Police Bhavan Kalaburagi

Police Bhavan Kalaburagi

Monday, July 28, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 229/2014 ಕಲಂ. 87 ಕೆ.ಪಿ. ಕಾಯ್ದೆ (Karnataka Police Act).
ದಿನಾಂಕ 27-07-2014 ರಂದು ಮದ್ಯಾಹ್ನ 2-30 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯ ಮಾರಿಕ್ಯಾಂಪ್ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ನಡೆಯುತ್ತಿದ್ದಾಗ್ಗೆ ಶ್ರೀ. ಉದಯ ರವಿ ಪಿ.ಎಸ್.ಐ. ಕಾರಟಿ ಮತ್ತು ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 7 ಜನ ಆರೋಪಿತರನ್ನು ಹಿಡಿದುಕೊಂಡು ಸಿಕ್ಕಿ ಬಿದ್ದ ಆರೋಪಿತರಿಂದ ಇಸ್ಪೀಟು ಜೂಜಾಟದ ಸಾಮಗ್ರಿಗಳು ಹಾಗೂ ನಗದು ಹಣ ಒಟ್ಟು ರೂ-6,150=00 ಗಳನ್ನು ವಶ ಪಡಿಸಿಕೊಂಡು ಪ್ರಕರಣ  ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 68/2014 ಕಲಂ. 354, 420 ಐ.ಪಿ.ಸಿ:.
ದಿನಾಂಕ 27-07-2014 ರಂದು ಮಧ್ಯಾಹ್ನ 2-00 ಗಂಟೆಗೆ ಫಿರ್ಯಾದಿದಾರರಾದ  ಶ್ರೀ ರಾಜೇಶ ತಂದೆ ಸೋಮಪ್ಪ ಅಂಗಡಿ, ವಯಸ್ಸು 40 ವರ್ಷ, ಜಾ: ಲಿಂಗಾಯತ, ಉ: ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ, (ಸ್ವಾಭಿಮಾನಿ ಬಣ), ವಾರ್ಡ್ ನಂ. 21, ಮುರಾಹರಿನಗರ, ಬೈಪಾಸ್ ರೋಡ್, ಅಂಬೇಡ್ಕರ್ ನಗರ ವೃತ್ತ, ಗಂಗಾವತಿ-583 227, ಜಿ: ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕೃತ ಫಿರ್ಯಾದಿ ನೀಡಿದ್ದು ಸಾರಾಂಶವೇನೆಂದರೆ, ತಾವರಗೇರಾ ಗ್ರಾಮದಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಕಳೆದ ಹಲವಾರು ತಿಂಗಳಿನಿಂದ ಗ್ರಾಮದ ಸಾರ್ವಜನಿಕರನ್ನು ಹಾಗೂ ಮುಗ್ದರನ್ನು ಮೂಡನಂಬಿಕೆಯಡಿಯಲ್ಲಿ ವಂಚಿಸಿ ಅವರಿಂದ ಹಣ ಲೂಟಿಮಾಡುವುದಲ್ಲದೇ ಮಾರಣಾಂತಿಕ ಕಾಯಲೆಗಳಾದ ಕ್ಯಾನ್ಸರ್ ಹಾಗೂ ಏಡ್ಸ್ ರೋಗಗಳನ್ನು ಗುಣಪಡಿಸುವುದಾಗಿ ಹೇಳಿ ಕತ್ತೆ ಲದ್ದಿ ಹಾಗೂ ನಾಯಿಯ ಲದ್ದಿಯನ್ನು ಒಣಗಿಸಿ ದಿವ್ಯ ಔಷಧಿ ಎಂದು ರೋಗಿಗಳಿಗೆ ನೀಡಿ ಸಾವಿರಾರು ರೂ ಗಳನ್ನು ಪಡೆಯುತ್ತಿದ್ದಾನೆ.ಅಲ್ಲದೇ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಹೊತ್ತು ಬರುವ ಮಹಿಳೆಯರಿಗೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವುದಾಗಿ ನಂಬಿಸಿ ಪೂಜೆಯ ಹೆಸರಿನಲ್ಲಿ ಅವರನ್ನು ತನ್ನ ಕಾಮ ತೃಷೆಗಾಗಿ ಬಳಸಿಕೊಳ್ಳುತ್ತಿದ್ದಾನೆ. ಇದನ್ನು ಮಹಿಳೆಯರು ಪ್ರಶ್ನಿಸಲು ಮುಂದಾದರೆ ನನ್ನ ಮೈಮೇಲೆ ದೇವಿ ಬರುತ್ತಾಳೆ. ಏನಾದರೂ ಮಾಡಿದರೇ ನಿನ್ನ ಪ್ರಾಣಕ್ಕೆ ಸಂಚಕಾರವಿದೆ ಎಂದು ಹೆದರಿಸುತ್ತಿದ್ದಾನೆ. ಇವರ ಈ ಕೃತ್ಯದಿಂದ ಗ್ರಾಮ ಹಾಗೂ ಸುತ್ತಮುತ್ತಲಿನ ನೂರಾರು ಅಮಾಯಕ ಹೆಣ್ಣು ಮಕ್ಕಳು ಜೀವನವು ಹಾಳಾಗಿದೆ ಮತ್ತು ಹಾಳಾಗುತ್ತಿದೆ. ಕಾರಣ ತಾವು ಕೂಡಲೇ ವಂಚಕ ಹಾಗೂ ಕಾಮುಕ ಯಂಕಣ್ಣನನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕೇಳಿಕೊಳ್ಳುತ್ತೆವೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ  ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 142/2014 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ. 27-072014 ರಂದು 12-00 ಪಿ.ಎಂ.ಕ್ಕೆ ಫಿರ್ಯಾದಿದಾರರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮೋಟಾರ ಸೈಕಲ್ ನಂ. ಕೆ.ಎ.37/ಕ್ಯೂ.6127 ನೇದ್ದನ್ನು ಸಂಜಯಕುಮಾರ ಸಾ. ಗಿಣಿಗೇರಾ ಇವರು ಮೋ. ಸೈ. ಹಿಂದೆ ಮಹೇಶಕುಮಾರ ಸಾ. ಗಿಣಿಗೇರಾ ಇವರನ್ನು ಹಿಂದೆ ಕೂಡಿಸಿಕೊಂಡು ಗಂಗಾವತಿಯಿಂದ ಗಿಣಿಗೇರಾಕ್ಕೆ ಹೋಗುತ್ತಿರುವಾಗ ಗಂಗಾವತಿ ಹುಲಗಿ ರಸ್ತೆಯ ಮೇಲೆ ಹೊಸಬಂಡಿಹರ್ಲಾಪುರ ಮತ್ತು ಹಳೆ ಬಂಡಿಹರ್ಲಾಪುರ ಮದ್ಯದಲ್ಲಿ ಬಾಸ್ಕರರಾವ್ ಇವರ ಜಮೀನ ಹತ್ತಿರ ಮೋಟಾರ ಸೈಕಲ್‌ನ್ನು ಅತಿವೇಗವಾಗಿ ಹಾಗೂ ಅಲಕ್ಷತನದಿಂದ ಅಡ್ಡಾದಿಡ್ಡ  ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಒಮ್ಮೇಲೆ ಸ್ಕಿಡ ಮಾಡಿಕೊಂಡು ಮೋಟಾರ ಸೈಕಲ್ ಸಮೇತ ಬಿದ್ದು ಅಪಘಾತ ಮಾಡಿಕೊಂಡಿದ್ದು, ಮೋಟಾರ ಸೈಕಲ್ ಸವಾರ ಸಂಜಯಕುಮಾರ ಮತ್ತು ಹಿಂದೆ ಕುಳಿತ ಮಹೇಶಕುಮಾರ ಇವರಿಗೆ ಸಾದಾ ಮತ್ತು ಬಾರಿ ಸ್ವರೂಪದ ಗಾಯ ಪೆಟ್ಟುಗಳಾಗಿರುತ್ತದೆ ಅಂತಾ ಮುಂತಾಗಿದ್ದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.
4) ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 171/2014 ಕಲಂ. 143, 147, 323, 397, 307, 504, 506 ಸಹಿತ 149  ಐ.ಪಿ.ಸಿ:.
ಇಂದು ದಿನಾಂಕ 27-07-2014 ರಂದು ರಾತ್ರಿ 10-30 ಗಂಟೆಗೆ ಶ್ರೀ ಮುಕ್ಕಣ್ಣ ತಂದೆ ಬಸಪ್ಪ ಕತ್ತಿ ವಯ 29 ವರ್ಷ ಜಿಲ್ಲಾ ವರದಿಗಾರರು ಪಬ್ಲಿಕ್ ಟಿ.ವಿ. ಕೊಪ್ಪಳ ಸಾ: ಹಿರೇಜಂತಕಲ್, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನ ಪೂಜಾರಿ ಯಂಕಣ್ಣ ಎಂಬುವವರು ಹಲವಾರು ದಿನಗಳಿಂದ ಗ್ರಾಮದ ಹಾಗೂ ಅಕ್ಕ-ಪಕ್ಕದ ಗ್ರಾಮ ದಸಾರ್ವಜನಿಕರನ್ನು ಹಾಗೂ ಮುಗ್ದರನ್ನು,  ಮಹಿಳೆಯರನ್ನು ಮೂಡನಂಬಿಕೆಯಿಂದ ನಂಬಿಸಿ ಅವರಿಗೆ ವಂಚಿಸಿ  ಮಾರಕ ಕಾಯಿಲೆಗಳಾದ ಏಡ್ಸ್, ಕ್ಯಾನ್ಸರ್ ಇನ್ನು ಮುಂತಾದ ರೋಗಗಳನ್ನು ಗುಣಪಡಿಸುವುದಾಗಿ ಹೇಳಿ ಅವರಿಗೆ ಹಂದಿ, ಕತ್ತೆ, ನಾಯಿ ಲದ್ದಿಯನ್ನು ಒಣಗಿಸಿ ಅದನ್ನು ಮಾರಕ ರೊಗಕ್ಕೆ ತುತ್ತಾದವರಿಗೆ ಔಷಧಿ ಎಂದು ನಂಬಿಸಿ ನೀಡುತ್ತಾ ಸಾವಿರಾರು ರೂಪಾಯಿಗಳನ್ನು ಪಡೆಯುತ್ತಿದ್ದು ಮತ್ತು ದೇವಸ್ಥಾನಕ್ಕೆ ಬರುವ ಮಹಿಳೆಯರು, ಯುವತಿಯರಿಗೆ ಅವರ ಸಮಸ್ಯೆಗಳನ್ನು ಪೂಜೆ ಮುಖಾಂತರ ಗುಣಪಡಿಸುವುದಾಗಿ ಮತ್ತು ಪರಿಹಾರ ಒದಗಿಸುವುದಾಗಿ ನಂಬಿಸಿ ಅವರಿಗೆ ಮೋಸದಿಂದ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಲೈಂಗಿಕ ದೌರ್ಜನ್ಯ ನೀಡುತ್ತಿರುವ ಬಗ್ಗೆ  ಪಬ್ಲಿಕ್ ಟಿ.ವಿ. ಯಲ್ಲಿ ವರದಿ ಮಾಡಿದ್ದು, ಸದರಿ ವರದಿಗೆ ಸಂಬಂಧಿಸಿದಂತೆ ಗ್ರಾಮದಲ್ಲಿಯ ಬೆಳವಣಿಗೆ ಕುರಿತು ಇಂದು ದಿನಾಂಕ 27-07-2014 ರಂದು ಸಂಜೆ 4-00 ಗಂಟೆ ಸುಮಾರಿಗೆ ತಾವರಗೇರಾ ಗ್ರಾಮದಲ್ಲಿ ಚಿತ್ರಿಕರಿಸುತ್ತಿರುವಾಗ ಬನಶಂಕರಿ ದೇವಸ್ಥಾನದ ಯಂಕಣ್ಣ ಪೂಜಾರಿಯ ಬೆಂಬಲಿಗರು, ದೇವಸ್ಥಾನದ ಸಮಸಿತಿಯ ಸದಸ್ಯರು ಹಾಗೂ ಇನ್ನಿತರರು ಅಕ್ರಮಕೂಟ ರಚಿಸಿಕೊಂಡು ಬಂದು ತಮ್ಮ ಮೇಲೆ ಹಲ್ಲೆ ಮಾಡಿ ತಮ್ಮ ಹತ್ತಿರ ಇದ್ದ ಕ್ಯಾಮ, ಮೈಕ್, ಮೈಕ್, ಕೇಬಲ್, ಕ್ಯಾಮರ ಬ್ಯಾಟಿ, ಮೊಬೈಲ್, ಪರ್ಸನಲ್ಲಿದ್ದ ಹಣ ರೂ. 3,200-00 ಹಾಗೂ 10 ಗ್ರಾಂನ ಬಂಗಾರದ ಸರವನ್ನು ಕಸಿದುಕೊಂಡು ಅವಾಚ್ಯ ಶಬ್ದಗಳಿಂದ ಏ ಸೂಳೆ ಮಕ್ಕಳೆ ನೀನು ನಮ್ಮ ಪೂಜಾರಿಯ ಬಗ್ಗೆ ಏನು ಸುದ್ದಿ  ಪ್ರಸಾರ ಮಾಡುತ್ತೀರಲೇ  ನಿಮ್ಮನ್ನು ಮತ್ತು ನಿಮ್ಮಲ್ಲಿರುವ ವಸ್ತುಗಳ ಸಮೇತ ಇಲ್ಲಿಯೇ ಜೀವಂತವಾಗಿ ಸುಟ್ಟು ಬಿಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿ ಕೈಯಿಂದ ಮತ್ತು ಕಾಲಿನಿಂದ ಹೊಡಿ-ಬಡಿ ಮಾಡಿರುತ್ತಾರೆ ಅವರಿಂದ ಜೀವ ಭಯದಿಂದ ತಪ್ಪಿಸಿಕೊಂಡು ಬಂದಿರುತ್ತೇವೆ.  ಸದರಿ  ಯಂಕಣ್ಣ ಸ್ವಾಮಿ ಹಾಗೂ ಆತನ ಸಂಬಂಧಿಕರು, ಬೆಂಗಲಿಗರು, ಬನಶಂಕರಿ ದೇವಸ್ಥಾನದ ಸಮಿತಿಯವರು ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಫಿರ್ಯಾದಿ  ಸಾರಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
5) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 69/2014 ಕಲಂ. 143, 147, 148, 354, 504, 506(2) ಸಹಿತ 149  ಐ.ಪಿ.ಸಿ:.
ಇಂದು ದಿನಾಂಕ 27-07-2014 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಶಂಕರ ತಂದೆ ನ್ಯಾಮಯ್ಯ ಇಲ್ಲೂರು, ವಯಸ್ಸು 40 ವರ್ಷ, ಜಾ: ವೈಶ್ಯ, ಉ: ಕಿರಾಣಿ ವ್ಯಾಪಾರ, ಸಾ: ತಾವರಗೇರಾ ಇವರು ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ತಾವರಗೇರಾದ 1) ಮಂಜುನಾಥ ತಂದೆ ಶ್ಯಾಮಣ್ಣ ಕಲಾಲ 2) ಶ್ಯಾಮೀದ್ ಸಾಬ ತಂದೆ ಗುಡುಸಾಬ ಮೆಣೇದಾಳ ಹಾಗೂ 3) ಬಸವರಾಜ ತಂದೆ ಮರಿಯಪ್ಪ ಬುನ್ನಟ್ಟಿ ಸಾ:ಸಿದ್ದಾಪುರ ಇವರುಗಳ ನೀಡಿದ ಸುಳ್ಳು ಸುದ್ಧಿಯನ್ನು ಯಾವುದೇ ಸತ್ಯಾಸತ್ಯತೆ ತನಿಖೆ ಮಾಡದೇ ಪಬ್ಲಿಕ್ ಟಿ.ವಿ.ಯಲ್ಲಿ ನಿರೂಪಕಿಯಾದ 4) ರಾಧಾ ಹಿರೇಗೌಡರ ಇವರು ತಾವರಗೇರಾ ಗ್ರಾಮದ ನಾಗರಿಕರೆಲ್ಲ ಪುರುಷತ್ವ ಇಲ್ಲದವರು ಎಂದು ಸಂಭೊದಿಸಿದ್ದಲ್ಲದೇ ಟಚಿಂಗ್ ಸ್ವಾಮಿ ಹತ್ತಿರ ನಿಮ್ಮ ಹೆಣ್ಣು ಮಕ್ಕಳನ್ನು ಕಳಿಸುತ್ತಿರಲ್ಲಾ ನಿಮ್ಮಲ್ಲಿ ಯಾರಿಗೂ ಪುರುಷತ್ವ ಇಲ್ಲವೇ ಎಂಬ ಹೇಳಿಕೆಯನ್ನು ಸಮಸ್ತ ಕನ್ನಡಿಗರು ನೋಡುವಂತಹ ದೃಶ್ಯ ಮಾಧ್ಯಮ ಪಬ್ಲಿಕ್ ಟಿ.ವಿ.ಯಲ್ಲಿ ಹೇಳಿಕೆ ನೀಡಿ ಗ್ರಾಮದವರ ಧಾರ್ಮಿಕ ಭಾವನೆಗಳನ್ನು ನಿಂದಿಸಿರುತ್ತಾರೆ (5) ಮುಕ್ಕಣ್ಣ ಕತ್ತಿ ಜಿಲ್ಲಾ ವರದಿಗಾರರು, ಪಬ್ಲಿಕ್ ಟಿ.ವಿ. ಇವರು ತಮ್ಮ ಓಮ್ನಿ ವಾಹನ ಸಂ. ಕೆ.ಎ.37/ಎಂ-1668 ನೇದ್ದರಲ್ಲಿ ತಮ್ಮೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೊಪ್ಪಳದ ಜಿಲ್ಲಾಧ್ಯಕ್ಷರಾದ (6) ರಾಜೇಶ ಅಂಗಡಿ ಹಾಗೂ (7) ಮಂಜುನಾಥ ಜಂಗರ್ (8) ಹೊನ್ನಪ್ಪ ನಾಯ್ಕ (9) ನಾಗರಾಜ ಗೂಗಿಬಂಡಿ ಹಾಗೂ ಇನ್ನಿತರ ಸಂಘಟನೆಗಳೊಂದಿಗೆ ಸೇರಿ ತಾವರಗೇರಾ ಠಾಣೆಗೆ ಆಗಮಿಸಿ ಯಂಕಣ್ಣ ಇವರ ಮೇಲೆ ‘’ಟಚಿಂಗ್ ಸ್ವಾಮಿ’’ ಎಂಬ ಕಾರ್ಯಕ್ರಮದಲ್ಲಿ ತೋರಿಸಿ ಉದ್ದೆಪೂರ್ವಕವಾಗಿ ಪ್ರಕರಣದ ದಾಖಲಿಸಿರುತ್ತಾರೆ. ಅಲ್ಲದೇ ಶ್ರಿ ಬನಶಂಕರಿ ದೇವಸ್ಥಾನದ ಮುಂದೆ ಹೋಗಿ ಅಲ್ಲಿ ಧರಣಿ ಕುಳಿತು ರಾಜೇಶ ಅಂಗಡಿ ನಾಗರಾಜ ಗೂಗಿಬಂಡಿ ಮತ್ತು ಹೊನ್ನಪ್ಪ ನಾಯಕ ಇವರು ತಮ್ಮ ಕಾಲಲ್ಲಿದ್ದ ಚಪ್ಪಲಿಯನ್ನು ದೇವಸ್ಥಾನದ ಮೇಲೆ ಎಸೆದಿರುತ್ತಾರೆ ಗುಡಿಗೆ ಬಂದ ಹೆಣ್ಣುಮಕ್ಕಳಿಗೆ ಆವಾಚ್ಯವಾಗಿ ಬೈದು ಅವರ ಕೈಹಿಡಿದು ಎಳೆದಾಡಿ ಹೊರಗೆ ಹಾಕಿರುತ್ತಾರೆ. ಅಲ್ಲದೇ ತಮ್ಮ ಹಿಂದೆ ಪಬ್ಲಿಕ್ ಟಿ.ವಿ. ಇದೆ ಅಂತಾ ಅನ್ನುತ್ತಾ ಸಾರ್ವಜನಿಕರಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಮಂಜುನಾಥ ಜಂಗರ್ ಇವನು ತನ್ನ ಹತ್ತಿರವಿದ್ದ ಚಾಕುವನ್ನು ತೋರಿಸಿ ಹೆದರಿಸಿ ಸಾಯಿಸುತ್ತೆನೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಗೊಂಡಿರುತ್ತಾರೆ.
6) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 69/2014 ಕಲಂ 341, 354, 504 ಐ.ಪಿ.ಸಿ ಮತ್ತು 8 , 10 ಪೋಕ್ಸೋ ಕಾಯ್ದೆ-2012 ಮತ್ತು 3 (1) (11) ಎಸ್.ಸಿ.ಎಸ್.ಟಿ ಯ್ಯಾಕ್ಟ್ -1989.
ದಿನಾಂಕ-27-07-2014 ರಂದು ರಾತ್ರಿ 10-45 ಗಂಟೆಯ ಸುಮಾರಿಗೆ ಪಿರ್ಯಾದಿದಾರಳಾದ ವಯಾ-17 ವರ್ಷ ಇವರು ಠಾಣೆಯಲ್ಲಿ ಒಂದು ಲಿಖಿತ ಪಿರ್ಯಾದಿಯನ್ನು ಹಾಜರ ಪಡಿಸಿದ್ದು ಸದರಿ ಪಿರ್ಯಾದಿಯ ಸಾರಾಂಶವೆನಂದರೆ ಪಿರ್ಯಾದಿದಾರರು ಗಂಗಾವತಿಯ ಕಾಲೇಜಿನಲ್ಲಿ  ಪಿ.ಯು.ಸಿ ವಿಧ್ಯಾಭ್ಯಾಸ ಮಾಡುತ್ತಿದ್ದು ಪ್ರತಿ ದಿನ ಹೋಗುವಂತೆ ದಿನಾಂಕ-26-07-2014 ರಂದು ಕಾಲೇಜೀಗೆ ಹೋಗಿ ವಾಪಾಸ ಊರಿಗೆ ಬರುತ್ತಿರುವಾಗ್ಗೆ ಉಳೆನೂರ ಗ್ರಾಮದ ಸಣ್ಣೆಪ್ಪ ತಂದಿ ಅಯ್ಯಪ್ಪ ಕಾರಟಗಿ ಮತ್ತು ಕಕ್ಕರಗೊಳ ಗ್ರಾಮದ ಶಿವಪ್ಪ ತಂದಿ ವೀರುಪಣ್ಣ ಗಡಗಿ ಇವರು ಪಿರ್ಯಾದಿದಾರರ ಹಿಂದೆ ಬೆನ್ನೂ ಹತ್ತಿ ಬಂದು ಪಿರ್ಯಾದಿದಾರರು ಬಸ್ಸು ಹತ್ತುತ್ತಿರುವಾಗ್ಗೆ ಇಬ್ಬರು ಆಪಾದಿತರು ಬಂದು ಪಿರ್ಯಾದಿದಾರರ ಮೈ ಮುಟ್ಟಿ ಹಿಂದೆ ಸರಿಸಿ ತಾವು ಬಸ್ಸು ಹತ್ತಿದರು ನಂತರ ಬಸ್ಸಿನಲ್ಲಿ ಪಿರ್ಯಾದಿದಾರರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾ ಅವರನ್ನು ಉದ್ದೇಶಿಸಿ ಬೇರೆಯವರ ಮೇಲಾಸಿ ಅಶ್ಲೀಲ ಶಬ್ದಗಳನ್ನು ಮಾತನಾಡಿ ನಂತರ ಸಿದ್ದಾಪೂರ ಗ್ರಾಮದಲ್ಲಿ ಪಿರ್ಯಾದಿದಾರರು ಬಸ್ಸನ್ನು ಇಳಿದು ತಮ್ಮ ಊರಿಗೆ ಹೋಗುವ ಖಾಸಗಿ ವಾಹನವನ್ನು ಹತ್ತಲು ಹೋಗುತ್ತಿರುವಾಗ್ಗೆ ಆಪಾದಿತರು ಇಬ್ಬರು ಬಂದು ಪಿರ್ಯಾದಿದಾರನ್ನು ಮಾನಭಂಗ ಮಾಡುವ ಉದ್ದೇಶದಿಂದ ತಡೆದು ನಿಲ್ಲಿಸಿ ಕೈ ಹಿಡಿದು ಎಳೆದಾಡಿ ಅಶ್ಲೀಲವಾಗಿ ಮಾತನಾಡಿದ್ದು ಮತ್ತು ಕಕ್ಕರಗೊಳ ಗ್ರಾಮದ ಶಿವಪ್ಪ ತಂದಿ ವೀರುಪಣ್ಣ ಗಡಗಿ ಇತನು ಪಿರ್ಯಾದಿದಾರರಿಗೆ ಜಾತಿ ನಿಂದನೆ ಮಾಡಿ ಬೈದಿರುತ್ತಾನೆ ನಂತರ ಅಲ್ಲಿ ಇದ್ದ ಪಿರ್ಯಾದಿದಾರರ ಸಂಬಂದಿಕಳು ಮತ್ತು ಇತರೆ ಜನರು ಸದರಿ ಆಪಾದಿತರನ್ನು ಬೈದು ಕಳುಹಿಸಿರುತ್ತಾರೆ ಈ ಬಗ್ಗೆ ಪಿರ್ಯಾದಿದಾರರು ತಮ್ಮ ತಾಯಿಗೆ ತಿಳಿಸಿ ಅವರ ತಾಯಿಯು ತಮ್ಮ ಸಂಬಂದಿಕರಿಗೆ ಮತ್ತು ಅವರ ಹಿರಿಯರಿಗೆ ತಿಳಿಸಿ ಇಂದು ಠಾಣೆಗೆ ಬಂದು ಪಿರ್ಯಾದಿ ನೀಡಿದ್ದು ಆಪಾದಿತರ ವಿರುದ್ದ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಬರೆದುಕೊಟ್ಟ ಪಿರ್ಯಾದಿಯನ್ನು ಪಡೆದುಕೊಂಡು ಪಿರ್ಯಾದಿಯ ಸಾರಾಂಶದ ಮೇಲಿಂದ ಠಾಣೆಯಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 

No comments: