Police Bhavan Kalaburagi

Police Bhavan Kalaburagi

Thursday, March 12, 2015

KALABURAGI DIST REPORTED CRIMES

ಪತ್ರಿಕಾ ಪ್ರಕಟಣೆ

ಅಶೋಕ ನಗರ ಪೊಲೀಸ ಠಾಣೆಯ ಅಧಿಕಾರಿ ಸಿಬ್ಬಂದಿ ಜನರ ಕಾರ್ಯಾಚರಣೆ  ಮೂರು ಜನ ಸರಗಳ್ಳರ ಬಂಧನ 2, ಲಕ್ಷ ರೂ ಮೌಲ್ಯದ ಆಭರಣ ಮತ್ತು ವಾಹನಗಳು ಜಪ್ತಿ
       ಅಶೋಕ ನಗರ ಪೊಲೀಸ ಠಾಣೆಯ ವ್ಯಾಫ್ತಿಯ ಎನ್.ಜಿ.ಓ ಕಾಲೋನಿ ಬಂಜಾರ ರೋಡಿನಲ್ಲಿ ಶ್ರೀಮತಿ ಮಂದಾಕಿನಿ ಗಂಡ ದಿ:ವೆಂಕಟೇಶ್ವರ ದೇಸಾಯಿ ಸಾ: ಎನ್.ಜಿ.ಓ ಕಾಲೋನಿ ಕಲಬುರಗಿ ರವರು ದಿನಾಂಕ 20-01-2015 ರಂದು ಬೆಳ್ಳಿಗೆ ಅಂಗಡಿಗೆ ಹೋಗಿ ಮನೆಗೆ ಬರುತ್ತಿರುವಾಗ ಪಲ್ಸರ ಬೈಕ ಮೇಲೆ ಇಬ್ಬರು ಸವಾರರು, ಬಂಗಾರದ ಚೈನ ಕಿತ್ತುಕೊಂಡು ಹೋಗಿರುತ್ತಾರೆ ಅಂತಾ ದೂರಿನ ಮೇರೆಗೆ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ 07/2015 ಕಲಂ 392 ಐಪಿಸಿ ರ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.  ಈ ಪ್ರಕರಣದಲ್ಲಿ ಸರಗಳ್ಳತನ ಮಾಡುವ ಆರೋಪಿತರ ಪತ್ತೆಗಾಗಿ ಶ್ರೀ ಅಮಿತ ಸಿಂಗ್ ಐಪಿಎಸ ಎಸ.ಪಿ ಕಲಬುರಗಿ ಶ್ರೀ ಮಹಾಂತೇಶ ಅಪರ ಎಸ.ಪಿ ಕಲಬುರಗಿ  ಮತ್ತು ಶ್ರೀ ಎಂ.ಬಿ ನಂದಗಾಂವಿ ಡಿ.ಎಸ.ಪಿ (ಎ) ಉಪ-ವಿಭಾಗ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಸುಧಾ ಆದಿ ಪೊಲೀಸ ಇನ್ಸಪೇಕ್ಟರ ಅಶೋಕ ನಗರ ಪೊಲೀಸ ಠಾಣೆ ಮತ್ತು ಸಿಬ್ಬಂದಿ ಜನರಾದ ಸುರೇಶಕುಮಾರ ಸಿಪಿಸಿ 534, ಶಿವಗೊಂಡ ಪಿಸಿ 1162 , ನಿಂಗಣ್ಣಗೌಡ ಪಿಸಿ 1148, ಶಿವಪ್ರಕಾಶ ಪಿಸಿ 615, ರಪಿಯೋದ್ದಿನ ಪಿಸಿ 370, ಚಂದ್ರಕಾಂತ ಪಿಸಿ 176, ಬಸವರಾಜ ಪಿಸಿ 765, ಗೀತಾ ಮಪಿಸಿ 586 ರವರನ್ನು ಒಳಗೊಂಡ ತಂಡವು ದಿನಾಂಕ 10-03-2015 ರಂದು ಮದ್ಯಾಹ್ನ ವೇಳೆಗೆ ಗೋದುತಾಯಿ ನಗರ ಮದರ ತೇರಿಸಾ ಶಾಲೆಯ ಹತ್ತಿರ ಸರಗಳ್ಳರಾದ 1) ಸಿದ್ದು @ ಸಿದ್ರಾಮ ತಂದೆ ಬಲಭೀಮ ದಾವಣಿ ವ-19 ವರ್ಷ ಜಾ: ಗೊಲ್ಲರ ಸಾ: ವಡ್ಡರಗಲ್ಲಿ ಬ್ರಹ್ಮಪೂರ ಕಲಬುರಗಿ 2) ರೇವಣಸಿದ್ದ ತಂದೆ ಸಾಯಬಣ್ಣ ಮಾಂಗ ವ-22 ವರ್ಷ ಜಾ:ಎಸ.ಸಿ ಸಾ: ಹುಣಸಿಹಡಗಿಲ್ 3) ವರುಣಕುಮಾರ ತಂದೆ ಮಲ್ಲಿಕಾರ್ಜುನ  ವ-22 ವರ್ಷ ಜಾ;ಎಸ.ಸಿ ಸಾ: ಹುಣಸಿಹಡಗಿಲ್ ಹಾ:ವ: ಇಂದಿರಾ ನಗರ ಕಲಬುರಗಿ ರವರಿಗೆ ದಸ್ತಗಿರಿ ಮಾಡಿ ಅಶೋಕ ನಗರ ಪೊಲೀಸ ಠಾಣೆಯ ಗುನ್ನೆ ನಂ 7/2015 ಕಲಂ 392 ಐಪಿಸಿ ಮತ್ತು ಸ್ಪೇಶನ ಬಜಾರ ಪೊಲೀಸ ಠಾಣೆಯ ಗುನ್ನೆ ನಂ 42/2015 ಕಲಂ 392 ಐಪಿಸಿ ಎರಡು ಪ್ರಕರಣದಲ್ಲಿ ಆರೋಪಿತರಿಂದ ಎರಡು ಬಜಾಜ ಪಲ್ಸರ ಬೈಕಗಳು , 20 ಗ್ರಾಂ ಬಂಗಾರದ ಎರಡು ಲಾಕೇಟಗಳು ಮತ್ತು ವಿವಿಧ ಕಂಪನಿಯ 6 ಮೊಬಾಯಲ್ ಪೋನಗಳು ಸೇರಿ ಒಟ್ಟು 2,00,000/_ ರೂ ಮೌಲ್ಯದ ವಾಹನ ಮತ್ತು ಬಂಗಾರದ ಲಾಕೇಟಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳವು ಪ್ರಕರಣ:
ಅಶೋಕನಗರ ಪೊಲೀಸ್ ಠಾಣೆ : ದಿನಾಂಕ 11/03/2015 ರಂದು ಶ್ರೀ ಶ್ರೀಪಾದ ತಂದೆ ಹಣಮಂತರಾವ ಕುಲಕರ್ಣಿ ಸಾ:ವಿದ್ಯಾನಗರ ಕಲಬುರಗಿ ರವರು ಠಾಣೇಗೆ ಹಾಜರಾಗಿ ದಿನಾಂಕ 23-02-2015 ರಂದು ವಿದ್ಯಾನಗರದ ನನ್ನ ಮನೆಯ ಮುಂದೆ ರಾತ್ರಿ 11 ಪಿಎಮ್ ಕ್ಕೆ ನಿಲ್ಲಿಸಿದ್ದ ಮೋಟರ ಸೈಕಲ್ ಕೆಎ- 32 ಕೆ- 7456 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ರಾಘವೇಂದ್ರ ನಗರ ಪೊಲೀಸ್ ಠಾಣೆ : ದಿನಾಂಕ:11/03/2015 ರಂದು ಶ್ರೀಮತಿ ಸುಮಂಗಲಾ ಗಂಡ ಮಲ್ಲಿಕಾರ್ಜುನ ನಾಗಶಟ್ಟಿ ಸಾ:ವಿದ್ಯಾನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ದಿನಾಂಕ:10/03/2015 ರಂದು ಸಾಯಂಕಾಲ 6.30 ಗಂಟೆಗೆ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ರಥೋತ್ಸವ ಇದ್ದ ಪ್ರಯುಕ್ತ ದೇವರ ದರ್ಶನ ಕುರಿತು ಬಂದಿದ್ದು ಸಾಯಂಕಾಲ 6.45 ಗಂಟೆ ಸುಮಾರಿಗೆ ರಥದ ಹತ್ತಿರ ದರ್ಶನ ಮಾಡುವಾಗ ಜನ ದಟ್ಟಣೆಯಲ್ಲಿ ನನ್ನ ಕೊರಳಲಿದ್ದ 50 ಗ್ರಾಂ ಬಂಗಾರದ ಮಂಗಳಸೂತ್ರ ಅ.ಕಿ.1,30,000/-ರೂ  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ:  ದಿನಾಂಕ 11-03-2015 ರಂದು ರಾತ್ರಿ 8-30 ಗಂಟೆಗೆ ಶಿವಶಂಕರ ತಂದೆ ಬಾಬುರಾವರವರು  ರಾಮ ಮಂದಿರ ಹತ್ತಿರ ಮೋ/ಸೈಕಲ ನಂಬರ ಕೆಎ-32 ಇಡಿ-9381 ನೇದ್ದನ್ನು ರಾಮ ಮಂದಿರ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ಕರುಣೇಶ್ವರ ನಗರ ಕ್ರಾಸ ಹತ್ತಿರ ಓಮಿನಿ ವ್ಯಾನ ನಂಬರ ಕೆಎ-22 ಎಮ್-5282 ನೇದ್ದರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಬಂದು ಮೋ/ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಪಡಿಸಿದ್ದು  ನನಗೆ ತಲೆಯ ಮೇಲೆ ರಕ್ತಗಾಯ, ಬಲ ಮೆಲಕಿಗೆ ರಕ್ತಗಾಯ, ಹಾಗು ಬಲಗಾಲಿನ ಕಿರುಬೆರಳಿಗೆ ರಕ್ತಗಾಯಗಳಾಗಿದ್ದು. ಓಮಿನಿ ವ್ಯಾನ ಚಾಲಕ ವ್ಯಾನನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಆತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಗ್ರಾಮೀಣ ಠಾಣೆ: ದಿನಾಂಕ:-12/03/2015 ರಂದು ಬೆಳಿಗ್ಗೆ 09:00 ಗಂಟೆ ಸುಮಾರಿಗೆ ಶ್ರೀ ಸೈಯ್ಯದ ಆರೀಫ್ ಪಾಶಾ ತಂದೆ ಸೈಯ್ಯದ  ಅಮಿನೋದ್ದಿನ್ ಸಾ|| ಯದುಲ್ಲಾ ಕಾಲೋನಿ ಕಲಬುರಗಿ ತನ್ನ ಮೋಟಾರ್ ಸೈಕಲ್ ಹಿರೋಹೊಂಡಾ ಫ್ಯಾಶನ್ ನಂ- ಕೆಎ-32-ಯು-758 ನೇದ್ದರ ಮೇಲೆ ತನ್ನ ಮಗನಾದ ಸೈಯ್ಯದ ಕಮ್ರಾನ್ ಪಾಶಾ ಈತನಿಗೆ  ಹಿಂದೆ ಕೂಡಿಸಿಕೊಂಡು ತಮ್ಮೂರಾದ ನಾಗೂರಕ್ಕೆ ಹೋಗುವಾಗ ಕಲಬುರಗಿ ಹುಮ್ನಾಬಾದ ರೋಡಿನ ಉಪಳಾಂವ ಕ್ರಾಸ್ ಹತ್ತಿರ ಎದರುಗಡೆಯಿಂದ ಬರುತ್ತಿದ್ದ ಟೀಪ್ಪರ ನಂ: ಕೆಎ-32-ಬಿ-2807 ನೇದ್ದರ ಚಾಲಕನು ಅತಿ ವೇಗ & ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿ ಅಪಘಾತಪಡಿಸಿದ್ದರಿಂದ ತನಗೆ ಗಾಯಗಳಾಗಿದ್ದು ತನ್ನ ಮಗನಾದ ಕಮ್ರಾನ್ ಪಾಶಾ ಈತನಿಗೆ ತಲೆಯ ಹಿಂದೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ಎಡ ಕಿವಿಯಿಂದ ರಕ್ತ ಬಂದು ಬಲ ತೊಡೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: