Police Bhavan Kalaburagi

Police Bhavan Kalaburagi

Saturday, April 19, 2014

Gulbarga District Reported Crimes

ಕೊಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ನಾಗೇಂದ್ರಪ್ಪ ತಂದೆ ಮಲ್ಲಿಕಾರ್ಜುನ ಗರೂರ, ಬೈರಾಮಡಗಿ ಸಾಃ ಬೈರಾಮಡಗಿ ಹಾಃವಃ ಮನೆ ನಂ. 212 ಹೌಸಿಂಗಬೊರ್ಡ ಕಾಲೋನಿ ಹೈಕೊರ್ಟ ಪಕ್ಕದಲ್ಲಿ ಗುಲಬರ್ಗಾ ಇವರ ಮಗ, ರವಿ ಮತ್ತು ಅವನ ಗೆಳೆಯನಾದ ಶಿವಕುಮಾರ ಮತ್ತು ಪ್ರಕಾಶ ಕೂಡಿಕೊಂಡು ದಿನಾಂಕ 18.04.14 ರಂದು ರಾತ್ರಿ 9.30 ಪಿ.ಎಂಕ್ಕೆ  ಆರೋಪಿ ಶೀನ್ಯಾ ಇತನು ಚೆಂದುಗೆ 20 ಸಾವಿರ ರೂಪಾಯಿ ಕೊಡು ಅಂತ ತೊಂದರೆ ಕೊಡುತ್ತಿದ್ದಾನೆ ಅವನೊಂದಿಗೆ ಮಾತುಕತೆ ಆಡುವ ಕುರಿತು ಸಂಜೀವ ನಗರದಲ್ಲಿಯರುವ ಶಿನ್ಯಾನ ಮಾವನ ಮನೆಯ ಹತ್ತಿರ ಹೋಗಿ ಅವನಿಗೆ ರವಿ ಇತನು ಯಾಕೆ ಚೆಂದುಗೆ ಹಣ ಕೊಡು ಅಂತ ತೊಂದರೆ ಕೊಡುತ್ತಿದ್ದಿ ಅಂತ ಕೇಳಿದಾಗ ಶಿನ್ಯಾ ಇತನು  ರವಿಗೆ ರಂಡಿ ಮಗನೆ ನೀನು ನನ್ನ ವ್ಯವಹಾರದಲ್ಲಿ ಅಡ್ಡ ಬರುತ್ತಿ ಅಂತ ಅಂದವನೆ ತನ್ನ ಹತ್ತಿರ ಇದ್ದ ಪಿಸ್ತೂಲದಿಂದ ರವಿಯ ಹೊಟ್ಟೆಗೆ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಆಗ ರವಿ ಇತನು ನನ್ನ ಮೇಲೆ ಗುಂಡು ಹಾರಿಸುತ್ತಿ ರಂಡಿ ಮಗನೆ ಶಿನ್ಯಾ ಅಂತ ಅಂದು ತನ್ನ ಹತ್ತಿರ ಇದ್ದ ಪಿಸ್ತೂಲದಿಂದ ಶಿನುನ ಹೆಡಕಿಗೆ ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನಸಿದ್ದು ಆಗ ಶಿನುನ ಸಂಗಡ ಇದ್ದ ಪ್ರಕಾಶ, ದೇವು, ಸುಧೀರ, ಈಶ್ವರ, ಪ್ರತೇಶ, ಆನಂದ ಎಲ್ಲರು ಕೂಡಿಕೊಂಡು ರವಿಗೆ ಸುತ್ತುವರೆದು ಮಚ್ಚಿನಿಂದ, ಕಲ್ಲುಗಳಿಂದ, ಕ್ರಿಕೇಟ ಸ್ಟಂಪನಿಂದ ಎದೆಯ ಬಲಭಾಗಕ್ಕೆ, ಬಲಕಪಾಳಕ್ಕೆ, ಬಾಯಿ ಮೇಲೆ ಹೊಡೆದು ರಕ್ತಗಾಯ ಪಡಿಸಿ ನಾಲೆಯಲ್ಲಿ ಹಾಕಿ ರೇಜಿಗಲ್ಲು ಮತ್ತು ಫರ್ಸಿಕಲ್ಲುಗಳು ಮೈಮೇಲು ಎತ್ತಿಹಾಕಿ ಕೊಲೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಠಾಣೆ : ಶ್ರೀ ಗುರುಬಸಪ್ಪಾ ತಂದೆ ಭೀಮಣ್ಣಪ್ಪಾ ಸವಳೇಶ್ವರ  ಸಾ: ಖಜೂರಿ ತಾ: ಆಳಂದ ರವರ ಹೊಲ ಖಜೂರಿ ಸಿಮಾಂತರದ ಸರ್ವೆ ನಂ 15 ತಡೋಳಾ- ಖಜೂರಿ ಬಾರ್ಡರ ರೋಡಿನ ಪಕ್ಕದಲ್ಲಿ ಇದ್ದು ಸದರಿ ಹೊಲದಲ್ಲಿ ಭಾವಿ ತೊಡುತ್ತಿದ್ದು ಆಗಾಗ ಹೊಲಕ್ಕೆ ಬಂದು ಹೊಗುವುದು ಮಾಡುತ್ತೇನೆ. ದಿನಾಂಕ 18/04/2014 ರಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಎಂದಿನಂತೆ ನಾನು ನಮ್ಮ ಹೊಲಕ್ಕೆ ಬಂದಿದ್ದಾಗ ನಮ್ಮ ಹೊಲದ ಬಂದಾರಿಯ ಹತ್ತಿರ ಒಬ್ಬ ಅಪರಿಚಿತ ಗಂಡು ವ್ಯಕ್ತಿಯ ಶವವು ಅಂಗಾತಾಗಿ ಬಿದಿದ್ದು ಅಂದಾಜು 40-45 ವಯಸ್ಸಿನವನಿದ್ದು . ಸದರಿ ಶವವು ನೋಡಲಾಗಿ ಕೊರಳಿಗೆ ಊರಲು ಹಾಕಿದ ಗುರುತು ಇದ್ದು ಮುಖದ ಮೇಲೆ ಚಾಕುವಿನಿಂದ ಚುಚ್ಚಿದ ರಕ್ತಗಾಯವಾಗಿದ್ದು ಇದೆ. ಸದರಿ ಶವದ ಮೇಲೆ ಗಾಯಗಳು ನೋಡಿದರೆ ದಿನಾಂಕ 17/04/2014 ರಂದು ರಾತ್ರಿ 11 ಗಂಟೆಯಿಂದ 18/04/2014 ರ ಬೆಳಗಿನ ಜಾವದ 6:00 ಗಂಟೆಯ ಮದ್ಯದಲ್ಲಿ ಯ್ಯಾರೂ ದುರ್ಷ್ಕಿಮಿಗಳು ಯಾವದೊ ಉದ್ದೇಶದಿಂದ ಇತನಿಗೆ  ಕೊರಳಿಗೆ ಊರಲು ಹಾಕಿ ಮುಖಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಯ್ಯಾರಿಗೆ ಗೊತ್ತಾಗಬಾರದು ಅಂತಾ ತಂದು ನಮ್ಮ ಹೊಲದಲ್ಲಿ ಹಾಕಿ ತಲೆ ಮುಖದ ಮೇಲೆ ಮಣ್ಣು ಹಾಕಿ ಮುಚ್ಚಿ ಹೊಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ದಿನಾಂಕ 14-04-2014 ರ ಸಂಜೆ 5-30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಅಪರಿಚಿತ ದುಷ್ಕರ್ಮಿಗಳು ಅಪರಿಚಿತ ಹೆಣ್ಣು ಮಗಳಿಗೆ  ಎಲ್ಲಿಂದಲೋ ಕರೆದುಕೊಂಡು, ತಡಕಲ್ಲ ಸೀಮಾಂತರದಲ್ಲಿ ಇರುವ ಹೊಲ ಸರ್ವೆ ನಂ. 58/ಸಿ ರಲ್ಲಿ ಇರುವ  ಹೊಲದ ಕೊಟ್ಟಿಗೆಯಲ್ಲಿ ತಂದು ಅವಳ ಎರಡು ಕೈಗಳು  ಹಿಂದೆ ಕಟ್ಟಿ, ಅವಳ ಮೇಲೆ ಅತ್ಯಾಚಾರ  ಮಾಡಿ ನಂತರ ಅವಳಿಗೆ ಯಾವುದೋ ವಿಧದಿಂದ ಕೊಲೆ ಮಾಡಿ, ಮುಖ ಗುರುತು ಸಿಗದಂತೆ ಮುಖದ ಮೇಲೆ ಸೀರೆ ಮುಚ್ಚಿ ಸಾಕ್ಷಿ ನಾಶಪಡಿಸಿ, ಹೋಗಿರುತ್ತಾರೆ. ಅಂತಾ ಶ್ರೀ ದೇವಿದಾಸ ತಂದೆ ಮಾರೆಪ್ಪ ಸಿಂಧೆ  ಸಾ: ಜಿವಣಗಿ ಗ್ರಾಮ ತಾ:ಜಿ: ಗುಲಬರ್ಗಾ ಇವರು ಕೊಟ್ಟ  ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಚೌಕ ಠಾಣೆ : ಶ್ರೀ ಶ್ರೀನಾಥ @ ಶೀನು @ ಶೀನ್ಯಾ ತಂದೆ ಶರಣಪ್ಪ ಕಮಲಾಪುರಕ ಸಾಃ ಪೌರಕಾರ್ಮಿಕ ಶಾಲೆ ಗುಲಬರ್ಗಾ ರವರಿಗೆ  ದಿನಾಂಕ 18.04.14 ರಂದು ರಾತ್ರಿ 9.30 ಪಿ.ಎಂ ಸುಮಾರಿಗೆ 1.ರವಿ ಭೈರಾಮಡಗಿ 2. ಶಿವಕುಮಾರ 3. ಪ್ರಕಾಶ 4. ಚೆಂದು 5. ದೇವಿಂದ್ರ 6.  ಶ್ರೀಶೈಲ ಚರಪಳ್ಳಿ ರವರು ಕೂಡಿಕೊಂಡು ಮೋಟಾರ ಸೈಕಲ ಮೇಲೆ ಬಂದು ನನ್ನೊಂದಿಗೆ ಜಗಳ ತೆಗೆದು ಆರೋಪಿ ರವಿ ಇತನು ತನ್ನ ಹತ್ತಿರ ಇದ್ದ ಪಿಸ್ತೂಲದಿಂದ ಫಿರ್ಯಾದಿಯ ಹೆಡಕಿನ ಕೆಳಗೆ ಪಿಸ್ತೂಲದಿಂದ ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಉಳಿದ ಆರೋಪಿತರು ಫಿರ್ಯಾದಿಗೆ ಎಳೆದಾಡಿ, ಕೈಯಿಂದ ಹೊಡೆಬಡೆ ಮಾಡಿ ಜಾತಿ ನಿಂದನೆ ಮಾಡಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಘವೇಂದ್ರ ನಗರ ಠಾಣೆ : ಶ್ರೀ ಸಂಜೀವಕುಮಾರ ತಂದೆ ಮಧುಕರ ಕಾಂಬಳೆಸಾ:ದೇಶಮುಖವಾಡಾ ಬ್ರಹ್ಮಪೂರ ಗುಲಬರ್ಗಾ ರವರು ದಿನಾಂಕ 15-04-2014 ರಂದು ಸಾಯಂಕಾಲ ತನ್ನ ತಮ್ಮ ರುಕ್ಮಾಜಿರವರ ಲೇಡಿಜ ಕಾರ್ನರ ಅಂಗಡಿಯಲ್ಲಿ ಕುಳಿತಿದ್ದೇನು  ರಾತ್ರಿ 9.30 ಗಂಟೆ ಸುಮಾರಿಗೆ ಅಂಗಡಿ ಮುಂದುಗಡೆ ಜಗಳ ಮಾಡುವದು ಕೇಳಿ ಬಂದು ನೋಡಲು ತನ್ನ ತಮ್ಮನಿಗೆ ಶರಣು ಹೊಡ್ಡಿನಮನಿ ಮತ್ತು ಇತರೆ 8 ಜನರು ಕೂಡಿ ಹೊಡೆಹತ್ತಿದ್ದರು ಆಗ ನಾನು ಯಾಕೆ ಹೊಡೆಯುತ್ತಿರಿ ಅಂತಾ ಬಿಡಿಸಲು ಹೋದರೆ ನಿಮ್ಮ ತಮ್ಮ ನಮಗೆ ಇಲ್ಲಿ ಯಾಕೆ ನಿಂತಿರುತ್ತಿರಿ ಅಂತಾ ಕೇಳುತ್ತಾನೆ ನೀನು ಬಂದು ನನ್ನದೇನು ಶಂಟಾ ಕಿತ್ತುಕೊತಿ ಅಂತಾ ಎಲ್ಲರೂ ಕೂಡಿ ನನಗೆ ಕೈಯಿಂದ ಹೊಡೆಯಹತ್ತಿದ್ದರು ಮತ್ತು ಕಾಲಿನಿಂದ ಒದೆಯ ಹತ್ತಿದ್ದರು ನಂತರ ಶರಣು ಹೊಡ್ಡಿನಮನಿ ಇತನು ಈ ಮಕ್ಕಳು ಹೀಗಾದರೆ ನಮ್ಮ ಆಟ ನಡೆಗೊಡುವದಿಲ್ಲಾ ಅಂತಾ ಕಬ್ಬಿಣದ ರಾಡಿನಿಂದ ನನ್ನ ತಲೆಯ ಎಡಭಾಗದಲ್ಲಿ ಹೊಡೆದು ರಕ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ವಿರೇಶ ಪಿಸಿ ರವರಿಗೆ ಮಾತನಾಡಿಸಲು ಸದರಿಯವರು ಮಾತನಾಡಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರದ ಕಾರಣ ಶ್ರೀಮತಿ ಮಲ್ಲಮ್ಮ ಗಂಡ ರಾಚಯ್ಯಸ್ವಾಮಿ ರವರಿಗೆ ವಿಚಾರಿಸಲು ಅವರು   ದಿನಾಂಕ 18-04-2014 ರಂದು ಮದ್ಯಾಹ್ನ 2-10 ಗಂಟೆಗೆ ನನ್ನ ಮಗ ವಿರೇಶ ಇತನು ತನ್ನ ಮೋಟಾರ ಸೈಕಲ ನಂಬರ ಕೆಎ-32 ಆರ್-229 ನೇದ್ದನ್ನು ಐವಾನ ಈ ಷಾಯಿ ರೋಡ ಕಡೆಯಿಂದ ಜಗತ ರೋಡ ಕಡೆಗೆ ಹೋಗುವ ಕುರಿತು ಇಂಡಿಕೇಟರ ಹಾಕಿ ಸನ್ನೆ ಮಾಡಿ ಮೋಟಾರ ಸೈಕಲ ಚಲಾಯಿಸಿಕೊಂಡು ಹೋಗುವಾಗ ಮೀನಿ ವಿಧಾನ ಸೌಧದ ಎದುರುಗಡೆ ರೋಡ ಮೇಲೆ ಮೋಟಾರ ಸೈಕಲ ನಂಬರ ಕೆಎ-32 ಇಎ-1289 ನೇದ್ದರ ಸವಾರ ಜಗತ ರೋಡ ಕಡೆಯಿಂದ ಎಸ್.ವಿ.ಪಿ ಸರ್ಕಲ ಕಡೆಗೆ ಹೋಗುವ ಕುರಿತು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿಪೆಟ್ಟುಗೊಳಿಸಿ ಆತನು ಸಣ್ಣಪುಟ್ಟ ಗಾಯಹೊಂದಿರುತ್ತಾನೆ
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಖುರ್ಷೀದ ಮಿಯಾ ತಂದೆ ಪತ್ರು ಪಟೇಲ ರವರು ದಿನಾಂಕ: 17/04/2014 ರಂದು ಮಧ್ಯಾಹ್ನ 12=30 ಗಂಟೆಗೆ ತನ್ನ ಅಟೋರೀಕ್ಷಾ ನಂ: ಕೆಎ 32  6994 ನೆದ್ದರಲ್ಲಿ ಪ್ರಯಾಣಿಕರನ್ನು ಕೂಡಿಕೊಂಡು ಎಸ್.ವಿ.ಪಿ.ಸರ್ಕಲ್ ದಿಂದ ಖುಬಾ ಪ್ಲಾಟ ಕಡೆಗೆ ಹೋಗುವ ಕುರಿತು ಕೋರ್ಟ ಕ್ರಾಸ್ ಮುಖಾಂತರ ಹೋಗುತ್ತಿದ್ದಾಗ ಕೇಂದ್ರ ಬಸ್ ನಿಲ್ದಾಣದ ರೋಡ ಕಡೆಯಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಂ: ಕೆಎ 32 ಎಫ್ 1416 ರ ಚಾಲಕ ರತ್ನಸಿಂಗ ಈತನು ತನ್ನ ಬಸ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸಿಕೊಂಡು ಹೋಗುತ್ತಿದ್ದ ಅಟೋರೀಕ್ಷಾಕ್ಕೆ ಎಡ ಸೈಡಿಗೆ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಗೆ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀ ಸಾಹೇಬಪಟೇಲ ಮದರಕಿ ಸಾ: . ಹಿಪ್ಪರಗಿ ಎಸ್.ಎನ್  ರವರು   ದಿನಾಂಕ: 11/04/2014 ರಂದು ಸಾಯಂಕಾಲ 7-45 ಗಂಟೆಗೆ ಜೇವರ್ಗಿ - ಸಿಂದಗಿ ಮೇನ ರೋಡ ಕೂಡಿ ಗ್ರಾಮದ ಕ್ರಾಸ ಹತ್ತಿರ ರೊಡಿನಲ್ಲಿ ಬಸ್ ನಂಬರ ಕೆ.ಎ. 34 ಎಫ 1023 ನೇದ್ದರಲ್ಲಿ ಕುಳಿತು ಊರಿಗೆ ಬರುತ್ತಿದ್ದ ನನ್ನ ಅಣ್ಣ ಮಿಟೇಸಾಬ ಇತನು ಬಸ್ಸಿನ ಬಾಗಿಲಿನಲ್ಲಿ ನಿಂತು ಉಗಳುತ್ತಿದ್ದಾಗ  ಸ್ಪೀಡಾಗಿ ಹೋಗುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದು ನನ್ನ ಅಣ್ಣನಿಗೆ ಭಾರಿ ಗಾಯಾವಾಗಿದ್ದು ಅವನಿಗೆ ಉಪಚಾರ ಕುರಿತು ಗುಲಬರ್ಗಾದ ಯುನೇಟೇಡ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಕೇಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಉಪಚಾರ ಪಡೆಯುತ್ತಾ ಇಂದು ದಿ: 17/04/2014 ರಂದು ಮುಂಜಾನೆ 6-15 ಗಂಟೆಗೆ ಮೃತ ಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ನರೋಣಾ ಠಾಣೆ : ಶ್ರೀ. ಶೀವಲೀಲಾ ಗಂ ದಿ: ರಾಜಶೇಖರ ಮುನ್ನಳ್ಳೀ ಸಾ:ಸಾವಳಗಿ ಕೆ ರವರು ದಿನಾಂಕ: 16/04/2014 ರಂದು 05-45 ಗಂಟಗೆ ಶ್ರೀ,ಮಹಾದೇವ ಪಲ್ಲಕ್ಕಿ ಮುಖ್ಯ ರಸ್ತೆಯಿಂದ ನಡೆಯುತ್ತಿದ್ದಾಗ ನನ್ನ ಮಗ ನೋಡಲಿಕೆ ಹೋಗಿದ್ದನು, ನಮ್ಮೂರಿನ ಜವಳ್ಗಾರವರ ಮನೆಯ ಹತ್ತಿರ ರಸ್ತೆಯ ಮೇಲೆ ಮೆರವಣಿಗೆ ಇದ್ದಾಗ ನಾನು ಕೂಡ ನೋಡಲಿಕೆ ಹೋಗಿದ್ದು  ಪಲ್ಲಕ್ಕಿಯ ಮುಂದೆ ಟ್ರ್ಯಾಕ್ಟರ ನಂ KA 28 T 7275 ಟ್ರ್ಯಾಲಿ ನಂ KA 32 T 8106 ಅಂತಾ ಇದ್ದು ಟ್ರ್ಯಾಲಿಯಲ್ಲಿ ಸೌಂಡ್ ಬಾಕ್ಸ್ ಇದ್ದು ಟ್ರ್ಯಾಕ್ಟರ ಮುಂದಿನ ಭಾಗ ನನ್ನ ಮಗ ನಿಂತಿದನು ಟ್ರ್ಯಾಕ್ಟರ ಚಾಲಕ ಪರಮೇಶ್ವರ ತಂ ಭೀಮಶ್ಯಾ ಮೂಲಗೆ ಸಾ:ಸಾವಳಗಿ ಅಂತಾ ಚಾಲಕನಿದ್ದು ಚಾಲಕನು ನಿಷ್ಕಾಳಜಿತನದಿಂದ ಮತ್ತು ಬೇಜವಾಬ್ದಾರಿಯಿಂದ ತನ್ನ ಟ್ರ್ಯಾಕ್ಟರ ಚಲಾಯಿಸುತ್ತಿದ್ದಾಗ ಎದುರ ಇದ್ದ ನನ್ನ ಮಗಾ ಸಿದ್ದಾರೂಡನಿಗೆ ಡಿಕ್ಕಿಪಡಿಸಿದನು. ಆಗ ನಾನು ನೋಡಿ ಚಿರಾಡುತ್ತಿದ್ದಾಗ ನನ್ನ ಮೈದುನ ಸಂಜಯ ಇವರು ಮತ್ತು ವಿಜಯಕುಮಾರ ತಂ ಅಂಬರಾಯ ಮುನ್ನಹಳ್ಳಿ ಇವರು ಬಂದು ನೋಡಿದರು ನನ್ನ ಮಗನಿಗೆ ಅಪಘಾತದಲ್ಲಿ ಗಾಯ ಎಡಗಡೆ ಎದೆಗೆ ಭಾರಿ ಒಳಪೆಟ್ಟಾಗಿದ್ದು.ಬಲಗಡೆ ಕಣ್ಣಿನ ಕೇಳಗೆ ಮೇಲೆ ಭಾರಿ ಪೆಟ್ಟಾಗಿ ರಕ್ತಗಾಯ ವಾಗಿದೆ. ಎಡಗೈ ಮುಂಗೈಗೆ ರಕ್ತಗಾಯ, ರಟ್ಟೆಗೆ ಗಾಯ , ಎಡಹೊಟ್ಟೆಯ ಮೇಲೆ ತರಚಿದ ರಕ್ತಗಾಯ, ಎದೆಗೆ ತರಿಚದ ಗಾಯ ಬೆನ್ನಿನ ಎಡಗಡೆ ತರಚಿದ ಗಾಯವಾಗಿರುತ್ತದೆ. ಇವನಿಗೆ ಉಪಚಾರ ಕುರಿತು ನನ್ನ ಮೈದುನ ಸಂಜಯರವರು ಮತ್ತು ಶೇಖರ ತಂ ಬಸವರಾಜ ಬಿರೆದಾರ ಮತ್ತು ನಾನು ಕೂಡಿ ಗುಲಬರ್ಗಾದ ಬಸವೇಶ್ವರ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತೇವೆ. ಆಸ್ಪತ್ರೆಯಲ್ಲಿ ಉಪಚಾರ ಪಡೆದು ಹೆಚ್ಚಿನ ಉಪಚಾರ ಕುರಿತು ಸೋಲಾಪುರ ಯಶೋಧಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ನನ್ನ ಮಗ ಮರಣ ಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಅಶೋಕ ನಗರ ಠಾಣೆ : ಶ್ರೀ. ನಾಡಗೌಡ ತಂದೆ ಅಪ್ಪಾಸಾಬಗೌಡ ಮಾಲಿಪಾಟೀಲ ಸಾ: ಓಂ ನಗರ ಬಿಜಾಪೂರ ರಸ್ತೆ ಗುಲಬರ್ಗಾ ರವರು ದಿನಾಂಕ 15/04/2014 ರಂದು ಮುಂಜಾನೆ 10 ಗಂಟೆಗೆ  ನನ್ನ ಅಣ್ಣ ಭಗವಂತರಾಯಗೌಡ ಅವರು ತಮ್ಮ ಸ್ಕಾರ್ಪಿಯೊ ವಾಹನ ನಂ. ಕೆಎ 32-ಎಂ-8993 ರಲ್ಲಿ  ಚಾಲಕ ಶಬ್ಬಿರ ರವರೊಂದಿಗೆ ವ್ಯವಹಾರಕ್ಕಾಗಿ ಗುಲಬರ್ಗಾಕ್ಕೆ ಹೊಗುತ್ತಿರುವುದಾಗಿ ಹೇಳಿ ಹೊಗಿದ್ದರು,  ನಿನ್ನೆ ಸಂಜೆ 7-30 ಗಂಟೆಗೆ ನಾನು ನನ್ನ ಅಣ್ಣನ ಮೊಬೈಲ ನಂ. 9448435467 ಕ್ಕೆ  ಫೋನ ಮಾಡಿದಾಗ  ಸ್ವಿಚ್ಛ ಆಫ್‌ ಆಗಿತ್ತು. ಅದೇ ವೇಳೆಗೆ  ಅವರ ಸ್ಕಾರ್ಪಿಯೊ ವಾಹನ ಚಾಲಕ ಶಬ್ಬೀರ ಇತನು  ಗಾಡಿ ತೆಗೆದುಕೊಂಡು ಬಂದಾಗ  ನಾನು ಅಣ್ಣ ಎಲ್ಲಿ ಎಂದು ಕೇಳಿದಾಗ  ಶಬ್ಬೀರನು ಹೇಳಿದ್ದೆನೆಂದರೆ   ಸಂಜೆ 4-30 ಗಂಟೆಗೆ  ಗುಲಬರ್ಗಾ ಬಸ ಸ್ಟ್ಯಾಂಡ ಹತ್ತಿರ ಇಳಿದು  ಗಾಡಿ ತೆಗೆದುಕೊಂಡು ಹೊಗು ನಾನು ಬಸ್ಸಿನಲ್ಲಿ ಬರುತ್ತೆನೆ ಅಂತಾ ಹೇಳಿದ್ದರಿಂದ ನಾನು ಒಬ್ಬನೇ ಗಾಡಿ ತೆಗೆದುಕೊಂಡು ಬಂದಿರುತ್ತೆನೆ. ಅಂಥಾ ತಿಳಿಸಿದ್ದು   ನಂತರ ನಾನು ಮತ್ತು  ನಮ್ಮ ಮನೆಯವರೆಲ್ಲರೂ  ನಮ್ಮ ಅಣ್ಣನ ಮೊಬೈಲಿಗೆ ಫೋನ ಮಾಡಿದ್ದು ಸ್ವಿಚ್ಛ ಆಫ್‌ ಆಗಿದ್ದು  ರಾತ್ರಿ  ನಾವೇಲ್ಲರೂ ಗುಲಬರ್ಗಾ ಹಾಗು ಜೇವರ್ಗಿ ಯಲ್ಲಿ ಹುಡುಕಾಡಿದ್ದು ಮತ್ತು ಸಂಬಂಧಿಕರಿಗೆ ಫೋನ ಮಾಡಿ ಕೇಳಿದ್ದು  ಸಿಕ್ಕಿರುವುದಿಲ್ಲಾ. ಕಾಣೆಯಾಗಿರುತ್ತಾರೆ.  ನನ್ನ ಅಣ್ಣ ಭಗವಂತರಾಯಗೌಡ ತಂದೆ ನಾಡಗೌಡ  ಮಾಲಿಪಾಟೀಲ ವಯಸ್ಸು 46 ವರ್ಷ ಇದ್ದು ಮತ್ತು ಅವರು  ನೀಲಿ ಬಣ್ಣದ ಆಫ್‌ ಶರ್ಟ,  ಕಪ್ಪು ಬಣ್ಣದ ಪ್ಯಾಂಟ  ಹಾಗು ಕಪ್ಪು ಲೆಬರ್ಟಿ ಚಪ್ಪಲಿ ಧರಿಸಿದ್ದಾರೆ. ಅವರು  ಕನ್ನಡ ಮತ್ತು ಹಿಂದಿ ಭಾಷೆ ಮಾತಾಡುತ್ತಾರೆ. ಅವರ ಹತ್ತಿರ ನೊಕಿಯಾ ಮೊಬೈಲ  ಐಎಂಇಐ ನಂ. 359991055232281 ಅದರಲ್ಲಿ ಬಿಎಸ್‌ಎನಲ್‌ ಸಿಮ್‌ ನಂ. 9448435467 ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: