ನಿಂಬರ್ಗಾ ಪೊಲೀಸ ಠಾಣೆ:
ಇಂದು ಫೀರ್ಯಾದಿ ಶ್ರೀ ಸೂರ್ಯಕಾಂತ ಮದಾನೆ ಶಿಕ್ಷಣಾಧೀಕಾರಿಗಳು
ಅಕ್ಷರ ದಾಸೊಹ ಯೋಜನೆ ಜಿಲ್ಲಾ ಪಂಚಾಯತ ಗುಲಬರ್ಗಾರವರು ಠಾಣೆಗೆ ಬಂದು ತಾವು ದುತ್ತರಗಾಂವ ಗ್ರಾಮದ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಂಚರ ಸಮಕ್ಷಮದಲ್ಲಿ ಜಪ್ತಿಪಡಿಸಿಕೊಂಡ
ಮುದ್ದೆಮಾಲು, ಅಸಲು ಜಪ್ತಿ ಪಂಚನಾಮೆ. ಮತ್ತು ಲಿಖಿತ ಫಿರ್ಯಾದಿ ವರದಿಯೊಂದಿಗೆ ಠಾಣೆಗೆ ಬಂದು
ಹಾಜರಾಗಿದ್ದು ಸದರಿ ಫಿರ್ಯದಿಯಲ್ಲಿ ತಮಗೆ ಖಚಿತ ಬಾತ್ಮಿ ಬಂದ ಮೇರೆಗೆ ವಾಹನ ನಂ. ಎಮ.ಹೆಚ್ 13. ಆರ್. 6882 ನೇದ್ದನ್ನು ತಪಾಸಿಸಿ ಪಂಚರ ಸಮಕ್ಷಮ ಪಂಚನಾಮೆ ಕೈಕೊಂಡು ಪರಿಶೀಲಿಸಲಾಗಿ ವಾಹನ ನಂ.
ಎಮ.ಹೆಚ್ 13. ಆರ್. 6882 ನೇದ್ದರ ಚಾಲಕನ ಕೈಯಿಂದ ಒಟ್ಟು 07 ರಸೀದಿಗಳು ಜಪ್ತಿಪಡಿಸಿಕೊಂಡು ಮತ್ತು ಭೌತಿಕವಾಗಿ ಆಹಾರ
ಧಾನ್ಯವನ್ನು ತೂಕ ಮಾಡಲಾಗಿ ಅದರಲ್ಲಿ ರಸೀದಿಯಲ್ಲಿ ನಮೂದಿಸಿದಂತೆ 19 ಕ್ವಿಂಟಲ 50 ಕೆ.ಜಿ ಅಕ್ಕಿ ಇರದೆ, 15 ಕ್ವಿಂಟಲ 14 ಕೆ.ಜಿ ಅಕ್ಕಿ ಇದ್ದು 04 ಕ್ವಿಂಟಲ 36 ಕೆ.ಜಿ ಅಕ್ಕಿ ವ್ಯತ್ಯಾಸ ಬಂದಿದ್ದು ಅಂದಾಜು ಕಿಮ್ಮತ್ತು 2000/- ರೂಪಾಯಿ, ರಸೀದಿಯಲ್ಲಿ ನಮೂದಿಸಿದಂತೆ 1 ಕ್ವಿಂಟಲ ಗೊಧಿಯ ಬದಲಾಗಿ 89 ಕೆ.ಜಿ ಇರುತ್ತದೆ, 11 ಕೆ.ಜಿ ವ್ಯತ್ಯಾಸ ಕಂಡು ಬಂದಿದ್ದು 88/- ರೂಪಾಯಿ, ತೊಗರಿ ಬೇಳೆ ರಸೀದಿಯಲ್ಲಿ ನಮೂದಿಸಿದಂತೆ 375 ಕೆ.ಜಿ ಇದ್ದು ಅದರಲ್ಲಿ ವಾಸ್ತವಿಕವಾಗಿ 324 ಕೆ.ಜಿ ಇದ್ದು 51 ಕೆ.ಜಿಯ 3570/- ರೂಪಾಯಿ ಹೀಗೆ ಒಟ್ಟು 5658/- ರೂಪಾಯಿ ಮೌಲ್ಯದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡದೆ
ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆ. ಇದಕ್ಕೆ ಕಾರಣೀಭೂತರಾದ ಗುರುರಾಯ ಮ್ಯಾನೆಜರ ಕೆ.ಎಫ.ಸಿ.ಎಸ್.ಸಿ ಗೋದಾಮ
ಆಳಂದ, ಮ್ಯಾನೇಜರ ಭೋಸಲೆ ಟ್ರಾನ್ಸಪೊರ್ಟ ಆಳಂದ, ವಿಷ್ಣು ತಂದೆ ಶ್ರೀಮಂತ ವಾಹನ ನಂ. ಎಮ.ಹೆಚ್ 13, ಆರ್ 6882 ನೇದ್ದರ ಚಾಲಕ ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಲು ಕೊಟ್ಟ ಫಿರ್ಯಾದಿಯ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
No comments:
Post a Comment