ಅಸ್ವಾಭಾವಿಕ
ಮರಣ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಕ್ರಿಷ್ಣ ತಂದೆ ದೇಸು ನಾಯಕ ಸಾ: ಬದನಿಹಳ ತಾಂಡಾ
ತಾ: ಜೇವರ್ಗಿ ರವರ ಮಗಳಾದ ಶಾಂತಬಾಯಿ ಇವಳಿಗೆ ಸುಮಾರು 2- 3 ವರ್ಷಗಳಿಂದ ಹೊಟ್ಟೆ ಕಡಿತ ಬೇನೆ
ಇದ್ದು ಸದರ ಬೇನೆ ಆಸ್ಪತ್ರೆಗೆ ತೋರಿಸಿದರು ಕಡಿಮೆ ಆಗದ ಕಾರಣ ನಿನ್ನೆ ದಿನಾಂಕ 25/09/13 ರಂದು
ಮುಂಜಾನೆ 7-00 ಗಂಟೆಗೆ ಕ್ರಿಮಿನಾಶಕ ಎಣ್ಣೆ ಕುಡಿದು ಉಪಚಾರ ಕುರಿತು ಸರಕಾರಿ ಆಸ್ಪತ್ರೆ
ಗುಲಬರ್ಗಾಕ್ಕೆ ಸೇರಿಕೆಯಾದಗ ಉಪಚಾರ ಫಲಕಾರಿಯಾಗದೆ. ಮದ್ಯಾಹ್ನ 1-00 ಗಂಟೆಗೆ ಸದರ
ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನ
ಪ್ರಕರಣ :
ಕಮಲಾಪೂರ
ಠಾಣೆ : ದಿನಾಂಕ: 18-09-2013 ರಂದು ರಾತ್ರಿ 11-00ಗಂಟೆಯಿಂದ ದಿಃ 19-09-2013 ರಂದು ಬೆಳಿಗ್ಗೆ 5-00 ಗಂಟೆಯ ಮಧ್ಯದ
ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಮರಗುತ್ತಿ ಕ್ರಾಸಿನಲ್ಲಿ ಇರುವ ಟಾವರಿನ ಸ್ಥಳದಲ್ಲಿ ಚಾರ್ಜ
ಮಾಡಲು ಇಟ್ಟಿದ 2023 ಬ್ಯಾಟರಿಗಳಲ್ಲಿ 35 ಬ್ಯಾಟರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಲ್ಲದೇ ಸೆಕ್ಯೂರಿಟಿ
ಗಾರ್ಡಗಳಾದ 1) ಪಂಡಿತ ತಂದೆ ಶರಣಪ್ಪಾ
ಲಿಂಬೂರ ಮತ್ತು 2) ವಿಜಯಕುಮಾರ ತಂದೆ
ಸುಬ್ಬಣ್ಣಾ ವರವಂಡಿ ಸಾ:ಇಬ್ಬರು ಡೊಂಗರಗಾಂವ ಮತ್ತು 3)ಟಕ್ನಿಶಿಯನ್ ಉಮೇಶ 4) ಟೆಕ್ನಿಕಲ್ ಮ್ಯಾನೇಜರ
ಬಾಬುರಾವ ಇವರುಗಳ ಮೇಲೆ ಸಂಶಯವಿರುತ್ತದೆ. ಅಂತಾ ಶ್ರೀ ಬಾಬುರಾವ ತಂದೆ ಚಂದ್ರಪ್ಪಾ ನರಸಗೊಂಡಿ
ಉಪ-ಸೆಕ್ಯೂರಿಟಿ ಪೆಟ್ರೋಲಿಂಗ್ ಆಫೀಸರ್ ರೇವಿನ ಬ್ಯಾಕ್ ಸಕ್ಯೂರಿಟಿ ಇಂಡಿಯಾ ಲಿಮಿಟೆಡ್ ಬೆಂಗಳೂರ
ಸಾ:ಶಿವನಗರ ಸೌಥ ಬೀದರ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ
ಪ್ರಕರಣ :
ಕಮಲಾಪೂರ
ಠಾಣೆ : ಶ್ರೀ ರೇವಣಸಿದ್ದಯ್ಯ ತಂದೆ
ನಾಗಯ್ಯ ಮಹಾಂತ ಮಠ ಸಾ; ಕಮಲಾಪೂರ ರವರಿಗೆ ದಿನಾಂಕ;24-09-2013 ರಂದು 22-00 ಗಂಟೆಗೆ ಮ1) ಸಿದ್ದಪ್ಪ ಸೂಗೂರ, 2) ಶ್ರೀಕಾಂತ ತಂದೆ ಈಶ್ವರ ಸುಗೂರ, 3) ಸತೀಶ ತಂದೆ ಈಶ್ವರ
ಸೂಗೂರ, 4) ಶಶಿಕಾಂತ ತಂದೆ ಈಶ್ವರ
ಸೂಗೂರ ಎಲ್ಲರೂ ಸಾ; ಕಮಲಾಪೂರ ರ ಮಠದ
ಜಾಗದಲ್ಲಿ ಹೊಲಸು ಹಚ್ಚುವ ವಿಷಯದಲ್ಲಿ ಇಲ್ಲೇಕೆ ಹಚ್ಚುತ್ತಿದ್ದೀರಿ ಅಂತಾ ಹೇಳಿದಕ್ಕೆ ಆರೋಪಿತರು ನೀನು ಯಾರು ಅಂತ ಅಂದವರೆ ಪಿರ್ಯಾದಿಗೆ ಅವಾಚ್ಯಾವಾಗಿ ಬೈದ್ದು ಅಕ್ರಮವಾಗಿ
ತಡೆದು ಕೈಯಿಂದ ಮತ್ತು ಕಾಲಿನಿಂದ ಒದ್ದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ನೆಲೋಗಿ ಠಾಣೆ
ದಿನಾಂಕ
26-09-2013 ರಂದು ಮಧ್ಯಾಹ್ನ 04.30 ರ
ಸುಮಾರಿಗೆ ಟ್ರಾಕ್ಟರ್ ನಂ ಕೆಎ-32 ಟಿ-906 ನೇದ್ದರಲ್ಲಿ 1] ಯೂಸುಫ್ 2] ಮುಜೀಬ 3] ರಾಹೂಲ 4]
ಅರುಣ 5] ಆಜಾದ 6] ಸಜ್ಜಾದ 7] ಬಾದಲ್ 8] ಸೋನು ಮತ್ತು 9] ರವಿಶೇಖ ರವರುಗಳು ರಾಷ್ಟ್ರೀಯ
ಹೆದ್ದಾರಿ 218 ರಲ್ಲಿ ಜೇವರ್ಗಿ ಕಡೆಯಿಂದ ಎಸ್ ಎನ್ ಹಿಪ್ಪರಗಾ ಕಡೆ ಹೋಗುವಾಗ ಹರವಾಳ ಕ್ರಾಸ
ಸಮೀಪದಲ್ಲಿ ಇರುವ ಇಳಿಜಾರನಲ್ಲಿ ಟ್ರಾಕ್ಟರ್ ಚಾಲಕ ಧನ್ನು ತಂದೆ ಗಂಗು ಮುಧೋಳ (ಬಿ) ತಾ: ಜೇವರಗಿ
ಈತನು ಟ್ರಾಕ್ಟರನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಿರುವಾಗ ಚಾಲಕನ ನಿಯಂತ್ರಣ
ತಪ್ಪಿ ರಸ್ತೆಯ ಎಡ ಬದಿಗಿರುವ ತಗ್ಗಿಗೆ ಬಿದ್ದಿದ್ದರಿಂದ ಟ್ರಾಲಿಯಲ್ಲಿ ಕುಳಿತಿದ್ದ ಯೂಸುಫ,
ಮುಜೀದ, ರಾಹೂಲ, ಅರುಣ, ಆಜಾದ, ಸಜ್ಜಾದ, ಬಾದಲ, ಸೋನು ಎಲ್ಲರಿಗೂ ಮೈ, ಕೈ ಗೆ ಭಾರಿ ಗಾಯಗಳಾದ
ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ
No comments:
Post a Comment