ಮೋಟಾರ ಸೈಕಲ ಕಳವು ಪ್ರಕರಣ:
ಸೇಡಂ ಪೊಲೀಸ್ ಠಾಣೆ.
ದಿ:17-11-2013 ರಂದು ಶ್ರೀ ಇಮ್ತಿಯಾಜ್ ತಂದೆ ರಿಯಾಜೋದ್ದಿನ್ ಗೋರೆಮಿಯ್ಯಾ ಸಾ:ರಹೇಮತ ನಗರ ಸೇಡಂ ರವರು ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಬಜಾಜ
ಪಲ್ಸರ ಮೋಟಾರ ಸೈಕಲ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ನೋಡಲಾಗಿ ತನ್ನ ಬಜಾಜ ಪಲ್ಸರ ಮೋಟಾರ ಸೈಕಲ
ಇರಲಿಲ್ಲ ಆಗ ನಮ್ಮ ತಂದೆಯವರು ನನಗೆ ಎಬ್ಬಸಿ ಮೋಟಾರ ಸೈಕಲ ಇರಲಿಲ್ಲ ಅದನ್ನು ಯಾರೋ ಕಳ್ಳರು ಇಂದು
ದಿನಾಂಕ 17-11-2013 ರಂದು ಬೆಳಗಿನ ಜಾವ 3 ಗಂಟೆಯಿಂದ 4 ಗಂಟೆಯ ನಡುವಿನ ಅವಧಿಯಲ್ಲಿ ಕಳವು
ಮಾಡಿಕೊಂಡು ಹೋಗಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಂಶದ ಮೇಲಿಂಧ ಸೇಡಂ ಠಾಣೆಯಲ್ಲಿ ಪ್ರಕರಣ
ದಾಖಲಾಗಿದ್ದು ತನಿಖೆ ಜಾರಿಯಲ್ಲಿರುತ್ತದೆ.
ಜೂಜುಕೋರರ ಬಂಧನ
ಮಹಾಗಾಂವ ಠಾಣೆ
ದಿ: 17/11/13 ರಂದು ಮಹಾಗಾಂಔ ಪೊಲೀಸ್ ಠಾಣೆ ವ್ಯಾಪ್ತಿಯ ಕಡಬೂರು ಗ್ರಾಮದ ಸರ್ಕಾರಿ ಶಾಲೆ
ಹತ್ತಿರ ಕೆಲವರು ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಪಂಚರು ಮತ್ತು
ಸಿಬ್ಬಂದಿಯವರೊಂದಿಗೆ ಬಾಪುಗೌಡ ಎಸ್. ಪಾಟೀಲ ಪಿ.ಎಸ್.ಐ ಮಹಾಗಾಂವ ಠಾಣೆ ರವರು ದಾಳಿ ಮಾಡಿ
ಜೂಜಾಟದಲ್ಲಿ ತೊಡಗಿದ್ದ 1) ತಾಜೋದ್ದೀನ್ ತಂ, ಅಲ್ಲಾವುದ್ದೀನ್ ಸಾ||ಖಾಜಾ ಕಾಲೋನಿ ಗುಲಬರ್ಗಾ 2)ಬಾಬಾ ತಂ, ಮಹ್ಮದ ಶಫೀ 3)ಅಬ್ದುಲ್ ಬಾರೀದ ತಂ, ಅಹ್ಮದ ಗನಿ ಸಾ||ಫೈಯದ ಗಲ್ಲಿ ಗುಲಬರ್ಗಾ 4)ಮಹ್ಮದ ಖಾನ್ ತಂ, ಮಹಿಮೂದ ಖಾನ್, ಸಾ||ಖಾಜಾ ಕಾಲೋನಿ ಗುಲಬರ್ಗಾ ಇವರನ್ನು ದಸ್ತಗೀರ ಮಾಡಿ ಜೂಜಾಟಕ್ಕೆ ಬಳಸಿದ 52 ಇಸ್ಪೀಟ್ ಎಲೆಗಳು
ಮತ್ತು ನಗದು ರೂ 11500/- ರೂ ಜಪ್ತಿಮಾಡಿಕೊಪಂಡು ಆರೋಪಿತ ವಿದ್ದು ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ
ಚಿಂಚೋಳಿ ಪೊಲೀಸ್ ಠಾಣೆ : ಶ್ರೀ ತುಳಜಪ್ಪ ತಂದೆ ಬಕ್ಕಪ್ಪ
ಚಿಂತಪಳ್ಳಿ ಸಾ|| ಐನೋಳ್ಳಿ ಇವರು ಚಾಂಗಲೇರಾದ ಶ್ರೀ
ವೀರಭದ್ರೇಶ್ವರ ಜಾತ್ರಾ ಮಹೋತ್ಸವಕ್ಕಾರಿ ತಮ್ಮೂರಿನ ಕಲ್ಲಪ್ಪ ಧುತ್ತರಗಿ ಯೊಂದಿಗೆ ಹೋಗಿ ಮರಳಿ ಚಿಂಚೋಳಿಗೆ
ಆಟೋದಲ್ಲಿ ಬರುತ್ತಿರುವಾಗ ಪಟಪಳ್ಳಿ ಕ್ರಾಸ ಹತ್ತಿರ ಆಟೋ ಚಾಲಕನು ಅತೀವೇಗದಿಂದ ಮತ್ತು ನಿಷ್ಕಾಳಜಿತನದಿಂದ
ಚಲಾಯಿಸುತ್ತಾ ಮನ್ನಾಖ್ಖೇಳಿ- ಚಿಂಚೋಳಿ ಮುಖ್ಯ ರಸ್ತೆಯ ಮೇಲೆ ಪಟಪಳ್ಳಿ – ಫತ್ತೆಪೂರ ಕ್ರಾಸ ಮದ್ಯೆ ದಲ್ಲಿ ಕ್ಯಾನಲ್ ಸಮೀಪ
ಒಮ್ಮಿಂದೋಮೆಲೆ ಕಟ ಹೊಡೆದ್ದರಿಂದ ಆಟೋ ಎಡ ಮಗ್ಗಲಾಗಿ ಪಲ್ಟಿಯಾಗಿದ್ದು ಆಟೋದಲ್ಲಿ
ಕುಳಿತ ತಾನಗೆ ಮತ್ತು ಕಲ್ಲಪ್ಪನಿಗೆ ರಕ್ತ ಗಾಯವಾಗಿದ್ದು
ಇನ್ನೋಬ್ಬ ಪ್ರಯಾಣಿಕ ಆಟೋದಡಿ ಸಿಲುಕಿ ಮೃತಪಟ್ಟಿದ್ದು.
ಅಪಘಾತದ ನಂತರ ನಾನು ಮತ್ತು ಕಲ್ಲಪ್ಪ ಮನೆಗೆ ಹೋಗಿ ಇಂದು ಸದರಿ ಅಟೋ ಚಾಲಕ ನಾಗಪ್ಪನ ವಿರುದ್ದ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment