ಕಳವು ಪ್ರಕರಣಗಳು :
ಸೇಡಂ ಠಾಣೆ : ಶ್ರೀ ಮಹ್ಮದ ಇಬ್ರಾಹಿಂ ತಂದೆ ಮಹ್ಮದ ಮೌಲಾನಾ
ಮಳಖೇಡವಾಲೆ, ಸಾ: ಶಾಸ್ತ್ರಿನಗರ ಸೇಡಂ, ತಾ: ಸೇಡಂ ರವರು ದಿನಾಂಕ 03-02-2014 ರಂದು
ಬೆಳಿಗ್ಗೆಯಿಂದ ಸಾಯಂಕಾಲದ ವರೆಗೆ ನನ್ನ ಟಿಪ್ಪರ ಚಲಾಯಿಸಿ ನಿನ್ನೆ ಸಾಯಂಕಾಲ 0700 ಗಂಟೆಯ
ಸುಮಾರಿಗೆ ಸೇಡಂನ ಜಬ್ಬಾರ ಪೆಟ್ರೋಲ ಬಂಕ್ ಹತ್ತಿರ ನಿಲ್ಲಿಸಿ ಮನೆಗೆ ಹೋಗಿ ಊಟ ಮಾಡಿಕೊಂಡು
ಮತ್ತೆ ವಾಪಾಸ ಬಂದು ನಿನ್ನೆ ರಾತ್ರಿ 11-30
ಗಂಟೆಗೆ ಬಂದು ನನ್ನ ಟಿಪ್ಪರನ ಸರಿಯಾಗಿ ಚಾವಿ
ಹಾಕಿ ಬಾಗಿಲು ಮುಚ್ಚಿ ಪೆಟ್ರೋಲ ಬಂಕನಲ್ಲೇ ನಿಲ್ಲಿಸಿ ನಾನು ನನ್ನ ಮನೆಗೆ ಹೋಗಿದ್ದೆನು ನಂತರ
ಇಂದು ದಿನಾಂಕ 04-02-2014 ರಂದು ಬೆಳಿಗ್ಗೆ 07-00 ಗಂಟೆಯ ಸುಮಾರಿಗೆ ನಾನು ಜಬ್ಬಾರ ಪೆಟ್ರೋಲ
ಬಂಕ್ ನಲ್ಲಿ ನಿಲ್ಲಿಸಿದ ಜಾಗಕ್ಕೆ ಹೋಗಿ
ನೋಡಲಾಗಿ ನನ್ನ ಟಿಪ್ಪರ ನಂ-ಎಪಿ-12,ಯು-2637 ನೇದ್ದು ಇರಲಿಲ್ಲ ನಾನು ಗಾಬರಿಯಾಗಿ ಪೆಟ್ರೋಲ
ಬಂಕ್ ಮಾಲಿಕರಿಗೆ ಹಾಗು ಸುತ್ತಮುತ್ತಲಿನ ಚಾಲಕರಿಗೆ ಹಾಗು ಮಾಲಿಕರಿಗೆ, ಮತ್ತು ನನ್ನ
ಪರಿಚಯಸ್ತರಿಗೆ ವಿಚಾರಿಸಲಾಗಿ ನನ್ನ ಟಿಪ್ಪರ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ನನ್ನ
ಅಶೋಕ ಲೈಲ್ಯಾಂಡ್ ಕಂಪನಿಯ ಟಿಪ್ಪರ ನಂ- ಎಪಿ-12,ಯು-2637. ನೇದ್ದು ಅ;ಕಿ: 2 ಲಕ್ಷ ರೂಪಾಯಿ
ನೇದ್ದು ಹಳದಿ ಬಣ್ಣದ್ದು ಇದ್ದು ಅದರ ಮಾಡಲ್ ನಂ-2001 ಹಾಗು ಅದರ ಚೆಸ್ಸಿ ನಂ-ಎಸ್,ಯು,ಇ 277472
ಮತ್ತು ಟಿಪ್ಪರ ಇಂಜಿನ ನಂ- ಎಸ್,ಯು,ಇ 1989695. ನೇದ್ದು ದಿನಾಂಕ 03-02-2014 ರ ರಾತ್ರಿ
11-35 ಗಂಟೆಯಿಂದ ದಿನಾಂಕ 04-02-2014 ರ ಬೆಳಿಗ್ಗೆ 07-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು
ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಹಾಬಾದ
ನಗರ ಠಾಣೆ : ಶ್ರೀ ಹೀರಾಲಾಲ ತಂದೆ
ಕಿಶನ ಮಂತ್ರಿ ಸಾ|| ಮೇನಬಜಾರ ಶಹಾಬಾದ ರವರು ದಿನಾಂಕ 23.01.2014
ರಂದು 7.30 ಎ,ಎಮ್ ಸುಮಾರಿಗೆ ಹೈದ್ರಾಬಾದದಲ್ಲಿ ಸಂಬಂಧಿಕರ
ಮದುವೆಗೆ ಮನೆ ಕೀಲಿ ಹಾಕಿಕೊಂಡು ಹೋಗಿದ್ದು ದಿನಾಂಕ 01.02.2014 ರಂದು ರಾತ್ರಿ 8.30 ಪಿ.ಎಮ್. ಸುಮಾರಿಗೆ
ವಾಪಸ ಬಂದು ನೋಡಲಾಗಿ ನಮ್ಮ ಮನೆಗೆ ಹಾಕಿದ ಕೀಲಿ ಮುರಿದು ಬಿದ್ದಿದ್ದು ನೋಡಿ ನಾನು ನನ್ನ ಹೆಂಡತಿ
ಮನೆಯೊಳಗೆ ಹೋಗಿ ನೋಡಲಾಗಿ ಒಳಗಡೆ ಕೋಣೆಗಳ ಕೀಲಿಕೂಡ ಮುರಿದು ಬೆಡ್ ರೂಮಿನ ಅಲಮಾರದಲ್ಲಿದ್ದ
ಬಂಗಾರದ ಸಾಮಾನುಗಳು ನಗದು ಹಣ ಹೀಗೆ ಒಟ್ಟು 2,59,500/- ರೂ ಕಿಮ್ಮತ್ತಿನ ಆಭರಣಗಳನ್ನು ಯಾರೋ
ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಅಪಘಾತ ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀ. ರಾಯಪ್ಪಾ ತಂದೆ ಸದಾಶಿವ
ಇತರ ಪಾಟೀಲ ಸಾ; ಪಟ್ಟಣ ತಾ;ಜಿ;ಗುಲಬರ್ಗಾ ಇವರು ದಿನಾಂಕ.
25-01-2014 ರಂದು ರಾತ್ರಿ 7-00 ಗಂಟೆಯ ಸುಮಾರಿಗೆ ನನ್ನ ತಮ್ಮ ನಿಂಗರಾಜ ಇತನು ತನ್ನ ಖಾಸಗಿ
ಕೆಲಸದ ನಿಮಿತ್ಯೆ ನಿಂಬರ್ಗಾ ಗ್ರಾಮಕ್ಕೆ ಹೋಗಿ
ಮರಳಿ ತನ್ನ ಸ್ಪ್ಲೆಂಡರ ಪ್ಲಸ
ನಂ.ಕೆ.ಎ.32- ಆರ್.3028 ನೆದ್ದರ ಮೇಲೆ ಬರುವಾಗ
ಪಟ್ಟಣ ಕ್ರಾಸ ಟೂಲ್ ನಾಕಾ ಹತ್ತಿರ ಟ್ರ್ಯಾಂಕರ ಲಾರಿ ನಂಬರ ಎಂ.ಹೆಚ.12 ಹೆಚಡಿ-1248
ನೆದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಆತನಿಗೆ
ಡಿಕ್ಕಿ ಹೊಡೆದಿದ್ದರಿಂದ ಆತನಿಗೆ ತೆಲೆಗೆ ಭಾರಿ
ಪೆಟ್ಟಾಗಿ ರಕ್ತಸ್ರಾವವಾಗಿತ್ತು , ಬಲಗೈ ರಟ್ಟೆಗೆ ,ಬಲಗೈ ಮುಂಗೈಗೆ ಭಾರಿ ರಕ್ತಗಾಯವಾಗಿದ್ದು ,
ಬಲಗಾಲು ತೊಡೆಗೆ , ಮೋಳಕಾಲಿಗೆ ಭಾರಿರಕ್ತಗಾಯವಾಗಿರುತ್ತದೆ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲಾ
ಆಗ ಉಪಚಾರ ಕುರಿತು ಗುಲಬರ್ಗಾ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಸೇರಿಕೆ ಮಾಡಿದ್ದು. ಈ
ಬಗ್ಗೆ ನನ್ನ ತಮ್ಮ ನಿಂಗರಾಜ ಇತರ ಪಾಟೀಲ್ ಇತನ ಹೆಂಡತಿ
ಶ್ರೀಮತಿ ಮಂಗಲಾ ಇವಳು ಫಿರ್ಯಾದಿ ಕೊಟ್ಟಿದ್ದ ಮೇರೆಗೆ ಕೇಸು ದಾಖಲಾಗಿದ್ದು
ಇರುತ್ತದೆ. ನಂತರ ನಿಂಗರಾಜನಿಗೆ ತಲೆಗೆ ಹಾಗೂ ಕಾಲಿಗೆ ಭಾರಿಗಾಯಗಳಾಗಿದ್ದರಿಂದ ಹೆಚ್ಚಿನ ಉಪಚಾರ ಕುರಿತು ದಿನಾಂಕ.26-01-2014 ರಂದು ಗುಲಬರ್ಗಾದಿಂದ ಸೋಲಾಪೂರ
ಗಂಗಾಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು.ಅಲ್ಲಿ ಉಪಚಾರ ಮಾಡಿಸಿ ನಂತರ
ದಿನಾಂಕ.3-2-2014 ರಂದು ಮರಳಿ ಗುಲಬರ್ಗಾಕ್ಕೆ ಕರೆದಕೊಂಡು ಬಂದು ರಾತ್ರಿ
ಗುಲಬರ್ಗಾ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು. ಉಪಚಾರದಲ್ಲಿ ಗುಣ
ಮುಖನಾಗದೆ ದಿನಾಂಕ.4-2-2014 ರಂದು 3-30 ಎ.ಎಂ.ಕ್ಕೆಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಮಾಹಾತ್ಮಾ
ಬಸವೇಶ್ವರ ನಗರ ಠಾಣೆ : ಕು. ನಿದಾಖಾನ ತಂದೆ
ಮುಕ್ರಂ ಖಾನ್ ಸಾಃ ದರ್ಶನಾಪೂರ ಲೇಔಟ ಜಿ.ಡಿ.ಎ ಕಾಲೋನಿ ಲುಕ್ಮಾನ್ ಕಾಲೇಜ್ ಹತ್ತಿರ ಗುಲಬರ್ಗಾ
ರವರು ದಿನಾಂಕಃ 04-02-2014 ರಂದು ಸಾಯಂಕಾಲ 04:00
ಗಂಟೆಗೆ ನಾನು ಮತ್ತು ನನ್ನ ಅಣ್ಣನಾದ ಇಮ್ರಾನ್ ಇಬ್ಬರೂ ವಿಶ್ರಾಂತಿ ಕುರಿತು ಮಲಗಲು ಹೋಗುವಾಗ
ನನ್ನ ಅಕ್ಕಳಾದ ಅಫ್ರೀನ್ ಖಾನ ಇವಳು ತನ್ನ ನಾಲ್ಕುವರೆ ವರ್ಷದ ಮಗಳಾದ ಹಾನಾಖಾನ್ ಇವಳೊಂದಿಗೆ
ಮತ್ತೊಂದು ಬೆಡ್ ರೂಮಿನ ಮಂಚದ ಹತ್ತಿರ ಮಗುವಿನೊಂದಿಗೆ ಇದ್ದಿದ್ದನ್ನು ನೋಡಿ ನಾವು ವಿಶ್ರಾಂತಿ
ಕುರಿತು ನಮ್ಮ ಕೋಣೆಗೆ ಮಲಗಿಕೊಂಡೆವು. ಅಂದಾಜು 05:00 ಗಂಟೆ ಸಮಯಕ್ಕೆ ನನ್ನ ಅಕ್ಕಳಾದ ಅಫ್ರೀನ
ಖಾನ ಇವಳ ಕೋಣೆಯಿಂದ ಒಮ್ಮೇಲೆ ಚೀರಾಡಿದ ಮತ್ತು ಡಮ್ ಡಮ್ ಅಂತಾ ಸಪ್ಪಳ ಕೇಳಿ ನಾನು ಮತ್ತು ನನ್ನ
ಅಣ್ಣ ಗಾಬರಿಯಾಗಿ ಬಂದು ನೋಡುವಷ್ಟರಲ್ಲಿ ನನ್ನ ಅಕ್ಕಳು ತನ್ನ 4.1/2 ವರ್ಷದ ಮಗಳಾದ ಹಾನಾಖಾನ
ಈತಳಿಗೆ ನಮ್ಮ ತಂದೆಯವರ ಹೆಸರಿನಲ್ಲಿದ್ದ ಪಿಸ್ತೂಲನ್ನು ಕೀಲಿ ಕೈಯಿಂದ ಲಾಕರದಿಂದ ತೆಗೆದು
ಅಲ್ಲಿದ್ದ ಪಿಸ್ತೂಲದಿಂದ ಅವಳ ಮಗಳಿಗೆ ತಲೆಗೆ ಗುಂಡು ಹಾರಿಸಿ ಸಾಯಿಸಿ ತಾನೂ ಅದೇ ಪಿಸ್ತೂಲದಿಂದ
ತನ್ನ ತಲೆಗೆ ಗುಂಡು ಹಾರಿಸಿಕೊಂಡು ಮೃತ ಪಟ್ಟಿರುತ್ತಾಳೆ. ಆಂಥಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣಿ ಕಿರುಕಳ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಕು. ಇಮ್ರಾನ್ ಖಾನ್
ತಂದೆ ಮುಕ್ರಂ ಖಾನ್ ಸಾಃ ದರ್ಶನಾಪೂರ ಲೇಔಟ ಜಿ.ಡಿ.ಎ ಕಾಲೋನಿ ಲುಕ್ಮಾನ್
ಕಾಲೇಜ್ ಹತ್ತಿರ ಗುಲಬರ್ಗಾ ರವರ ಅಕ್ಕಳಾದ ಅಫ್ರೀನಖಾನ್ ಇವಳಿಗೆ 2008 ರಲ್ಲಿ ಬೆಂಗಳೂರ ನಗರದ
ಸಾದಿಕವುಲ್ಲಾ ಖಾನ ಇಂಜಿನಿಯರ್ ಇತನೊಂದಿಗೆ ಮುಸ್ಲಿಂ ಧರ್ಮದ ಪ್ರಕಾರ ವರದಕ್ಷಿಣೆ ರೂಪದಲ್ಲಿ 60
ತೊಲೆ ಬಂಗಾರ, 01 ಕೆ.ಜಿ ಬೆಳ್ಳಿ ಸಾಮಾನುಗಳು ಹಾಗು 25 ಲಕ್ಷ ರೂಪಾಯಿ ನಗದು ಹಣ ಮತ್ತು ಗೃಹ
ಬಳಕೆಯ ವಸ್ತುಗಳು ಸುಮಾರು 10 ಲಕ್ಷ ರೂಪಾಯಿಯ ಬೆಲೆ ಬಾಳುವ ಸಾಮಾನುಗಳನ್ನು ಕೊಟ್ಟು ಮದುವೆ
ಮಾಡಿಕೊಟ್ಟಿರುತ್ತೇವೆ. ನಂತರ ನನ್ನ ಅಕ್ಕನ ಗಂಡನಾದ ಸಾದಿಕವುಲ್ಲಾ ಖಾನ ಇವರು ನಿಮ್ಮ ತಂದೆ
ತಾಯಿಯವರ ಮನೆಯಿಂದ ಇನ್ನೂ 25 ಲಕ್ಷ ರೂಪಾಯಿ ವರದಕ್ಷಿಣೆ, 20 ತೊಲೆ ಬಂಗಾರ ಮತ್ತು
01 ಸ್ವಿಪ್ಟ್ ಕಾರ್ ತರುವಂತೆ, ಅತ್ತೆಯಾದ ಅಕ್ತರ ಬೇಗಂ, ಮಾವನಾದ ಹಬೀಬವುಲ್ಲಾ
ಖಾನ, ನಾದನಿಯವರಾದ ನಿಖಿತ ಗಂಡ ಶಕೀಲ, ಫಿರ್ದೋಜ್ ಗಂಡ ಅಬ್ದುಲ್
ಖಾದರ ಹಾಗು ತಸ್ಲೀಮ್ ಇವರೆಲ್ಲರೂ ಕೂಡಿಕೊಂಡು ನನ್ನ ಅಕ್ಕಳಿಗೆ ಮಾನಸಿಕವಾಗಿ ಹಾಗು ದೈಹಿಕವಾಗಿ
ಕಿರುಕುಳ ಕೊಡುತ್ತಿದ್ದರು. ಈಗ ಸುಮಾರು 08 ತಿಂಗಳ ಹಿಂದೆ ನನ್ನ ಅಕ್ಕಳಾದ ಅಫ್ರೀನಖಾನ ಇವಳಿಗೆ
ಆಕೆಯ ಗಂಡನ ಮನೆಯವರು ಹೊಡೆಬಡೆ ಮಾಡಿ ಮನೆಯಿಂದ ಹೊರಗೆ ಹಾಕಿದ್ದು, ನಂತರ ನನ್ನ ಅಕ್ಕಳಾದ
ಅಫ್ರೀನಖಾನ ಹಾಗು ಮಗಳಾದ ಹಾನಾಖಾನ ಇವರು ನಮ್ಮ ಮನೆಯಲ್ಲಿ ನಮ್ಮೊಂದಿಗೆ ಉಪಜೀವನ
ಮಾಡುತ್ತಿರುತ್ತಾಳೆ. ಸದರಿಯವರು ಕೊಡುತ್ತಿರುವ ಮಾನಸಿಕ ಹಾಗು ದೈಹಿಕ ಕಿರುಕುಳ ಸಹಿಸಿಕೊಳ್ಳದೇ
ಇಂದು ದಿನಾಂಕಃ 04/02/2014 ರಂದು ಸಾಯಂಕಾಲ 05:00 ಗಂಟೆಯ ಸಮಯಕ್ಕೆ ನನ್ನ ಅಕ್ಕಳಾದ ಅಫ್ರೀನ್
ಖಾನ್ ಇವರು ನಮ್ಮ ತಂದೆಯವರ ಹೆಸರಿನಲ್ಲಿದ್ದ ಪಿಸ್ತೂಲ್ ನ್ನು ಲಾಕರ್ ನಿಂದ ತೆಗೆದುಕೊಂಡು ತನ್ನ
ಮಗಳಾದ ಹಾನಾಖಾನ್ ವಯಃ 4.1/2 ವರ್ಷ ಇವಳಿಗೆ ಪಿಸ್ತೂಲದಿಂದ ಗುಂಡು ಹಾರಿಸಿ ಸಾಯಿಸಿ ತಾನೂ ಅದೇ
ಪಿಸ್ತೂಲ್ ದಿಂದ ತನ್ನ ತಲೆಯ ಎಡಭಾಗಕ್ಕೆ ಗುಂಡು ಹಾರಿಸಿಕೊಂಡು ಮೃತ ಪಟ್ಟಿರುತ್ತಾಳೆ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment