ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಅಮೀರ ಖುಷ್ರೊ ತಂದೆ ಅಬ್ದುಲ ರಶೀದ ರವರು ದಿನಾಂಕ: 22-11-2013 ರಂದು ಮಧ್ಯಾಹ್ನ 02-00 ಗಂಟೆಯ ಸುಮಾರಿಗೆ ನಾನು
ಮತ್ತು ನನ್ನ ತಮ್ಮ ಅಮೀರ ಸೊಹೇಲ್ ಇಬ್ಬರು ಕೂಡಿಕೊಂಡು ಮೋಟಾರ ಸೈಕಲ ಮೇಲೆ ಎಮ್.ಎಸ್.ಕೆ. ಮಿಲ್
ದಿಂದ ಮನೆಗೆ ಹೊಗುತ್ತಿರುವಾಗ ಮಹ್ಮದ ಚೌಕ ಹತ್ತಿರ ಹಿಂದಿನಿಂದ ಫಿರೋಜಖಾನ, ಶಾರೂಕ, ಇಬ್ಬರು
ಮೋಟಾರ ಸೈಕಲದ ಮೇಲೆ ವೇವಗಾಗಿ ಬಂದು ನಮ್ಮ ಮೋಟಾರ ಸೈಕಲಿಗೆ ಇಲ್ಲಿಸಿ ಫಿರೋಜಖಾನ ಈತನು ಮೋಟಾರ
ಸೈಕಲದಿಂದ ಕೆಳಗೆ ಇಳಿದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ಅವಾಚ್ಯ ಶಬ್ದಗಳಿಂದ ಬೈದು ಕೈಮುಷ್ಠಿ
ಮಾಡಿ ನನ್ನ ಎದೆಯ ಮೇಲೆ ಹೊಡೆದನು ಮತ್ತು ಅಲ್ಲೆ ಬಿದ್ದ ಒಂದು ಕಲ್ಲು ತೆಗೆದುಕೊಂಡು ನನ್ನ ತೆಲೆಯ
ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ, ಆಗ
ನನ್ನ ಜೊತೆಯಿದ್ದ ನನ್ನ ತಮ್ಮ ಅಮೀರ ಸೊಹೇಲ್ ಮತ್ತು ಅಲ್ಲೆ ರಸ್ತೆಯ ಮೇಲೆ ನಡೆದುಕೊಂಡು
ಹೊಗುತ್ತಿರುವ ಅಬ್ಬು ಇವರು ಬಿಡಿಸಲು ಬಂದಿದ್ದು ಆಗ ನನ್ನ ತಮ್ಮ ಅಮೀರ ಸೊಹೇಲ್ ಇವರಿಗೆ ಶಾರೂಕ ಇವರು ಒಂದು ಬಡಿಗೆಯಿಂದ ನನ್ನ
ತಮ್ಮ ಅಮೀರ ಸೋಹೇಲ್ ಇವರ ತೆಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾನೆ. ಮತ್ತೆ ಫಿರೋಜಖಾನ
ಇವನು ನಿಮ್ಮಗೆ ಖಲಾಸ ಮಾಡುತ್ತೆನೆ ಅಂತಾ ಜೀವದ ಬೇದರಿಕೆ ಹಾಕಿ
ಕೈಮುಷ್ಠಿ ಮಾಡಿ ನನ್ನ ಮುಖದ ಮೇಲೆ ಹೊಡೆದು ಕೆಳತುಟ್ಟಿಯ ಮೇಲೆ ರಕ್ತಗಾಯ ಮಾಡಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment