ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ:06-12-2013 ರಂದು 10 ಎ.ಎಮ್.
ಸುಮಾರಿಗೆ ಬಸವರಾಜ ತಂದೆ ಕರಬಸಪ್ಪಾ ಕಲಬುರ್ಗಿ ರವರ ತಮ್ಮ ಸಿದ್ದಾರೂಡ ಹಾಗೂ ಆತನ ಅಕ್ಕಳ ಮಗಳಾದ ಲಕ್ಷ್ಮೀ
@ ವಿಜಯ ಲಕ್ಷ್ಮೀ ಇಬ್ಬರು ಅಡಕಿ ಗ್ರಾಮಕ್ಕೆ
ಹೋಗಿ ಸಾಮಾನು ತೆಗೆದುಕೊಂಡು ಮೊಟಾರ ಸೈಕಲ ನಂ. ಕೆ.ಎ. 32 ಕ್ಯೂ 657 ನೇದ್ದರ ಮೇಲೆ ಇಬ್ಬರು ಕುಳಿತುಕೊಂಡು
ಗುಲ್ಬರ್ಗಾ ಸೇಡಂ ರಸ್ತೆಯ ಮುಗಟಾ ಗ್ರಾಮದ ಡೊದ್ಮನಿ ಕಂಕರ ಮಶೀನ ಹತ್ತಿರ ರೋಡಿನ ಮೇಲೆ 5.30 ಪಿ.ಎಮ್.
ಸುಮಾರಿಗೆ ಬರುತ್ತಿರುವಾಗ ಎದುರಿನಿಂದ ಮೊಟಾರ ಸೈಕಲ ನಂ. ಕೆ.ಎ 25 ಕ್ಯೂ 5629 ನೇದ್ದರ ಚಾಲಕ ಬಸವರಾಜ
ತಂದೆ ಕರಬಸಪ್ಪ ಈತನು ತನ್ನ ಮೊಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು
ಮುಖ ಮುಖಿ ಡಿಕ್ಕಿ ಪಡಿಸಿದ್ದರಿಂದ ಸಿದ್ದಾರೂಡ ಈತನಿಗೆ ತಲೆ ಹಿಂದೆ ಭಾರಿ ರಕ್ತಗಾಯ ವಾಗಿ ಕಿವಿ ಯಿಂದ
ಮೂಗಿನಿಂದ ರಕ್ತ ಬಂದು ಲಕ್ಷ್ಮೀ @ ವಿಜಯ
ಲಕ್ಷ್ಮೀ ಇವಳಿಗೆ ತಲೆಗೆ ಭಾರಿ ಗುಪ್ತಗಾಯ ಹಾಗೂ ರಕ್ತಗಾಯ ವಾಗಿ ಡಿಕ್ಕಿ ಪಡಿಸಿದ ಮೊಟಾರ ಸೈಕಲ ಸವಾರ
ಬಸವರಾಜ ಈತನಿಗೂ ತಲೆಗೆ ಭಾರಿಗುಪ್ತಗಾಯವಾಗಿ ಉಪಚಾರ ಕುರಿತು ಅಂಬುಲೆನ್ಸ್ ದಲ್ಲಿ ಸರಕಾರಿ ಆಸ್ಪತ್ರೆ
ತೆಗೆದುಕೊಂಡು ಬಂದಾಗ ಸಿದ್ದಾರೂಡ ಹಾಗೂ ಬಸವರಾಜ ಇಬ್ಬರು ದಿನಾಂಕ: 06-12-2013 ರಂದು 6 ಪಿ.ಎಮ್. ಸುಮಾರಿಗೆ ಮೃತ್ತ ಪಟ್ಟಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2013 ರಂದು ರಾತ್ರಿ 08-30 ಪಿ.ಎಮ್ ಕ್ಕೆ ಶ್ರೀ
ಸೈಯದ ಅನ್ವ ಅಲಿ ತಂದೆ ಅಜಗರ ಅಲಿ, ಸಾಃ ಸೋನಿಯಾ ಗಾಂಧಿ ನಗರ ಗುಲಬರ್ಗಾ ತನ್ನ ಮನೆಗೆ ಹೊಗುವ ಕುರಿತು ಕೆ.ಬಿ.ಎನ್ ದರ್ಗಾ ರೋಡಿಗೆ ಇರುವ
ಲಿಲ್ಲಿ ರೋಜಾ ಶಾಲೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಅಟೋರಿಕ್ಷಾ ನಂ. ಕೆ.ಎ 32 ಎ 4655 ನೇದ್ದರ
ಚಾಲಕನು ತನ್ನ ಅಟೋರಿಕ್ಷಾವನ್ನು ಕೆ.ಬಿ.ಎನ್ ದರ್ಗಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿಗೆ ಎದರುಗಡೆಯಿಂದ ಡಿಕ್ಕಿ ಹೊಡೆದು
ಅಪಘಾತ ಮಾಡಿ ತನ್ನ ಅಟೋರಿಕ್ಷಾ ಸಮೇತ ಓಡಿ ಹೋಗಿರುತ್ತಾನೆ ಅಪಘಾತದಿಂದ ಬಲಗಾಲು ಮೊಳಕಾಲು ಕೆಳಗೆ
ಭಾರಿ ಪೆಟ್ಟಾಗಿದ್ದು ಎಡಗೈ ಮೊಳಕೈ ಹತ್ತಿರ, ಎಡಗಾಲು ಮೊಳಕಾಲು
ಮತ್ತು ಹಿಮ್ಮಡಿಯ ಹತ್ತಿರ ತರಚಿದ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 05-12-2013 ರಂದು ರಾತ್ರಿ
ಸಮಯದಲ್ಲಿ ಶ್ರೀ ಸಮೀರ ತಂದೆ ಮಹಿಬೂಬ ಪಟೇಲ
ಸಾಃ
ವಿದ್ಯಾ ನಗರ ಗುಲಬರ್ಗಾ ರವರು ಮತ್ತು ಆತನ
ಗೆಳೆಯನಾದ ಸೂಪಿಯಾನ ಇಬ್ಬರು ಕೂಡಿ ಸೂಫಿಯಾನ ಈತನ ಮೋಟಾರ ಸೈಕಲ ಮೇಲೆ ಕೆ.ಬಿ.ಎನ್ ದರ್ಗಾ ಕಡೆ
ಕೆಲಸ ಇರುವದರಿಂದ ಇಬ್ಬರು ಕೂಡಿ ಹೋಗಿ 11-45 ಎಮ್.ಕ್ಕೆ
ಸೂಫಿಯಾನ ಈತನ ಮೋಟಾರ ಸೈಕಲ ನಂ.ಕೆ.ಎ 27 ಕೆ 3912 ನೇದ್ದರ ಮೇಲೆ ಫಿರ್ಯಾದಿ ಹಿಂದೆ ಕುಳಿತು ಬರುತ್ತಿದ್ದಾಗ ಆರೋಪಿ
ಸೂಫಿಯಾನ ಇತನು ತನ್ನ ಮೋಟಾರ ಸೈಕಲ ಡಂಕಾ ಕ್ರಾಸ್ ಹತ್ತಿರ ಇರುವ ಝಮ ಝಮ ಹೋಟೆಲ ಮುಂದೆ ರೋಡಿನ
ಮೇಲೆ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಕಟ್ ಹೊಡೆಯಲು ಹೋಗಿ ಬ್ರೇಕ್
ಹಾಕಿದ್ದರಿಂದ ಸ್ಕಿಡ್ ಆಗಿ ಇಬ್ಬರು ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದು ಗಾಯಹೊಂದಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ
05-12-2013 ರಂದು 05-12-2013 ರಂದು ರಾತ್ರಿ 09-00 ಗಂಟೆಗೆ ಶ್ರೀಕಾಂತ
ತಂದೆ ಶಾಮರಾವ ಮುರಗಾನೊರ, ಸಾಃ ಮಾಣಿಕೇಶ್ವರಿ ಕಾಲೂನಿ ಗುಲಬರ್ಗಾ ಇವರಿಗೆ ಧನರಾಜ ತಂದೆ
ರಾಮಚಂದ್ರ ಸಗರಕರ, ಸಾಃ
ಭೋವಿಗಲ್ಲಿ ಸಾಃ ಸರಾಫ ಬಜಾರ ಗುಲಬರ್ಗಾ ಇವರು ಹೋಂಡಾ
ಎಕ್ಟೀವಾ ಮೋಟಾರ ಸೈಕಲ ನಂ. ಕೆ.ಎ 32 ಇಡಿ 8567ನೇದ್ದರ
ಮೇಲೆ ಹಿಂದೆ ಕುಳಿತು ಬರುತ್ತಿದ್ದಾಗ ಧನರಾಜ ಈತನು ತನ್ನ ಆಕ್ಟೀವಾ ಹೊಂಡಾ ಮೋಟಾರ ಸೈಕಲ ನೇದ್ದು
ಫಿಲ್ಟರ ಬೆಡ್ ಎದರುಗಡೆ ಮುಸ್ಲಿಂ ಸಂಘ ಕ್ರಾಸ್ ಹತ್ತಿರ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ
ಎಮ್ಮೆಲೆ ಬ್ರೆಕ್ ಹಾಕಿ ಆಯಾ ತಪ್ಪಿ ಕೆಳಗೆ ಬಿದ್ದು ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 06-12-2013 ರಂದು ರಾಜೇಂದ್ರ ತಂದೆ ಶಿವಪ್ಪಾ ಕೊರಳ್ಳಿ, ಸಾ : ನಂ.
185, ಡಿ.ಎ.ಆರ್
ಕೇಂದ್ರ ಸ್ಥಾನ, ಗುಲಬರ್ಗಾ ರವರು ಕೆ.ಜಿ.ಐ.ಡಿ
ಆಫೀಸಕ್ಕೆ ಹೋಗುವ ಕುರಿತು ಭಾಂಡೆ ಬಜಾರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ. ಕೆ.ಎ. 32 ಎನ್.2325 ನೇದ್ದರ
ಚಾಲಕ ರಾಘವೇಂದ್ರ ತನ್ನ ಕಾರನ್ನು ಜೆ.ಬಿ ಕ್ರಾಸ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾಧಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ
ಪಡಿಸಿದ್ದು ಅಪಘಾತದಿಂದ ಫಿರ್ಯಾದಿಗೆ ಎಡಗಾಲು ಮೊಳಕಾಲು ಕೆಳಗೆ, ತರಚಿದ
ರಕ್ತಗಾಯ ವಾಗಿ ಹಿಮ್ಮಡಿಯ ಮೇಲ್ಭಾಗದಲ್ಲಿ ಭಾರಿ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 06-12-2013 ರಂದು ಬೆಳಿಗ್ಗೆ 9-30 ಗಂಟೆ
ಸುಮಾರಿಗೆ ಶ್ರೀ ರುಕುಂಬೀ ಗಂಡ ಜಾಫರಸಾಬ ಮುಜಾವರ ಸಾ : ಬಬಲಾದ (ಎಸ್) ಮತ್ತು ಆಕೆ ಮಗಳು ನಿಂತಾಗ ಇಬ್ರಾಹಿಂ ತಂದೆ ಮೌಲಾಸಾಬ ಅತನೂರ ಇವನು ತನಗೆ ಬೀಸಿದ ಹಣ 100 ರೂ ಕೊಡು ಅಂತಾ ಜಗಳಾ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಫಿರ್ಯಾದಿ ತಲೆಗೆ ಹೊಡೆದು
ರಕ್ತಗಾಯಗೊಳಿಸಿದ್ದು, ಜಗಳಾ ಬಿಡಿಸಲು ಬಂದು ಜರೀನಾಬೇಗಂ ಇವಳಿಗೆ ಎಡ ರಟ್ಟೆಯ ಮೇಲೆ ಕಲ್ಲಿನಿಂದ
ಹೊಡೆದು ಗುಪ್ತಗಾಯಗೊಳಿಸಿ ಜೀವ ಭಯ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment