ನಿಂಬರ್ಗಾ ಪೊಲೀಸ ಠಾಣೆ:
ಆರೋಪಿ ಪತ್ತೆ ಕರ್ತವ್ಯದಿಂದ ಮರಳಿ ಠಾಣೆಗೆ ಬರುವಾಗ ನಿಂಬರ್ಗಾ
ಗ್ರಾಮದಲ್ಲಿ ಇದ್ದಾಗ ಭೂಸನೂರ ಗ್ರಾಮದ ಬಸವೇಶ್ವರ ಸರ್ಕಲ ಹತ್ತಿರ ಸಾರ್ವಜನಿಕ ಡಾಂಬರ ರಸ್ತೆಯ
ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಠಾಣೆಯ
ಸಿಬ್ಬಂಧಿಯವರಾದ ಶ್ರೀ ರಾಜಕುಮಾರ ಸಿಪಿಸಿ 1145 ಹಾಗೂ ಇಬ್ಬರು ಪಂಚರಾದ 01] ಶ್ರೀ ಬಸವರಾಜ ತಂದೆ
ನಾಗಪ್ಪಾ ಕೋರೆ ವ|| 42 ವರ್ಷ, ಜಾ|| ಲಿಂಗಾಯತ, ಉ|| ಕೂಲಿಕೆಲಸ, ಸಾ|| ನಿಂಬರ್ಗಾ, 02] ಶ್ರೀ ಈರಯ್ಯ ತಂದೆ ಶರಣಯ್ಯ ಹಿರೇಮಠ ವ|| 39 ವರ್ಷ, ಜಾ|| ಜಂಗಮ, ಉ|| ಕೂಲಿಕೆಲಸ, ಸಾ|| ನಿಂಬರ್ಗಾ ಇವರನ್ನು ಬರ ಮಾಡಿಕೊಂಡು ಸದರಿಯವರಿಗೆ ವಿಷಯ
ತಿಳಿಸಿದ್ದು ಸದರಿಯವರು ಪಂಚರಾಗಲು ಒಪ್ಪಿಕೊಂಡಿದ್ದು ನಾನು ಮತ್ತು ಸಿಬ್ಬಂಧಿ ಹಾಗೂ ಇಬ್ಬರು
ಪಂಚರು ಕೂಡಿ ಠಾಣೆಯ ಜೀಪ್ ನಂ ಕೆ.ಎ 32, ಎಮ 1563 ನೇದ್ದರಲ್ಲಿ ಭೂಸನೂರ ಗ್ರಾಮಕ್ಕೆ ಹೋಗಿ ಬಸವೇಶ್ವರ ಸರ್ಕಲ ಮರೆಯಲ್ಲಿ ನಿಂತು
ನೋಡಲಾಗಿ ಡಾಂಬರ ರಸ್ತೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ
ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80
ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು
ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ನಾನು ಮತ್ತು ಸಿಬ್ಬಂಧಿ ಜನರು
ಕೂಡಿ ಸದರಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಗೈಬಗಿರಿ ತಂದೆ
ಗೊವಿಂದಗಿರಿ ಗೋಸಾಯಿ ವ|| 50 ವರ್ಷ, ಜಾ|| ಮರಾಠಾ, ಉ|| ಕೂಲಿಕೆಲಸ, ಸಾ|| ಭೂಸನೂರ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ
ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 320/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡಿದ್ದು
ಇರುತ್ತದೆ, ಈ ಬಗ್ಗೆ ಜಪ್ತಿ ಪಂಚನಾಮೆಯನ್ನು ಕೈಕೊಂಡಿದ್ದು ಇರುತ್ತದೆ ಅಂತ
ಕೊಟ್ಟ ವರದಿಯ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
No comments:
Post a Comment