Police Bhavan Kalaburagi

Police Bhavan Kalaburagi

Wednesday, May 15, 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ಶ್ರೀ, ಸಿದ್ದಪ್ಪ ತಂದೆ ಫೀರಪ್ಪ ಕೋಳಿ ವ|| 62 ವರ್ಷ ಜಾ|| ಕಬ್ಬಲಿಗ ಉ|| ಕೂಲಿ  ಸಾ|| ಕರಜಗಿ ರವರು ನಾನು ಮತ್ತು ಶಂಕರ ರಾಠೋಡಆತನ ಹೆಂಡತಿ ಮೈನಾಬಾಯಿ, ಮಗಳು ಶ್ರೀದೇವಿಹಾಗೂ ಮಲ್ಲಯ್ಯ ಮುತ್ಯಾ ಎಲ್ಲರೂ ಕೂಡಿಕೊಂಡು ದಿನಾಂಕ:14-05-2013 ರಂದು ಬೆಳಿಗ್ಗೆ 7:00 ಗಂಟೆಗೆ ಕರಜಗಿ ಗ್ರಾಮದಿಂದ ಟಂಟಂ ನಂ ಕೆಎ-32 ಬಿ-8572 ನೇದ್ದನ್ನು ಬಾಡಿಯಿಂದ ನೇಮಕ ಮಾಡಿಕೊಂಡು ದೇಸಾಯಿ ಕಲ್ಲೂರ ಮಾರ್ಗವಾಗಿ ಬಟಗೇರಿ ಗ್ರಾಮಕ್ಕೆ ಹೋಗಿ ಬಟಗೇರಿಯಲ್ಲಿ ಶ್ರೀದೇವಿಗೆ ತೊರಿಸಿಕೊಂಡುಮದ್ಯಾಹ್ನ 3:00  ಗಂಟೆ ಸಮಯಕ್ಕೆ ಕರಜಗಿ ಗ್ರಾಮಕ್ಕೆ ದೇಸಾಯಿ ಕಲ್ಲೂರ ಮಾರ್ಗವಾಗಿ ಹೊರಟಿರುತ್ತೆವೆ.  ದೇಸಾಯಿ ಕಲ್ಲೂರ ತಾಂಡಾ ದರ್ಗಾದ ಹತ್ತಿರ ಬಂದಾಗ ಟಂಟಂ ಚಾಲಕನಾದ ಮೋಹನ ತಂದೆ ನಾಗು ಚವ್ಹಾಣ ಇತನು ಟಂಟಂನ್ನು ಅತೀವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿ ಟಂಟಂ ನ್ನು ಪಲ್ಟಿ ಮಾಡಿದನು. ಇದರಿಂದ ನನಗೆ  ಬಲಭಾಗದ ತಲೆಗೆ ಪೆಟ್ಟು ಬಡೆದು ರಕ್ತಗಾಯವಾಯಿತು. ಶ್ರೀದೇವಿಗೆ ಬಲಗೈ ಮುಂಡಿಗೆ ಏದೆಗೆ ಗುಪ್ತ ಪೆಟ್ಟು ಆಗಿರುತ್ತದೆ. ಶಂಕರ ರಾಠೋಡ ಈತನಿಗೆ ಬಲಬಾಗದ ಹಣೆಗೆ ಪೆಟ್ಟು ಬಡೆದು  ರಕ್ತಗಾಯ ಆಗಿರುತ್ತದೆಮಲ್ಲಯ್ಯ ಮುತ್ಯಾ ಇವರಿಗೆ ಏಡಗೈ ಮುಂಡಿಗೆ ಗುಪ್ತ ಪೆಟ್ಟು ಆಗಿರುತ್ತದೆ. ಮೈನಾಬಾಯಿ ರಾಠೋಡ ಇವಳಿಗೆ ಭಾರಿ ಗಾಯವಾಗಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ಸೇರಿಕೆ ಮಾಡಿದಾಕ್ಷಣ ಮೃತ ಪಟ್ಟಿಳು , ಕಾರಣ ಟಂಟಂ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:103/13 ಕಲಂ.279 337 304 (ಎ) ಐ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಫರೀದಮಿಯ್ಯಾ ತಂದೆ ಸುಲೇಮಾನ ಖರಾದಿ ಸಾ:ಗುಲಶನ ಅರಾಫತ ಕಾಲನಿ ಗುಲ್ಬರ್ಗಾರವರು ನಾನು ದಿನಾಂಕ 14-05-13 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಸ್ಕ್ರಾಪ ಅಂಗಡಿಯಲ್ಲಿ ಕೆಲಸ ಮುಗಿಸಿಕೊಂಡು ಹಾಗರಗಾ ರೋಡಿಗೆ ಇರುವ  ಸಭಾ ಫಂಕ್ಷನ ಪಕ್ಕದಲ್ಲಿ ಇರುವ  ಹಬೀಬ ಇವರ ಹೋಟಲ ಮುಂದೆ ಕುಳಿತುಕೊಂಡಾಗ ನನಗೆ ಪರಿಚಯದ ಸೋನಿಯಾಗಾಂಧಿ ಕಾಲನಿ ಗುಲಬರ್ಗಾ ನಿವಾಸಿಗಳಾದ ಇಮ್ರಾನ ತಂದೆ ಬಾಬುಮಿಯ್ಯಾ   ಮತ್ತು ಬಡೇಶಹಾ ಮತ್ತು ಮದರಶಹಾ ಇವರು ಕೂಡಾ ಬಂದರು. ಅವರು ನನಗೆ ಕುಡಿದು ಕುಳಿತಿರುವ ಬಗ್ಗೆ ಮಾತಾಡಿದರು. ಅದಕ್ಕೆ ನಾನು ಅವರಿಗೆ ನನ್ನ ಹಣದಿಂದ ಕುಡಿದಿದ್ದೀನಿ ಅದನ್ನು ಕೇಳುವವರು ನಿನ್ಯಾರು ಎಂದು ಹೇಳಿದ್ದಕ್ಕೆ ಅವರಿಬ್ಬರೂ ನನಗೆ ಅವಾಚ್ಯವಾಗಿ ಬೈದು ಕೈ ಮುಷ್ಟಿ ಮಾಡಿ ಜೋರಾಗಿ ನನ್ನ ಬಾಯಿ ತುಟಿಯ ಮೇಲೆ ಹೊಡೆದಿದ್ದರಿಂದ ಮುಂದಿನ ಎರಡು ಹಲ್ಲುಗಳು ಬಿದ್ದಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 241/2013 ಕಲಂ, 504, 341,323, 326 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: