ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ 21-08-14 ರಂದು 3 ಪಿಎಂಕ್ಕೆ ಕುರಿಕೋಟ ಸಿಮಾಂತರದ
ವೀರಭದ್ರಯ್ಯಾ ಸಾಹು ಮತ್ತು ರವಿ ಸಾಹು ಇವರ ಹೋಲದ ಮದ್ಯದ ಬಂದಾರಿಯಲ್ಲಿ ಅಂದರ ಬಾಹರ ಇಸ್ಪೇಟ ಜೂಜಾಟ
ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇಬ್ಬರು ಪಂಚರನ್ನು ಮತ್ತು ಬ್ಬಂದಿಯವರನ್ನು ಜೊತೆಯಲ್ಲಿ
ಕರೆದುಕೊಂಡು ಬಾತ್ಮಿ ಸ್ಥಳಕ್ಕೆ ಹೋಗಿ ದಾಳಿ ಮಾಡಿ 5 ಜನರಿಗೆ
ಹಿಡಿದು ವಿಚಾರಿಸಲು 1. ಚಂದ್ರಕಾಂತ ತಂ ಹಣಮಂತಪ್ಪ ಸಿಂಗೆ 2. ರೇವಣಸಿದ್ದಪ್ಪ ತಂ ಮಲ್ಲಿಕಾರ್ಜುನ
ಅಂಬಲಗಿ 3. ದೇವಿಂದ್ರಪ್ಪ ತಂ ಗುಂಡಪ್ಪ ಜಾಲೇಕರ 4. ಸಿದ್ದಪ್ಪ ತಂ ಶಿವಶರಣಪ್ಪ ಬಡಿಗೇರ 5. ಸುರೇಶ ತಂ ಶಿವಶರಣಪ್ಪ ಅಂಬಲಗಿ ಸಾ|| ಎಲ್ಲರೂ
ಕುರಿಕೋಟಾ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಇಸ್ಪೇಟ ಜೂಜಾಟಕ್ಕೆ ಉಪಯೋಗಿಸಿದ ನಗದು ಹಣ
4300 ರೂ. ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡ ಮರಳಿ ಮಾಹಾಗಾಂವ ಠಾಣೆಗೆ
ಬಂದು ಪ್ರಕರಣ ದಾಖಲಿಸಲಾಗಿದೆ.
ಮೊಸ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : 2013 ನೇ ಸಾಲಿನಲ್ಲಿ ಇ.ಎಸ್.ಐ. ಕಾರ್ಪೋರೆಷನ ರೀಜನಲ್ ಆಫೀಸ, ಕರ್ನಾಟಕದಲ್ಲಿ ಅಪ್ಪೆರ ಡಿವಿಜನ ಕ್ಲರ್ಕ ಹುದ್ದೆ ಖಾಲಿ ಇದೆ ಅಂತಾ ನೋಟಿಪೀಕೇಶನ ಕೊಟ್ಟಿದ್ದು ದಿನಾಂಕ : 23-06-2013 ರಂದು ಗುಲಬರ್ಗಾ ನಗರದಲ್ಲಿ
N.V Boys High School,
ದಲ್ಲಿ ಭಾಗ - 1 ಪರೀಕ್ಷೆ ನಡೆಸಿದ್ದು ರಮೇಶ ಕುಮಾರ ತಂದೆ ರಬಿಂದ್ರ
ಪ್ರಸಾದ ಮನೀಶ ರಾಣಾ ಪ್ರತಾಪ ನಗರ ಇಸ್ಲಾಮಪೂರ ನಾಲಂದ
ರಾಜ್ಯ ಬಿಹಾರ ಇವನು ತನ್ನ ಪರವಾಗಿ ನಿಜವಾದ ಅಭ್ಯರ್ಥಿ ತಾನೆ ಎಂದು ಬೇರೆಯವರಿಂದ ಪರೀಕ್ಷೆ
ಬರೆಸಿ ದಿ : 19-01-2014 ರಂದು ನಡೆದ Computer Skill ಪರೀಕ್ಷೆಗೆ ಸ್ವತಹ ಮೇಲ್ಕಂಡ ಆರೋಪಿ ಹಾಜರ ಅಗಿ ಪರೀಕ್ಷೆ ಎದರಿಸುತ್ತಾನೆ ನಂತರ ESI Corporation ಯಿಂದ UDC ಹುದ್ದೆಗೆ ಅಯ್ಕೆಯಾಗಿ ಹಾಲಿ Regional Office, ಬೆಂಗಳೂರ ದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಮೇಲ್ಕಂಡ
ಆರೋಪಿ ಇಲಾಖೆಗೆ ವಂಚಿಸಿ ತಾನೆ ಅಭ್ಯರ್ಥಿ ಎಂದು ಬೇರೆ ವ್ಯಕ್ತಿಯಿಂದ ಪರೀಕ್ಷೆ ಬರೆಯಿಸಿ ಹುದ್ದೆ
ಗಿಟ್ಟಿಸಿಕೊಂಡು ಮೋಸ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಶ್ರೀ ಎಸ್. ಶಿವಾರಾಮಕೃಷ್ಣನ ತಂದೆ ಶಂಕರನ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಯಲ್ಲಿದ್ದ ಮಾರ್ಬಲ ಕಲ್ಲುಗಳನ್ನು ಇಳಿಸುವಾಗ ನಿರ್ಲಕ್ಷದಿಂದ ಕಾರ್ಮಿಕ ಸಾವು ಪ್ರಕರಣ :
ರಾಘವೇಂದ್ರ
ನಗರ ಠಾಣೆ : ಶ್ರೀ ಮಹಿಬೂಬಸಾಬ ತಂದೆ
ಮಶಾಕಸಾಬ ಮುಲ್ಲಾ ಸಾ: ಆಶ್ರಯ ಕಾಲೊನಿ
ಸತ್ರಾಶವಾಡಿ ಎಂ ಜಿ ರಸ್ತೆ ಗುಲಬರ್ಗಾ ರವರ ಮಗ ಖುತ್ಬುದ್ದಿನ ಇವನು ದಿನಾಲು ನನ್ನ ಜೊತೆಯಲ್ಲಿಯೆ
ಕುಲಿ ಕೆಲಸ ಮಾಡುತ್ತಿದ್ದು ದಿನಾಂಕ 21-08-2014
ರಂದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ಗುಲಬರ್ಗಾ ನಗರದದ ಎಮ್ ಎಸ್ ಕೆ ಮಿಲ ಬಡಾವಣೆಯ ಹುಸೇನಿ ಗಾರ್ಡನದಲ್ಲಿ ಲಾರಿ ನಂ ಆರ್ ಜೆ 27 ಜಿಎ 5673 ನೆದ್ದರಲ್ಲಿದ್ದ
ಶ್ರೀ ಡಾ : ಅರ್ಷದ ಇವರಿಗೆ ಸಂಬಂದಿಸಿದ ಅಂದಾದ
10 ಫಿಟ್ ಉದ್ದ 6 ಫೀಟ್ ಅಗಲ ಉಳ್ಲ ಮಾರಬಲಗಳು ಇದ್ದು ಅವುಗಳನ್ನು
ಖಾಲಿಮಾಡಲು ಡಾ :ಅರ್ಷಧ ಮತ್ತು ಲಾರಿ ಡ್ರೈವರ ಇವರು ನಮಗೆ 4500/ರೂ
ಗುತ್ತಿಗೆ
ಕೊಟ್ಟರುತ್ತಾರೆ ಆಗ ನಾನು ಮತ್ತು ನನ್ನ ಮಗ 2) ಖುತ್ಬೋದ್ದಿನ 3) ಲಾಲಹ್ಮದ 4) ಜಾಫರ್ 5) ಈರಣ್ಣಾ 6) ಬಸಣ್ಣಾ 7) ಬಾಬುರಾವ 8) ಸಮೀರ 9) ಲಕ್ಷುಣ ಎಲ್ಲರು
ಕೂಡಿಕೊಂಡು ಲಾರಿನಲ್ಲಿದ್ದ ಮಾರ್ಬಲ್ ಕಲ್ಲುಗಳು ಖಾಲಿ ಮಾಡುತ್ತಿರುವಾಗ. ನನ್ನ ಮಗ
ಖುತ್ಬೊದ್ದಿನ್ .ಲಕ್ಷ್ಮಣ ಮತ್ತು ಜಾಫರ್ ಇವರು ಲಾರಿಯಲ್ಲಿ ಏರಿ ಮೇಲಿಂದ ಕಲ್ಲು ಕೊಡುತ್ತಿದ್ದರು. ಉಳಿದ
ನಾವೆಲ್ಲರು ಕೆಳಗೆನಿಂತು ಕಲ್ಲುಗಳು ಹಿಡಿದ್ದುಕೊಂಡು ಕೇಳಗೆ ಇಳಿಸುತ್ತಿದ್ದೆವು. ಅದೆ
ವೆಳೆಯಲ್ಲಿ ಲಾರಿಯಲ್ಲಿ ಮಾರ್ಬಬಲಗಳು ಹಚ್ಚಿದ
ಅಂದಾಜ 6 ಫೀಟ್ ಅಗಲ 10 ಫಿಟ್ ಉದ್ದ ಇರುವ
ಮಾರ್ಬಲ್ ಕಲ್ಲುಗಳ ಥಪ್ಪಿ ಉರುಳಿ ನನ್ನ ಮಗ ಖುತ್ಬುದ್ದಿನ ಇವರ ಮೈ ಮೇಲೆ ಬಿದ್ದಿದರಿಂದ ಅವನ
ಕುತ್ತಿಗೆ ಮತ್ತು ಎಡಗಲ್ಲದ ಮೇಲೆ ಹತ್ತಿದ್ದರಿಂದ
ಭಾರಿ ರಕ್ತಗಾಯ ಆಗಿ ಲಾರಿಯಲ್ಲಿಯೆ ಮೃತ ಪಟ್ಟಿರುತ್ತಾನೆ. ಕಾರಣ ಮಾರ್ಬಲ್ ಮಾಲಿಕನಾದ ಡಾ. ಅರ್ಷದ
ಇವನು ನಮಗೆ ಮಾರ್ಬಲ ಕಲ್ಲುಗಳು ಲಾರಿಯಿಂದ ಕೇಳಗೆ
ಇಳಿಸಲು ಕೂಲಿ ಕೆಲಸಕ್ಕೆ ಹಚ್ಚಿದ್ದು ಲಾರಿಯಲ್ಲಿನ ಕಲ್ಲುಗಳು ತೆಗೆಯುವ ಸಮಯದಲ್ಲಿ ಕಲ್ಲುಗಳಿಂದ
ಕುಲಿಕೆಸ ಮಾಡುವ ಜನರ ಜಿವಕ್ಕೆ ಧಕ್ಕೆ ಯಾಗದಂತೆ
ಹಾಗು ಜೀವ ಹಾನಿ ಆಗದಂತೆ ಯಾವದೆ ವ್ಯೆವಸ್ಥೆ ಮಾಡಿರುವದಿಲ್ಲಾ ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀ ಶೇಖ ಫರೀದ ತಂದೆ ಉಸ್ಮಾನ ಸಾಬ ಸಾ : ದಸ್ತಗೀರ ಮೊಹಲ್ಲಾ ಚಿಟಗುಪ್ಪಾ
ತಾ : ಹುಮನಾಬಾದ ಜಿಲ್ಲೆ ಬೀದರ ರವರು ದಿನಾಂಕ: 21-08-2014 ರಂದು ಬೆಳಿಗ್ಗೆ 6:00 ಗಂಟೆಯ ಸುಮಾರಿಗೆ ಸುಪರ ಮಾರ್ಕೆಟ ಗುಲಬರ್ಗಾದ
ಮೈಬಾಸ ಮಜ್ಜೀದ ಮುಂದೆ ನಿಲ್ಲಿಸಿದ ತನ್ನ ಹಿರೋ ಫ್ಯಾಷನ ಪ್ರೋ ಮೋಟಾರ ಸೈಕಲ್ ನಂ: ಕೆಎ 39 ಕೆ-2077 ಅ.ಕಿ. 40,000/- ನೇದ್ದನ್ನು ಯಾರೋ
ಕಳ್ಳರು ಕಳುವು ಮಾಡಿದ್ದು ಎಷ್ಟು ಹುಡಕಾಡಿದರು ಸಿಕ್ಕರುವದಿಲ್ಲಾ. ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಬ್ರಹ್ಮಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ವಿಶ್ವವಿದ್ಯಾಲಯ ಠಾಣೆ : ಶ್ರೀಮತಿ.ನಿಲೋಫರ ಬೇಗಂ ಗಂಡ
ಮಹ್ಮದ ಸರಫರಾಜ ಸುಲ್ತಾನ, ಸಾ: ಜಾನಿ ಮೊಹಲ್ಲಾ, ಜಂಡಾ ಕಟ್ಟಾ ರಾಯಚೂರ ಹಾ:ವ: ಸರಸ್ವತಿಪುರಂ
ಗುಲಬರ್ಗಾ ರವರನ್ನು ನನಗೆ ನಮ್ಮ ತಂದೆ-ತಾಯಿಯವರು ಸುಮಾರು ಒಂದುವರೆ ವರ್ಷದ
ಹಿಂದೆ ಮಹ್ಮದ ಸರಫರಾಜ ಸುಲ್ತಾನ ತಂದೆ ಮಹ್ಮದ ಸುಲ್ತಾನ ಇವರಿಗೆ ಸಂಪ್ರದಾಯದಂತೆ ಗುಲಬರ್ಗಾ ಬಾಕರ್
ಫಂಕ್ಷನ್ ಹಾಲ್ದಲ್ಲಿ ನಮ್ಮ ತಂದೆ-ತಾಯಿಯವರು 2 ಲಕ್ಷ ರೂಪಾಯಿ ಮತ್ತು 3ತೊಲೆ ಬಂಗಾರ ಉಡುಗೋರೆಯಾಗಿ
ಕೊಟ್ಟಿದ್ದು ಅಲ್ಲದೆ ಮದುವೆ ಸಮಯದಲ್ಲಿ ನನ್ನ ಮೈಮೇಲೆ 9 ತೊಲೆಯ ಬಂಗಾರದ ಆಭರಣಗಳು ಹಾಕಿ ಮದುವೆ ಮಾಡಿಕೊಟ್ಟಿರುತ್ತಾರೆ.
ನಂತರ ನನ್ನ ಗಂಡ ನನಗೆ ರಾಯಚೂರಕ್ಕೆ ಕರೆದುಕೊಂಡು ಹೋಗಿ ಒಂದು ತಿಂಗಳ ವರೆಗೆ ರಾಯಚೂರದಲ್ಲಿ ಇಟ್ಟು
ನನ್ನ ಗಂಡ ಬೆಂಗಳೂರದಲ್ಲಿ ಸಾಫ್ಟವೇರ್ ಇಂಜನೀಯರಿಂಗ್ ಕೆಲಸ ಮಾಡುತ್ತಿದ್ದರಿಂದ ಅಲ್ಲಿಂದ ನನಗೆ ಬೆಂಗಳೂರಿಗೆ
ಕರೆದುಕೊಂಡು ಹೋಗಿರುತ್ತಾನೆ. ಅಲ್ಲಿ ನನ್ನ ಗಂಡ ನನಗೆ ದಿನಾಲೂ ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ
ತೆಗೆದುಕೊಂಡು ಬಾ ಅಂತಾ ನನಗೆ ದಿನಾಲೂ ಹೊಡೆಬಡೆ ಮಾಡುತ್ತಾ ಇದ್ದ. ನಂತರ ನಾನು ಅಗಷ್ಟ-2013 ತಿಂಗಳಲ್ಲಿ
ರಂಜಾನ ಹಬ್ಬಕ್ಕೆಂದು ರಾಯಚೂರಕ್ಕೆ ಬಂದಿದ್ದು, ಅಲ್ಲಿ ನನಗೆ ನನ್ನ ಗಂಡ ಮತ್ತು
ಅತ್ತೆ ಸೈಯದಾ ಫರೀದಾ ಬೇಗಂ ಇಬ್ಬರು ನನಗೆ ನಿಮ್ಮ ತವರು ಮನೆಯಿಂದ 10 ಲಕ್ಷ ರೂಪಾಯಿ ತೆಗೆದುಕೊಂಡು
ಬಾ ಅಂತಾ ನನ್ನ ಅತ್ತೆ ನನಗೆ ನನ್ನ ಮಗ ನೀನು 10 ಲಕ್ಷ ರೂಪಾಯಿ ತಂದರೆ ಕೆಲಸ ಮಾಡುತ್ತಾನೆ. ಅಂತಾ
ಅಂದು ನನ್ನ ಗಂಡ ಮತ್ತು ಅತ್ತೆ ಇಬ್ಬರು ನನಗೆ ನಿನ್ನ ಹೊಟ್ಟೆಯಲ್ಲಿ ಹೆಣ್ಣು ಮಗು ಇದೆ ಅಂತಾ ಬಯ್ಯುತ್ತಾ
ಕೈಯಿಂದ ಮತ್ತು ಕಾಲಿನಿಂದ ಹೊಡೆದು ಒಳಪೆಟ್ಟು ಮಾಡಿರುತ್ತಾರೆ. ಆದರೂ ನಾನು ಆವತ್ತು ತಾಳಿಕೊಂಡು ಬಂದಿದ್ದು, ನಂತರ ನಾನು ಮತ್ತೆ
ನನ್ನ ಗಂಡನ ಸಂಗಡ ಬೆಂಗಳೂರಿಗೆ ಹೋಗಿದ್ದು, ಅಲ್ಲಿ ನನ್ನ ಗಂಡ
ಮತ್ತೆ ನನಗೆ ಅದೇ ರೀತಿ ನೀನು ನಿನ್ನ ತವರು ಮನೆಯಿಂದ 10 ಲಕ್ಷ ರೂಪಾಯಿ ತೆಗೆದುಕೊಂಡು ಬಾ ಇಲ್ಲದಿದ್ದರೆ
ನಿನಗೆ ಖಲಾಸ ಮಾಡುತ್ತೇನೆ ಅಂತಾ ನನ್ನ ಕುತ್ತಿಗೆಯ ಮೇಲೆ ಚಾಕು ಇಟ್ಟು ಅಂಜಿಕೆ ಹಾಕಿರುತ್ತಾನೆ. ಆಗ
ನಮ್ಮ ಮನೆಯ ಮಾಲೀಕರು ನನ್ನ ತಂದೆಯವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದು, ನಂತರ ನಮ್ಮ ತಂದೆ
ಬೆಂಗಳೂರಿಗೆ ಬಂದು ನನಗೆ ಅಲ್ಲಿಂದ ಗುಲಬರ್ಗಾಕ್ಕೆ ಕರೆದುಕೊಂಡು ಬಂದು ತಮ್ಮ ಹತ್ತಿರ ಇಟ್ಟಿಕೊಂಡಿರುತ್ತಾರೆ.
ನನ್ನ ಗಂಡ ಮದುವೆ ಸಮಯದಲ್ಲಿ ನನ್ನ ಮೇಲೆ ಹಾಕಿದ್ದ ಬಂಗಾರವೆಲ್ಲಾ ಮಾರಿಕೊಂಡಿರುತ್ತಾನೆ. ನನಗೆ ಡಿಸೆಂಬರ್-2013
ರಲ್ಲಿ ನಾನು ಹೆಣ್ಣು ಮಗುವಿಗೆ ಜನ್ಮ ನೀಡಿರುತ್ತೇನೆ. ನಾನು ಆಸ್ಪತ್ರೆಯಲ್ಲಿ ಇದ್ದಾಗಲೂ ಕೂಡ ಅಲ್ಲಿಯು
ನನ್ನ ಗಂಡ ಬಂದು ಜಗಳ ಮಾಡಿಕೊಂಡು ಹೋಗಿರುತ್ತಾನೆ. ಸುಮಾರು 7-8 ತಿಂಗಳಿಂದ ನಾನು ನನ್ನ ತವರು ಮನೆಯಾದ
ಸರಸ್ವತಿಪೂರಂ ಕುಸನೂರ ರೋಡ ಗುಲಬರ್ಗಾದಲ್ಲಿ ಇದ್ದಾಗಲೂ ಕೂಡ ಆಗಾಗ ನಮ್ಮ ಮನೆಗೆ ಬಂದು ನನ್ನ ಜೊತೆ
ನಮ್ಮ ಹಾಗೂ ನಮ್ಮ ತಂದೆ-ತಾಯಿ ಜೊತೆ ಜಗಳ ಮಾಡಿಕೊಂಡು ಬಂದಿದ್ದು
ದಿನಾಂಕ:21/08/14
ರಂದು ಬೆಳಿಗ್ಗೆ 10:00 ಗಂಟೆಯ ಸುಮಾರಿಗೆ ನಾನು ನನ್ನ ತಾಯಿ ಹಾಗೂ ನನ್ನ ಮಗುವಿನೊಂದಿಗೆ ತವರು ಮನೆಯಲ್ಲಿ
ಇದ್ದಾಗ ಆಗ ಯಾರೋ ಬಾಗಿಲು ಬಡಿದಾಗ ನಾನು ಹೋಗಿ ಬಾಗಿಲು ತೆಗೆದಾಗ ಆಗ ನನ್ನ ಗಂಡ ಇದ್ದು, ಅವನು ನನಗೆ ಒಮ್ಮಿದೊಂಮ್ಮಲೆ
ನನ್ನ ಕುತ್ತಿಗೆ ಹಿಡಿದು ರಂಡಿ ಬೋಸಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ನಿನ್ನ ತಂದೆ ಎಲ್ಲಿ
ಹಣ ಕೇಳಿದರೆ ಕೊಡುವದಿಲ್ಲ ಅಂತಾ ಅನ್ನುತ್ತಿದ್ದಾನೆ ಎಲ್ಲಿ ಇದ್ದಾನೆ ಆ ರಂಡಿ ಮಗ ಅಂತಾ ಅನ್ನುತ್ತಾ
ನನ್ನ ಕುತ್ತಿಗೆ ಹಿಡಿದು ನನಗೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ
ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment