ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 15-01-2015 ರಂದು ಸಾಯಂಕಾಲ ಭೀರಪ್ಪ @ ಲಕ್ಷ್ಮಣ ತಂದೆ ಬಸವಂತ್ರಾಯ ನಾದ ಈತನು ನನ್ನ ಗಂಡ ಗುರಪ್ಪ ಬಾದನಳ್ಳಿ ಈತನಿಗೆ ಸರಾಯಿ
ಕುಡಿಸುತ್ತಿದ್ದಾನೆ ಅಂತಾ ಗುರಪ್ಪನ ಮನೆಯವರಿಗೆ ಹೇಳಿದಕ್ಕೆ, ನನ್ನ ಗಂಡ ಭೀರಪ್ಪ @ ಲಕ್ಷ್ಮಣ ಈತನಿಗೆ ಗುರಪ್ಪ ಬಾದನಳ್ಳಿ ಇವರ ಮನೆಯವರಿಗೆ
ನಾನೆ ಸರಾಯಿ ಕುಡಿಸುತ್ತಿದ್ದಾನೆ ಅಂತಾ ಯಾಕೆ ಹೇಳಿದಿ ಅಂತಾ ಕೇಳಿದಕ್ಕೆ ಬೀರಪ್ಪ @ ಲಕ್ಷ್ಮಣ ಇವನು ನನ್ನ ಗಂಡನ ಮೇಲೆ ತಿರ್ವ ದ್ವೇಷ ಸಾದಿಸುತ್ತಾ ನನ್ನ ಗಂಡನಿಗೆ ನಮ್ಮ
ಗ್ರಾಮದ ಹೊಸ ಊರಿನ ಲಕ್ಷ್ಮೀ ಗುಡಿಯ ಹಿಂದೆ ಇರುವ ಮಲ್ಲಣ್ಣ ಪೂಜಾರಿ ಇವರ ಅಂಗಡಿಯ ಮುಂದೆ ರಾತ್ರಿ
9:30 ಗಂಟೆ ಸುಮಾರಿಗೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಹೊಂಚುಹಾಕಿ ಕಾದು ಕುಳಿತು ಜೆಂಬೆದಿಂದ
ನನ್ನ ಗಂಡನ ಏದೆಗೆ ಚುಚ್ಚಿ ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾನೆ, ಕಾರಣ ಭೀರಪ್ಪ @ ಲಕ್ಷ್ಮಣ ತಂದೆ ಬಸವಂತ್ರಾಯ ನಾದ ಸಾ : ಮಂಗಳೂರ ಇವನ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ಶ್ರೀಮತಿ ಅನುಸುಬಾಯಿ ಗಂಡ ಸಿದ್ದಲಿಂಗಯ್ಯಾ ಮಠ ಸಾ ಮಂಗಳೂರು ತಾ ಅಫಜಲಪೂರ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ
ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ: 28/12/2014 ರಂದು ಬೆಳಿಗ್ಗೆ ಶ್ರೀ ಮಹಮ್ಮದ ಹಸನ ತಂದೆ
ವಸಿವುಲ್ಲಾ ರಹೇಮಾನ ಸಾ : ವಿದ್ಯಾ ನಗರ ಕಲಬುರಗಿ ರವರು ತನ್ನ ಮೋ/ಸೈಕಲ್ ನಂ; ಕೆಎ 39 ಹೆಚ್. 4514
ನೆದ್ದರ ಮೇಲೆ ಹಿಂದೆ ತನ್ನ ತಾಯಿಯಾದ ರಿಯಾಜವುನ್ನಿಸ ಇವರಿಗೆ ಕೂಡಿಸಿಕೊಂಡು ಎಸ್.ವಿ.ಪಿ.ಸರ್ಕಲ್
ದಿಂದ ಜಗತ ಸರ್ಕಲ್ ರೋಡ ಕಡೆಗೆ ಚಲಾಯಿಸಿಕೊಂಡು
ಹೋಗುತ್ತಿದ್ದಾಗ ಕೆ.ಬಿ.ಎನ್.ಆಸ್ಪತ್ರೆಯ ಎದುರಿನ ಎನ್.ಇ.ಕೆ.ಆರ್.ಟಿ.ಸಿ ಕಾರ್ಯಾಲಯ
ಎದುರಿನ ರೋಡ ಮೇಲೆ ಎದುರುಗಡೆಯಿಂದ ರಾಂಗ ಸೈಡ ಮೂಲಕ ಕಾರ ನಂ; ಕೆಎ 32 ಎಮ್ 9300 ರ
ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ
ಚಲಾಯಿಸುತ್ತಿರುವ ಮೋ/ಸೈಕಲಕ್ಕೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತಮಾಡಿ ಫಿರ್ಯಾದಿಯ ಎಡಗಣ್ಣಿನ
ಹತ್ತಿರ ತಕ್ತಗಾಯ ,ಎಡಗಡೆ ಹಣೆಗೆ ಗುಪ್ತಗಾಯ ,ಬಾಯಿಗೆ ಪೆಟ್ಟು ಬಿದ್ದು ತುಟಿಗೆ ರಕ್ತಗಾಗಯ, ಮುಗಿನ ಕೆಳಗೆ ರಕ್ತಗಾಯ, ಗದ್ದಕ್ಕೆ
ರಕ್ತಗಾಯವಾಗಿತ್ತು. ಫಿರ್ಯಾದಿ ತಾಯಿಗೆ ತಲೆಗೆ ಭಾರಿ ಗುಪ್ತ ಪೆಟ್ಟು ಮಾಡಿ ಕಾರ ಸಮೇತ ಚಾಲಕ ಓಡಿ
ಹೋಗಿದ್ದು ದಿನಾಂಕ 15-01-2015 ರಂದು ನನ್ನ ತಾಯಿಗೆ ಹೆಚ್ಚಿನ ಉಪಚಾರ ಕುರಿತು ಸೊಲಾಪೂರ
ಗಂಗಾಮಾಯಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿನ ವೈದ್ಯರು ಭಾರಿಪೆಟ್ಟು ಬಿದ್ದಿದ್ದರಿಂದ ನಿಧಾವನಾಗಿ
ಗುಣಮುಖರಾಗುತಾರೆ ಅಂತಾ ತಿಳಿಸಿದರಿಂದ್ದ ಫಿರ್ಯಾದಿ ತನ್ನ ತಾಯಿಗೆ ಕಲಬುರಗಿಯಲ್ಲಿ ತೋರಿಸಬೇಕು
ಅಂತಾ ದಿನಾಂಕ 15-01-2015 ರಂದು ಒಂದು ಅಂಬುನೇನ್ಸ ವಾಹನದಲ್ಲಿ ಹಾಕಿಕೊಂಡು ಸೊಲಾಪೂರದಿಂದ
ಕಲಬುರಗಿಗೆ ಬರುವಾಗ ಮಾರ್ಗ ಮದ್ಯದಲ್ಲಿ ರಾತ್ರಿ 02-30 ಎ.ಎಮ್. ಕ್ಕೆ ಮೃತಪಟ್ಟಿರುತ್ತಾರೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 15.01.2015 ರಂದು 04.45 ಪಿಎಮ್ ಕ್ಕೆ ಮುಸ್ಲಿಂ ಚೌಕ
ಹತ್ತಿರ ಇರುವ ಮೇಡಿಪ್ಲಸ ಮೇಡಿಕಲ ಎದುರು ರಸ್ತೆ ಮೇಲೆ ಶ್ರೀ ಮಹ್ಮದ ಮಶಾಖ ತಂದೆ ಮಹ್ಮದ ಖಾಸಿಮ ಸಾ : ಮಹಿಬುಬನಗರ ಕಲಬುರಗಿ. ರವರು ತನ್ನ ಮಗನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತನಾದ ಮಹ್ಮದ ಹಾಜಿ ತಂದೆ ಗುಲಾಂ ಖುರೇಶಿ ಇತನು ತನ್ನ ಮೋಟಾರ ಸೈಕಲ ನಂ
ಕೆ ಎ 32. ಇಇ 2805 ನೇದ್ದನ್ನು ಡಂಕಾ ಕ್ರಾಸ ಕಡೆಯಿಂದ ಅತಿವೇಗ ಮತ್ತು ನಿರ್ಲಕ್ಷತನದಿಂದ
ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫೀರ್ಯಾದಿಗೆ ಹಿಂದಿನಿಂದ ಡಿಕ್ಕಿ ಪಡೆಸಿ
ಅಪಘಾತ ಪಡಿಸಿದ್ದು ತಲೆಗೆ, ಕಪಾಳಕ್ಕೆ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment