ದರೋಡೆ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ:ದಿನಾಂಕ:14/05/2013 ರಂದು ಶ್ರೀಮತಿ.ಎಮ್.ಮಮತಾ ಮಕಮ್ ವಯ|| 35, ಸಾ|| ಖೂಬಾ ಪ್ಲಾಟ್ ಗುಲಬರ್ಗಾರವರು ಬೆಳಿಗ್ಗೆ 11:30 ಗಂಟೆಯ ಸುಮಾರಿಗೆ ತಮ್ಮ ಮನೆಯಿಂದ ಮಗಳ ಸ್ಕೂಲಿನ ಫೀಸ್ ಕಟ್ಟುವು ಸಲುವಾಗಿ ಎನ್.ವ್ಹಿ ಶಾಲೆಗೆ ಬಸ್ಸಮ್ಮ ಕುಂಬಾರ ರವರ ಜೋತೆಯಲ್ಲಿ ಹೋಗುತ್ತಿರುವಾಗ ನವಣಿ ಆಸ್ಪತ್ರೆಯ ಹತ್ತಿರ ಎದುರಿನಿಂದ ಒಬ್ಬನು 20 ರಿಂದ 25 ವರ್ಷ ವಯಸ್ಸಿನು ಬಿಳಿ ಮತ್ತು ಹಸಿರು ಬಣ್ಣದ ಚೌಕಡಿ ಆಫ್ ಶರ್ಟ ನೀಲಿ ಬಣ್ಣದ ಜೀನ್ಸ ಪ್ಯಾಂಟ್ ಧರಿಸಿದವನು ಶ್ರೀಮತಿ ಎಮ.ಮಮತಾ ಮಕಮ್ ರವರ ಕೊರಳಿಗೆ ಕೈ ಹಾಕಿ ಕೊರಳ್ಳಲ್ಲಿ ಇದ್ದ 40 ಗ್ರಾಂ ಬಂಗಾರದ ಮಂಗಳ ಸೂತ್ರ ಅ||ಕಿ|| 1,20,000/- ಬೆಲೆಬಾಳುವುದನ್ನು ದೋಚಿಕೊಂಡು ಹೋಗಿದ್ದರ ಬಗ್ಗೆ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ: 88/2013 ಕಲಂ: 392 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಅರುಣಕುಮಾರ ತಂದೆ ನಾಗೇಂದ್ರ ಕೂಡಿಕರ, ಸಾಃ ಹಾಗರಗುಂಡಗಿ, ತಾಃ ಗುಲಬರ್ಗಾರವರು ನಾನು ಮತ್ತು ಕಾಕನ ಮಗನಾದ ಅನೀಲಕುಮಾರ ಇಬ್ಬರು ಕೂಡಿಕೊಂಡು ದಿನಾಂಕ:13-05-2013 ರಂದು 12-00 ಗಂಟೆ ಸುಮಾರಿಗೆ ಆಳಂದ ರೋಡಿಗೆ ಇರುವ ಖಾದ್ರಿ ಚೌಕ ಹತ್ತಿರ ನಡೆದುಕೊಂಡು ಬರುತ್ತಿದ್ದಾಗ ಯಾವುದೋ ಒಂದು ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲನ್ನು ಆಳಂದ ಚಕ್ ಪೊಸ್ಟ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ನಿಲ್ಲಿಸದೇ ಓಡಿ ಹೋಗಿದ್ದರಿಂದ ಬಲಗಾಲು ತೊಡೆಗೆ ಮತ್ತು ಮೊಳಕಾಲು ಕೆಳಗೆ ಭಾರಿ ಗುಪ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2013 ಕಲಂ, 279,338 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
No comments:
Post a Comment