Police Bhavan Kalaburagi

Police Bhavan Kalaburagi

Friday, September 27, 2013

BIDAR DISTRICT DAILY CRIME UPDATE 27-09-2013


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 27-09-2013

ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ. 88/13 ಕಲಂ 279, 338 ಐಪಿಸಿ :-

ದಿನಾಂಕ 26-09-2013 ರಂದು 1530 ಗಂಟೆಗೆ ಮಚ್ಚೆಂದರ ತಂದೆ ಸೈಬಣ್ಣಾ ಜಮಾದಾರ ಮುಖ್ಯ ಗುರುಗಳು ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಿರನಾಗಾಂವ ರವರು ಠಾಣೆಗೆ ಹಾಜರಾಗಿ ದೂರು ನೀಡಿದರ ಸಾರಾಂಶವೆನೆಂದರೆ  ದಿನಾಂಕ 26-09-2013 ರಂದು 1130 ಗಂಟೆಗೆ ಶಾಲೆಯ «zÁåರ್ಥಿಗಳಿಗೆ  ಅಲ್ಪವಿರಾಮ ಬಿಟ್ಟಾಗ 2 ನೇ ತರಗತಿಯ ಸವೀತಾ ತಂದೆ ವೇಂಕಟ ಪವಾರ ವಯ 7 ವರ್ಷ ಸಾ : ಹಿರನಾಗಾಂವ ಇವಳು ಶಾಲೆಯ ಮುಂಭಾಗದಲ್ಲಿರುವ ಹಿರನಾಗಾಂವ ಖೆರ್ಢ ರೋಡನ್ನು ದಾಟುವಾಗ ಹಿರನಗಾಂವ (ಬಿ) ಕಡೆಗೆ ಬರುತ್ತಿದ್ದ ಸಂಜೀವಕುಮಾರ ತಂದೆ ಕಾಶಿನಾಥ ಬಿರಾಧರ ಸಾ: ರಾಜನಾಳ ಇವನು ತನ್ನ ಸ್ಪ್ಲೆಂಡರ ಪ್ರೋ ವಾಹನ ಸಂ ಕೆಎ32/ಇಸಿ8962 ನೇದ್ದನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಸವಿತಾಳಿಗೆ ಡಿಕ್ಕಿ ºÉÆqÉzÀÄ ಎಡಕಾಲಿನ ಮೊಳಕಾಲಿನ ಕೆಳಗೆ ಭಾರಿ ರಕ್ತಗಾಯ ಮತ್ತು ತರಚಿದ ರಕ್ತಗಾಯ ಪಡಿಸಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಸಂತಪೂರ ಪೊಲೀಸ ಠಾಣೆ ಗುನ್ನೆ ನಂ. 100/2013 ಕಲಂ 457, 380 ಐಪಿಸಿ :-

ದಿನಾಂಕ 25-09-2013 ರಂದು 1830 ಗಂಟೆಗೆ ಫಿರ್ಯಾದಿ ಶ್ರೀ ಸತ್ಯವಾನ ತಂದೆ ಹುಲ್ಲಾಜಿರಾವ ಪಾಟೀಲ್ ಸಾ: ಕಂದಗೂಳು ರವರು ಠಾಣೆಗೆ ಹಾಜರಾಗಿ ಫಿರ್ಯಾದು ನೀಡಿದರ ಸಾರಾಂಶವೇನೆಂದರೆ ಊರಿನ ಹನುಮಾನ ಮಂದಿರದಲ್ಲಿ ಇರುವ ಪಾಂಡುರಂಗ ರುಕ್ಮಿಣಿ ಮೂರ್ತಿಗೆ ಮೂರು ವರ್ಷಗಳ ಹಿಂದೆ 20000/- ಬೆಲೆಯ ಎಂಟು ಬಂಗಾರದ ಗುಂಡ ಹಾಗೂ ಎರಡು ಮಂಗಳ ಸೂತ್ರ ಒಟ್ಟು ಒಂದು ತೊಲೆಯ ಬಂಗಾರದ ಸರಾ ಮಾಡಿ ಹಾಕಿದ್ದು ಇರುತ್ತದೆ. ದಿನಾಂಕ 24-09-2013 ರಂದು 1130 ಪಿ.ಎಂ ಗಂಟೆಯಿಂದ ದಿನಾಂಕ 25-09-2013 ರಂದು 6.30 ಎ.ಎಂ ಗಂಟೆ ಅವಧಿ ಮದ್ಯದಲ್ಲಿ ಯಾರೋ ಅಪರಿಚಿತ ಕಳ್ಳರು ಮಂದಿರದಲ್ಲಿ ಹೋಗಿ ಪಾಂಡುರಂಗ ರುಕ್ಮಿಣಿ ದೇವರ ಕೊರಳಲ್ಲಿ ಹಾಕಿದ್ದ ಎಂಟು ಬಂಗಾರ ಗುಂಡಾ ಹಾಗೂ ಎರಡು ಬಂಗಾರದ ಮಂಗಳ ಸೂತ್ರ ಒಟ್ಟು  ಒಂದು ತೋಲೆಯ ಬಂಗಾರ ಅ.ಕಿ 20000/- ಬೆಲೆಯದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 322/2013 ಕಲಂ 498, 504, 504, 323, 147, 143ಎ ಜೊತೆ 149 ಐಪಿಸಿ ಮತ್ತು 4, 3 ಡಿಪಿ ಕಾಯ್ದೆ :-
ದಿನಾಂಕ 26/09/2013 ರಂದು 1100 ಗಂಟೆಗೆ ಫಿರ್ಯಾದಿ ಶ್ರೀ ಬುಶ್ರಾ ರಹೇಮಾನ ಗಂಡ ಅಬ್ದುಲ ರಿಹಾನ @ ಪಾಶಾ ಸಾ : ಬೀದರ ಸದ್ಯ ಹಳೆ ಪೊಲೀಸ ವಸತಿ ಗೃಹ ಭಾಲ್ಕಿ ರವರು ಠಾಣೆಗೆ ಹಾಜರಾಗಿ ನೀಡಿರುವ ಲಿಖಿತ ದೂರಿನ ಸಾರಾಂಶವೆನೆಂದರೆ ಫಿರ್ಯಾದಿಯ ಮದುವೆಯು ಬೀದರದ ನೂರ ಖಾನ ತಾಲೀಮ ನಿವಾಸಿಯಾದ ಅಬ್ದುಲ್ ರಿಹಾನ @ ಪಾಶಾ ತಂದೆ ಅಬ್ದುಲ ರಹೀಮಸಾಬ ಸಾ : ಹುಪ್ಪಳಾ ರವರೊಂದಿಗೆ ದಿನಾಂಕ : 13/02/2012 ರಂದು ಬೀದರ ಬಾಬಾ ಫಂಕ್ಷನ ಹಾಲ್ ಬೀದರದಲ್ಲಿ ವಿವಾಹ ನಿಶ್ಚಾರ್ಥ (ಎಂಗೆಜಮೆಂಟ ) ಮಾಡಿರುತ್ತಾರೆ. ಸದರಿ ಕಾರ್ಯಕ್ರಮದಲ್ಲಿ ಫಿಯರ್ಾದಿಯ ಗಂಡನ ಮನೆಯವರು ಬೇಡಿಕೆ ಇಟ್ಟ  ಮಾತಿನ ಪ್ರಕಾರ 1) 90,151=00 ರೂ ನಗದು ಹಣ 2) ಮೂರು ತೊಲೆ ಬಂಗಾರ 3) ಫಿಯರ್ಾದಿಯ ಗಂಡನಿಗೆ ಅರ್ಧ ತೊಲೆ ಬಂಗಾರ ಉಂಗರು 4) 1,05,000=00 ರೂ ಮೌಲ್ಯದ ಪಲಂಗ, ಶೋಕೆಸ್, ಸೋಫಾಸೆಟ್, ಡ್ರೇಸಿಂಗ ಟೇಬಲ್ ಮತ್ತು ಇತರೆ ಗೃಹಪಯೋಗಿ ವಸ್ತುಗಳು 5) ವಾಷಿಂಗ ಮಶೀನ್, ಡಬಲ್ ಡೋರ್ ಪ್ರೀಡ್ಜ ,ಕೂಲರ್ ಮತ್ತು ಇತರೆ ಬಳಕೆ ಎಲೆಕ್ಟ್ರಿಕಲ್ ಸಾಮಾನುಗಳ ಒಟ್ಟು ಅಂದಾಜ 50 ಸಾವಿರ ರೂ 6) ಮನೆಯಲ್ಲಿ ಬಳಕೆಗೆ ಬರುವ ಎಲ್ಲ ಸಾಮಾನುಗಳು ಅಂದಾಜ ಕಿಮತ್ತ 30 ಸಾವಿರ ರೂ 7) 17 ಜೋತೆ ಬಟ್ಟೆ ಇತರೆ ಬಟ್ಟೆಗಳು ಅಂದಾಜ ಕಿಮ್ಮತ್ತ 50 ಸಾವಿರ ರೂ  8) ಬಾಂಡೆ ಬರ್ತನಳು ಅ.ಕಿ 6 ಸಾವಿರ ನೇದವುಗಳನ್ನು ನೀಡಿ ದಿನಾಂಕ : 29/04/2012 ರಂದು ಈಡನ ಗಾರ್ಡನ ಫಂಕ್ಷನ ಹಾಲ ಮೈಲೂರದಲ್ಲಿ ಮದುವೆ ಮಾಡಿಕೊಟ್ಟಿರುತ್ತಾರೆ. ದಿನಾಂಕ : 30/04/2012 ರಂದು ನಿಜಾಮ ಫಂಕ್ಷನ ಹಾಲ ಬೀದರಲ್ಲಿ ಫಿಯರ್ಾದಿಯ ಗಂಡನ ಮನೆಯವರು ರಿಸೇಪಶನ್ ಕಾರ್ಯಕ್ರಮ ಮಾಡಿರುತ್ತಾರೆ. ಆ ಕಾಲಕ್ಕೆ ಫಿಯರ್ಾದಿಯ ಗಂಡನ ಅಜ್ಜನಾದ ಹಮೀದ ಪಟೇಲ ಸಾ : ಜಾಯಗಾಂವ ಈತನು ಲಗ್ನದಲ್ಲಿ 5 ರಿಂದ 50 ಕೆ.ಜಿ ಭೋಗಣೀ ಕೊಟ್ಟಿಲ್ಲ ಈಗಲೆ ಕೊಡಬೇಕು ಎಂದು ಜಗಳ ತೆಗೆದಿರುತ್ತಾರೆ. ಹಾಗು ನನ್ನ ಗಂಡನ ಎರಡನೆಯ ಅಣ್ಣನ ಹೆಂಡತಿಯಾದ ರೇಶ್ಮಾ ಬೇಗಂ ಗಂಡ ಮಹ್ಮದ ಅಮ್ಜದ ಇವಳು ಸಹ ಡೈನಿಂಗ ಟೇಬಲ್ ಸೇಟ್ ಕೊಟ್ಟಿಲ್ಲಾ ಎಂದು ಜಗಳ ತೆಗೆದಿದ್ದು ಆಗ ಫಿಯರ್ಾಧಿಯ ತಂದೆ ಹಾಗು ಹಿರಿಯರು ಮಧ್ಯಸ್ಥಿಕೆ ವಹಿಸಿ ಅವರಿಗೆ ಸಮಜಾಯಿಸಿ ಎರಡು ದಿವಸಗಳಲ್ಲಿ ಕೊಡುವದಾಗಿ ಮಾತು ಕೊಟ್ಟಿರುತ್ತಾರೆ. ಮದುವೆಯಾದ ಎರಡು ದಿವಸಗಳ ನಂತರ ಫಿಯರ್ಾಧಿಯ ಅತ್ತೆ ಫಹಿಮುನ್ನಿಸಾ ಬೇಗಂ ಇವರು ನಮ್ಮಗೆ ಮನೆ ಇಲ್ಲ ನಿಮ್ಮ ಮೈಲೂರದಲ್ಲಿದ್ದ ಮನೆ ಖಾಲಿ ಇರುತ್ತದೆ. ನಾವು ಅಲ್ಲಿ ಹೋಗಿ ಇರುತ್ತೆವೆ ನಾವು ಮನೆ ಕಟ್ಟಿದ ನಂತರ ನಿಮ್ಮ ಮನೆ ಖಾಲಿ ಮಾಡಿಕೊಡುತ್ತೆವೆ. ಹೀಗೆ ಅಂದಿದ್ದಕ್ಕೆ  ಫಿಯರ್ಾಧಿಯು ಅವರಿಗೆ ಹೇಳಿದೆನಂದರೆ ಮದುವೆ ಕಾಲಕ್ಕೆ  ನಮ್ಮ ತಂದೆಯವರು ಮೈಲೂರದಲ್ಲಿದ್ದ ನಮ್ಮ ಮನೆ ಗಿರವಿ ಇಟ್ಟು ಹಣ ಪಡೆದುಕೊಂಡಿದ್ದಾರೆ ಆದ್ದರಿಂದ ಸದರಿ ಮನೆ ಕೊಡಲು ಸಾಧ್ಯ ಇರುವದಿಲ್ಲ. ಇದನ್ನು ಕೇಳಿ ಅಂದಿನಿಂದ ಫಿಯರ್ಾಧಿಯ ಗಂಡ ಹಾಗು ಅವರ  ಮನೆಯವರಾದ 1) ಅಬ್ದುಲ ರಿಹಾನ @ ಪಾಶಾ ಗಂಡ ದಿ.ಅಬ್ದುಲ ರಹಿಮಸಾಬ (ಗಂಡ) 2) ಶ್ರೀಮತಿ ಫಹಿಮುನ್ನಿಸ್ಸಾ ಬೇಗಂ ಗಂಡ ಅಬ್ದುಲ ರಹೀಮ (ಅತ್ತೆ) 3) ಅರಶೀಯಾ ಬೇಗಂ ಗಂಡ ಇಬ್ರಾಹಿಂ ಪಟೇಲ (ನಾದಿನಿ) 4) ಮಹ್ಮದ ಹಾಜಿ ಮಸ್ತಾನ ತಂದೆ ದಿ.ಅಬ್ದುಲ ರಹೀಮಸಾಬ (ಭಾವ) 5) ಶ್ರೀ ಫಿದರ್ೋಶ ಬೇಗಂ ಗಂಡ ಹಾಜಿ ಮಸ್ತಾನ (ನೆಗೆಣಿ ) 6) ಮಹ್ಮದ ಅಮ್ಜದ ತಂದೆ ಅಬ್ದುಲ ರಹೀಮಸಾಬ (ಭಾವ) 7) ಶ್ರೀಮತಿ ರೇಶ್ಮಾ ಬೇಗಂ ಗಂಡ ಮಹ್ಮದ ಅಮ್ಜದ (ನೇಗೆಣಿ) 8) ಫರೀಹಿನ ಬೇಗಂ ತಂದೆ ಅಬ್ದುಲ ರಹೀಮಸಾಬ 9) ಹಮೀದ ಪಟೇಲ್ ಮು : ಜಾಯಗಾಂವ ಇವರೆಲ್ಲರು ಕೂಡಿಕೊಂಡು ಫಿಯರ್ಾಧಿಯ ಜೋತೆಯಲ್ಲಿ ಸಣ್ಣ ಸಣ್ಣ ಮಾತಿಗೆ ಹೊಡೆ ಬಡೆ ಮಾಡಿ ದೈಹಿಕ ಹಾಗು  ಮಾನಸಿಕ ಕಿರಕುಳ ನೀಡಿರುತ್ತಾರೆ. ನಂತರ ಅದೆ ರೀತಿ ನನ್ನ ಗಂಡ ಹಾಗು ಗಂಡನ ಮನೆವರೆಲ್ಲರು ನನಗೆ ಕಿರಕುಳ ನೀಡುತ್ತಿದ್ದರಿಂದ ನಾನು 15 ದಿವಸಗಳ ಅವಧಿಯಲ್ಲೆ ನನ್ನ ತಂದೆಯವರು ನನ್ನನು ತವರು ಮನೆ ಭಾಲ್ಕಿಗೆ   ಕರೆದುಕೊಂಡು ಬಂದಿರುತ್ತಾರೆ. ನಂತರ ದಿನಾಂಕ : 17/09/2012 ರಂದು ನನ್ನ ಗಂಡನ ಸಂಬಂಧಿಕರು ನಮ್ಮ ತಂದೆಗೆ ಮಾಡಿದ ಮನವಿಯಂತೆ ನನ್ನ ತಂದೆಯವರು ನನಗೆ ನನ್ನ ಗಂಡನ ಮನೆಗೆ ವಾಪಾಸ ಕರೆದುಕೊಂಡು ಬಂದು ಬಿಟ್ಟಿರುತ್ತಾರೆ. ಆಗ  ನನ್ನ ಗಂಡನ ಸಂಬಂಧಿಕರು ನಮ್ಮ ಗಂಡನ ಮನೆಯವರಿಗೆ ನನಗೆ ಸರಿಯಾಗಿ ನಡೆಸಿಕೊಳ್ಳುವಂತೆ ತಿಳಿ ಹೇಳಿ ಹೋಗಿರುತ್ತಾರೆ.  ಹೇಳಿರುತ್ತಾರೆ.  ದಿನಾಂಕ : 19/09/2012 ರಂದು ನನ್ನ ತಂದೆಯವರು ಅವರು ಇಟ್ಟ ಬೇಡಿಕೆಯಂತೆ 40 ಸಾವಿರ ರೂ ತೆಗದುಕೊಂಡು ಬಂದು ನನ್ನ ಅತ್ತೆ ಫಹಿಮುನ್ನಿಸಾ ಬೇಗಂ ರವರಿಗೆ ಕೊಟ್ಟು ಹೋಗಿರುತ್ತಾರೆ. ಆದರೂ ಕೂಡಾ ನನ್ನನು ಹಿಂಸಿಸುವದು ನಿಲ್ಲಿಸಲಿಲ್ಲ ದಿನಾಲು ನನಗೆ ಅವರೆಲ್ಲರು ಉಟ ಮಾಡಿದ ನಂತರ ಅಡುಗೆ ಮನೆಗೆ ಕೀಲಿ ಹಾಕಿ ಒಂದು ರೊಟ್ಟಿ ಮಾತ್ರ ನನಗೆ ಕೊಡುತ್ತಿದ್ದರು. ಹೀಗೆ ಯಾಕೆ ನನಗೆ ಹಿಂಸಿಸುತ್ತಿದ್ದಿರಿ ಎಂದು ಕೇಳಿದಕ್ಕೆ ನಿನ್ನ ಕಾಲ್ಗುಣದಿಂದ ನಮ್ಮ ಮನೆಯ ಹಿರಿಯರಾದ ಅಬ್ದುಲ ರಹೀಮಸಾಬ ರವರು ಮೃತಪಟ್ಟಿರುತ್ತಾರೆ. ನಿನ್ನ ಮದುವೆ ದಿವಸದಂದು ನಮ್ಮ 50 ಸಾವಿರ ರೂ ಎಮ್ಮೆ ಸತ್ತಿರುತ್ತದೆ. ನೀನು ಬಂದಾಗಿನಿಂದ ನಮ್ಮ ಮನೆಯಲ್ಲಿ ಅವಬರ್ಕತ ಆಗಿದೆ. ನೀನು ಕೆಟ್ಟ ಅಪ್ಪೆಸಿ ಇದ್ದಿ ಅಂತಾ ಇಲ್ಲ ಸಲ್ಲದ ಆರೋಪ ಮಾಡಿ ನನ್ನ ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ. ದಿನಾಂಕ : 05/10/2012 ರಂದು ಮತ್ತೆ ನಮ್ಮ ತಂದೆಯವರು ನನ್ನ ಗಂಡನ ಪ್ರಭಾವಿತ ಸಂಬಂಧಿಕರಿಗೆ ಮನೆಗೆ ಕರೆದುಕೊಂಡು ಬಂದು ನನಗೆ ಒಳ್ಳೆಯ ರೀತಿಯಿಂದ ನಡೆಸಿಕೊಳ್ಳಲು ನಮ್ಮ ಮನೆಯವರಿಗೆ ಹೇಳಿಸಿರುತ್ತಾರೆ. ಅದೆ ದಿವಸ  ನಮ್ಮ ಮನೆಯವರ ಸಂಬಂಧಿಕರು ನಮ್ಮ ತಂದೆಯವರಿಗೆ ಹೇಳಿದ್ದೆನಂದರೆ ಈಗ  ಹುಡಗಿ ಅಶಕ್ತ (ವಿಕನೇಸ್ ) ಆಗಿರುತ್ತಾಳೆ. ಸ್ವಲ್ಪ ದಿವಸ ನೀವು ಆಕೆಯನ್ನು ಕರೆದುಕೊಂಡು ಹೋಗಿ 15 ದಿವಸಳಾದ ನಂತರ ನಮ್ಮ ಕಡೆಯಿಂದ ಯಾರಾದರು ಬಂದು ಕರೆದುಕೊಂಡು ಬರುತ್ತಾರೆ. ಎಂದು ಹೇಳಿದ ಮೇರೆಗೆ ಅವರ ಮಾತಿಗೆ ಒಪ್ಪಿ ನಮ್ಮ ತಂದೆಯವರು ನನ್ನನು ವಾಪಾಸ ಭಾಲ್ಕಿಗೆ ನನ್ನ ತವರು ಮನೆಗೆ ಕರೆದುಕೊಂಡು ಬಂದಿರುತ್ತಾರೆ. 15 ದಿವಸಳಾದ ಮೇಲೆ ನಮ್ಮ ತಂದೆಯವರು ಪುನಃ ಅವರನ್ನು ಸಂಪಕರ್ಿಸಿದಾಗ ನಿಮ್ಮ ಮಗಳನ್ನು ನಾವು ಸೇರಿಸಿಕೊಳ್ಳುವದಿಲ್ಲ ಒಂದು ಲಕ್ಷ ರೂಪಾಯಿ ತೆಗೆದುಕೊಂಡ ಬಂದರೆ ಮನೆಯಲ್ಲಿ ಸೇರಿಸಿಕೊಳ್ಳುತ್ತೆವೆ ಎಂದು ಹೇಳಿರುತ್ತಾರೆ. ಇದನ್ನು ಕೇಳಿ ನನ್ನ ತಂದೆಯವರು ಸದರಿ ನಮ್ಮ ಗಂಡನ ಮನೆಯವರಿಗೆ ಸಾಕಷ್ಟು ಸಲ ಮನವರಿಕೆ ಮಾಡಿಕೊಂಡಿದ್ದರು ಸಹ ಅವರು ನಮ್ಮ ಮಾತಿಗೆ ಬೆಲೆ ಕೊಡದೆ ತಮ್ಮದೆ ಆದ ಶೈಲಿಯಲ್ಲಿ ವತರ್ಿಸಿರುತ್ತಾರೆ. ನನ್ನ ತಂದೆ ಆರ್ಥಿಕವಾಗಿ ತುಂಬಾ ಬಡವರಿದ್ದಾರೆ ನಮ್ಮ ಗಂಡನ ಮನೆಯವರೆಲ್ಲರ  ಬೇಡಿಕೆಗಳನ್ನು ಈಡೇರಿಸಲು ಆಗದೆ ಇದ್ದ ಕಾರಣ ನಾನು ಒಂದು ವರ್ಷದಿಂದ ನನ್ನ ತವರು ಮನೆಯಲ್ಲೆ ಕಣ್ಣಿರು ಹಾಕುತ್ತಾ ನನ್ನ ಜೀವನ ಸಾಗಿಸುತ್ತಿದೆನೆ.  ಮೊನ್ನೆ ದಿನಾಂಕ : 22/09/2013 ರಂದು ನಮ್ಮ ತಂದೆಯವರು ನನ್ನ ದುಖವನ್ನು ನೋಡಿ ಅದನ್ನು ತಾಳಲಾರದೆ ಬೀದರಕ್ಕೆ ಹೋಗಿ ನಮ್ಮ ಮುಸ್ಲಿಂ ಸಮುದಾಯದ ಗಣ್ಯ ವ್ಯಕ್ತಿಗಳನ್ನು  ಕರೆಯಿಸಿ ನಮ್ಮ ಗಂಡ ಹಾಗು ಅವರ ಮನೆಯವರನ್ನು ಸಂಪಕರ್ಿಸಿ ಸಮಾಲೋಚನೆ ಮಾಡಿಸಿದರು ಸಹ ಅವರ ಮಾತಿಗೆ ಬೆಲೆ ಕೊಡದೆ ಎದ್ದು ಹೋಗಿರುತ್ತಾರೆ. ಆದ ಕಾರಣ ಮದುವೆಯಾದಾಗಿನಿಂದ ನನ್ನ ಗಂಡ ಹಾಗು ಮನೆವರೆಲ್ಲರು ನನಗೆ ಮಾನಸಿಕ ಹಾಗು ದೈಹಿಕ ಕಿರಕುಳ ನೀಡಿ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪೀಡಿಸಿರುತ್ತಾರೆ. ಎಂದು ಕಾನೂನು ಕ್ರಮ ಜರುಗಿಸಲು ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 323/13 ಕಲಂ 323, 498(ಎ), 313, 494, 504 ಜೊತೆ 34 ಐಪಿಸಿ :-
ದಿನಾಂಕ 26/09/2013 ರಂದು 1730 ಗಂಟೆಗೆ ಫಿರ್ಯಾದಿ ಶ್ರೀಮತಿ ಪದ್ಮಾವತಿ ಗಂಡ ವೇಂಕಟ ಗೋದೆ ವಯ : 25 ವರ್ಷ ಜಾ : ಕುರುಬ ಉ : ಮನೆ ಕೆಲಸ ಸಾ : ಸುಭಾಷ ಚೌಕ ಭಾಲ್ಕಿ ಸಧ್ಯ : ಮದಕಟ್ಟಿ ರವರು ¤ÃrgÀĪÀ zÀÆj£À ಸಾರಾಂಶವೆನೆಂದರೆ ಫಿರ್ಯಾದಿಯ  ತಂದೆ ತಾಯಿಯವರು 2008 ನೇ ಸಾಲಿನಲ್ಲಿ ಫಿರ್ಯಾದಿಯ ಮದುವೆ ವೆಂಕಟ ತಂದೆ ನರಸಿಂಗರಾವ ಗೊಧೆ ಸಾ : ಸುಭಾಷ ಚೌಕ ಭಾಲ್ಕಿ ರವರ ಜೊತೆಯಲ್ಲಿ ಮಾಡಿರುತ್ತಾರೆ. ಫಿರ್ಯಾದಿಗೆ  2 ಹೆಣ್ಣು ಮಕ್ಕಳು ಆಗಿರುತ್ತೆದೆ. ಫಿರ್ಯಾದಿಯ ಮದುವೆ ಆದ ನಂತರ ಫಿರ್ಯಾದಿಯ ಗಂಡನಾದ ವೇಂಕಟ ರವರು ಸ್ವಲ್ಪ ದಿವಸ ಚನ್ನಾಗಿ ಸಂಸಾರ ಮಾಡಿದ ನಂತರ ಅತ್ತೆ ಸೊನಮ್ಮಾ ಗಂಡ ನರಸಿಂಗರಾವ ಮಾವ ನರಸಿಂಗವಾರ ಗೊಧೆ ರವರ ಮಾತು ಕೇಳಿ ಫಿರ್ಯಾದಿಗೆ ಹೊಡೆಬಡೆ ಮಾಡುತ್ತಿರುತ್ತಾನೆ. ಮತ್ತು ಅತ್ತೆಯಾದ ಸೊನಮ್ಮಾ ರವರು ಫಿರ್ಯಾದಿಗೆ  ಸರಿಯಾಗಿ ಊಟ ಕೊಡದೆ ಕಾಟ ಕೊಡುತ್ತಿದ್ದಳು. ಮತ್ತು ಸದರಿ ಅತ್ತೆ ಮಾವ ಕೂಡಿಕೊಂಡು ಫಿರ್ಯಾದಿಯ ಗಂಡ ವೇಂಕಟ ರವರಿಗೆ ದಿನಾಂಕ 27/05/2013 ರಂದು ರೇಣುಕಾ ತಂದೆ ದತ್ತಾತ್ರಿ ನೇಳಗೆ ಸಾ : ಕಲವಾಡಿ ಇವಳ ಜೊತೆ ಮದುವೆ ಮಾಡಿರುತ್ತಾರೆ. ನಂತರ ಮೂರು ಜನರು ಕೂಡಿಕೊಂಡು ಫಿರ್ಯಾದಿಗೆ  ಮಾನಸಿಕ ಹಾಗೂ ದೈಹಿಕ ಕೀರುಕುಳ ಕೊಡುತ್ತಿದ್ದರು. ಆಗ ಫಿರ್ಯಾದಿಉ  2012 ನೇ ಸಾಲಿನಲ್ಲಿ ಸದರಿ ಜನರ ಮೇಲೆ ಕೇಸ ಮಾಡಿಸಿದ್ದು. ಸದರಿ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ಫಿರ್ಯಾದಿಯ ಗಂಡ ವೇಂಕಟ, ಅತ್ತೆ ಸೊನಮ್ಮಾ ಮತ್ತು ಮಾವ ನರಸಿಂಗರಾವ ರವರು ಹಿರಿಯರ ಸಮ್ಮಖದಲ್ಲಿ ತಮ್ಮ ತಪ್ಪು ಒಪ್ಪಿಕೊಂಡು ಒಳ್ಳೆ ರೀತಿಯಲ್ಲಿ ಜೀವನ ನಡೆಸುವುದಾಗಿ ನಂಬಿಸಿ ಫಿರ್ಯಾದಿಗೆ  ತಮ್ಮ ಮನೆಗೆ ಕರೆದುಕೊಂಡು ಹೊಗಿರುತ್ತಾರೆ. ಆಗ ಫಿರ್ಯಾದಿಯು ನ್ಯಾಯಾಲಯದಲ್ಲಿ ಸದರಿ ಕೇಸ ಕಾಂಪ್ರಮೈಸ ಮಾಡಿಕೊಂಡಿರುತ್ತೆವೆ. ಆಗ ಫಿರ್ಯಾದಿಯು ಮನೆಗೆ ಬಂದು ಕೆಲವು ದಿವಸದ ನಂತರ ಗರ್ಭೀಣಿ ಆಗಿದಾಗ ಫಿರ್ಯಾದಿಯ ಗಂಡ ವೇಂಕಟ ಈತನು ತನ್ನ ತಂದೆ ತಾಯಿಯವರ ಮಾತು ಕೇಳಿ ಗರ್ಭನಿರೋಧಕ ಮಾತ್ರೆಗಳು ತಂದು ಕೊಟ್ಟು ಫಿರ್ಯಾದಿಗೆ ಒತ್ತಾಯದಿಂದ ಸೇವಿಸಿ ಗರ್ಭ ಪಾತ ಮಾಡಿಸಿರುತ್ತಾರೆ. ನಂತರ ದಿನಾಂಕ 14/09/2013 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಫಿರ್ಯಾದಿಯ ಗಂಡ ವೇಂಕಟ ಈತನು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ನಿನು ಬೇರೆಯವರ ಜೊತೆ ಸಂಬಂಧ ಇಟ್ಟುಕೊಂಡಿರುತ್ತಿ ಈ ಮಕ್ಕಳು ನನಗೆ ಹುಟ್ಟಿರುವುದಿಲ್ಲ ಅಂತಾ ಹೊಡೆಬಡೆ ಮಾಡಿ ಮನೆಯಿಂದ ಹೊರ ಹಾಕಿರುತ್ತಾನೆ. ಆಗ ಫಿರ್ಯಾದಿಯು ಮದಕಟ್ಟಿ ಗ್ರಾಮಕ್ಕೆ ತನ್ನ ತವರು ಮನೆಗೆ ಹೊಗಿದ್ದು ದಿನಾಂಕ 23/09/2013 ರಂದು ಫಿರ್ಯಾದಿಯ ಮಗಳಿಗೆ ಆರಾಮ ಇಲ್ಲದಕ್ಕೆ ಫಿರ್ಯಾದಿಯ ಮತ್ತು ತಾಯಿ ಮಂಗಲಾಬಾಯಿ ಮತ್ತು ಫಿರ್ಯಾದಿಯ ತಂದೆ ರಮೇಶ ಎಲ್ಲರೂ ಭಾಲ್ಕಿ ಸರಕಾರಿ ಆಸ್ಪತ್ರೆಗೆ ಬಂದು ನಂತರ ಮದಕಟ್ಟಿ ಗ್ರಾಮಕ್ಕೆ ಹೊಗಲು ಸಾಯಂಕಾಲ 5.30 ಗಂಟೆ ಸುಮಾರಿಗೆ ಭಾಲ್ಕಿ ಬಸ ನಿಲ್ದಾಣದಕ್ಕೆ ಬಂದಾಗ ಫಿರ್ಯಾದಿಯ ಗಂಡ ವೇಂಕಟ ಈತನು ಬಂದು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಬೇನ್ನಲ್ಲಿ ಹೊಡೆದಿರುತ್ತಾನೆ ಎಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ .
ಔರಾದ(ಬಿ) ಪೊಲೀಸ ಠಾಣೆ ಗುನ್ನೆ ನಂ. 173/2013 ಕಲಂ 341, 323, 504, 506 ಐಪಿಸಿ :-
ದಿನಾಂಕ 26/09/2013 ಫಿರ್ಯಾದಿ ಶ್ರೀಮತಿ ಮುಕ್ತಾಬಾಯಿ ಗಂಡ ಖಂಡೆರಾವ ದೇವಕತೆ ವಯ 45 ವರ್ಷ ಉ// ಮನೆ ಕೇಲಸ ಜಾ// ಹಡಕರ ಸಾ// ಜಮಾಲಪೂರ ರವರು ಮನೆಯಲ್ಲಿದ್ದಾಗ ಮದ್ಯಾಹ್ನ 1200 ಗಂಟೆಗೆ ಆರೋಪಿ ನ್ಯಾನೋಬಾ ತಂದೆ ಖಂಡೆರಾವ ದೇವಕತೆ ವಯ 23 ವರ್ಷ ಉ// ಕೂಲಿ ಕೇಲಸ ಜಾ// ಹಡಕರ ಸಾ// ಜಮಾಲಪೂರ ಈತನು ಸರಾಯಿ ಕುಡಿದು ಬಂದು ಸರಾಯಿ ಕುಡಿಯಲು ಹಣ ಕೊಡು ಅಂತಾ ಅಕ್ರಮವಾಗಿ ಫಿರ್ಯಾದಿಗೆ ತಡೆದು ಅವಾಚ್ಯವಾಗಿ ಬಯ್ಯುತ್ತಿದ್ದಾಗ ಫಿರ್ಯಾದಿ ಎಲ್ಲಿಂದ ಹಣ ಕೊಡಲಿ ಅಂತಾ ಹೇಳಿದಕ್ಕೆ ನನಗೆ ಹಿಗೇಕೆ ಹೇಳುತ್ತಿದ್ದಿ ಅಂದಾಗ ರೆಂಡಿ ಅಂತಾ ಅವಾಚ್ಯವಾಗಿ ಬೈದು ಅಕ್ರಮವಾಗಿ ತಡೆದು ನಿಲ್ಲಿಸಿದ್ದಾಗ ಬಿಡಿಸಲು ಬಂದ ಫಿರ್ಯಾದಿಯ ಗಂಡ ಖಂಡೇರಾವ ಇವರಿಗೂ ಕೊಡ ಬೈದು ನಿಮಗೆ ಹಣ ಕೊಡದಿದ್ದರೆ ಜೀವಂತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ ಕೊಟ್ಟ ಫಿರ್ಯಾದಿ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಔರಾದ(ಬಿ) ಪೊಲೀಸ ಠಾಣೆ ಗುನ್ನೆ ನಂ. 174/2013 ಕಲಂ 87 ಕೆಪಿ ಕಾಯ್ದೆ :-
ದಿನಾಂಕ 26-09-2013 ರಂದು 1825 ಗಂಟೆಗೆ ಔರಾದ ಪಟ್ಟಣದ ಪತ್ತಗೆ ರವರ ಖುಲ್ಲಾ ಜಾಗೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಟ ಎಲೆಗಳ ಮೇಲೆ ಹಣ ಹಚ್ಚಿ ಅಂದರ ಬಹಾರ ಎಂಬುದ ಇಸ್ಪಟ ಜೂಜಾಟಾ ಆಡುತಿದ್ದ ವೆಂಕಟರೆಡ್ಡಿ ತಂದೆ ನಾಗರೆಡ್ಡಿ ಕುಂಬಾರೆ ಸಾ; ಇಡಗ್ಯಾಳ. 2) ವೀರಶೇಟ್ಟಿ ತಂದೆ ಧನರಾಜ ಚಿಟ್ಮೆ ಸಾ; ತೆಗಂಪೂರ, 3) ಧನರಾಜ ತಂದೆ ವೈಜಿನಾಥ ಹಂಗರಗೆ ಸಾ; ಎನಗುಂದಾ, 4) ಶ್ರೀಕಾಂತ ತಂದೆ ಕಲ್ಯಾಣರಾವ ಸಜ್ಜನಶೇಟ್ಟಿ ಸಾ; ಎನಗುಂದಾ, 5) ಶೀವಕುಮಾರ ತಂದೆ ರಘುನಾಥ ಪಾಟೀಲ್ ಸಾ; ಇಡಗ್ಯಾಳ, 6) ಗೋಪಾಲರೆಡ್ಡಿ ತಂದೆ ಶಂಕರರೆಡ್ಡಿ ಜಂಪಾಡೆ ಸಾ; ಮಮದಾಪೂರ ರವರುಗಳ ಮೇಲೆ   ಪಿಎಸ್ಐ ರವರು  ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಅವರಿಂದ ನಗದು ಹಣ 5285=00 ರೂ, ಹಾಗು 52 ಇಸ್ಪಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು  ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 212/2013 ಕಲಂ 279, 337 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 26/09/2013 ರಂದು 19:45 ಗಂಟೆಗೆ ಫಿರ್ಯಾದಿ ಶ್ರೀ ಆನಂದ ತಂದೆ ಹಣಮಂತಪ್ಪ ಖಾಸೆಂಪುರ, ವಯ 34 ವರ್ಷ, ಎಸ್.ಟಿ (ಗೊಂಡ), ಒಕ್ಕಲುತನ ಕೆಲಸ, ಸಾ: ಖಾಸೆಂಪುರ (ಪಿ) ತಾ. ಜಿ. ಬೀದರ ಯು ಮೋಟಾರ ಸೈಕಲ ನಂ. ಕೆಎ38 ಎಲ್-2900 ನೇದ್ದರ ಮೇಲೆ ಬೀದರದ ಮೋಹನ ಮಾರ್ಕೇಟ್ ಕಡೆಯಿಂದ ತನ್ನೂರಿಗೆ ಬೀದರದ ಕೆ.ಇ.ಬಿ ರೋಡ ಮೇಲೆ ಹನುಮಾನ ಮಂದಿರದ ಹತ್ತಿರ ಹೋಗುತ್ತಿದ್ದಾಗ ಎದುರಿನಿಂದ ಒಂದು ಕಾರ್ ನಂ. ಎಂಹೆಚ್04 ಬಿವೈ4367 ನೇದ್ದರ ಚಾಲಕನು ಸದರಿ ಕಾರನ್ನು ಅತಿ ವೇಗ, ದುಡುಕಿನಿಂದ, ನಿಷ್ಕಾಳಜಿಯಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಿಗೆ ಡಿಕ್ಕಿಕೊಟ್ಟಿದ್ದರಿಂದ ಅಪಘಾತ ಸಂಭವಿಸಿ ಫಿರ್ಯಾದಿಗೆ ಎಡಕಾಲಿನ ತೊಡೆಗೆ ಪೆಟ್ಟಾಗಿ ಗುಪ್ತಗಾಯ ಮತ್ತು ಸೊಂಟದಲ್ಲಿ ಹಾಗೂ ಎದೆಯಲ್ಲಿ ಗುಪ್ತಗಾಯಗಳಾಗಿವೆ. ಡಿಕ್ಕಿಯ ನಂತರ ಕಾರ ಚಾಲಕನು ಕಾರ ಸಹಿತ ಓಡಿ ಹೋಗಿರುತ್ತಾನೆ. ನೋಡಿದ್ದಲ್ಲಿ ಗುತರ್ಿಸುತ್ತೇನೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತ ಕೊಟ್ಟ ಫಿರ್ಯಾದಿಯ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 211/2013 ಕಲಂ 279, 338, 304(ಎ), ಭಾ.ದ.ಸಂ. ಸಂಗಡ 187 ಮೋ.ವಾ ಕಾಯ್ದೆ :-
ದಿನಾಂಕ 26/09/2013 ರಂದು 10:00 ಗಂಟೆಗೆ ಗಾಯಾಳು ಜಮಿಯೋದ್ದಿನ್ @ ಜಮಿರೋದ್ದಿನ್ ತಂದೆ ಮೈನೋದ್ದಿನ್, ವಯ 30 ವರ್ಷ ಸಾ: ಹಮೀಲಾಪುರ. ಈತನು ಸೈಯದ ಯುಸೂಫ್ ತಂದೆ ಸೈಯದ ರಜಾಕ್ ಸಾ: ಹಮೀಲಾಪುರ ಈತನು ನಡೆಸುತ್ತಿದ್ದ ಮೋಟಾರ ಸೈಕಲ ನಂ. ಕೆಎ38ಕ್ಯೂ5663 ನೇದ್ದರ ಹಿಂಭಾಗ ಕುಳಿತು ಹಮೀಲಾಪುರ ಗ್ರಾಮದಿಂದ ಬೀದರದ ಕೊರ್ಟ ಕಡೆಗೆ ಹೊಗುವಾಗ ಬೀದರದ ಕಿಲ್ಲಾ-ಗವಾನ ಚೌಕ ರಸ್ತೆನಲ್ಲಿ ಹಳೆ ಸರ್ಕಾರಿ ಆಸ್ಪತ್ರೆ  ಹತ್ತಿರ ಹಿಂದಿನಿಂದ ಒಂದು ಟ್ರ್ಯಾಕ್ಟರ ನಂ. ಕೆಎ32/662 & ಟ್ರಾಲಿ ನಂ. ಕೆಎ32/663 ನೇದನ್ನು ಅದರ ಚಾಲಕನು ದುಡುಕಿನಿಂದ, ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಜಮಿಯೋದ್ದಿನ್ @ ಜಮಿರೋದ್ದಿನ್ ಕುಳಿತ್ತಿದ್ದ ಮೋಟಾರ ಸೈಕಲಿಗೆ ಡಿಕ್ಕಿಪಡಿಸಿದರಿಂದ ಅಪಘಾತ ಸಂಭವಿಸಿ ಸದರಿ ಅಪಘಾತದಲ್ಲಿ ಜಮಿಯೋದ್ದಿನ್ @ ಜಮಿರೋದ್ದಿನ್ ಹೊಟ್ಟೆಯ ಎಡ ಫಸಲಿಗೆ ಗುಪ್ತ ಗಾಯ, ಎಡಗಾಲಿನ ಪಾದದ ಮೇಲೆ & ಗುಟ್ನಾಕ್ಕೆ ಭಾರಿ ರಕ್ತ ಗಾಯ & ಸೈಯದ ಯುಸೂಫ್ನಿಗೆ ಗಾಯವಾದ ಬಗ್ಗೆ ಈಗಾಗಲೆ ದೂರು ದಾಖಲಾಗಿದ್ದು ಇರುತ್ತದೆ. ಭಾರಿ ಗಾಯ ಹೊಂದಿದ ಜಮಿಯೋದ್ದಿನ್ @ ಜಮಿರೋದ್ದಿನ್ ಈತನಿಗೆ ಬೀದರ ಜಿಲ್ಲಾ ಆಸ್ಪತ್ರೆಯ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೇನ್ಸ ವಾಹನದಲ್ಲಿ ಬೀದರದಿಂದ ಹೈದ್ರಾಬಾದಕ್ಕೆ ಸಾಗಿಸುವಾಗ ದಾರಿಯಲ್ಲಿ ಸದಾಶಿವಪೇಟ ಹತ್ತಿರ ಮಧ್ಯಾಹ್ನ 3:45 ಗಂಟೆ ಸುಮಾರಿಗೆ ಜಮಿಯೋದ್ದಿನ್ @ ಜಮಿರೋದ್ದಿನ್ ಮೃತಪಟ್ಟಿರುತ್ತಾನೆ. ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ವಿನಂತಿ ಎಂಬ ಮೃತನ ತಮ್ಮನಾದ ನುರೋದ್ದಿನ್ ತಂದೆ ಮೈನೋದ್ದಿನ್ ಸಾ: ಹಮೀಲಾಪುರ ಇವರ ಹೇಳಿಕೆ ಸಾರಾಂಶದಿಂದ ಸದರಿ ಪ್ರಕರಣದಲ್ಲಿ ಕಲಂ. 279, 338 ಭಾ.ದ.ಸಂ. ಸಂಗಡ 187 ಮೋ.ವಾ. ಕಾಯ್ದೆ. ಪ್ರಕರಣದಲ್ಲಿ ಕಲಂ. 304(ಎ) ಭಾ.ದ.ಸಂ ಅಳವಡಿಸಿ ತನಿಖೆ ಕೈಕೊಳ್ಳಲಾಗಿದೆ.
ಬೀದರ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 101/2013 ಕಲಂ 279, 337, 338 ಐಪಿಸಿ ಜೊತೆ 187 ಐಎಂವಿ ಎಕ್ಟ :-
ದಿನಾಂಕ 28/09/13 ರಂದು 0030 ಗಂಟೆಗೆ ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಿಂದ ವಾಹನ ಅಪಘಾತದಲ್ಲಿ ಗಾಯಗೊಂಡ ಬಗ್ಗೆ ಎಮ್.ಎಲ್.ಸಿ ಇದೆ ಅಂತಾ ತೀಳಿಸಿದ ಮೇರೆಗೆ ಆಸ್ಪತ್ರೆಗೆ ಹೊಗಿ ಗಾಯಾಳು ಸಂಗಮೇಶ ತಂದೆ ವಿಶ್ವನಾಥ ದೆಗಲೂರೆ, ಹಾಗು ಶೇಷರಾವ ತಂದೆ ತಿಪ್ಪಣ್ಣಾ ಒಡೆಯಾರ ಇವರು ಚಿಕಿತ್ಸೆ ಪಡೆಯುತ್ತಿದ್ದರಿಂದ ಅಲ್ಲೆ ಹಾಜರಿದ್ದ ತಾಹೇರ ತಂದೆ ಜಾಫರಮಿಯ್ಯಾ ಮುಲ್ಲಾವಾಲೆ ಸಾ// ಚಿಕ್ಕಪೆಟಗ್ರಾಮ ಇವರ ಹೇಳಿಕೆಯನ್ನು ಬರೆದುಕೂಂಡಿದ್ದು ಸಾರಾಂಶೆವೇನೆಂದರೆ ದಿನಾಂಕ 27/09/13 ರಂದು ರಾತ್ರಿ 10 ಗಂಟಗೆ ಫಿರ್ಯಾದಿ ತಾಹೇರ ತಂದೆ ಜಾಫರಮಿಯ್ಯಾ ಮುಲ್ಲಾವಾಲೆ ಸಾ// ಚಿಕ್ಕಪೆಟ ಗ್ರಾಮ ಇವರು ತನ್ನ ಬೈಕ ಮೇಲೆ ಚಿಕ್ಕಪೇಟ ಬಳಿ ಇರುವ ಪೆಟ್ರೂಲ ಪಂಪನಲ್ಲಿ ಪೆಟ್ರಾಲ್ ಹಾಕಿಕೂಂಡು ಮನೆಗೆ ಬರುವಾಗ ಬೀದರ ಜನವಾಡಾ ರಸ್ತೆ ಚಿಕ್ಕೆ ಪೆಟ ಗ್ರಾಮದ ಬಳಿ ಬ್ರಿಜ್ ಹತ್ತಿರ ಎದುರಿನಿಂದ ಅಂದರೆ ಬೀದರ ಕಡೆಯಿಂದ ಜನವಾಡಾ ಕಡೆಗೆ ಒಂದು ಐಶರ ಟೆಂಪೂ ವಾಹನ ನಂ ಕೆಎ-38/7474 ನೇದರ ಚಾಲಕನು ತನ್ನ ವಾಹನ ಅತೀವೇಗ ಅಲಕ್ಷತನದಿಂದ ಅಂಕು ಡೂಂಕಾಗಿ ಚಲಾಯಿಸಿಕೂಂಡು ಬರುತ್ತಾ ನಿಯಂತ್ರಣ ತಪ್ಪಿ ರೊಡಿನ ಬದಿ ವಾಹನ ಪಲ್ಟಿ ಮಾಡಿದನು. ಫಿರ್ಯಾದಿಯು ಸ್ಥಳಕ್ಕೆ ಹೊಗಿ ನೋಡಲು ವಾಹನ ಪಲ್ಟಿಯಾದ ಪ್ರಯುಕ್ತ ವಾಹನದಲ್ಲಿ ಕುಳಿತಿದ್ದ ಕ್ಲೀನರ ಸಂಗಮೇಶ ತಂದೆ ವಿಶ್ವನಾಥ ದೆಗಲೂರೆ ಸಾ// ಜೀರಗಾ (ಬಿ) ಸದ್ಯ ಬಿದ್ರಿ ಕಾಲೋನಿ ಬೀದರ ದವನಿದ್ದು ಅವನಿಗೆ ಬಲಗಾಲು ಮೂಳಕಾಲಿಗೆ ಭಾರಿ ಗುಪ್ತ ಹಾಗೂ ರಕ್ತ ಗಾಯವಾಗಿತ್ತು ಮತ್ತು ಟಂಪೂದಲ್ಲಿ ಪ್ರಯಾಣಿಸುತ್ತಿದ್ದವನಿಗೆ ವಿಚಾರಿಸಲು ತನ್ನ ಹೆಸರು ಶೇಷರಾವ ತಂದೆ ತಿಪ್ಪಣ್ಣಾ ಒಡಿಯರ ಸಾ// ಅಂಬೆಡ್ಕರ ಕಾಲೋನಿ ಬೀದರ ಅಂತ ತಿಳಿಸಿದ್ದು ಅತನಿಗೆ ಸೂಂಟಕ್ಕೆ, ಕುತ್ತಿಗೆಗೆ ಪೆಟ್ಟಾಗಿ ಗುಪ್ತಗಾಯವಾಗಿರುತ್ತದೆ. ಪಲ್ಲಿ ಮಾಡಿದ ಟಂಪೂ ಚಾಲಕನು ತನ್ನ ವಾಹನ ಸ್ಥಳದಲ್ಲಿ ಬಿಟ್ಟು ಓಡಿ ಹೊಗಿರುತ್ತಾನೆ. ಅಂತಾ ನೀಡಿದ ದೂರಿನ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ


No comments: