ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಶಿವಯ್ಯ ತಂದೆ ಶರಣಯ್ಯ
ಗುತ್ತೆದಾರ ರವರು. ದಿನಾಂಕ 17-02-2014 ರಂದು ನಾನು ಮನೆಯಿಂದ ಮೋಟಾರ ಸೈಕಲ ನಂಬರ ಕೆಎ-32
ಡಬ್ಲೂ-9851 ನೇದ್ದರ ಮೇಲೆ ಕೇಂದ್ರ ಬಸ್ ನಿಲ್ದಾಣಕ್ಕೆ ಎಮ್.ಎಸ್.ಕೆ. ಮೀಲ ಮೈದಾನ ಸಿಐಬಿ
ಕಾಲೋನಿ ಮುಖಾಂತರ ಹೋಗುವಾಗ ಜಿಡಿಎ ರೋಡ ಕಬನಿ ಲಾಡ್ಜ ಎದುರಿನ ರೋಡ ಮೇಲೆ ಕ್ರುಜರ ಜೀಪ ನಂಬರ
ಕೆಎ-34 -4754 ರ ಚಾಲಕನು ಅತೀವೇಗ ಮತ್ತು ಅಲಕ್ಷತನ ದಿಂದ ಚಲಾಯಿಸಿಕೊಂಡು ಬಂದು ಮೋಟಾರ
ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಗಾಯಗೊಳಿಸಿ ಜೀಪ ಸ್ಥಳದಲ್ಲಿ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಪೀರಪ್ಪ ತಂದೆ ಮಲ್ಲಪ್ಪ
ಹರಳಯ್ಯಾ ಸಾ: ಹೇರೂರ (ಬಿ) ತಾ: ಗುಲಬರ್ಗಾ ರವರು ದಿನಾಂಕ 17-02-2014 ರಂದು ಮದ್ಯಾಹ್ನ 02-00 ಗಂಟೆ ಸುಮಾರಿಗೆ ಎಸ್.ವಿ.ಪಿ
ಸರ್ಕಲ ಹತ್ತಿರ ಇರುವ ಗಿರಿ ಆಸ್ಪತ್ರೆಯಿಂದ ನಡೆದುಕೊಂಡು ಏಕೆ ಮಾಡಲು ಹೋಗಿ ವಾಪಸ್ಸ ನಡೆದುಕೊಂಡು
ಆಸ್ಪತ್ರೆಯ ಕಡೆಗೆ ಹೋಗುವಾಗ ಆಸ್ಪತ್ರೆಯ ಎದುರಿನ ರೋಡ ಮೇಲೆ ಆರೋಪಿತನು ತನ್ನ ಮೋಟಾರ ಸೈಕಲ ನಂಬರ
ಕೆಎ-32 3479 ನೇದ್ದನ್ನು ಎಸ್.ವಿ.ಪಿ ಸರ್ಕಲ
ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ
ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಟಕಲ ಠಾಣೆ : ಶ್ರೀ ಮಹ್ಮದಲಿ ತಂದೆ
ಹಸೆನಸಾಬ ಬಳಗಾರ ಸಾ : ಮೋಘಾ ರವರು ದಿನಾಂಕ 17.02.2014 ರಂದು 09.00 ಎ.ಎಂಕ್ಕೆ ರಾಣಾಪೂರ
ಕ್ರಾಸ ನಿಂದ ಕೋಡ್ಲಿ ಗ್ರಾಮಕ್ಕೆ
ಸೇರಿ ಗ್ರಾಮದ ಪ್ರಕಾಶ ತಂದೆ ಶಾಮರಾಯ ಇತನ ಟಂ.ಟಂ. ನಂ. ಕೆಎ 32 ಬಿ.8254 ನೇದ್ದರಲ್ಲಿ ಕುಳಿತು
ಹೋಗುತ್ತಿರುವಾಗ ನನ್ನಂತೆ ಟಂ.ಟಂ.ನಲ್ಲಿ ಇನ್ನೂ 10 ಜನರ ಕುಳಿತಿದ್ದರು ಕೋಡ್ಲಿ ಕಡೆ
ಹೋಗುತ್ತಿರುವಾಗ ಸದರಿ ಟಂ.ಟಂ ಚಾಲಕನು ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಿರುವಾಗ
ನಾನು ಹಾಗು ವಾಹನದಲ್ಲಿ ಕುಳಿತು ಎಲ್ಲರೂ ಸದರಿಯವನಿಗೆ ನಿಧಾನವಾಗಿ ಚಲಿಸು ಅಂತ ಹೇಳಿದರು ಕೇಳದೆ
ಕೊಡ್ಲಿ ಗುಡ್ಡದ ಹತ್ತಿರ ರಸ್ತೆ ಮೇಲೆ ಟಂ.ಟಂ ಪಲ್ಟಿ ಮಾಡಿದಾಗ ನಾವೇಲ್ಲರೂ ಕೆಳಗೆ ಬಿದ್ದಾಗ
ನನಗೆ ಸಾದಾ ಗಾಯವಾಗಿದ್ದು ಉಳಿದ 10 ಜನರಿಗೆ ಭಾರಿ
ಹಾಗು ಸಾದಾಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಟಕಲ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ
ಶಿವಾಜಿ ತಂದೆ ಮಲ್ಲಪ್ಪಾ ಬಿರಾಜದಾರ ಸಾ|| ತುಗಾಂವ ತಾ|| ಆಳಂದ ರವರು ದಿನಾಂಕ 24-01-2014 ರಂದು
1:30 ಪಿಎಮ್‌ಕ್ಕೆ ನಾನು ಮುಂಬೈಗೆ ಹೋಗಿದ್ದು ದಿನಾಂಕ 15-02-2014 ರಂದು ನಮ್ಮ ಗ್ರಾಮದ ಮನೆಯ
ಎದುರುಗಡೆ ಇರುವ ಜನರು ಹಾಗೂ ನಮ್ಮ ಅತ್ತಿಗೆಯವರು ನನಗೆ ಮೋಬಾಯಿಲ್ ಮುಖಾಂತರ ಫೋನ್ ಮಾಡಿ
ತಿಳಿಸಿದ್ದೇನೆಂದರೆ ಸದರಿ ನಿಮ್ಮ ಮನೆಯ ಮುಖ್ಯ ದ್ವಾರದ ಕೀಲಿಕೈ ಮುರಿದಿದ್ದು ಕಂಡಿದ್ದು ತಕ್ಷಣ
ನೀವು ಬರಬೇಕೆಂದು ಹೇಳಿದ ಮೇರೆಗೆ ಇಂದು ಮುಂಬೈಯಿಂದ ಬಂದು ಸದರಿ ಮನೆಯಲ್ಲಿ ನಾನು ಹಾಗೂ ನನ್ನ
ಹಿರಿಯ ಮಗ ಮಧುಕರ ಹಾಗೂ ಅಂಕುಷ ಕೂಡಿಕೊಂಡು ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿದ್ದ ಎರಡು ಅಲಮಾರಿಗಳ
ಕೀಲಿ ಮುರಿದಿದ್ದು ಅಲಮಾರಿಯಲ್ಲಿದ್ದ ಬಂಗಾರ ಆಭರಣಗಳು ಹಾಗೂ ಹಣವನ್ನು ಹೀಗೆ ಒಟ್ಟು 418000
ರೂಪಾಯಿ ಬೆಲೆ ಬಾಳುವ ವಸ್ತುಗಳು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಸದರಿ
ಕಳ್ಳತನವು ದಿನಾಂಕ 11-02-2014 ರಂದು ರಾತ್ರಿ 11 ಪಿಎಮ್‌ದಿಂದ ದಿನಾಂಕ 15-02-2014 ರಂದು
ಬೆಳಗಿನ ಜಾವ 8 ಗಂಟೆಯ ಮಧ್ಯಧಲ್ಲಿ ಮನೆಯಲ್ಲಿದ್ದ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ರವಿಂದ್ರ ತಂದೆ
ರಾಮಚಂದ್ರ ರಾಠೋಡ ಸಾ;ಕವನಳ್ಳಿ ತಾಂಡಾ ತಾ;ಜಿ: ಗುಲಬರ್ಗಾ ರವರು ದಿನಾಂಕ: 16-02-2014 ರಂದು ಸಾಯಂಕಾಲ 6-00
ಗಂಟೆಗೆ ರವರು ಮನೆ ಮುಂದಿನ ರಸ್ತೆಯ ಮೇಲೆ ಇರುವ ಗಿಡದ ಕೆಳಗೆ 1). ಮೋಹನ ತಂದೆ ಲಕ್ಷ್ಮಣ ಪವಾರ
ಈತನು ನಿಲ್ಲಿಸಿದ ಮೋಟಾರ ಸೈಕಲ ಮೇಲೆ ಕುಳಿತು ಕೇಳುತ್ತಿದ್ದಾಗ ಮೋಹನ ಪವಾರ ಈತನು ಬಂದವನೇ
ಅವಾಚ್ಯ ಶಬ್ದಗಳಿಂದ ಬೈದು ತನ್ನ ಮೋಟಾರ ಸೈಕಲ ಮೇಲೆ ಯಾಕೆ ಕುಳಿತಿದ್ದಿ ಇಳಿಯಲೇ ಅಂತಾ
ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಯಾಕೆ ಹೊಲಸು ಬೈಯುತ್ತಿ ಅಂತಾ ಕೇಳಿದಕ್ಕೆ ಮೋಹನನು ನನಗೆ
ಎದುರು ಮಾತನಾಡುತ್ತಿ ಅಂತಾ ಬೈಯುತ್ತಾ ಹೊಡೆಯಲು ಬರುತ್ತಿದ್ದಾಗ ಮೋಟಾರ ಸೈಕಲ ದಿಂದ ಹಾರಿ
ಹೋಗುತ್ತಿದ್ದಾಗ ಮೋಟಾರ ಸೈಕಲ ಕೆಳಗೆ ಬಿದ್ದು ಎರಡು ಕನ್ನಡಿಗಳು ಒಡೆದವು ಮೋಹನ ಈತನು 2.
ಲಕ್ಷ್ಮಣ ತಂದೆ ಥಾವರು ಪವಾರ 3. ಶಾಂತಾಬಾಯಿ ಗಂಡ ಲಕ್ಷ್ಮಣ ಪವಾರ 4. ಮಹೇಂದ್ರ@ಸುನೀಲ ತಂದೆ ಲಕ್ಷ್ಮಣ ಪವಾರ 5. ರಾಜು ತಂದೆ ಲಕ್ಷ್ಮಣ ಪವಾರ 6. ಅಂಜುಬಾಯಿ ಗಂಡ ಮೋಹನ ಪವಾರ ಇವರಿಗೆ ಕರೆದುಕೊಂಡು ಬಂದವರೇ ನನಗೆ ತಡೆದು ನಿಲ್ಲಿಸಿ, ನನ್ನೊಂದಿಗೆ
ದಂಗಾಮುಸ್ತಿ ಮಾಡುತ್ತಿದ್ದಾಗ ನನ್ನ ಹೆಂಡತಿ ಸುನೀತಾ ಇವಳು ಬಂದು ಜಗಳ
ಬಿಡಿಸುತ್ತಿದ್ದಾಗ ಆಕ್ರಮವಾಗಿ ತಡೆದು ನಿಲ್ಲಿಸಿ ಕಲ್ಲಿನಿಂದ ಬಡಿಗೆಯಿಂದ ಕೈಯಿಂದ ಹೊಡೆದು
ರಕ್ತಗಾಯಪಡಿಸಿ ನನ್ನ ಹೆಂಡತಿಯ ಕೂದಲು ಹಿಡಿದು ಎಳೆದಾಡಿ ಹೊಡೆ ಬಡೆ ಮಾಡಿ ಮಾನಭಂಗ ಮಾಡಲು
ಪ್ರಯತ್ನಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ಪ್ರಕರಣ :
ಫರತಾಬಾದ
ಠಾಣೆ : ಶ್ರೀಮತಿ ಕವಿತಾ ಗಂಡ ಜಟ್ಟೆಪ್ಪ
ಶಖಾಪೂರ ಜಾಃ ಕಬ್ಬಲಿಗ ಸಾ: ಬಸನಾಳ ತಾ:ಜಿ: ಗುಲಬರ್ಗಾ ಮತ್ತು ನಮ್ಮೂರಿನ ಜೆಟ್ಟೆಪ್ಪ ಈಶ್ವರಪ್ಪ ಶಖಾಪೂರ ಇಬ್ಬರು
ಪರಸ್ಪರ ಪ್ರಿತಿಸಿದ್ದರಿಂದ ನಮ್ಮ ತಂದೆ ತಾಯಿಯವರಿಬ್ಬರು ನಮಗೆ 2 ವರ್ಷಗಳ ಹಿಂದೆ ನಾಲ್ಕು ಜನರ
ಮದ್ಯ ಮದುವೆ ಮಾಡಿಕೊಟ್ಟಿರುತ್ತಾರೆ. ನಮಗೆ 6 ತಿಂಗಳ ಒಂದು ಹೆಣ್ಣು ಮಗು ಇರುತ್ತದೆ.ನನಗೆ ನನ್ನ
ಗಂಡ ಜೆಟ್ಟೆಪ್ಪಾ, ನಮ್ಮ ಮಾವ ಈಶ್ವರಪ್ಪ, ಅತ್ತೆ ಸುಸಿಲಾಬಾಯಿ ಇವರು ನನಗೆ
ಸುಮಾರು 1 ವರ್ಷ 6 ತಿಂಗಳುಗಳ ಕಾಲ ಚೆನ್ನಾಗಿ ನೋಡಿಕೊಂಡಿರುತ್ತಾರೆ. ಈಗ ಸುಮಾರು 6 ತಿಂಗಳುಗಳಿಂದ ನನ್ನ ಗಂಡ, ಮಾವ ಈಶ್ವರಪ್ಪ ಮತ್ತು ಅತ್ತೆ
ಸುಸಿಲಾಬಾಯಿ ಇವರೆಲ್ಲರೂ ಕೂಡಿಕೊಂಡು ವಿನಾ ಕಾರಣ ನನಗೆ ಅವಚ್ಯವಾಗಿ ಬೈದು ಮಾನಸಿಕಾವಾಗಿ ಮತ್ತು
ದೈಹಿಕವಾಗಿ ಹಿಂಸೆ ನಿಡುತ್ತಿದ್ದರಿಂದ ನಮ್ಮ ತಂದೆ ತಾಯಿ ಬಂದು ಅವರಿಗೆ ಕೈಕಾಲು ಬಿದ್ದು ಕೇಳಿಕೊಂಡಾಗ
ನನ್ನನ್ನು 2-3 ದವಸ ಚೆನ್ನಾಗಿ ನೋಡಿ ಕೊಳ್ಳುವದು ಮತ್ತೆ ಅದೆ ರೀತಿ ಮಾಡುತ್ತಾ ಬಂದರು ಸಹಿತ
ನಾನು ಸಹಿಸಿಕೊಂಡು ಅಲ್ಲಿಯೆ ಇದ್ದೆನು. ಈಗ ಸುಮಾರು 1 ತಿಂಗಳುಗಳ ಹಿಂದೆ ನನ್ನ ಗಂಡ ಮತ್ತು ಮಾವ, ಅತ್ತೆ ಅಚ್ಯವಾಗಿ ಬೈದು ನೀನು ಈ
ಊರು ಬಿಟ್ಟು ಹೋಗು ಇಲ್ಲದಿದ್ದರೆ ನಿನಗೆ ಮತ್ತು ನಿಮ್ಮ ಮನೆಯವರಿಗೆ ಖಲಾಸ ಮಾಡುತ್ತೆವೆ ಅಂತಾ
ಬೆದರಿಕೆ ಹಾಕಿ ಮನೆಯ ಹೊರಗೆ ಹಾಕಿದ್ದರಿಂದ ನಾನು ನನ್ನ ಮಗಳನ್ನು ತೆಗೆದುಕೊಂಡು ಅಲ್ಲಿಯೇ ಇರುವ
ನನ್ನ ತವರು ಮನೆಗೆ ಹೊಗಿ ತಂದೆ- ತಾಯಿಯೊಂದಿಗೆ ವಾಸವಾಗಿರುತ್ತೆನೆ. ಹೀಗಿದ್ದು ದಿನಾಂಕ: 13-02-2014
ರಂದು ಮದ್ಯನ್ಹ 3:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮ ತಂದೆ ಅನೀಲ, ನನ್ನ ತಾಯಿ ಶ್ರೀದೆವಿ ಎಲ್ಲರೂ
ಮನೆಯಲ್ಲಿದ್ದಾಗ ನನ್ನ ಗಂಡನಾದ ಜೆಟ್ಟೆಪ್ಪ, ಮಾವ ಈಶ್ವರಪ್ಪ, ಅತ್ತೆ ಸುಸಿಲಾಬಾಯಿ ಎಲ್ಲರೂ ಕೂಡಿಕೊಂಡು ಬಂದು ನನ್ನ ಗಂಡನು ನನಗೆ ಅವಚ್ಯವಾಗಿ
ಬೈದು ಈ ಊರಲ್ಲಿ ಇರಬ್ಯಾಡ ಅಂತಾ ಹೇಳಿದರೂ ಇಲ್ಲೀಯೆ ಇದ್ದಿ ಅಂತಾ ನನಗೆ ಕೈಯಿಂದ ಕಪಾಳ ಮೇಲೆ
ಹೊಡೆದು ಕಾಲಿನಿಂದ ಹೊಟ್ಟೆಯ ಮೇಲೆ ಒದ್ದಿರುತ್ತಾನೆ. ಆಗ ಅಲ್ಲಿಯೇ ಇದ್ದ ನನ್ನ ತಂದೆ-ತಾಯಿ
ಇಬ್ಬರು ಬಿಡಿಸಲು ಬಂದರೆ ನಮ್ಮ ತಾಯಿಗೆ ಕಾಲಿನಿಂದ ಹೊಟ್ಟೆಯ ಮೇಲೆ ಒದ್ದು ಒಳಪೆಟ್ಟು
ಮಾಡಿರುತ್ತಾನೆ ಹಾಗು ನನ್ನ ತಂದೆಗೆ ಅಲ್ಲಿಯೇ ಬಿದ್ದಿದ್ದ ಒಂದು ಕಟ್ಟಿಗೆಯನ್ನು ತೆಗೆದುಕೊಂಡು
ಬಲಗೈಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ನಮ್ಮ ಮಾವ ಈಶ್ವರಪ್ಪ ಇತನು ಈ ರಂಡಿ ಮಕ್ಕಳಿಗೆ
ಬಿಡಬ್ಯಾಡ ಖಲಾಸ ಮಾಡು ಇವರಿಗೆ ಹೊಡೆದರು ಯಾರು ಕೇಳುವದಿಲ್ಲ ಅಂತಾ ಅವಾಚ್ಯವಾಗಿ ಬೈದು ಜೀವದ ಭಯ
ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment