ಹಲ್ಲೆ
ಪ್ರಕರಣಗಳು :
ಸ್ಟೇಷನ ಬಜಾರ
ಠಾಣೆ : ದಿನಾಂಕ 09/10/2013 ರಂದು 11:30 ಎ.ಎಮ್ ಕ್ಕೆ ಮಾನ್ಯ ಪ್ರಿನ್ಸಿಪಲ ಜೆ.ಎಮ್.ಎಫ್.ಸಿ
ನ್ಯಾಯಾಲಯ ಪತ್ರ ನಂ. 4281/13 ದಿನಾಂಕ 05/10/2013 ಮತ್ತು ಶ್ರೀ ಭೀಮರಾವ ತಂದೆ ಹಣಮಂತರಾವ
ಪಾಟೀಲ ಸಾಃ ಶಾಸ್ತ್ರಿ ನಗರ ಗುಲಬರ್ಗಾ ರವರ ಖಾಸಗಿ ಫಿರ್ಯಾದಿ ನಂ. 515/13 ನೇದ್ದು
ವಸೂಲಾಗಿದ್ದು ಸಾರಂಶವೆನೆಂದರೆ, ದಿನಾಂಕ 29/05/2013 ರಂದು 09:30 ಎ.ಎಮ್ ಕ್ಕೆ
ಆರೋಪಿ ಬಸವರಾಜ ಖಾನಾಪೂರ ಸಾಃ ರಾಷ್ಟ್ರಪತಿ ಚೌಕ ಜೇವರ್ಗಿ ಕ್ರಾಸ್ ಗುಲಬರ್ಗಾ ಇವನು ಬಂದು
ಫಿರ್ಯಾದಿ ಭೀಮರಾವ ಇವನಿಗೆ ರಾಜಾಪೂರ ಸರ್ವೆ ನಂ.20/2 ನೇದ್ದರ ಪ್ಲಾಟ ನಂ.18 ಮತ್ತು 71
ನೇದ್ದನ್ನು 6,00,000/- ರೂ ಗೆ ಖರಿದಿ ಮಾಡಿ 21,000/- ರೂ ಮಾತ್ರ ಕೊಟ್ಟಿದ್ದು ಇನ್ನೂ ಉಳಿದ ಹಣ ಕೊಡಲಾರದೆ
ಫಿರ್ಯಾದಿಗೆ ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದು ಪ್ಲಾಟ ರಜಿಸ್ಟರ ಮಾಡಿಕೊಡು ಇಲ್ಲಾಂದರೆ ಖಲಾಸ
ಮಾಡುತ್ತೆನೆ ಅಥವಾ 75,000/- ರೂ ಕೊಡು ಅಂತಾ ಶರ್ಟ ಹಿಡಿದು ಎಳೆದಾಡಿದ್ದು ಮತ್ತು
ಫಿರ್ಯಾದಿ ಹೆಂಡತಿ ಇವರು ಬಿಡಿಸಲು ಬಂದರೆ ಅವರಿಗು ಕೂಡಾ ಬೈದಿರುತ್ತಾನೆ. ಅಂತಾ ಸಲ್ಲಿಸಿದ ದೂರು
ಸಾರಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಶಾಹೀನಸಾಬ ತಂದೆ ಅಲ್ಲಿಸಾಬ ದೊಡ್ಡಮನಿ ಸಾ: ಸಿಗರಥಹಳ್ಳಿ ರವರು
ಮತ್ತು ಫಿರ್ಯಾದಿ ಹೆಂಡತಿ ಮದೀನಾ ಬೇಗಂ ಇಬ್ಬರು ತಮ್ಮ ಹೊಲ ಸರ್ವೆ ನಂ 208, 8 ಎಕರೆ ಹೊಲದಲ್ಲಿ ದಿನಾಂಕ 06-10-13 ರಂದು ಸಾಯಾಂಕಾಲ ಇದ್ದಾಗ
ಗುಡುಮಾ ಗಂಡ ಅಲ್ಲಿಸಾಬ ದೊಡ್ಡಮನಿ ಸಂ 5 ಜನರು ಎಲ್ಲರೂ ಸಾ: ಸಿಗರರಥಹಳ್ಳಿ ರವು ಅಕ್ರಮ ಕೂಟ ಕಟ್ಟಿಕೊಂಡು ಬಂದು ಹೊಲದಲ್ಲಿ ಅತೀಕ್ರಮ
ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಲದಲ್ಲಿನ ಸಜ್ಜಿ ಬೆಳೆ ಚೆಂಡಿ ಆಡಿ ಬೆಳೆ ನಾಶ
ಮಾಡಿರುತ್ತಾರೆ ಕಾರಣ ಸದರ ಆರೋಪಿತರ ವಿರುದ್ದ ಕಾನೂನು ಪ್ರಕಾರ ಕ್ರಮ ಜರಿಗಿಸಬೇಕು ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ
ವಾಹನ ಕಳವು ಪ್ರಕರಣ :
ಸ್ಟೇಷನ ಬಜಾರ
ಠಾಣೆ : ಶ್ರೀ ಶಾಂತ ಕುಮಾರ ತಂದೆ ಬಸವರಾಜ ಜವಳಗಿ ಸಾ|| ಮನೆ ನಂ; 9-953/2 B ಅಗ್ನಿ ಶ್ಯಾಮಕ ಠಾಣೆ ಹತ್ತಿರ ಶಹಾಬಜಾರ ರೋಡ ಕಲ್ಯಾಣ
ನಗರ ಗುಲಬರ್ಗಾರವರು ದಿನಾಂಕ; 01/10/2013 ರಂದು 17;30 ಗಂಟೆಯ ಸಮಾರಿಗೆ
ಸ್ಟೇಷನ ಹತ್ತಿರ ನನ್ನ ಹಿರೋ ಹೋಂಡಾ ಸ್ಪ್ಲೇಂಡರ ಪ್ಲಸ ಸೈಕಲ್ ಮೋಟಾರ ನಂ; ಕೆಎ 32 ಕ್ಯೂ 7042 ಚಸ್ಸಿ ನಂ; 05A16F12130
ಇಂಜಿನ ನಂ; 05A15E12239 ಅ|| ಕಿ|| 22,500/- ರೂ ನೇದ್ದು ರೆಲ್ವೇ ಸ್ಟೇಷನ ಹತ್ತಿರ
ನಿಲುಗಡೆ ಮಾಡಿ ಹೊಟಲ್ ನಲ್ಲಿ ಹೊಗಿ ಚಹಾ ಕುಡಿದು 17;40 ಗಂಟೆಗೆ ಮರಳಿ
ಬಂದು ನೋಡುವಸ್ಟರಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಾನು ಇಲ್ಲಿಯವರೆಗೆ ಎಲ್ಲಾ
ಕಡೆಗೆ ಹುಡುಕಾಡಿದರು ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಮುಧೋಳ ಠಾಣೆ : ಶ್ರೀ ಶಿವಕುಮಾರ ತಂದೆ ರಾಘವೇಂದ್ರ ಸಾ|| ಮುಧೋಳ ಗ್ರಾಮ ಇವರು ಮುಧೋಳ ಮೇನ್ ಗೇಟ ಸಮೀಪ ಸೇಡಂ
ರಸ್ತೆಗೆ ಹೊಂದಿಕೊಂಡು ನಮ್ಮ ಶ್ರೀ ಧಾನ್ಯಲಕ್ಷ್ಮೀ ರೈಸ ಇಂಡಸ್ಟ್ರೀಜ ಇರುತ್ತದೆ ದಿನಾಂಕ: 07.10.13 ರಂದು 6:30 ಪಿ
ಎಮ್ ಸುಮಾರಿಗೆ ಸದರಿ ರೈಸ ಮೀಲ್ ನಲ್ಲಿ ಕೆಲಸ ಮಾಡಿ ನಾವು ಹಾಗೂ ಲೇಬರ ಜನರು ಕೂಡಿ ಬಂದು
ಮಾಡಿಕೊಂಡು ಹೋಗಿದ್ದೇವು ದಿನಾಂಕ: 08.10.13 ರಂದು ಮುಂಜಾನೆ 7 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ತಂದೆಯವರಾದ
ರಾಘವೇಂದ್ರ ಹಾಗೂ ನಮ್ಮ ತಮ್ಮನಾದ ಶಿರೀಷಕುಮಾರ ಇವರು ಕೂಡಿ ನಮ್ಮ ರೈಸ ಮೀಲ್ ಗೆ ಹೋಗಿ ನೋಡಲು
ರೈಸ ಮೀಲ್ ಹಿಂದಿನ ಭಾಗಕ್ಕೆ ಇರುವ ಶಟರನ್ನು ಅರ್ಧ ಭಾಗ ತೆರೆದಿತ್ತು ಮತ್ತು ಶಟರನ್ನು ಹಾರಿಯಿಂದ
ಮುರಿದು ಅರ್ಧ ಭಾಗ ಎತ್ತಿ ಖುಲ್ಲಾ ಮಾಡಿದ್ದರು ಆಗ ನಾವು ಮೀಲ್ ದಲ್ಲಿ ಹೋಗಿ ನೋಡಲು ಒಳಗೆ ಇದ್ದ
ಹಂಸ ಅಕ್ಕಿ 10 ಪಾಕೀಟು 10*50 ಕೇ ಜಿ - 5 ಕ್ವೀಂಟಲ ಅ ಕಿ 14,000/- ರೂ ಅಕ್ಕಿಯು ಇದ್ದ ಸ್ಥಳದಲ್ಲಿ ಇರಲಿಲ್ಲ ಮತ್ತು ಪಕ್ಕದ
ಆಫೀಸು ರೂಮಿನಲ್ಲಿದ್ದ ಟಿ ವಿ ಸೇಟ ಇದ್ದ ಸ್ಥಳದಲ್ಲಿ ಇರಲಿಲ್ಲ ಇದರ ಮೌಲ್ಯ ಅ ಕಿ 3,500/- ರೂ ಮತ್ತು ಇದೇ ಕೋಣೆಯಲ್ಲಿ ಇದ್ದ ನುಚ್ಚು ಅಕ್ಕಿ 2 ಪಾಕೀಟು
ಅಂದರೆ 2*50 ಕೆ ಜಿ - 1 ಕ್ವೀಂಟಲ ಇದರ ಬೆಲೆ 1,400/- ರೂ ಆಗಿರುತ್ತದೆ. ಹೀಗೆ ಒಟ್ಟು 15,400/- ರೂ
ಕಿಮ್ಮತ್ತಿನ ಅಕ್ಕಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಜಾವಿದ ಖಾನ
ತಂದೆ ಮಹಿಮೂದ ಖಾನ ಜಾತಿಃ ಮುಸ್ಲಿಂ ಸಾಃ ಮನೆ ನಂ. 4-601/72/ಎಫ್4/ಎ ಎಂ.ಬಿ ನಗರ ರಿಂಗ್ ರೋಡ್
ಹತ್ತಿರ ಗುಲಬರ್ಗಾ ಇವರು ತಂದೆ ತಾಯಿಯವರು ಹಜ್ ಯಾತ್ರೆಗೆ ಹೋಗುತ್ತಿದ್ದ ಪ್ರಯುಕ್ತ ಅವರಿಗೆ
ಹೈದ್ರಾಬಾದಗೆ ಬಿಟ್ಟು ಬರಲು ಫಿರ್ಯಾದಿ ಹಾಗು ಫಿರ್ಯಾದಿಯ ತಮ್ಮ ಎಲ್ಲರೂ ಕೂಡಿಕೊಂಡು ದಿನಾಂಕ 06-10-2013
ರಂದು 07:00 ಎ.ಎಂ. ಸುಮಾರಿಗೆ ಮನೆಗೆ ಕೀಲಿ ಹಾಕಿಕೊಂಡು ಹೊರಟು ತಂದೆ ತಾಯಿಯವರಿಗೆ
ಹೈದ್ರಾಬಾದನಲ್ಲಿ ಬಿಟ್ಟು ನಂತರ ದಿನಾಂಕಃ 09-10-2013 ರಂದು ಬೆಳಗ್ಗೆ 06:00 ಗಂಟೆಗೆ ಮನೆಗೆ
ಬಂದು ನೋಡಲಾಗಿ ಮನೆಯ ಬಾಗಿಲಿಗೆ ಹಾಕಿದ ಕೀಲಿ ಮುರಿದು ಬಿದ್ದಿದ್ದು ಹಾಗು ಮನೆಯೊಳಗೆ ಹೋಗಿ ನೊಡಲು
ಕಿಚನ್ ರೂಮಿನ ಪಕ್ಕದಲ್ಲಿರುವ ಬೆಡರೂಮಿನಲ್ಲಿದ್ದ ಅಲಮಾರಾ ತೆರೆದಿದ್ದು ಸಾಮಾನುಗಳು
ಚೆಲ್ಲಾಪಿಲ್ಲಿಯಾಗಿದ್ದು ಅಲೆಮಾರಿಯನ್ನು ಚೆಕ್ ಮಾಡಿ ನೋಡಲಾಗಿ ಅಲೆಮಾರಿಯಲ್ಲಿಟ್ಟಿದ್ದ 03
ತೊಲೆಯ ಬಂಗಾರದ ರಾಣಿ ಹಾರ್ ಹಾಗು ಮದುವೆಗಾಗಿ ತಂದಿಟ್ಟ 04 ತೊಲೆ ಬಂಗಾರ ಹಾಗು ನಗದು ಹಣ
30,000/- ರೂ. ಹೀಗೆ ಒಟ್ಟು 2,05000/- ರೂ. ಬೆಲೆ ಬಾಳುವ ಬಂಗಾರ ಹಾಗು ನಗದು ಹಣ ಯಾರೋ ಕಳ್ಳರು
ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ
ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment