ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 88/2014
ಕಲಂ. 279, 337, 304(ಎ) ಐ.ಪಿ.ಸಿ:.
ದಿನಾಂಕ 24-09-2014 ರಂದು ಮಧ್ಯಾಹ್ನ 2-30 ಗಂಟೆಗೆ ಸರಕಾರಿ ಆಸ್ಪತ್ರೆ
ತಾವರಗೇರಾದಿಂದ ಪೋನ್ ಮುಖಾಂತರ ಎಂ.ಎಲ್.ಸಿ. ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ
ಚಿಕಿತ್ಸೆ ಪಡೆಯುತ್ತಿದ್ದ ಶ್ರೀ ಸಮೀರ್ ಪಾಷಾ ತಂದೆ
ಬಾಷುಸಾಬ ಮೆಣೇದಾಳ, ವಯಸ್ಸು 19 ವರ್ಷ, ಜಾ: ಮುಸ್ಲಿಂ, ಉ: ಖಾಸಗಿ ಚಾಲಕ, ಸಾ: ಮೆಣೇದಾಳ ಇವರ ನುಡಿ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ ಇಂದು
ದಿನಾಂಕ 24-09-2014 ರಂದು ಮುಂಜಾನೆ 10-00 ಗಂಟೆಗೆ ನಾನು ನನ್ನ ವೈಯಕ್ತಿಕ ಕೆಲಸವಿದ್ದುದರಿಂದ ತಾವರಗೇರಾಕ್ಕೆ ಬಂದಿದ್ದು, ವಾಪಸ್ ನಮ್ಮೂರಿಗೆ ಹೋಗುವ ಕುರಿತು ನಮ್ಮೂರ ರಂಜಾನಸಾಬ ತಂದೆ ಶ್ಯಾಮೀದ್
ಸಾಬ ಚೌಡಾಪುರ ಇವನು ಗಂಗಾವತಿಗೆ ಹೋಗುವ ಕುರಿತು ನಿಲ್ಲಿಸಿದ್ದ ಅವರ ಟಾಟಾ ಮ್ಯಾಜಿಕ್ ವಾಹನ ಸಂ.
ಕೆ.ಎ.37/ಎ-431 ನೇದ್ದರಲ್ಲಿ ಹತ್ತಿ ಕುಳಿತೆನು. ನನ್ನಂತೆ ವಾಹನದಲ್ಲಿ ಅದಾಗಲೇ ನಮ್ಮೂರ ಕಾಶೀಮ್ ತಂದೆ ಸೈಯದ್ ಸುಲ್ತಾನ
ಕನಕಗಿರಿ, ಹನುಮವ್ವ ಗಂಡ ಶಿವಪ್ಪ
ಬಜಂತ್ರಿ ಹಾಗೂ ಗಂಗಾವತಿಗೆ ಹೋಗುವುದಾಗಿ ಹೇಳುತ್ತಿದ್ದ ಮಾಬಮ್ಮ ಗಂಡ ಮೈಬುಸಾಬ ಬಳ್ಳಾರಿ ಸಾ:
ಗಂಗಾವತಿ ಇವರೆಲ್ಲರೂ ಕುಳಿತಿದ್ದರು. ವಾಹನವನ್ನು ರಂಜಾನಸಾಬ ನಡೆಯಿಸಿಕೊಂಡು ಹೊರಟನು. ನಾವು ತಾವರಗೇರಾ-ಗಂಗಾವತಿ ಮುಖ್ಯರಸ್ತೆಯ ಮೇಲೆ ಹೊರಟಿದ್ದಾಗ ವಾಹನವನ್ನು ರಂಜಾನಸಾಬನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸುತ್ತಾ ಹೊರಟಿದ್ದು, ನಾವು ಅವನಿಗೆ ನಿಧಾನವಾಗಿ ನಡೆಸು ಅಂತಾ ಹೇಳಿದರೂ ಸಹಾ ಅದೇವೇಗದಲ್ಲಿ ನಡೆಯಿಸುತ್ತಿದ್ದು, ನಾವು ಮೆಣೇದಾಳ ಸೀಮಾದಲ್ಲಿರುವ ಶ್ರೀ ಸಂಜೀವರಾಯನ ಗುಡಿಯ ಹತ್ತಿರ ಬಂದಾಗ ವಾಹನದ ಎಡಭಾಗದ
ಹಿಂದಿನ ಟೈರ್ ಬರ್ಸ್ಟ ಆಗಿ ಒಮ್ಮೇಲೇ ಹೊಯ್ದಾಡಿದಂತಾಗಿದ್ದು, ವಾಹನ ಹೊಯ್ದಾಡುತ್ತಿರುವಾಗ ಎಡಭಾಗಕ್ಕೆ ಕುಳಿತಿದ್ದ ಕಾಶೀಮ ಇವನು ಪುಟಿದು ಬಿದ್ದಿದ್ದು, ಅವನ ಮೇಲೆ ವಾಹನವು ಎಡಮಗ್ಗಲಾಗಿ ಬಿದ್ದಿತು. ಪರಿಣಾಮವಾಗಿ ವಾಹನದಲ್ಲಿದ್ದ
ನನಗೆ ಎಡಭುಜಕ್ಕೆ, ಗದ್ದಕ್ಕೆ, ಎಡಮೊಣಕೈಗೆ, ಎಡಮುಂಗೈಗೆ, ಬಲ ಮುಂಗೈಗೆ ತರಚಿದ
ಗಾಯಗಳಾದವು. ನೋಡಲಾಗಿ ಕಾಶೀಮನಿಗೆ ಎದೆಗೆ
ಹಾಗೂ ಹೊಟ್ಟೆಗೆ ಭಾರೀ ಒಳಪೆಟ್ಟಾಗಿದ್ದು, ಎಡಗೈ ಮೇಲೆ, ಬಲಗಾಲ ಪಾದದ ಮೇಲೆ, ಎಡಗಾಲ ಪಾದದ ಹತ್ತಿರ, ಬಲ ಹಿಂಬಡಿಯ ಹತ್ತಿರ ತರಚಿದ ಗಾಯಗಳಾಗಿದ್ದವು. ಉಳಿದವರಿಗೂ ಸಹಾ ಸಾದಾ
ಗಾಯಗಳಾಗಿದ್ದವು. ಆಗ ಸಮಯ ಮಧ್ಯಾಹ್ನ 1-30 ಗಂಟೆಯಾಗಿರಬಹುದು. ನಂತರ ನಾವೆಲ್ಲರೂ ಚಿಕಿತ್ಸೆ ಕುರಿತು ತಾವರಗೇರಾ ಕಡೆಗೆ ಹೊರಟಿದ್ದ ಯಾವುದೋ ಒಂದು
ವಾಹನದಲ್ಲಿ ಬಂದು ಸರಕಾರಿ ಆಸ್ಪತ್ರೆ ತಾವರಗೇರಾದಲ್ಲಿ ದಾಖಲಾಗಿರುತ್ತೇವೆ. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋದ ಕಾಶೀಮನು
ಮಧ್ಯಾಹ್ನ 3-15 ಗಂಟೆಗೆ ಮೃತಪಟ್ಟಿರುವುದಾಗಿ
ಸಿರಾಜ್ ತಂದೆ ದೀನಸಾಬ ಆಲಂಬರದಾರ ಇವರು ನನಗೆ ಫೋನ್ ಮಾಡಿ ತಿಳಿಸಿದರು. ಕಾರಣ ಟಾಟಾ ಮ್ಯಾಜಿಕ್ ವಾಹನ ಸಂ. ಕೆ.ಎ.37/ಎ-431 ನೇದ್ದನ್ನು ಚಾಲಕನಾದ ರಂಜಾನಸಾಬ ತಂದೆ ಶ್ಯಾಮೀದ್ ಸಾಬ ಚೌಡಾಪುರ ಸಾ: ಮೆಣೇದಾಳ ಇವನು
ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿದ್ದರಿಂದ ಅದರ ಟೈರ್ ಬರ್ಸ್ಟ ಆಗಿ ಎಡಮಗ್ಗಲಾಗಿ ಬಿದ್ದು ಅಪಘಾತವಾಗಿದ್ದು, ಪರಿಣಾಮವಾಗಿ ತೀವ್ರ ಗಾಯಗೊಂಡ ಕಾಶೀಮನು ಹೆಚ್ಚಿನ ಚಿಕಿತ್ಸೆಗಾಗಿ
ಕರೆದೊಯ್ಯುತ್ತಿರುವಾಗ ಮೃತಪಟ್ಟಿರುತ್ತಾನೆ.
2) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ.
209/2014 ಕಲಂ. 78(3) ಕೆ.ಪಿ. ಕಾಯ್ದೆ:
ದಿ:24-09-2014 ರಂದು ಮಧ್ಯಾಹ್ನ
3-45 ಗಂಟೆಗೆ ನೇತ್ರಾವತಿ ಮ.ಪಿ.ಎಸ್.ಐ. ನಗರ ಠಾಣೆ ಕೊಪ್ಪಳ ರವರು ಠಾಣೆಗೆ ಹಾಜರಾಗಿ
ನೀಡಿದ ಗಣಕೀಕರಣ ಮಾಡಿದ ಫಿರ್ಯಾದಿಯ ಸಾರಾಂಶವೇನೆಂದರೆ, ದಿ: 24-09-2014 ರಂದು ಮಧ್ಯಾಹ್ನ 2-30
ಗಂಟೆಗೆ ಕೊಪ್ಪಳ ನಗರದ ಬಾಯ್ಸ್ ಕಾಲೇಜ್ ಹತ್ತಿರ ಇದರಲ್ಲಿ ನಮೂದು ಮಾಡಿದ ಆರೋಪಿ ನಂ 01 ನೇದ್ದವರು
1=00 ರೂಪಾಯಿಗೆ 80=00 ರೂಪಾಯಿ ಯಾರ ಅದೃಷ್ಟ ಹಚ್ಚಿರಿ ಅಂತಾ ಕೂಗುತ್ತಾ ಓ.ಸಿ. ಮಟಕಾ ಜೂಜಾಟ ಆಡುತ್ತಿದ್ದಾಗ
ದಾಳಿ ಕಾಲಕ್ಕೆ ಗುಂಪಿನಲ್ಲಿದ್ದ ಜನರು ಓಡಿ ಹೋಗಿದ್ದು, ಮಟಾಕಾ ಜೂಜಾಟ ಆಡುತ್ತಿದ್ದವನಿಗೆ ಹಿಡಿದುಕೊಂಡು
ವಿಚಾರಿಸಿದ್ದು ಸದರಿಯವನು ತನ್ನ ಹೆಸರು ಮುನಾವರ್ ಹುಸೇನ್ ತಂದೆ ರಾಜಾಹುಸೇನ್ ರಾಂಪೂರಿ. ಸಾ: ಸಜ್ಜಿಹೊಲ
ಕೊಪ್ಪಳ ಅಂತಾ ಹೇಳಿದ್ದು ಸದರಿ ಆರೋಪಿತನಿಂದ 1] 1500=00 ಮಟಕಾ ಜೂಜಾಟದ ನಗದು ಹಣ, 2] ಒಂದು ಮಟಕಾ
ಪಟ್ಟಿ 3] ಒಂದು ಬಾಲ್ ಪೆನ್ನು ಹಾಗೂ 4] ಒಂದು ನೋಕಿಯಾ ಮೊಬೈಲ್ ಸೆಟ್ ಹಾಗೂ ಬಿ.ಎಸ್. ಎನ್.ಎಲ್ ಸಿಮ್
ಅಂಕಿ ರೂ-300 ಇವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನಿಗೆ
ಮಟಕಾ ಬರೆದ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಿದಾಗ ಶಿವರೆಡ್ಡಿ ಸಾ: ಕೊಪ್ಪಳ ಇವನು ತೆಗೆದುಕೊಳ್ಳುವುದಾಗಿ
ತಿಳಿಸಿದ್ದು ಇರುತ್ತದೆ. ನಂತರ ವಾಪಸ ಠಾಣೆಗೆ ಬಂದು ಆರೋಪಿತನನ್ನು, ಮುದ್ದೇಮಾಲು, ಮೂಲ ಪಂಚನಾಮೆ
ಮತ್ತು ಫಿರ್ಯಾದಿಯನ್ನು ಹಾಜರಪಡಿಸಿರುತ್ತೇನೆ. ಸದರಿ ಮುನಾವರ್ ಹುಸೇನ್ ಹಾಗೂ ಶಿವರೆಡ್ಡಿ ಇವರ ಮೇಲೆ
ಸೂಕ್ತ ಕ್ರಮ ಜರುಗಿಸುವಂತೆ ನೀಡಿದ ಫಿರ್ಯಾದಿಯ ಮೇಲಿಂದ ಸದರಿ ಆರೋಪಿತನ ಮೇಲೆ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇದೆ.
No comments:
Post a Comment