ದರೋಡೆ
ಮಾಡಲು ಪ್ರಯತ್ನಿಸಿ ಹಲ್ಲೆ ಮಾಡಿದ ಪ್ರಕರಣ :
ಕಮಲಾಪೂರ
ಠಾಣೆ : ಶ್ರೀ ಸಂತೋಷ ತಂದೆ ಚಂದ್ರಶ್ಯಾ ಕೇಶ್ವಾರ ಸಾ : ಡೊಂಗರಗಾಂವ ರವರು
ದಿನಾಂಕ:07/12/2014 ರಂದು ನನ್ನದು ಸಾಯಂಕಾಲ 7-00 ಗಂಟೆಯಿಂದ ಮರುದಿವಸ ಬೆಳಿಗ್ಗೆ 7-00 ಗಂಟೆಯವರೆಗೆ ಕರ್ತವ್ಯವಿದ್ದ ಪ್ರಯುಕ್ತ ನಾನು ಸಾಯಂಕಾಲ 7-00 ಗಂಟೆ ಸುಮಾರಿಗೆ ಸದರಿ ಟಾವರಿಗೆ ಬಂದು ಕರ್ತವ್ಯದ
ಮೇಲಿದ್ದೆನು. ಸದರಿ ದಿನಾಂಕದಂದು ರಾತ್ರಿ 9-00 ಗಂಟೆ ಸುಮಾರಿಗೆ ಊಟ
ಮಾಡಿಕೊಂಡು ಟಾವರದ ಹತ್ತಿರ ಇದ್ದ ಕೋಣೆಯಲ್ಲಿ ನಾನು ಕುಳಿತುಕೊಂಡಿದ್ದೆ. ಅಂದಾಜು ರಾತ್ರಿ 12-30 ಗಂಟೆ ಸುಮಾರಿಗೆ ನಮ್ಮ ಟಾವರಿನ ಗೇಟ ತೆರೆಯುವ ಸಪ್ಪಳ
ಕೇಳಿಸಿತು. ಅದಕ್ಕೆ ನಾನು ಬಾಗಿಲು ತೆರೆದು ಹೊರಗೆ ಬಂದು ನೋಡಲಾಗಿ, ಗೇಟ ಹತ್ತಿರ ಸುಮಾರು 8-10 ಜನರು ನಿಂತುಕೊಂಡಿದ್ದು.
ಅದರಲ್ಲಿ ಒಬ್ಬನು ತನ್ನ ಕೈಯಲ್ಲಿದ್ದ ಗುಲೇರನಿಂದ ಕಲ್ಲು ಹೊಡೆಯಲು ಆ ಕಲ್ಲು ನನ್ನ ಗದ್ದಕ್ಕೆ
ಬಡಿಯಿತು ಅದಕ್ಕೆ ನಾನು ಅಂಜಿ ನನ್ನ ರೂಮಿನಲ್ಲಿ ಹೋಗಿ, ಬಾಗಿಲು ಬಂದು ಮಾಡಿಕೊಂಡು
ಒಳಗಿನಿಂದ ನನ್ನ ಮೊಬೈಲ ಮುಖಾಂತರ ಟೆಕ್ನಿಶಿಯನ್ನಾದ ಉಮೇಶ ಇವರಿಗೆ ಫೋನ ಮಾಡಿ, ಯಾರೋ 8-10 ಜನರು ಟಾವರ
ಸಮೀಪದಲ್ಲಿದ್ದ ಬ್ಯಾಟರಿಗಳನ್ನು ಕದಿಯಲು ಬಂದಿದ್ದಾರೆ ಬೇಗನೇ ಬನ್ನಿ ಅಂತಾ ಹೇಳಿ ನನ್ನ
ಮೊಬೈಲದಲ್ಲಿದ್ದ ಸಿಮ್ ಹೊರಗೆ ತೆಗದು ಬಿಸಾಕಿರುತ್ತೇನೆ. ಅಷ್ಟರಲ್ಲಿ ಬಂದಿದ ಜನರ ಪೈಕಿ 3-4 ಜನರು ನನ್ನ ರೂಮಿನ ಮೇಲೆರಿ ಪತ್ರಾಗಳನ್ನು ಸರಿಸಿ ಒಳಗೆ
ಇಳಿದು ಬಂದು ಆ ಪೈಕಿ ಒಬ್ಬನು ತನ್ನ ಕೈಯಲ್ಲಿದ್ದ ರಾಡಿನಿಂದ ನನಗೆ ಹೊಡೆದನು. ಅದರಿಂದ ನನ್ನ ತಲೆಯ
ಮುಂಭಾಗಕ್ಕೆ ರಕ್ತಗಾಯವಾಗಿ ರಕ್ತ ಸೋರಹತ್ತಿತ್ತು ಇನ್ನೂಳಿದವರ ಪೈಕಿ ಒಬ್ಬನು ಇಟ್ಟಿಗೆಯಿಂದ
ಹೊಡೆಯಲು ನನ್ನ ಎಡಕಾಲ ಮೊಳಕಾಲಿಗೆ ಮತ್ತು ಬಲಗೈ ಮುಂಗೈಗೆ ಗುಪ್ತಗಾಯವಾಯಿತು ನಂತರ ಅವರೆಲ್ಲರೂ
ನನ್ನನ್ನು ರೂಮಿನಿಂದ ಹೊರಗೆ ಎಳೆದು ರೂಮಿನ ಹಿಂದುಗಡೆ ಒಯ್ದು ಎರಡು ಕಾಲು ಮತ್ತು ಕೈಗಳನ್ನು
ವೈರಿನಿಂದ ಕಟ್ಟಿ ಸಂದಿಯಲ್ಲಿ ಹಾಕಿ ಮೇಲುಗಡೆ ಕಬ್ಬಿಣದ ರ್ಯಾಕ್ಸ ಹಾಕಿರುತ್ತಾರೆ. ಅಷ್ಟರಲ್ಲಿ
ನಮ್ಮ ಟೆಕ್ನೀಶಿಯನ್ ಉಮೇಶ ಮತ್ತು ಇತರರು ನಮ್ಮ ಟಾವರ ಹತ್ತಿರ ಬಂದಿರುವ ಸಪ್ಪಳ ಕೇಳಿ ನಾನು
ಜೋರಾಗಿ ಬಿದ್ದಲ್ಲಿಂದ ಚಿರಾಡಲು ಅಲ್ಲಿಗೆ ಬಂದಿರುವ ಸುಮಾರು 8-10 ಜನರು ಟಾವರ ಹಿಂದುಗಡೆ ಇದ್ದ ಗುಡ್ಡದಲ್ಲಿ ಓಡಿ ಹೋದರು. ಹಾಗೆ
ಓಡಿ ಹೋಗುವಾಗ ನನ್ನಲ್ಲಿದ್ದ ಮೊಬೈಲನ್ನು ಕಸಿದುಕೊಂಡಿರುತ್ತಾರೆ. ಸದರಿ ಜನರು ಅಂದಾಜು 25 ರಿಂದ 30 ವರ್ಷ ವಯಸ್ಸಿನವರಿದ್ದು
ಕನ್ನಡ ಮತ್ತು ತೆಲಗು ಭಾಷೆಯಲ್ಲಿ ಮಾತನಾಡುತ್ತಿದ್ದರು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣ :
ಗ್ರಾಮೀಣ
ಠಾಣೆ : ದಿನಾಂಕ 27-11-2014 ರಂದು 5 ಪಿಎಂದಿಂದ 6 ಪಿಎಂದ ಅವಧಿಯಲ್ಲಿ ಅಪರಿಚಿತ
ಗಂಡು ಮನುಷ್ಯನು ಕೆರೆ ಭೋಸಗಾ ಕ್ರಾಸ ಕಡೆಯಿಂದ ಕಲಬುರಗಿ ಕಡೆಗೆ ನಡೆದುಕೊಂಡು,
ರೋಡಿನ ಎಡಗಡೆಯಿಂದ
ಬರುವಾಗ ಯಾವುದೋ ವಾಹನ ಚಾಲಕನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಅಪರಿಚಿತನಿಗೆ
ಅಪಘಾತಪಡಿಸಿ ಭಾರಿ ರಕ್ತಗಾಯಗೊಳಿಸಿ ಹಾಗೇ ಓಡಿಸಿಕೊಂಡು ಹೋಗಿದ್ದು ಅಂಬುಲೈನ್ಸ ಗಾಡಿಯವರು ಉಪಚಾರ
ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ಸೇರಿಕೆ ಮಾಡಿದ್ದು, ಸದರ ವ್ಯಕ್ತಿಯು ದಿನಾಂಕ 27-11-2014 ರಂದು ಆದ ರಸ್ತೆ ಅಪಘಾತಗಳಿಂದ
ಉಪಚಾರ ಹೊಂದುತ್ತಾ ಗುಣ ಮುಖವಾಗದೇ ಇಂದು ದಿನಾಂಕ 09-12-2014 ರಂದು ಸಂಜೆ 5-30 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಲಕ್ಷ್ಮೀಕಾಂತ ತಂದೆ ನಾಗೇಂದ್ರಪ್ಪಾ ಪಾಟೀಲ್ ಸಾ|| ಚೌಡೇಶ್ವರ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ
ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಲಾಲಸಾಬ ತಂದೆ ಬಾಲೇಸಾಬ
ಕಡಮೂಡ ಸಾ||
ಮಾಡಿಯಾಳ ರವರು ದಿನಾಂಕ
08-12-14 ರಂದು
1830 ಗಂಟೆಗೆ ಜಾಫರಲಿ ತಂದೆ ಮೈಬೂಬಸಾಬ ಭೈರಾಮಡಗಿ
ಇತನನ್ನು ಆತನ ಮನೆಯ ಮುಂದೆ ಘಟಾರ ನೀರಿನ ಸಂಭಂಧ ಕೇಳಲು ಹೋದಾಗ ಜಾಫರಲಿ ತಂದೆ ಮೈಬೂಬಸಾಬ ಭೈರಾಮಡಗಿ
ಆತನ ಸಂಗಡ ಮೂರು ಜನರು ತನಗೂ ಹಾಗೂ ತನ್ನ ತಮ್ಮನಾದ ವಜೀರಸಾಬನಿಗೂ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ
ತಡೆದು ಹೊಡೆ ಬಡೆ ಮಾಡಿ ಜೀವ ಭಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment