ಅಪಹರಣ
ಪ್ರಕರಣ :
ವಾಡಿ ಠಾಣೆ : ಶ್ರೀ ನಿಂಗಣ್ಣಾ
ತಂದೆ ಭೀಮರಾಯ ತಳವಾರ ಸಾ|| ಪಿಲ್ಕಂ ಏರಿಯಾ ವಾಡಿ ಇವರ ಮಗಳಾದ ನಾಗರತ್ನ ವಯ 17ವರ್ಷ ಪಿ,ಯು,ಸಿ ಓದುತ್ತಿದ್ದಳು
ನಮ್ಮ ಮನೆಯ ಮುಂದೆ ಶಬ್ಬಿರ ಅಹಮದ ಇವರ ಮನೆ ಇದೆ ಆತನ ಮಗ ಆರೀಫ ಇತನು ಕಾಲೆಜಿಗೆ ಹೊಗುತ್ತಿದ್ದನು.ಈಗ
ಸುಮಾರು ಒಂದು ತಿಂಗಳ ಹಿಂದೆ ನಮ್ಮ ಮಗಳು ವಾಡಿಯಲ್ಲಿ ಕಾಲೆಜಿಗೆ ಹೊಗುವಾಗ ರಸ್ತೆ ಮದ್ಯದಲ್ಲಿ ಆರಿಫ್
ಇತನು ನನ್ನ ಮಗಳ ಸಂಗಡ ಮಾತಾಡುತ್ತಾ ನಿಂತಿದ್ದು ನಮ್ಮ ಜಾತಿಯವರೆ ಆದ ಮಲ್ಲಿಕಾರ್ಜುನ ತಳವಾರ, ಭೀಮರಾಯ ನಾಟಿಕಾರ
ಇವರು ನೋಡಿ ಆರಿಫನಿಗೆ ಕೊಡತಗೊಳುವ ಹೆಣ್ಣುಮಕ್ಕಳಿರುತ್ತಾರೆ ನಾಗರತ್ನಳ ನಿಶ್ಚಯ ಕಾರಣ ಆಗಿದೆ ಹೀಗೆ
ನಿಂತು ಮಾತನಾಡುವುದು ಒಳ್ಳೆಯದಲ್ಲ ಅಂತಾ ಇಬ್ಬರಿಗು ಬುದ್ದಿವಾದ ಹೇಳಿ ಕಳಿಸಿ ನಮ್ಮ ಮನೆಗೆ ಬಂದು
ಸದರಿಯವರು ವಿಷಯ ತಿಳಿಸಿದರು ನಾನು ನನ್ನ ಹೆಂಡತಿ ಮಲ್ಲಮ್ಮಾ ಇಬ್ಬರು ಕೂಡಿ ಆರೀಫನ ತಂದೆ ತಾಯಿಗೆ
ವಿಷಯ ತಿಳಿಸಿ ಹೀಗೆ ಮಾಡುವದು ಒಳ್ಳೆಯದಲ್ಲ ಅಂತಾ ಹೇಳಿದರು ಅವರು ತಮ್ಮ ಮಗನಿಗೆ ಬುದ್ದಿವಾದ ಹೆಳುತ್ತೆವೆ
ಅಂತಾ ಹೇಳಿದರು.ದಿನಾಂಕ 30-01-2014 ರಂದು ಮುಂಜಾನೆ 9 ಗಂಟೆಗೆ ನನ್ನ ಮಗಳು ನಾಗರತ್ನ ಪ್ರತಿ ದಿವಸದಂತೆ
ಕಾಲೇಜಿಗೆ ಹೋಗಿ ಬರುತ್ತೆನೆ ಅಂತಾ ಮನೆಯಿಂದ ಹೊದಳು ಸಾಯಂಕಾಲ ಆದರು ಮಗಳು ಮನೆಗೆ ಬರಲಿಲ್ಲಾ ನಾವು
ಕಾಲೇಜಿಗೆ ಹೊದೆವು ಕಾಲೆಜು ಮುಚ್ಚಿದ್ದು ವಾಡಿ ಪಟ್ಟಣದಲ್ಲಿ ಹುಡುಕಾಡಿದೆವು ಪತ್ತೆಯಾಗಲಿಲ್ಲಾ ಮರಳಿ
ಶಬ್ಬಿರ ಅಹ್ಮದ ಇವರ ಮನೆಗೆ ಹೋಗಿ ಆರೀಫ್ ನ ಬಗ್ಗೆ ವಿಚಾರಿಸಲು ಮುಂಜಾನೆ ಕಾಲೇಜಿಗೆ ಹೊಗುತ್ತೆನೆ
ಅಂತಾ ಹೇಳಿ ಯಾದಗಿರಿಗೆ ಹೊಗಿದ್ದಾನೆ ಅಂತಾ ಹೇಳಿದರು. ನಾವು ನಮ್ಮ ಸಂಬಂದಿಕರಿಗೆ ಫೋನ ಮಾಡಿ ವಿಚಾರಿಸಿದೆವು
ಬಂದಿಲ್ಲಾ ಅಂತಾ ಹೇಳಿದರು. ನನ್ನ ಮಗಳ ಕೊರಳಲ್ಲಿ ಒಂದು ಬಂಗಾರದ ಲಾಕೇಟ ಕಿವಿಯಲ್ಲಿ ಹೂ ಮತ್ತು ರಿಂಗ
ಹಾಗು ನಿಶ್ಚಯ ಕಾರಣದಲ್ಲಿ ಹಾಕಿದ ಉಂಗುರ ಸಾಮಾನುಗಳಿದ್ದವು.ದಿನಾಂಕ 30-01-2014 ರಂದು ಮುಂಜಾನೆ
9 ಗಂಟೆಗೆ ನನ್ನ ಮಗಳು ನಾಗರತ್ನ ವಯ 17ವರ್ಷ ಅಪ್ರಾಪ್ತ ವಯಸ್ಸಿನವಳು ಕಾಲೇಜಿಗೆ ಹೊಗುವಾಗ ರಸ್ತೆ
ಮದ್ಯದಲ್ಲಿ ಆರೀಪ್ ಈತನು ಒತ್ತಾಯಮಾಡಿ ಎಳೆದುಕೊಂಡು ಅಪಹರಿಸಿಕೊಂಡು ಹೊಗಿರುತ್ತಾನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪ್ರಭು
ತಂದೆ ನಂದೂ ರಾಠೋಡ ಸಾ: ಮನೆ ನಂ: 6(ಎ) ಹೆಲಿ ಪ್ಯಾಡ ಹತ್ತಿರ ಪೊಲೀಸ್ ವಸತಿ
ಗೃಹ ಗುಲಬರ್ಗಾ ರವರು ದಿನಾಂಕ 04-02-2014 ರಂದು
ರಾತ್ರಿ 11
ಗಂಟೆಗೆ ಜಗತ ಸರ್ಕಲ್ ದಿಂದ ಗೋವಾ ಹೊಟೇಲ್ ಕ್ರಾಸ್ ರೋಡನ್ನು ದಾಟಿ
ಹೋಗಿ ಏಕಿ ಮಾಡಿ ವಾಪಸ ಡಾ : ಅಂಬೇಡ್ಕರ ಮೋರ್ತಿ ಹತ್ತಿರ ನಡೆದುಕೊಂಡು ಬರುತ್ತಿದ್ದಾಗ ಶಿವಕುಮಾರ
ಈತನು ತನ್ನ ಮೋ/ಸೈಕಲ್ ನಂ: ಕೆಎ 32 ಇಇ 3437 ನೆದ್ದನ್ನು
ಗೋವಾ ಹೊಟೇಲ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ
ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ತಾನು ಸಹ ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ
ಜೂಜಾಟ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ಶ್ರೀ ಸುರೇಶ. ಸಿ.ಬಿ .ಪಿ.ಎಸ್.ಐ ರವರು ದಿನಾಂಕ 05-02-2014 ರಂದು 12:30 ಪಿ ಎಮ್ ಕ್ಕೆ
ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕುರಿತು ಜೀಪ ಚಾಲಕ ಪಿಸಿ-339 ಗುಂಡಪ್ಪ ಇವರನ್ನು ಸಂಗಡ ಕರೆದುಕೊಂಡು ಠಾಣೆಯಿಂದ
ಬಿಟ್ಟು ಬಸವೇಶ್ವರ ಸರ್ಕಲ, ಬಜಾರ
ಇದ್ದಾಗ ಖಚಿತ ಬಾತ್ಮಿ ಬಂದಿದ್ದು ಎನೆಂದರೆ ಸಿದ್ರಾಮೇಶ್ವರ ಗುಡಿಯ ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ
ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು
ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ನಾನು ಸಿಬ್ಬಂದಿ ಮತ್ತು ಪಂಚರು ಸ್ಥಳಕ್ಕೆ ಹೋಗಿ
ಮಟಕಾ ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ
ವಿಚಾರಿಸಲಾಗಿ ತನ್ನ ಹೆಸರು ರೇವಣಸಿದ್ದ ತಂದೆ ಶಿವಲಿಂಗಪ್ಪ ಹೂಗಾರ ಸಾ|| ರೇವಣಸಿದ್ದೇಶ್ವರ ಕಾಲೋನಿ ಅಫಜಲಪೂರ ಎಂದು ತಿಳಿಸಿದ್ದು,
ಸದರಿಯವನ ವಶದಿಂದ ಮಟಕಾಕ್ಕೆ ಸಂಬಂಧ ಪಟ್ಟ
200/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು
ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಅಫಜಲಪೂರ ಠಾಣೆ :
ಶ್ರೀ ಯಶವಂತಪ್ಪ ಚಿಕ್ಕಳಗಿ ಸಾ||ಅಳ್ಳಗಿ(ಬಿ) ಹಾ||ವ|| ಅಫಜಲಪೂರ ಇವರು ದಿನಾಂಕ 31-012-2014 ರಂದು 10.30 ಎಎಮ ಕ್ಕೆ ತನ್ನ
ಮೋಟಾರ ಸೈಕಲ್ ನಂ ಕೆಎ-32,ಇಬಿ 8425
ಅ.ಕಿ 25000 ನೇದ್ದನ್ನು ಅಫಜಲಪೂರ ಪಟ್ಟಣದ ಕೆಜಿಬಿ ಬ್ಯಾಂಕ ಹತ್ತಿರ ನಿಲ್ಲಿಸಿ ಬ್ಯಾಂಕ ಒಳಗೆ
ಹೋಗಿ ಕೆಲಸ ಮುಗಿಸಿಕೊಂಡು 11 ಎಎಮ್ಮ ಕ್ಕೆ ಬಂದು ನೋಡಲಾಗಿ ತನ್ನ ಮೋಟಾರ ಸೈಕಲ್ ಯಾರೋ ಕಳ್ಳರು ಕಳ್ಳತನ
ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
No comments:
Post a Comment