ಕೊಲೆ ಪ್ರಕರಣ :
ಮುಧೋಳ
ಠಾಣೆ : ಶ್ರೀಮತಿ ಪದ್ಮಮ್ಮಾ ಗಂಡ ನರಸರಡ್ಡಿ ಸಾ: ತುಲ್ಮಾಮಡಿ ತಾ:
ಸೇಡಂ ರವರು ದಿನಾಂಕ: 27-07-2014 ರಂದು ಮುಂಜಾನೆ 07-00 ಗಂಟೆಯ
ಸುಮಾರಿಗೆ ನಾನು ಮತ್ತು ನನ್ನ ತಾಯಿಯಾದ ರಾಮಲಿಂಗಮ್ಮ ಇವರು ಕೂಡಿ ಆಡಕಿ ಗ್ರಾಮದಿಂದ ಹೊರಟು ಇಂದು
ಮುಂಜಾನೆ 09-00 ಗಂಟೆಗೆ ತುಲ್ಮಾಮಡಿ ಗ್ರಾಮದಲ್ಲಿರುವ ನನ್ನ ಮನೆಗೆ ಹೊದೇವು. ನನ್ನ ತಾಯಿಯಾದ
ರಾಮಲಿಂಗಮ್ಮ ಇವಳಿಗೆ, ಮನೆಯಲ್ಲಿ ಬಿಟ್ಟು, ನಾನು
ಸಂಡಾಸಕ್ಕೆ ಹೊಗಿ ಮರಳಿ ಮುಂಜಾನೆ 09-30 ಗಂಟೆಗೆ ಮರಳಿ ಮನೆಗೆ
ಬಂದು ನೋಡಲು, ನನ್ನ ಅಣ್ಣಾನಾದ 1] ನಾಗರೆಡ್ಡಿ ತಂದೆ
ನರಸರೆಡ್ಡಿ ಮುನ್ನೂರ, ಹಾಗು ಇತನ ಮಕ್ಕಳಾದ 2] ಶ್ರೀನಿವಾಸ
ರೆಡ್ಡಿ ತಂದೆ ನಾಗರೆಡ್ಡಿ ಮುನ್ನೂರ, 3] ದೇವಿಂದ್ರ ರೆಡ್ಡಿ ತಂದೆ
ನಾಗರೆಡ್ಡಿ ಮುನ್ನೂರ ಇವರು ಕೂಡಿ, ನನ್ನ ಮನೆಯ ಒಳಗೆ ಬಂದು, ಮನೆಯಲ್ಲಿದ್ದ
ನನ್ನ ತಾಯಿಯಾದ ರಾಮಲಿಂಗಮ್ಮ ಇವಳ ಸಂಗಡ ಜಗಳಾ ಮಾಡುತ್ತಾ ನಿನ್ನ ಮಗಳಾದ ಪದ್ಮಮ್ಮಾ ಇವಳ ಹೆಸರಿಗೆ
ಮಾಡಿದ ಹೊಲವನ್ನು ನನ್ನ ಹೆಸರಿಗೆ ಮಾಡು ಅಂತಾ ನಾಗರೆಡ್ಡಿ ಇತನು ಅನ್ನುತ್ತಾ ಬೈಯುತ್ತಿದ್ದಾಗ, ನಮ್ಮ ತಾಯಿ
ಅವರಿಗೆ ಇದಕ್ಕೆ ಒಪ್ಪವದಿಲ್ಲಾ ಅಂತಾ ಅಂದಾಗ ನಾಗರೆಡ್ಡಿಯು ನಾವು ಎಲ್ಲರೂ ಕೂಡಿ, ನಿನಗೆ ಖಲಾಸ
ಮಾಡಿ, ನನ್ನ ಹೆಸರಿಗೆ ಹೊಲ ಮಾಡಿಕೊಳ್ಳುತ್ತೇವೆ. ಅನ್ನುತ್ತಾ. ದೇವಿಂದ್ರ ರೆಡ್ಡಿ ಮತ್ತು
ನಾಗರೆಡ್ಡಿ ಇವರು, ನನ್ನ ತಾಯಿಗೆ ಕೈಗಳಿಂದ ತೆಲೆಗೆ ಕುತ್ತಿಗೆಗೆ
ಮತ್ತು ಹೊಟ್ಟೆಗೆ ಹೊಡೆದರು, ಇವಳಿಗೆ ಏತ್ತಿತ್ತಿ ನೇಲದ ಮೇಲೆ ಹಾಕಿದರು, ಮತ್ತು ಇವರು
ಇಬ್ಬರು ಕೂಡಿ ನನ್ನ ತಾಯಿಗೆ ಒತ್ತಿ ಹಿಡಿದಾಗ, ಶ್ರೀನಿವಾಸ ರೆಡ್ಡಿ ಇವನು, ತನ್ನ ಬಳಿ
ಇದ್ದ ತೇಜಾಫ್ ಏಣ್ಣೆಯ ಬಾಟಲಿಯನ್ನು ತೆಗೆದುಕೊಂಡು, ಒತ್ತಾಯದಿಂದ
ನನ್ನ ತಾಯಿಯ ಬಾಯಿಯಲ್ಲಿ, ತುರುಕಿದನು, ಈ
ಬಾಟಲಿಯಲ್ಲಿದ್ದ ಏಣ್ಣೆಯು, ನನ್ನ ತಾಯಿಯ ಹೊಟ್ಟೆಯಲ್ಲಿ ಹೊದಾಗ, ಇವಳು, ಬೇಹೊಸ ಆಗಿ
ಕುಸಿದು ಕೇಳಗೆ ಬಿದ್ದಳು, ಮತ್ತು 3 ಜನರು
ಅಲ್ಲಿಂದ ಓಡಿ ಹೊದರು,ನಾನು ಇದರ ಬಗ್ಗೆ ಆಡಕಿಯಲ್ಲಿರುವ ನನ್ನ ಮಗಳಾದ
ಶ್ರೀದೇವಿ ಇವಳಿಗೆ ತಿಳಿಸಿದಾಗ, ಆಗ ಇವಳು ಇನ್ನಿತರರು ಕೂಡಿ
ಬಂದು, ಆಟೋದಲ್ಲಿ ನಮ್ಮ ಬಳಿಗೆ ಬಂದರು. ನಡೆದನ್ನು ನೋಡಿ, ಬೆಹೊಷ ಆಗಿ
ಬಿದಿದ್ದ ನನ್ನ ತಾಯಿಯಾದ ರಾಮಲಿಂಗಮ್ಮ ಇವಳಿಗೆ ಆಟೋದಲ್ಲಿ ಹಾಕಿಕೊಂಡು, ಆಡಕಿ ಗ್ರಾಮದ
ಬಳಿ ಬಂದಾಗ, ಅಲ್ಲಿ ಅಂಬುಲೇನಸ್ಸ ಗಾಡಿ ಬಂದಾಗ, ಇದರಲ್ಲಿ
ಹಾಕಿಕೊಂಡು ಇಂದು ದಿನಾಂಕ: 27-07-2014 ರಂದು ಮಧ್ಯಾಹ್ನ 12:30 ಗಂಟೆ
ಸುಮಾರಿಗೆ ಸೇಡಂ ಸಮೀಪ ಬಂದಾಗ, ನನ್ನ ತಾಯಿಯಾದ
ರಾಮಲಿಂಗಮ್ಮ ಇವಳು ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಟೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ದೇವಲ
ಗಾಣಗಾಪೂರ ಠಾಣೆ : ದಿನಾಂಕ: 27-07-2014 ರಂದು ಚವಡಾಪೂರ ತಾಂಡಾದ
ಸೇವಲಾಲ ಮಹಾರಾಜರ ಗುಡಿಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ
ಕೆಲವು ಜನರು ಹಣ ಪಣಕ್ಕೆ ಹಚ್ಚಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ
ಆಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ಹಾಗು ಸಿಬ್ಬಂದಿ
ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಇಸ್ಪೇಟ ಜೂಜಾಟ ಆಡುತಿದ್ದವರನ್ನು
ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಿ ಅಂಗ ಶೋಧನೆ ಮಾಡಲಾಗಿ 1] ವಿಜಯ ತಂದೆ ಹೀರು ಜಾಧವ 2] ಸಂದೀಪ ತಂದೆ ರಮೇಶ ರಾಠೋಡ 3] ರಾಜೇಶೇಖರ
ತಂದೆ ತಿಪ್ಪಣ್ಣ ಜಾಧವ 4] ಮಾನಸಿಂಗ ತಂದೆ
ನಾರಾಯಣರಾವ ರಾಠೋಡ 5] ಕಿಶನ ತಂದೆ ನಾರಾಯಣ ರಾಠೋಡ ಸಾ|| ಎಲ್ಲರೂ ಚವಡಾಪೂರ ತಾಂಡ ಇವರನ್ನು
ವಶಕ್ಕೆ ತೆಗೆದುಕೊಂಡು ಸದರಿಯವರಿಂದ 845=00
ರೂ ನಗದು ಹಣ ಮತ್ತು 52 ಇಸ್ಪೇಟ ಎಲೆಗಳನ್ನು ವಶಪಡಿಸಿಕೊಂಡು
ಸದರಿಯವರೊಂದಿಗೆ ಮರಳಿ ಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ
ಠಾಣೆ : ದಿನಾಂಕ:-26/07/2014 ರಂದು ರಾತ್ರಿ 07:30 ಗಂಟೆ ಸುಮಾರಿಗೆ ಮೃತ
ಮಲ್ಲಿನಾಥ @ ಮಲ್ಲಿಕಾರ್ಜುನ ಇತನು ತನ್ನ ವಶದಲ್ಲಿದ್ದ ಹಿರೋ ಹೊಂಡಾ ಮೋಟಾರ ಸೈಕಲ್ ನಂ ಕೆಎ-32
ಡಬ್ಲೂ-2018 ನೇದ್ದನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿ ಕಪನೂರ ಹತ್ತಿರ ಇರುವ ಭಾರತ
ಪೊರ್ಡ ಶೋರೂಮ ಎದುರಗಡೆ ಒಂದು ಪಾನಿಪುರಿ ಬಂಡಿಗೆ ಹಾಯಿಸಿ ಕೆಳೆಗೆ ಬಿದ್ದು ತಲೆಗೆ ಬಾರಿ
ಗುಪ್ತಗಾಯವಾಗಿ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಗುಲಬರ್ಗಾದಲ್ಲಿ ಸೇರಿಕೆ ಮಾಡಿ
ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ದಾರಿಯ ಮದ್ಯದಲ್ಲಿ
ರಾತ್ರಿ 11:30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ರೂಪಾ ಗಂಡ ಮಲ್ಲಿನಾಥ @
ಮಲ್ಲಿಕಾರ್ಜುನ ಕುಂಬಾರ ಸಾ:ಸಾವಳಗಿ ಹಾ:ವ:ಕಪನೂರ ತಾ:ಜಿ:ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ
ಠಾಣೆ : ದಿನಾಂಕ: 27/07/2104 ರಂದು ಶ್ರಾವಣ ಮಾಸದ ಮೊದಲ ದಿನವಾಗಿದ್ದರಿಂದ ಶ್ರೀ ವಿಕಾಸ ತಂದೆ ರಾಮಜೀ ರಾಠೋಡ ಸಾ: ಪ್ಲಾಟ ನಂ. 17 ಅವಿಸ್ಕಾರ ಬಿಲ್ಡಿಂಗ್ ಹಳೆ ಜೇವರ್ಗಿ ರಸ್ತೆ ಗುಲಬರ್ಗಾ ಮತ್ತು ತಾಯಿ ರೂಪಾ ಅಕ್ಕ ಆರತಿ, ಹಾಗು ತನ್ನ ಪರಿಚಯದವನಾದ ಗೆಳೆಯ
ಕಿಶೋರಕುಮಾರ ತಂದೆ ರೇವಣಸಿದ್ದಪ್ಪಾ ಹುಡಗಿ ಹೀಗೆ 04 ಜನ ಕೂಡಿ 2 ಮೋಟರ ಸೈಕಲಗಳ ಮೇಲೆ ಕುಳಿತುಕೊಂಡು
ಮಧ್ಯಾಹ್ನ 01-00 ಗಂಟೆಗೆ ಮಹಾಗಾಂವಕ್ಕೆ ಬಂದು ಗ್ರಾಮದಲ್ಲಿ ನಾಗನಾಥ ದೇವರ ದರ್ಶನ ಪಡೆದುಕೊಂಡು ಮರಳಿ ಮಧ್ಯಾಹ್ನ 03-15 ಗಂಟೆಗೆ ಮಹಾಗಾಂವದಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ
ಕಿಶೋರಕುಮಾರ ಈತನ ಹೊಂಡಾ ಆಕ್ಟಿವ್ ಮೋ.ಸೈ ನಂ. ಕೆಎ:32, ಈಈ:5119 ನೇದ್ದು ಫಿರ್ಯಾದಿ ಚಾಲಾಯಿಸುತ್ತಿದ್ದು.
ಹಿಂದೆ ಫಿರ್ಯಾದಿ ಅಕ್ಕ ಅರತಿ ಇವಳು ಕುಳಿತಿದ್ದಳು. ಇನ್ನೊಂದ ಮೊ.ಸೈಕಲ ಮೇಲೆ
ಕಿಶೋರ ಈತನು ಚಲಾಯಿಸುತ್ತಿದ್ದು. ಹಿಂದೆ ಫಿರ್ಯಾದಿ ತಾಯಿ ರೂಪಾ ಕುಳಿತಿದ್ದಳು. ಮಧ್ಯಾಹ್ನ 03-30 ಗಂಟೆಗೆ ಕುರಿಕೋಟಾ ಸೇತುವೆ
ದಾಟಿ ಸ್ವಲ್ಪ ಮುಂದೆ ಫಿರ್ಯಧಿದಾರನು. ರೋಡಿನ ಎಡಗಡೆಯಿಂದ
ತನ್ನ ಮೋ.ಸೈಕಲನ್ನು ನಿದಾನವಾಗಿ, ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತೀವೇಗ
ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಚಲಾಯಿಸುತ್ತಿದ್ದ ಮೋ.ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಫಿರ್ಯಾದಿದಾರನಿಗೆ ಎಡಗೈ ಮೊಳಕೈ ಹತ್ತಿರ, ಬಲಗೈ ಮೊಳಕೈ ಕೆಳಗೆ ತರಚಿದ ರಕ್ತಗಾಯ ಮತ್ತು ಬಲ ಪಕ್ಕಕ್ಕೆ, ಸೊಂಟಕ್ಕೆ ತರಚಿದ ಭಾರಿ ಗಾಯವಾಗಿದ್ದು. ಆರತಿ ಇವಳಿಗೆ ಮೂಗಿಗೆ ಎಡಗಲ್ಲಕ್ಕೆ ತರಚಿದ ರಕ್ತಗಾಯವಾಗಿದ್ದು. ಬಲಗಡೆ ಸೊಂಟಕ್ಕೆ ಭಾರಿಒಳಪೆಟ್ಟಾಗಿರುತ್ತದೆ. ನಂತರ ಈ ಅಪಘಾತವನ್ನು ನೋಡಿ, ಕೀಶೋರ ಹಾಗು ತಾಯಿ ರೂಪಾ ಇವರು ಅಪಘಾತ
ಪಡಿಸಿದ ಕಾರ ನಂಬರ ನೋಡಲಾಗಿ, ಟಾಟಾ ಇಂಡಿಕಾ ಕಾರ ನಂ. ಕೆಎ:28, ಎಂ: 8087 ಅಂತಾ ಇದ್ದು. ಅಲ್ಲೇ ಇದ್ದ ಅದರ ಚಾಲಕನ
ಹೆಸರು ವಿಚಾರಿಸಲಾಗಿ, ಆತನು ತನ್ನ ಹೆಸರು ಸೈಯ್ಯದ ಅಮ್ಜದ್ ಅಲಿ ತಂದೆ ಅಬ್ದುಲ್ ಖುದ್ದುಸ್ ಸಾ: ಮನೆ ನಂ. 4-529/ಎ-2 ಸಂತ್ರಾಸವಾಡಿ ಗುಲಬರ್ಗಾ ಅಂತಾ ತಿಳಿಸಿದನು. ನಂತರ ಕಾರ ಚಾಲಕನು ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹೆಚ್ಚುವರಿ
ಸಂಚಾರಿ ಠಾಣೆ : ಶ್ರೀ ರಾಜೇಂದ್ರ ತಂದೆ
ನಾರಾಯಣರಾವ ಕಠಾರೆ ಸಾ:ಗುಲಬರ್ಗಾ ಇವರು ದಿನಾಂಕ: 27/07/2014 ರಂದು
ಬೆಳಿಗ್ಗೆ 10=40 ಗಂಟೆಯ ಸುಮಾರಿಗೆ ಮನೆಯಿಂದ ಕೇಂದ್ರ ಬಸ್ ನಿಲ್ದಾಣಕ್ಕೆ ಜೇವರ್ಗಿ ರೋಡ ಮುಖಾಂತರ
ಮೋ/ಸೈಕಲ್ ನಂ: ಕೆಎ 32 ಕೆ 808 ನೆದ್ದನ್ನು
ಚಲಾಯಿಸಿಕೊಂಡು ಹೋಗುವಾಗ ಯಾತ್ರಿಕ ನಿವಾಸ ಎದುರಿನ ರೋಡ ಮೇಲೆ ರಾಂಗ ಸೈಡಿನಿಂದ ಎದುರಿನಿಂದ
ಅತಿವೇಗ ಮತ್ತು ಅಲಕ್ಷತನದಿಂದ ಅಟೋರೀಕ್ಷಾ ಚಾಲಕ ತನ್ನ ಅಟೋರೀಕ್ಷಾ ನಂ:ಕೆಎ 32
ಎ
9968 ನೆದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋ/ಸೈಕಲಕ್ಕೆ
ಡಿಕ್ಕಿ ಪಡಿಸಿ ಅಪಘಾತಮಾಡಿ ಗಾಯಗೊಳಿಸಿ ಅಟೋ ಸಮೇತ ಓಡಿ ಹೋಗಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ
ಸಂಚಾರಿ ಠಾಣೆ : ಶ್ರೀ
ಚಂದ್ರಶೇಖರ ತಂದೆ ದಯಾನಂದ ಪಾಟೀಲ ಸಾ: ಭವಾನಿ ಟೆಂಪಲ ಹತ್ತಿರ ಶಹಾಬಜಾರ ಗುಲಬರ್ಗಾ ರವರ ಜೊತೆಗಿದ್ದ ಚಂದ್ರಶೇಖರ
ಇವರನ್ನು ವಿಚಾರಿಸಲು ಅವರು ದಿನಾಂಕ 26-07-2014 ರಂದು ಅಗ್ನಿಶಾಮಕ ಠಾಣೆ
ಸಮೀಪ ಹೊಡ್ಡೆನ ರೋಡ ಮೇಲೆ ರಾತ್ರಿ 11-30
ಗಂಟೆ
ಸುಮಾರಿಗೆ ಆರೋಪಿ ಸಾಗರ ಇತನು ಮೋ/ಸೈಕಲ ನಂಬರ ಕೆಎ-32 ಇಸಿ-1459
ನೇದ್ದನ್ನು
ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಕಟ್ಟ ಹೊಡೆದು ಒಮ್ಮೆಲೆ ಬ್ರೇಕ ಹಾಕಿ
ಮೋ/ಸೈಕಲ ಸ್ಕಿಡ ಮಾಡಿ ಮೋ/ಸೈಕಲ ಮೇಲಿಂದ ತನ್ನಿಂದ ತಾನೆ ಬಿದ್ದು ಗಾಯಹೊಂದಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ಪ್ರಕರಣ :
ನರೋಣಾ
ಠಾಣೆ : ಶ್ರೀಮತಿ ಬಂಡೆಮ್ಮ
ಗಂಡ ಆನಂದರಾಯ ಮೇಲಿನಕೇರಿ ಸಾ: ದೇಗಾಂವ ಗ್ರಾಮ ಹಾವ: ಆಳಂದ ರವರು ಈಗ ಸುಮಾರು 20 ವರ್ಷಗಳ ಹಿಂದೆ
ಇದೆ ಗ್ರಾಮದ ಆನಂದರಾಯ ತಂದೆ ರುಕ್ಕಪ್ಪ ಮೇಲಿನಕೇರಿ ಎಂಬುವವರೊಂದಿಗೆ ಪ್ರೀತಿಸಿ ಮದುವೆಯಾಗಿರುತ್ತೇನೆ.
ಮದುವೆಯಾದ ಸುಮಾರು 7-8 ವರ್ಷಗಳವರೆಗೆ ನನ್ನ ಗಂಡನು ತನ್ನೊಂದಿಗೆ ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು
ಅದೇ ವೇಳೆಯಲ್ಲಿ ನನಗೆ ಒಂದು ಗಂಡು ಮತ್ತು ಹೆಣ್ಣುಮಗು ಹುಟ್ಟಿರುತ್ತದೆ. ನಂತರ ನನಗೆ ತಮ್ಮೊಂದಿಗೆ
ಇಟ್ಟುಕೊಳ್ಳದೆ ಬೇರೆ ಮನೆ ಮಾಡಿಕೊಂಡು ಇರು ಅಂತಾ ನನ್ನೊಂದಿಗೆ ಜಗಳ ಮಾಡುತ್ತಾ ಇದ್ದುದ್ದರಿಂದ ನಾನು
ಬೇರೆ ಮನೆ ಮಾಡಿಕೊಂಡು ದೇಗಾಂವ ಗ್ರಾಮದಲ್ಲಿಯೇ ಇದ್ದು ಈಗ 2007 ನೇ ಸಾಲಿನಿಂದ ಆಳಂದ ಪಟ್ಟಣದ ಭೀಮನಗರ
ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಅಂತಾ ಕೆಲಸ ಮಾಡುತ್ತಿದ್ದರಿಂದ ನನ್ನ ಎರಡು ಮಕ್ಕಳಾದ ಅವಿನಾಶ್
ಮತ್ತು ಅಶ್ವಿನಿ ಇವರುಗಳೊಂದಿಗೆ ಆಳಂದದಲ್ಲಿ ಮನೆ ಮಾಡಿಕೊಂಡು ಇರುತ್ತಿದ್ದೆನೆ. ನನ್ನ ಮಕ್ಕಳ ವಿಧ್ಯಾಭ್ಯಾಸಕ್ಕಾಗಿ
ಹಾಗು ನನ್ನ ಜೀವನ ಸಾಗಿಸಲು ನನಗೆ ಕಷ್ಟವಾಗುತ್ತಿದ್ದರಿಂದ ಹಣದ ಅವಶ್ಯಕತೆ ಇರುವುದರಿಂದ ನನ್ನ ಗಂಡನಿಗೆ
ತನ್ನ ಆಸ್ತಿಯಲ್ಲಿ ನನ್ನ ಪಾಲಿಗೆ ಬರಬೇಕಾದ ಪಾಲು ಕೊಡು ಅಥವಾ ನಮ್ಮನ್ನು ನೋಡಿಕೊ ಅಂತಾ ಆಗಾಗ ಕೇಳುತ್ತಿರುವಾಗ
ಅದಕ್ಕೆ ಅವರು ಒಪ್ಪದೇ ನನಗೆ ವಿನಾಃಕಾರಣವಾಗಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದರು.
ದಿನಾಂಕ 18/07/2014 ರಂದು ನನ್ನ ಗಂಡನಾದ ಆನಂದರಾಯ ಇವರು ತಮ್ಮ ಹೊಲ ಸರ್ವೆ ನಂ. 36 ಹಿಸ್ಸಾ 10
(ಆ) ರಲ್ಲಿ ಕೆಲಸ ಮಾಡುತ್ತಿರುವಾಗ ನಾನು ಅಲ್ಲಿಗೆ ಹೋಗಿ ಅವರಿಗೆ ಈ ಮೇಲಿನಂತೆ ಆಸ್ತಿಯಲ್ಲಿ ಪಾಲು
ಕೊಡು ಅಂತಾ ಕೇಳುತ್ತಿರುವಾಗ ನನಗೆ ಏ ರಂಡಿ ಬೋಸಡಿ ಅಂತಾ ಅವಾಚ್ಚ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ
ಮಾಡಿ ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment