ದರೋಡೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ದಿನಾಂಕ: 10-05-2013 ರಂದು ನಾನು ಮತ್ತು ನನ್ನ ಗೆಳೆಯನಾದ ಶಿವಾ ತಂದೆ ಸಜ್ಜನ ಇಬ್ಬರೂ ಪಬ್ಲಿಕ್ ಗಾರ್ಡನಲ್ಲಿ ಬಂದಾಗ ಬೆಳಿಗ್ಗೆ 11-30 ಗಂಟೆ ಸುಮಾರಿಗೆ ಯಾರೋ ಇಬ್ಬರೂ ಹುಡಗರು ಕಪ್ಪು ಬಣ್ಣದ ಬಜಾಜ್ ಪಲ್ಸರ್ ಮೇಲೆ ಬಂದು ಏ ಮಕ್ಕಳೇ ನಮ್ಮ ಜೋತೆ ಬನ್ನಿ ಇಲ್ಲದಿದ್ದರೆ ನಿಮಗೆ ಖಲಾಸ ಮಾಡುತ್ತೆವೆ ಅಂತಾ ಭಯ ಹಾಕಿದಾಗ ಅವರ ಮೇಲೆ ನಾನು ಮತ್ತು ನನ್ನ ಗೆಳೆಯ ಕುಳಿತುಕೊಂಡೆವು, ಹಿಂದಿ ಪ್ರಚಾರ ಸಭಾ ಎದುರುಗಡೆ ಇರುವ ಹಾಳು ಬಿದ್ದ ಸರ್ಕಾರಿ ಹಾಸ್ಟೆಲ್ ದಲ್ಲಿ ಕರೆದುಕೊಂಡು ಹೋದಾಗ ಅಲ್ಲಿ ಅವರ ಇನ್ನೂ 3 ಜನರು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ನಮ್ಮ ಕೊರಳಲಿದ್ದ 10 ಗ್ರಾಂ ಬಂಗಾರದ ಲಾಕೀಟ ಅಂದಾಜು ಕಿಮ್ಮತ್ತು 29,000/- ನೇದ್ದು ಮತ್ತು ನೊಕಿಯಾ ಮೋಭಾಯಿಲ್ ನಂ 4,000/0 ರೂಪಾಯಿಗಳದ್ದು ಜಬರದಸ್ತಿಯಿಂದ ಕಸಿದುಕೊಂಡಿರುತ್ತಾರೆ ಅಂತಾ ಶ್ರೀ ಸಂಗಮೇಶ್ವರ ತಂದೆ ಸಿದ್ರಾಮಪ್ಪಾ ಪಾಟೀಲ್ ವಯಾ||15, ವಿಧ್ಯಾರ್ಥಿ ಸಾ|| ವಿಜಯ ನಗರ ಕಾಲೋನಿ ಆಳಂದ ರೋಡ ಗುಲಬರ್ಗಾ ಇತನು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 87/2013 ಕಲಂ, 395 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಬಸವ ಸ್ವಾಮಿ ತಂದೆ ಸಿದ್ದವಿರಯ್ಯ ಉ|| ಡಾಕ್ಟರ ಸಾ|| ಖೂಬಾ ಪ್ಲಾಟ ಗುಲಬರ್ಗಾ ರವರು ನಾನು ದಿನಾಂಕ: 16-04-2013 ರಂದು ಬೆಳಿಗ್ಗೆ 6-00 ಗಂಟೆಗೆ ಚನ್ನವಿರಯ್ಯ ರವರ ಮೋಟಾರ ಸೈಕಲ್ ನಂ: ಕೆಎ 32 ಎಕ್ಸ-8656 ನೇದ್ದರ ಮೇಲೆ ಕುಳಿತುಕೊಂಡು ರೇಲ್ವೆ ನಿಲ್ದಾಣದಕ್ಕೆ ಹೋಗುತ್ತಿರುವಾಗ ಚೆನ್ನವೀರಯ್ಯ ಇತನು ತನ್ನ ಮೋಟಾರ ಸೈಕಲ್ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರೋಡ ಡಿವೈಡರಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 36/2013 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ನನ್ನ ಮಗನಾದ ಸಂದೇಶ ವಯಾ:10 ವರ್ಷ ಇತನು ಅಂಗಡಿಗೆ ಹೋಗಿ ಮನೆಗೆ ಬರುತ್ತಿರುವಾಗ ಮನೆಯ ಹಿಂದುಗಡೆ ಇರುವ ಆರ್.ಪಿ.ಸರ್ಕಲ್ ದಿಂದ ರಾಮ ಮಂದೀರ ರಿಂಗ ರೋಡಿನಲ್ಲಿ ಬರುವ ಟೇಲಿಕಾಮ್ ಆಫೀಸ್ ಎದುರು ರೋಡಿನ ಮೇಲೆ ಮೋಟಾರ ಸೈಕಲ್ ನಂಬರ ಕೆಎ-32 ಇ-7990 ನೇದ್ದರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ಹೊರಟು ಹೋಗಿರುತ್ತಾನೆ ಅಂತಾ ಶ್ರೀ ಜಾನ ಮೂಲಿಮನಿ ವಯಾ: 37 ವರ್ಷ,ಗುತ್ತೆದಾರ ಸಾ:ಭಾಗ್ಯವಂತಿ ನಗರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:35/2013 ಕಲಂ: 279,337 ಐ.ಪಿ.ಸಿ. ಸಂ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment