ಪತ್ರಿಕಾ ಪ್ರಕಟಣೆ
ಗುಲಬರ್ಗಾ ಜಿಲ್ಲೆಯ ವಿಶೇಷವಾಗಿ ಗುಲಬರ್ಗಾ
ನಗರದ ಸಾರ್ವಜನಿಕರಲ್ಲಿ ಕೋರುವದೇನೆಂದರೆ, ಜಿಲ್ಲೆಯಲ್ಲಿರುವಂತಹ ದ್ವಿಚಕ್ರ, 4 ಚಕ್ರ ವಾಹನಗಳಿಗೆ
ಅಳವಡಿಸಿದ ನಂಬರ ಪ್ಲೇಟುಗಳು ಹೆಚ್ಚಾಗಿ ದೋಷಪೂರಿತವಾಗಿರುವುದು ಕಂಡು ಬಂದಿರುತ್ತದೆ. ದಿನಾಂಕ
05-11-2013 ರಿಂದ 14-11-2013 ರವರೆಗೆ ಈ ಬಗ್ಗೆ ಕಾರ್ಯಚರಣೆ ನಡೆಸಿರುವ ಗುಲಬರ್ಗಾ ಸಂಚಾರಿ
ಪೊಲೀಸ್ ಠಾಣೆಯ ಅಧಿಕಾರಿಗಳು 110 ದೋಷಪೂರಿತ ನಂಬರ ಪ್ಲೇಟುಗಳನ್ನು ಹೊಂದಿರುವ ವಾಹನಗಳನ್ನು
ಹಿಡಿದು 11,000/- ರೂ ದಂಡ ವಿಧಿಸಿ ನಂಬರ ಪ್ಲೇಟುಗಳು ತಮ್ಮ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕೇಂದ್ರ ಮೋಟಾರು ವಾಹನ ಅಧಿನಿಯಮ 1989, ನಿಯಮ
51 ರಲ್ಲಿ ತಿಳಿಸಿದ ಈ ಕೆಳಕಂಡ ನಮೂನೆಯಲ್ಲಿ
ಯಾವುದೇ ವಾಹನದ ಹಿಂದೆ ಮತ್ತು ಮುಂದೆ ಇರುವಂತಹ ನಂಬರ್ ಪ್ಲೇಟುಗಳು ಸ್ವಂತಕ್ಕೆ ಬಳಸುವ
ವಾಹನವಾದರೆ ಬಿಳಿಯ ಬಣ್ಣದ ಹಿನ್ನಲೆ ಹೊಂದಿ ಕಪ್ಪು ಅಕ್ಷರಗಳಿಂದ ಎರಡು ಲೈನಗಳಲ್ಲಿ (Arial Font)
ನಲ್ಲಿ ಬರೆಯಬೇಕು. ಇದರ ಮೇಲೆ ಯಾವುದೇ ಹೆಸರು, ಚಿನ್ಹೆ, ಸಂಕೇತ ಬರೆಯಬಾರದು. ಸರಿಯಾದ ನಂಬರ್
ಪ್ಲೇಟ್ ಬರೆಯದೇ ಇದ್ದಾಗ ಅಪರಾಧ ಮಾಡುವಂತಹ ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳಲಿಕ್ಕೆ
ಸಾದ್ಯವಾಗುತ್ತದೆ. ಆದ್ದರಿಂದ ಗುಲಬರ್ಗಾ ಜಿಲ್ಲೆಯ ಸಾರ್ವಜನಿಕರು ತಮ್ಮ ವಾಹನಗಳಿಗೆ ಅಳವಡಿಸಿರುವ
ನಂಬರ್ ಪ್ಲೇಟಗಳು ದೋಷಪೂರಿತ ವಾಗಿದಲ್ಲಿ 15 ದಿವಸಗಳ ಒಳಗಾಗಿ ಕೇಂದ್ರ ಮೋಟಾರು ವಾಹನ ಅಧಿನಿಯಮ
1989, ನಿಯಮ 51 ರಲ್ಲಿ ತಿಳಿಸಿರುವಂತೆ ಬದಲಿಸತಕ್ಕದ್ದು.
ದೋಷಪೂರಿತ ನಂಬರ್ ಪ್ಲೇಟ ಬರೆದಿದ್ದು ಕಂಡು ಬಂದಲ್ಲಿ ಅಂತಹ ವಾಹನ ಮಾಲಿಕರ ವಿರುದ್ದ ಮತ್ತು
ಬರೆದವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು.
ಕಾರಣ ಎಲ್ಲಾ ವಾಹನ ಮಾಲಿಕರು ತಮ್ಮ ವಾಹನಗಳ
ಮೇಲೆ ಸರಿಯಾದ ನಂಬರ್ ಪ್ಲೇಟಗಳನ್ನು ಅಳವಡಿಸಿಕೊಂಡು ಗುಲಬರ್ಗಾ ಜಿಲ್ಲೆಯ ಪೊಲೀಸರಿಗೆ ಸಹಕರಿಸಲು
ಕೋರುತ್ತೇನೆ.
SI No.
|
Class of Vehicle
|
Dimensions not less then (In Milimeters)
|
|||
|
Height
|
Thickness space between
|
|||
01
|
All motor cycles and 3 wheeled
invalid carriage
|
Rear Letters and Rear Numbers
|
40
|
07
|
05
|
02
|
Motor cycles with engine
Capacity less than 70 cc
|
Front Letters and Numbers
|
15
|
2.5
|
2.5
|
03
|
Other Motor Cycles
|
Frton Letters and Numbers
|
30
|
05
|
05
|
04
|
Three Wheelers
|
Rear and Front Letters &
Numbers
|
40
|
07
|
05
|
05
|
All other Vehicles
|
Rear and Front Letters &
Numbers
|
65
|
10
|
10
|
No comments:
Post a Comment