ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಗೌತಮ ತಂದೆ ಅಂಬರಾವ್ ಬಬಲಾದ ಸಾಃ ಮನೆ ನಂ. ಎಲ್.ಐ.ಜಿ 06, 01 ನೇ ಹಂತ ಆದರ್ಶ ನಗರ
ಗುಲಬರ್ಗಾ ಇವರು ದಿನಾಂಕಃ 09/08/2014 ರಂದು ರಾತ್ರಿ 11:30 ಪಿ.ಎಂ. ಕ್ಕೆ ತಮ್ಮ ಮೊಬೈಲ್ ಅಂಗಡಿಗೆ ಎಂದಿನಂತೆ ಶಟರ್ ಲಾಕ್
ಮಾಡಿಕೊಂಡು ಮನೆಗೆ ಹೋಗಿದ್ದು ಬೆಳಗ್ಗೆ ದಿನಾಂಕಃ 10/08/2014 ರಂದು 05:30 ಎ.ಎಂ. ಸುಮಾರಿಗೆ
ನಮ್ಮ ಶಟರ ಅಂಗಡಿಯ ಮಾಲಿಕರಾದ ಕೋಮಲ ಮನೆಗೆ ಬಂದು ನಿಮ್ಮ ಮೊಬೈಲ್ ಅಂಗಡಿ ಶಟರ ಯಾರೋ ಅರ್ದ
ಎತ್ತಿದ್ದಾರೆ ಕಳ್ಳತನ ಆಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಅಣ್ಣ ಮೊಬೈಲ್
ಅಂಗಡಿಗೆ ಬಂದು ನೋಡಲು ಅಂಗಡಿಯ ಶಟರ್ ಬೆಂಡ್ ಮಾಡಿದ್ದು ಒಳಗಡೆ ಹೋಗಿ ಚೆಕ್ ಮಾಡಿ ನೋಡಲು
ಕೌಂಟರನಲ್ಲಿದ್ದ ನಗದು ಹಣ 20,000/- ರೂ. ಹಾಗು 06 ಚೈನ ಕಂಪನಿ ಮೊಬೈಲ್, 04 ರಿಲೇನ್ಸ್ ಕಂಪನಿ
ಮೊಬೈಲ್ ಹಾಗು 01 ಎಂ.ವಿ.ಎಲ್ ಕಂಪನಿ ಮೊಬೈಲ್ ಮತ್ತು ಬ್ಯಾಂಕ್ ಪಾಸ್ ಬುಕ್, ಎ.ಟಿ.ಎಂ. ಕಾರ್ಡ.
ಡಿ.ಎಲ್, ಪ್ಯಾನಕಾರ್ಡ, ಓಟಿಂಗ್ ಕಾರ್ಡ ಹಾಗು ನನ್ನ ಅಣ್ಣನ ಚೆಕ್ ಬುಕ್ ಇತ್ಯಾದಿ ಕಾಗದ ಪತ್ರಗಳು
ಹೀಗೆ ಒಟ್ಟು 23,000/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು
ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಮಾಡಿದ ಪ್ರಕರಣ :
ಮಹಿಳಾ ಠಾಣೆ : ಕುಮಾರಿ ದಿನಾಂಕ; 07-08-2014 ರಂದು ನಾನು ಪುಸ್ತಕ ತರಲೆಂದು ಕಡಗಂಚಿಯಿಂದ ಗುಲಬರ್ಗಾದ ಯುನಿರ್ವಸಿಟಿಗೆ ಬಂದು ನನ್ನ ಪರಿಚಯದ ಮಹೇಶ ಇತನ ಬಳಿಗೆ ಹೋದಾಗ ನನ್ನ ಪರಿಚಯದ ಲೊಕೇಶ ಇತನು ನನಗೆ ಪೋನ ಮಾಡಿ ಯುನಿರ್ವಸಿಟಿಗೆ ಬಂದು ನನಗೆ ಮತ್ತು ಮಹೇಶ ಇತನಿಗೆ ಮಾತನಾಡಿಸಿ ಹೋದನು. ನನ್ನ ಲ್ಯಾಪಟಾಪ ದುರಸ್ತಿಗೆ ಕೊಟ್ಟಿದ್ದು ಅದನ್ನು ತೆಗೆದುಕೊಂಡು ಹೋಗುವ ಕುರಿತು ನಾನು ಮತ್ತು ಮಹೇಶ ಹೋಗಿದ್ದು ಲ್ಯಾಪಟಾಪ ದುರಸ್ತಿ ಆಗದ ಕಾರಣ ನಾನು ಮಹೇಶ ಕೂಡಿ ಅಪ್ಪಾ ಪಾರ್ಕನಲ್ಲಿ ಕುಳಿತುಕೊಂಡಾಗ ಲೊಕೇಶ ಇತನು ಮತ್ತೆ ಪೋನ ಮಾಡಿ ನಾವಿರುವಲ್ಲಿಗೆ ಬಂದು ನಿನಗೆ ವಿಶ್ವ ವಿದ್ಯಾಲಯಕ್ಕೆ ಹೋಗುವುದು ತಡವಾಗುತ್ತದೆ. ನನ್ನ ಕಾರಿನಲ್ಲಿ ನಿನಗೆ ಬಿಡುತ್ತೇನೆ ಅಂತಾ ತಿಳಿಸಿದನು. ಸಾಯಾಂಕಾಲ 7 ಗಂಟೆಯ ಸುಮಾರಿಗೆ ಅಪ್ಪಾ ಪಾರ್ಕದಿಂದ ಕಾರನಲ್ಲಿ ಕರೆದುಕೊಂಡು ಹೋದನು. ಸ್ವಲ್ಪ ದೂರ ಹೋದ ನಂತರ ಲೊಕೇಶ ಇತನು ನನಗೆ ತನ್ನ ಹತ್ತಿರವಿದ್ದ ಜ್ಯೂಸ ಕುಡಿಸಿದನು. ಅದರಿಂದ ನನಗೆ ಮತ್ತು ಬರಲು ಶುರುವಾಗಿ ಏನು ಗುರುತಿಸುವಷ್ಟು ಹುಷಾರಿಕೆಯನ್ನು ಕಳೆದುಕೊಂಡೆ. ನನ್ನನ್ನು ಎಲ್ಲಿಗೋ ಕರೆದುಕೊಂಡು ಹೋಗಿ ಹಾಸ್ಟಲ ಅಂತಾ ಹೇಳಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಮದ್ಯ ರಾತ್ರಿ ನನಗೆ ಎಚ್ಚರಗೊಂಡಾಗ ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ಲೊಕೇಶ ಇತನು ನನಗೆ ಚಾಕು ತೋರಿಸಿ ಬಲವಂತವಾಗಿ ದೈಹಿಕ ಸಂಬೋಗ ಮಾಡಿದ್ದಾನೆ ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನಗೆ ಮತ್ತು ನಿಮ್ಮ ಕುಟುಂಬದವರಿಗೆ ಕೊಲೆ ಮಾಡುತ್ತೇನೆ ಅಂತಾ ಜೀವದ ಬೆದರಿಕೆ ಹಾಕಿದ್ದಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ
ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12/08/2014 ರಂದು ಭೂಸನೂರ ಗ್ರಾಮದ
ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ
ನಡೆಸುತ್ತಿದ್ದಾನೆ ಅಂತ ಮಾಹಿತಿ ಮೇರೆಗೆ ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ
ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಭೂಸನೂರ ಗ್ರಾಮಕ್ಕೆ ಹೋಗಿ ಬಸವೇಶ್ವರ ಸರ್ಕಲ ಮರೆಯಲ್ಲಿ ನಿಂತು ನೋಡಲಾಗಿ ಡಾಂಬರ ರಸ್ತೆಯ
ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ
8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ
ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು
ದಾಳಿ ಮಾಡಿ ಹಿಡಿದು ವಿಚಾರಿಸಲು ಗೈಬಗಿರಿ ತಂದೆ ಗೊವಿಂದಗಿರಿ ಗೋಸಾಯಿ ಸಾ|| ಭೂಸನೂರ ಅಂತ
ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 330/-, 02] ಒಂದು ಮಟಕಾ ಅಂಕಿ
ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಘಾ ಠಾಣೆಗೆ ಬಂದು ಪ್ರಕರಣ
ದಾಖಲಿಸಲಾಗಿದೆ.
ಎ.ಟಿ.ಎಮ್. ಕಳವು ಮಾಡಲು ಪ್ರಯತ್ನ
ರೋಜಾ ಠಾಣೆ : ಸ್ಟೇಟ ಬ್ಯಾಂಕ ಆಫ್ ಹೈದ್ರಾಬಾದ ದರ್ಗಾ
ಬ್ರಾಂಚದ ಬ್ರಾಂಚ ಬ್ಯಾಂಕ ಮುಂದುಗಡೆ ಒಂದು ಎ.ಟಿ.ಎಮ್ ಇದ್ದು ಎ.ಟಿ.ಎಮ್ . ನಲ್ಲಿ ಸಿ.ಸಿ. ಟಿವಿ ಕ್ಯಾಮರಾ ಸಹ ಇದ್ದು
ಪ್ರತಿ ನಿತ್ಯ ನಾನು ಸಿಸಿ ಕ್ಯಾಮರಾವನ್ನು ಪರಿಶೀಲನೆ ಮಾಡುವ ಕಾಲಕ್ಕೆ ದಿನಾಂಕ: 28/07/2014
ರಂದು ಬೆಳಗಿನ ಜಾವ 5:05 ಎಎಮ ದಿಂದ 6:15 ಎಎಮ್ ಅವಧಿಯಲ್ಲಿ ನಮ್ಮ ದರ್ಗಾ ಬ್ರಾಂಚ ಎದುರುಗಡೆ
ಇರುವ ಎಸ.ಬಿ.ಹೆಚ. ಎ.ಟಿ.ಎಮ್ ದಲ್ಲಿ ಒಬ್ಬ ಅಪರಿಚಿತ ಕಳ್ಳನು ಎ.ಟಿ.ಎಮ್ ಕಳುವು ಮಾಡಲು
ಎ.ಟಿ.ಎಮ್ ದಲ್ಲಿ ಬಂದು ಎ.ಟಿ.ಎಮ್ ದ ವೈರಗಳನ್ನು ಕಟ್ ಮಾಡಿ ಎ.ಟಿ.ಎಮ್ ದ ಮೇಲಿನ ಕವರ ಸಹ
ತೆರೆದು ಒಳಗಡೆ ಇದ್ದ ಸೇಫ ಲಾಕರ ಬರದೇ ಇರುವದರಿಂದ ಯಥಾ ಪ್ರಕಾರವಾಗಿ ವೈರಗಳನ್ನು ಮತ್ತು
ಎ.ಟಿ.ಎಮ್ ಬಾಕ್ಸ್ ಗಳನ್ನು ಯಾವುದೇ ರೀತಿ ಒಡೆದು ಹಾಳು ಮಾಡದೇ ಮುಚ್ಚಿ ಹೋಗಿದ್ದು ಯಾವುದೇ
ರೀತಿಯಿಂದ ಎ.ಟಿ.ಎಮ್ ದಲ್ಲಿ ಹಣ ವಗೈರೆ
ಕಳುವುವಾಗಿರುವದಿಲ್ಲ. ಅಂತಾ ಶ್ರೀ ರಾಮನಗೌಡ ಶಿವರಾಯಗೌಡ ಬಿರಾದಾರ ಉ: ಬ್ರಾಂಚ ಮ್ಯಾನೇಜರ ದರ್ಗಾ
ಬ್ರಾಂಚ ಗುಲಬರ್ಗಾ ಇವರು ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಅಪಘಾತ ಪ್ರಕರಣ :
ಆಳಂದ ಠಾಣೆ : ಶ್ರೀ
ದೇವಿಂದ್ರ
ತಂದೆ ಭೀಮರಾವ ಆಳಂದ ಮು: ಮೋಘಾ (ಬಿ) ತಾ:ಆಳಂದ ರವರ ತಮ್ಮ ಸೂರ್ಯಕಾಂತ
ಇವನು ಈ ಎರಡು ತಿಂಗಳ ಹಿಂದೆ ನಾನು ನನ್ನ ತಮ್ಮ ಕೂಡಿ ಖಜೂರಿ ಗ್ರಾಮದ
ನಮ್ಮ ಮಾವನವರಾದ ಶಂಕರ ಕೋರೆಯವರ ಹತ್ತಿರ ಬಂದು ಉಳಿದುಕೊಂಡಿದ್ದು
ದಿನಾಂಕ
12-08-2014 ರಂದು ರಾತ್ರಿ 7:30 ಗಂಟೆ ಸುಮಾರಿಗೆ ಶರಣಬಸಪ್ಪಾ ತಂದೆ
ಕರಬಸಪ್ಪಾ ಪಾಟೀಲ ಇವರು ಪೋನ ಮೂಲಕ ತಿಳಿಸಿದೆನೆಂದರೆ ಮೋ.ಸೈಕಲ ನಂ ಎಮ್‌ಎಚ್ 25
ಎಸ್
5163 ನೇದ್ದರ ಸ್ಪೇಂಡರ ಪ್ಲಸ್ ಮೇಲೆ ಸೂರ್ಯಕಾಂತ ಆಳಂದ
ಮತ್ತು ಗಜಾನಂದ ನಗರೆ ಕೂಡಿ ಖಜೂರಿ ಕಡೆಯಿಂದ ಬಾರ್ಡರ ಕಡೆಗೆ ಹೊಗುವಾಗ ಸೂರ್ಯಕಾಂತನು ಮೋಟರ ಸೈಕಲ
ಚಲಾಯಿಸುತ್ತಿದ್ದು ಯುವರಾಜ ದಾಬಾದ ಹತ್ತಿರ ಖಜೂರಿ ಉಮರ್ಗಾ ರೋಡಿನ ಮೇಲೆ ಉಮರ್ಗಾ ಕಡೆಯಿಂದ ಲಾರಿ
ಟ್ಯಾಂಕರ ನಂ ಎಮ್‌ಎಚ್ 12 ಕೆಪಿ 7999 ನೇದ್ದರ ಚಾಲಕ ತನ್ನ ವಾಹನವನ್ನು ವೇಗವಾಗಿ ಮತ್ತು ನಿಷ್ಕಾಳಜಿತದಿಂದ
ಓಡಿಸುತ್ತಾ ಬಂದವನೇ ನಿನ್ನ ತಮ್ಮ ನಡೆಸುತ್ತಿದ್ದ ಮೋಟರ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ನಿನ್ನ
ತಮ್ಮ ನ ಹಣೆಗೆ ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಹಿಂದೆ ಕುಳಿತ್ತಿದ್ದ
ಗಜಾನಂದ ನಗರೆ ಇತನಿಗೆ ಕೂಡಾ ತಲೆಗೆ ಪೆಟ್ಟಾಗಿರುತ್ತದೆ ಅರ್ಜಂಟ ಬರಬೇಕು ಅಂತಾ ತಿಳಿಸಿದರ ಮೇರೆಗೆ
ನಾನು ಹಾಗು ನಮ್ಮ ಮಾವ ಶಂಕರ ಹಾಗು ಇತರರು ಕೂಡಿ ಹೋಗಿ ನೋಡಲಾಗಿ ನನ್ನ ತಮ್ಮನಿಗೆ ತಲೆಗೆ ಪೆಟ್ಟಾಗಿ
ರಕ್ತ ಸೋರಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ನಿಜ ಇರುತ್ತದೆ. ಗಜಾನಂದನಿಗೆ ಗಾಯವಾಗಿದ್ದರಿಂದ ಯ್ಯಾರೋ
ಅವನ ಸಂಬಂದಿಕರು ಉಮರ್ಗಾ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಅಫಘಾತ ಪಡಿಸಿದ ಲಾರಿ ಟ್ಯಾಂಕರ
ಅಲ್ಲೆ ನಿಂತಿದ್ದು ಚಾಲಕನು ಓಡಿ ಹೋಗಿರುತ್ತಾನೆ. ಅದರ ನಂಬರ ನೋಡಲಾಗಿ ಎಮ್‌ಎಚ್ 12 ಕೆಪಿ 7999
ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೆಲೀಂದ ಆಳಂದ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಅಶೋಕ ನಗರ
ಠಾಣೆ : ಶ್ರೀ ಹಣಮಂತ ತಂದೆ
ಶ್ಯಾಮರಾವ ಇಟಗಿ ಸಾ: ಪ್ಲಾಟ ನಂ. 11/4 ನ್ಯೂ
ಘಾಟಗೇ ಲೇಔಟ ಗುಲಬರ್ಗಾ ರವರು ದಿನಾಂಕ
13/08/2014 ರಂದು ಮದ್ಯರಾತ್ರಿ 12 ಎಎಂ ಸುಮಾರಿಗೆ
ನಾನು ಮತ್ತು ಸಿದ್ದಾರ್ಥ ತಂದೆ ದೇವಿಂದ್ರಪ್ಪಾ ಪಾರಾ, ಸಾತಪ್ಪಾ ತಂದೆ ವಿಠ್ಠಲ ಭಜಂತ್ರಿ,
ಎಲ್ಲರೂ ದ್ವಿಚಕ್ರ ವಾಹನದ ಮೇಲೆ ಕ್ರಸ್ಟಲ
ಪ್ಯಾಲೇಸ ಹೊಟೇಲನಿಂದ ಊಟ ಮುಗಿಸಿಕೊಂಡು ಬರುತ್ತಿರುವಾಗ ರಾಮ ಮಂದಿರ ಸರ್ಕಲ ಹತ್ತಿರ ಬಂದು ಪಾರ್ಚುನರ್
ಕಾರ ನಂ. ಕೆಎ 32-ಎನ್-5252 ರ ಚಾಲಕ ನಮ್ಮ ದ್ವಿಚಕ್ರ ವಾಹನಕ್ಕೆ ಓವರ ಟೇಕ ಮಾಡಿದ್ದು ಆಗ ನಾವು
ಏ ಅಂತಾ ಚಿರಾಡಿದಕ್ಕೆ ಫಾರ್ಚುನರ್ ಕಾರನಲ್ಲಿದ್ದವರು
ಕೆ.ಇ.ಬಿ ಕಲ್ಯಾಣ ಮಂಟಪ ಹತ್ತಿರ
ನಮ್ಮನ್ನು ತಡೆದು ನಿಲ್ಲಿಸಿ ಕಾರನಿಂದ ಹೊರಗಡೆ ಬಂದುವನೇ “ ಏನಲೇ ಹೊಲೆಯ ಭೋಸಡಿ ಮಕ್ಕಳೆ
ಗಾಡಿ ರೋಡನಲ್ಲಿ ನಿಲ್ಲಿಸಿ ನನಗೆ ಏ ಎಂದು ದಬಾಯಿಸುತ್ತಿರಾ ನಾನು ಯಾರೆಂದು ಗೊತ್ತೇನು
ನಾನು ವೀರಯ್ಯಾ ಗುತ್ತೆದಾರ ಮಗನಿದ್ದನೆ ಮಕ್ಕಳೇ ಎಂದು
ಜಾತಿ ಎತ್ತಿ ಬೈದಿರುತ್ತಾನೆ. ಮತ್ತು ಅವರ ಗೆಳೆಯರಿಗೆ ಫೋನ ಮಾಡಿ ಕರೆಯಿಸಿದ್ದು 8-10
ನಿಮಿಷದಲ್ಲಿ 7-8 ಜನರು ಬಂದವರೇ ನಮ್ಮೊಂದಿಗೆ
ಜಗಳ ತೆಗೆದು ಕಟ್ಟಿಗೆಯಿಂದ ನನ್ನ ತಲೆಗೆ ಹೊಡೆದಿರುತ್ತಾನೆ. ಮತ್ತು ಇನ್ನೊಬ್ಬನು ಕಟ್ಟಿಗೆಯಿಂದ
ಸಿದ್ದಾರ್ಥ ತಂದೆ ದೇವಿಂದ್ರಪ್ಪಾ ಪಾರಾನ ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿರುತ್ತಾರೆ. ಅಷ್ಟರಲ್ಲಿ ಸಿದ್ದಾರ್ಥನ ತಲೆಯಿಂದ ರಕ್ತ
ಬರುತ್ತಿರುವುದನ್ನು ನೊಡಿ ಅವರೇಲ್ಲರೂ ಓಡಿ ಹೊಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment