ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀ ವೆಂಕಟ ತಂದೆ ವಿರಣ್ಣ ತಡೋಳೆ ವಾಸ ರಾಮಪೂರ ತಾ: ಬಸವ ಕಲ್ಯಾಣ
ಜಿ: ಬಿದರ ಇವರು ಹಾಗು ಬಾಪು ತಂದೆ ಗುಂಡಪ್ಪ ಗೆದಗೆ, ಮತ್ತು ಹೆಣ್ಣುಮಕ್ಕಳಾದ ರೇಣುಕಾ ಗಂಡ ಗುಂಡಪ್ಪಾ ಬಾರಾಬಾಯಿ , ದ್ರೌಪತಿ ಗಂಡ ಪ್ರಹಲಾದ
ತಿಳಗುಂಟೆ , ಶಾಂತಾಬಾಯಿ ಗಂಡ ರವಿ ರಂಗನೂರ, ರೇವಣ್ಣಮ್ಮ ಗಂಡ ಅಣ್ಣಪ್ಪ
ಬಾರಬಾಯಿ , ಹಿಗೆ ಎಲ್ಲರೂ, ಕೂಡಿ ಲಾರಿ ಮೇಲೆ ಕೂಲಿ
ಕೆಲಸಕ್ಕೆ ಹೋಗಿರುತ್ತೇವೆ. ದಿನಾಂಕ 17-02-2014 ರಂದು ಬೆಳ್ಳಿಗ್ಗೆ ನಾನು ಮತ್ತು ಸಂಗಡಿಗರು
ಕೂಡಿ ನಮ್ಮೂರಿನಿಂದ ಶಿರಗಾಪೂರ ಕ್ರಾಸ ಹತ್ತಿರ ಜೀಪನಲ್ಲಿ ಬಂದು ನಿಂತಾಗ ಅಲ್ಲೆ ನಮ್ಮ ಮಾಲಿಕನಾಧ
ನಾಶಿರ ಪಟೇಲ ಇವರ ಲಾರಿ ನಂ: ಹೆಚ್.ಆರ್.-38 ಎಲ್-5324 ನೇದ್ದು, ಅದರ ಜೋತೆ ಲಾರಿ ಚಾಲಕ ನಬಿಸಾಬ
ಬಸವ ಕಲ್ಯಾಣ ಇತನು ನಿಂತಿದು, ನೋಡಿ ಲಾರಿ ಹತ್ತಿರ ಹೋಗಿದ್ದಾಗ , ಲಾರಿಯಲ್ಲಿ ಉಸುಕು ಇತ್ತು. ನನಗೆ ಹೊಡಲ ಗ್ರಾಮದಲ್ಲಿ ಖಾಲಿ ಮಾಡಿ ಊರಿಗೆ ಹೋಗುವುದು. ಅಂತಾ
ತಿಳಿಸಿದಾಗ ನಾವೆಲ್ಲರು ಲಾರಿಯಲ್ಲಿದ್ದ, ಉಸುಕು ಮೇಲೆ ಕುಳೀತೆವು. ಲಾರಿ ಚಾಲಕ ಚಲಾಯಿಸುತ್ತಿದ್ದ ಬಬಲಾದ
ಶ್ರೀಚಂದ ಗ್ರಾಮದಿಂದ ಚಿಂಚನಸೂರ ಕಡೆಗೆ ಹೋಗುವ ರೋಡಿಗೆ ಜವಳಗಾ ಬಿ ಗ್ರಾಮದ ಕ್ರಾಸ ರೋಡಿನಿಂದ
ಚಾಲಕನು ಚಲಾಯಿಸುತ್ತಿದ್ದನು. ಚಾಲಕನು ಅತೀ ವೇಗದಿಂದ ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದನು.
ಟಾಯರ್ ಒಮ್ಮೆಲೆ ಬಸ್ಟಾಗಿದ್ದರಿಂದ ಲಾರಿ ವೇಗ ಆಯಾ ತಪ್ಪಿ ರೋಡಿನ ಬಲಬಾಗದಲ್ಲಿ ಪಲ್ಟಿಯಾಯಿತು.
ಅಪಘಾತದಲ್ಲಿ ನನಗೆ ಎಡಗಾಲ ಪಾದದ ಹಿಂಬದಿಗೆ ಭಾರಿ ಒಳ ಗುಪ್ತಗಾಯವಾಗಿರುತ್ತದೆ. ಹಾಗು ಬಾಪು ತಂದೆ
ಗುಂಡಪ್ಪ ಗೆದಗೆ, ಮತ್ತು ಹೆಣ್ಣುಮಕ್ಕಳಾದ ರೇಣುಕಾ
ಗಂಡ ಗುಂಡಪ್ಪಾ ಬಾರಾಬಾಯಿ , ದ್ರೌಪತಿ ಗಂಡ ಪ್ರಹಲಾದ ತಿಳಗುಂಟೆ , ಶಾಂತಾಬಾಯಿ ಗಂಡ ರವಿ ರಂಗನೂರ, ರೇವಣ್ಣಮ್ಮ ಗಂಡ ಅಣ್ಣಪ್ಪ ಬಾರಬಾಯಿ ರವರಿಗೆ ಸಾದಾ ಮತ್ತು ಭಾರಿ
ಗಾಯಗಳಾಗಿದ್ದು ಚಾಲಕನಿಗೆ ನೋಡಲು ತಲೆಗೆ ಬಲಬಾಗ ಪೂರ್ತಿ ಜಜ್ಜಿದ್ದು, ಲಾರಿ ಹಾಯ್ದು ಬಲಗೈ ಮುಂಗೈ
ಮುರುದಿದ್ದು, ಎಡಗೈ ಹೊಟ್ಟೆಗೆ ಭಾರಿ ರಕ್ತಗಾಯವಾಗಿ
ಸ್ಥಳದಲ್ಲೆ ಮೃತಪಟ್ಟಿರುತ್ತಾನೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 17-02-2014 ರಂದು 08-15 ಪಿ.ಎಮ್ ಕ್ಕೆ ಶ್ರೀ ಬಾಬುರಾವ ತಂದೆ ಪೀರಪ್ಪಾ, ಸಾಃ ಪಿ.ಡಬ್ಲು.ಡಿ ಕ್ವಾಟರ್ಸ, ಆರ್.ಟಿ.ಓ ಕ್ರಾಸ್ ಹತ್ತಿರ ಗುಲಬರ್ಗಾ ರವರು ಆರ್.ಟಿ.ಓ ಕ್ರಾಸ್ ಹತ್ತಿರ ರಸ್ತೆ ದಾಟುತ್ತಿದ್ದಾಗ
ಮೋಟಾರ ಸೈಕಲ ಕೆ.ಎ 32 ಇ.ಬಿ 9282 ನೇದ್ದನ್ನು ಜಿ.ಜಿ.ಎಚ್ ಆಸ್ಪತ್ರೆಯ ಕಡೆಯಿಂದ ಅತಿವೇಗ
ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಫಿರ್ಯಾದಿಗೆ ಡಿಕ್ಕಿ ಹೊಡೆದು
ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ
ಬಸವೇಶ್ವರ ನಗರ ಠಾಣೆ : ಶ್ರೀ ಸಿದ್ದಣ್ಣ ತಂದೆ
ಮಲ್ಲೇಶಪ್ಪ ನಿಂಬರಗಾ ಸಾಃ ಪ್ಲಾಟ್ ನಂ.220ಎ ಅನುಗ್ರಹ ನಿಲಯ, ವೀರೇಂದ್ರ ಪಾಟೀಲ್ ಬಡಾವಣೆ ಗುಲಬರ್ಗಾ ಇವರು ದಿನಾಂಕ 14-02-2014 ರಂದು ಬೆಳಿಗ್ಗೆ 7.00 ಗಂಟೆ
ಸುಮಾರಿಗೆ ಮನೆಗೆ ಬೀಗ ಹಾಕಿಕೊಂಡು ತಂಗಿಯ ಮಗಳ ಮದುವೆಗೆ ರೋಣ ಮತ್ತು ಗದಗಕ್ಕೆ ಹೋಗಿ. ಮರಳಿ ಇಂದು ದಿನಾಂಕ 17-02-2014 ರಂದು ರಾತ್ರಿ
11.00 ಪಿಎಂ ಗಂಟೆಗೆ ಗುಲಬರ್ಗಾದ ಮನೆಗೆ ಬಂದು ನೋಡಲು, ಮನೆಯ ಮುಖ್ಯ ಬಾಗಿಲ ಚನಲ್ ಗೇಟಿನ ಕೀಲಿ ತೆರೆದಿತ್ತು, ನಂತರ ಚನಲ್ ಗೇಟ್ ತೆಗೆದು ನೋಡಲು ಬಾಗಿಲ ಕೀಲಿ ಇರಲಿಲ್ಲಾ ಮತ್ತು ಬಾಗಿಲ ತೆರೆದಿದ್ದು
ಇರುತ್ತದೆ. ಮನೆಯೊಳಗೆ ಹೋಗಿ ಚೆಕ್ ಮಾಡಿ ನೋಡಲು ಬೆಡ್ ರೂಮಿನ ಬಾಗಿಲು ಮುರಿದಿದ್ದು ಮತ್ತು
ಅಲೆಮಾರಿಯನ್ನು ನೋಡಲು ಅಲೆಮಾರಿಯ ಬಾಗಿಲು ಮುರಿದಿದ್ದು ಲಾಕರ್ ಕೂಡಾ ತೆರೆದಿತ್ತು ಅಲ್ಲದೆ
ಎಲ್ಲಾ ಬಟ್ಟೆಗಳು ಹಾಗೂ ಕಾಗದ ಪತ್ರಗಳು ಚೆಲ್ಲಾಪಿಲ್ಲಿಯಾಗಿದ್ದು, ಅಲಮಾರಿ ಚೆಕ್ ಮಾಡಿ ನೋಡಲಾಗಿ ಅಲಮಾರಿಯಲ್ಲಿದ್ದ ನಗದು ಹಣ ಃಆಗು ಬಂಗಾರದ ಆಭರಣಗಳು ಹೀಗೆ ಒಟ್ಟು 64,800/-ರೂ. ಬೆಲೆ ಬಾಳುವಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment