂದೆ ಅಣ್ಯಪ್ಪ ಕೊಂಡಂಪಳ್ಳಿ ಇವರ ಮನೆಯ ಹತ್ತಿರ ನಿಲ್ಲಿಸಿ ಚಂದ್ರಪ್ಪ ತಂದೆ ಬಿಚ್ಚಪ್ಪ ಹಲಗಿ, ಶಾಮರಾಯ ತಂದೆ ಚಂದ್ರಪ್ಪ ಹಲಗಿ, ಮತ್ತು ಸುಂದರ ತಂದೆ ಚಂದ್ರಪ್ಪ ಹಲಗಿ. ಸಾ:ತೆಲ್ಕೂರ ಗ್ರಾಮ, ತಾ:ಸೇಡಂ ರವರು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಾಗು ಬಡಿಗೆಯಿಂದ ನನಗೂ ಮತ್ತು ಬಿಡಿಸಲು ಬಂದ ಜಗಪ್ಪ ಇತನಿಗೂ ಹೊಡೆಬಡೆ ಮಾಡಿ ದುಖಃಪತಗೊಳಿಸಿದ್ದಲದೇ ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಯ ಗಂಟಲು ಒತ್ತಿ ಹಿಡಿದು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:118/2013 ಕಲಂ-341, 323, 324, 307, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: