ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ
ಠಾಣೆ : ಶ್ರೀ ಚಂದ್ರಕಾಂತ ತಂದೆ ಮಲ್ಲಪ್ಪ ಇವರು ದಿನಾಂಕ 21-11-2013
ರಂದು ರಾತ್ರಿ 10-00 ಗಂಟೆಗೆ ತನ್ನ ಮೋಟಾರ ಸೈಕಲ ನಂಬರ ಕೆಎ-32 ಇಇ-2775 ನೇದ್ದನ್ನು ಜಗತ ಸರ್ಕಲ ಕಡೆಯಿಂದ ಎಸ್.ವಿ.ಪಿ ಸರ್ಕಲ
ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಮಹಾನಗರ ಪಾಲಿಕೆ ಎದುರಿನ ರೋಡಿನ ಮೇಲೆ ಹಿಂದಿನಿಂದ
ಮೋಟಾರ ಸೈಕಲ ನಂಬರ ಕೆಎ-32 ಎಕ್ಸ-5984 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು
ಬಂದು ಡಿಕ್ಕಿ ಪಡಿಸಿ ಅಪಘಾತ ಮಾಡಿ ಗಾಯಗೊಳಿಸಿ ಮೋಟಾರ ಸೈಕಲ ಸಮೇತ ಹೊರಟು ಹೋಗಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ
ಠಾಣೆ : ಶ್ರೀ ಬೀರಪ್ಪಾ ತಂದೆ
ಮಾರುತಿ ಸಾ ಜನವಾಡ ಜಿ: ಬೀದರ ರವರು ದಿನಾಂಕ 22-11-2013 ರಂದು 12-00 ಗಂಟೆಯ ಸುಮಾರಿಗೆ ಮಹಮ್ಮದ
ರಫಿಕ ಚೌಕ ಹತ್ತಿರ ಹೋಗುತ್ತಿರುವಾಗ ಗುರುಪ್ರಸಾದ ತಂದೆ ಚಂದ್ರಕಾಂತ ಸಾ : ಕೈಲಾಸ ನಗರ ಇವರು
ಮತ್ತು ಪ್ರಕಾಶ ತಂದೆ ನಾಗೇಂದ್ರ ಬಾಂಏಕರ ಇವರನ್ನು ತನ್ನ ಮೋಟಾರ ಸೈಕಲ್ ನಂ ಕೆಎ 32 ಬಿ 9607
ನೇದ್ದರಲ್ಲಿ ಕುಡಿಸಿಕೊಂಡು ಹೋಗುವಾಗ ಮಹ್ಹಮದ ರಫಿ ಚೌಕ ಹತ್ತಿರ ಬಂದಾಗ ಜಂಜಂ ಕಾಲನಿ ಕಡೆಯಿಂದ ಯಾವುದೋ
ಒಬ್ಬ ಮೋಟಾರ ಸೈಕಲ್ ಒಮ್ಮೆಲೆ ಬರಲು ತನ್ನ ಮೋಟಾರ ಸೈಕಲ್ನ್ನು ನಿಯಂತ್ರಿಸಲು ಒಮ್ಮೆಲೆ ಬ್ರೇಕ
ಹಾಕಿದ್ದರಿಂದ ಮೊಟಾರ ಸೈಕಲ್ ಸ್ಕಿಡ್ ಆಗಿ ಬಿದ್ದಿದ್ದರಿಂದ ಇಬ್ಬರಿಗು ರಕ್ತಗಾಗಳಾಗಿರುತ್ತವೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ಚಿಂಚೋಳಿ ಠಾಣೆ : ಶ್ರೀಮತಿ
ಶರಣಮ್ಮಾ ಗಂಡ ಜಗನ್ನಾಥ ರಾಠೋಡ ಸಾ :
ಸ್ಠೇಷನ್ ತಾಂಡಾ ತಾ|| ಚಿತಾಪೂರ ಜಿ|| ಗುಲ್ಬರ್ಗಾ ರವರು ನನ್ನ ಗಂಡ ಜಗನ್ನಾಥ ರಾಠೋಡ ರವರು ರಿಕ್ರಿಯಷನ್ ಶಾಲೆ
ಚಿತ್ತಾಪೂರ ಶಿಕ್ಷಕರಾಗಿ ಕೆಲಸ
ಮಾಡುತ್ತಿದ್ದು ಇವರು ನನಗೆ ಮದುವೆಯಾಗಿ ಒಂದು
ವರ್ಷ 5 ತಿಂಗಳು ಕಳೆದಿದೆ ಆದರೆ ಇವರು ನನಗೆ
ದಿನಾಲು ವರದಕ್ಷಿಣೆ ತರಲು ಪಿಡಿಸುತ್ತಿದ್ದು ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ
ನಿಡುತ್ತಿದದ್ದಾರೆ ಹಾಗೂ ನನ್ನ ಮೇಲೆ ವಿನಾಕಾರಣ ಸಂಶಯ ದೃಷ್ಟಿಯಿಂದ ಕಾಡಿಸುತ್ತಿದ್ದು ನನಗೆ ತುಂಬಾ
ತೋಂದರೆ ಕೋಡುತ್ತಿದ್ದಾರೆ . ನನಗೆ ಮನೆಯಲ್ಲಿ ಒಬ್ಬಳೆ ಇದ್ದಾಗ ನನ್ನ ಮೇಲೆ ಹಲ್ಲೆ ದೈಹಿಕ ಕಿರುಕಳ ನೀಡಿ ನನ್ನ ಕುತ್ತಿಗೆಯನ್ನು ಒತ್ತಲು
ಪ್ರಯತ್ನಿಸಿದ್ದಾರೆ ಹಾಗೂ ನನಗೆ ಸಿಮೇ ಎಣ್ಣೆ
ಹಾಕಿ ಸುಡಲು ಜೀವ ಬೇದರಿಕೆ ಹಾಕಿದ್ದಾರೆ ನನ್ನ
ಅತ್ತೆ ಮಾವ, ನಾದನಿ ಗಂಡ ಸುಭಾಸ ನನ್ನ ಗಂಡನಾದ ಜಗನ್ನಾಥ ಇವರೆಲ್ಲರೂ ಸೇರಿ ವರದಕ್ಷಿಣೆ ತೆಗೆದುಕೊಂಡು ಬಾ ಅಂತಾ
ಹಿಂಸಿಸುತ್ತಿದ್ದು ಜೀವ ಬೇದರಿಕೆ ನೀಡುತ್ತಿದ್ದಾರೆ
ನಮ್ಮ ತಂದೆ- ತಾಯಿ ಜೋತೆಯಲ್ಲಿ ಬಂದವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನನ್ನು
ಮನೆಯಿಂದ ಹೊರಗಡೆ ಹಾಕಿರುತ್ತಾರೆ. ಹೊರಗಡೆ
ಹಾಕಿದ ಮೇಲೆ ನನ್ನ ಗಂಡ ಜಗನ್ನಾಥ ರಾಠೋಡ ಇವನು ಫೋನಿನ ಮುಖಾಂತರ ಡೈವರ್ಸ ಕೊಡು ಅಂತಾ ಬೆದರಿಕೆ ಹಾಕಿರುತ್ತಾರೆ, ದಿನಾಂಕ 18.11.2013 ರಂದು
ನಾನು ನನ್ನ ಗಂಡನೊಂದಿಗೆ ಡೈವರ್ಸ ಕೇಸಗೆ ನೋಟಿಸ್ ಕೊಡಿಸಲು ಶ್ರೀ ನಾಗಭೂಷಣ ಲಾಯರಿಗೆ ಬೇಟಿ ಆಗಿ ಊರಿಗೆ ಹೋಗುವಾಗ ಕೋರ್ಟ ಹತ್ತೀರ
ರೋಡಿನ ಮೇಲೆ ಸುಮಾರು 01.30 ಪಿ ಎ ಮ್ಮ ಕ್ಕೆ
ನನ್ನ ಗಂಡ ನಾದ ಜಗನ್ನಾಥ ರಾಠೋಡ
ಚಿಂಚೋಳಿನಲ್ಲಿ ಆಠೋ
ತೆಗೆದುಕೊಂಡು ನನ್ನ ಸುತ್ತಾ ಮುತ್ತಾ
ತಿರಿಗಿಸಿ ಆಟೋನಲ್ಲಿ ಎಳೆದಙಾಡಿ
ಮೋಬೈಲ್ ಮತ್ತು ಹೆಣ ತೆಗೆದುಕೊಂಡು ಹೋಡೆದು
ಡೈವರ್ಷ್ ಕೋಡುತ್ತಿಯಾ ಇಲ್ಲ ಎಂದು ಜೀವ ಬೇದರಿಕೆ ಕೋಟ್ಡು ಆಟೋದಿಂದ
ಹೋರದಬ್ಬಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣ :
ಮುಧೋಳ ಠಾಣೆ : ಶ್ರೀಮತಿ
ನಾಗಮ್ಮ ಗಂಡ ಶಿವರಾಯ ನಕ್ಕ ಸಾ : ಮದನಾ ದಿನಾಂಕ 21-11-2013 ರಂದು ನಾಗಮ್ಮ ಮತ್ತು ಅವಳ ಗಂಡ
ಶಿವರಾಯ ತಂದೆ ನರಸಪ್ಪ ನಕ್ಕ ಇವರು ಅವರ ಭಾವನಾದ ರಾಮಪ್ಪ ತಂದೆ ನರಸಪ್ಪ ನಕ್ಕ ಇವರ ಮನೆಗೆ ಹೋಗಿ
ಹಿರಿಯರ ಆಸ್ತಿಯಲ್ಲಿ ನಮಗೆ ನ್ಯಾಯಯುತವಾಗಿ ನಮಗೆ ಬರಬೇಕಾದ ಆಸ್ತಿಯನ್ನು ಸರಿಯಾಗಿ ಪಾಲು ಮಾಡಿ
ಕೊಡು ಅಂತಾ ಕೇಳಿದ್ದಕ್ಕೆ ಫಿರ್ಯಾದಿಯ ಬಾವ ರಾಮಪ್ಪ ಮತ್ತು ಅವನ ಹೆಂಡತಿ ಬಸಮ್ಮ, ಹಾಗೂ ಅವನ ಮಗ ನರಸಿಂಹಲು ನನಗೆ ಮತ್ತು ನನ್ನ ಗಂಡನಿಗೆ ಇನ್ನೂ ಎನು ಸರಿಯಾಗಿ ಆಸ್ತಿಯಲ್ಲಿ ಕೊಡಬೇಕು ಇಗ ಕೊಟ್ಟ ಆಸ್ತಿ ನೀಮಗೆ
ಜಾಸ್ತಿ ಆಗಿದೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಆಗ ನಾವು ನಮಗೆ ಇಂತಹ ಹೊಲಸು ಶಬ್ದಗಳು
ಬೈಯ್ಯುವದು ಸರಿಯಲ್ಲ ನೋಡಿ ಎಂದು ಹೇಳಿದ್ದಕ್ಕೆ ರಾಮಪ್ಪ ಮತ್ತು ಅವನ ಹೆಂಡತಿ, ಮಗ ನಮಗೆ ಕೊಲೆ ಮಾಡುವ ಉದ್ದೇಶದಿಂದ ಅವರ ಮನೆಯಲ್ಲಿದ್ದ ಬಡಿಗೆಯನ್ನು
ತಂದು ರಾಮಪ್ಪ ನನ್ನ ಗಂಡನ ತಲೆಯ ಹಿಂದುಗಡೆ ಎಡಕಿವಿಯ ಮೇಲೆ ಹೊಡೆದು ರಕ್ತಗಾಯ ಮತ್ತು ಎದೆಗೆ
ಹೊಡೆದು ಗುಪ್ತಗಾಯ ಮಾಡಿರುತ್ತಾನೆ ನನಗೆ ಅದೆ ಬಡಿಗೆಯಿಂದ ತಲೆಯ ಎಡಭಾಗಕ್ಕೆ ಮತ್ತು ಎರಡು
ಕಾಲುಗಳಿಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment