ಅಪಘಾತ ಪ್ರಕರಣ:
ಗ್ರಾಮೀಣ
ಪೊಲೀಸ ಠಾಣೆ: ದಿನಾಂಕ: 27/4/2015 ರಂದು ವಿನೋದ ತಂದೆ ಜಗನ್ನಾಥ ಹೂಗಾರನು ತನ್ನ ಹೋಂಡಾ ಶೈನ್ ಮೋ.ಸೈ ನಂ ಕೆಎ 32 ಇಸಿ 4539 ನೇದ್ದರ ಮೇಲೆ ನಾಗೇಶ ತಂದೆ ಸೈಬಣ್ಣ ಪೂಜಾರಿ ಈತನೊಂದಿಗೆ ಹೋಗುತ್ತಿರುವಾಗ ವಿನೋದ ತಂದೆ ಜಗನ್ನಾನು ಮೋ.ಸೈ ಅನ್ನು ಅತೀ ವೇಗ ಮತ್ತು ನಿಷ್ಕಾಳಿಜಿತನದಿಂದ ಚಲಾಯಿಸಿ ಪಟ್ಟಣ ಗ್ರಾಮದಿಂದ ಸ್ವಲ್ಪ ಮುಂದೆ ಇರುವ ಗ್ಯಾರೇಜ್ ಹತ್ತಿರ ರಸ್ತೆ ಮೇಲೆ ನಿಂತಿದ್ದ ಟ್ರಾಕ್ಟರ್ ನಂ ಕೆಎ 32 ಟಿಎ 7393
ನೇದ್ದಕ್ಕೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿ ಮೋ.ಸೈ ನೊಂದಿಗೆ ಕೆಳಗೆ ಬಿದ್ದಾಗ ಹಣೆಗೆ ಮೂಗಿಗೆ, ಭಾಯಿಗೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಬಾಯಿಯಿಂದ ರಕ್ತಸ್ರಾವವಾಗಿ ವಿನೋದ ಸ್ಥಳದಲ್ಲೆ ಮೃತ ಪಟ್ಟಿದ್ದು ಇರುತ್ತದೆ. ಅಂತಾ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ .
ಸೇಡಂ ಪೊಲೀಸ್ ಠಾಣೆ:ದಿನಾಂಕ: 27-05-2015 ರಂದು ಶ್ರೀಮತಿ ಮನಿಲಾ ಗಂಡ ವೆಂಕಟೇಶ ಸಾ: ಮುಧೋಳ ಇವರು ಠಾಣಾಗೆ ಹಾಜರಾಗಿ ದಿನಾಂಕ: 26-04-15 ರಂದು ಸಾಯಾಂಕಾಲ
ನನ್ನ ಗಂಡ ವೆಂಕಟೇಶನು ಮುಧೋಳದಲ್ಲಿರುವ ತನ್ನ ತಾಯಿ ಹತ್ತಿರ ಹೋಗಿ ಬರುವುದಾಗಿ ಮೋಟಾರು ಸೈಕಲ್ ನಂ ಕೆಎ-32-ಇಇ-5235 ನ್ನೇದ್ದನ್ನು ನಡೆಸಿಕೊಂಡು ಮುಧೋಳಕ್ಕೆ ಹೋಗಿದ್ದು . ರಾತ್ರಿ ಮರಳಿ ಸೇಡಂಕ್ಕೆ ಬರುತ್ತಿರುವಾಗ ಅವರಿಗೆ ಯಾವುದೋ ವಾಹನ ಡಿಕ್ಕಿ ಹೊಡೆದುಕೊಂಡು ಹೋಗಿದ್ದು ಅವರಿಗೆ ಭಾರಿ ರಕ್ತ ಗಾಯ ತರಚಿದ ಗಾಯವಾಗಿದ್ದು ಅವರನ್ನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ತಂದು ನಂತರ ಆಸ್ಪತ್ರೆಯಿಂದ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಆಸ್ಪತ್ರೆಗೆ 108 ಅಂಬುಲೆನಸ್ ನಲ್ಲಿ ಹೋಗುತ್ತಿದ್ದಾಗ ಗುಲಬರ್ಗಾದ ಸಮೀಪ ಹೋದಾಗ ನನ್ನ ಗಂಡನು ಮೃತಪಟ್ಟಿರುತ್ತಾನೆ ಅಪಘತಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಅರ್ಜಿ ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ ಠಾಣೆ: ಶ್ರೀ ವಿಧ್ಯಾಸಾಗರ ತಂದೆ ಸಿದ್ದಯ್ಯ ಹಿರೇಮಠ ಠಾಣೆಗೆ ಹಾಜರಾಗಿ ದಿನಾಂಕ 27.04.2015 ರಂದು ಬೇಳಗ್ಗೆ 05:00 ಗಂಟೆಗೆ ಜೇವರ್ಗಿ ಶಹಾಪುರ ರಾಜ್ಯ ಹೆದ್ದಾರಿಯ ಮೇಲೆ ಚಿಗರಳ್ಳಿ ಕ್ರಾಸ್ ಸಮೀಪ ಹುಂಡೈ ಸೆಂಟ್ರೋ ಕಾರ್ ನಂ ಕೆ.ಎ32ಎಮ್3008 ನೇದ್ದರ ಚಾಲಕನು ತನ್ನ ಕಾರ್ ಅನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬರುತ್ತಿದ್ದಾಗ ರೋಡಿನಲ್ಲಿ ಅಡ್ಡಲಾಗಿ ಬರುತ್ತಿದ್ದ ನಾಯಿಗೆ ಕಟ್ ಹೋಡೆಯಲು ಹೋಗಿ ರೋಡಿನ ಬಲ ಸೈಡಿನಲ್ಲಿ ಕಾರ್ ಅನ್ನುಪಲ್ಟಿ ಮಾಡಿ ಕಾರ್ ಅನ್ನು ಜಖಂ ಗೊಳಿಸಿರುತ್ತಾನೆ ಕಾರಣ ಸದರಿ ಕಾರ್ ಚಾಲಕನ ವಿರುಧ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ
ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಿರುಕುಳ ಪ್ರಕರಣ
ಮಹಿಳಾ ಪೊಲೀಸ ಠಾಣೆ:ದಿನಾಂಕ
27-04-2015 ರಂದು ಬಸವೇಶ್ವರ ಆಸ್ಪತ್ರೆ ಕಲಬುರಗಿಯಲ್ಲಿ ಉಪಚಾರ ಪಡೆಯುತ್ತಿದ್ದ ವಿಜಯಲಕ್ಷ್ಮೀ ಗಂಡ ರಾಮಚಂದ್ರ ಆಲಗೂಡ ವಯಾ:35 ವರ್ಷ ಜಾ:ಲಿಂಗಾಯತ ಸಾ:ಸಂತೋಷ ಕಾಲೋನಿ ಕಲಬುರಗಿ ಇವರು ತಮ್ಮ ಹೇಲಿಕೆ ಸಲ್ಲಿಸಿದ್ದೇನೆಂದರೆ ಸುಮಾರು 16 ವರ್ಷಗಳ ಹಿಂದೆ ನನ್ನ ಸೋದರ ಮಾವ
ರಾಮಚಂದ್ರ ಇತನೊಂದಿಗೆ ಮದುವೆಯಾಗಿದ್ದು. ಒಂದು ಗಂಡು, ಒಂದು ಹೆಣ್ಣು ಮಗಳಿದ್ದು.
ನಾನು ದುಡಿದ ಹಣವನ್ನು ತನಗೆ ಕುಡಿಯಲು ಕೊಡು ಅಂತಾ ದಿನಾಲೂ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡುತ್ತಿದ್ದನು. ನಾನು ಹಿಂಸೆಯನ್ನು ತಾಳಲಾರದೇ ನನ್ನ ತವರು ಮನೆಯಾದ ಸಂತೋಷ ಕಾಲೋನಿಯಲ್ಲಿ ಹೋಗಿ ಉಳಿದುಕೊಂಡಿದ್ದು.
ದಿನಾಂಕ 27-04-2015 ರಂದು ನಾನು ಮಹಾ ನಗರ ಪಾಲಿಕೆಗೆ ಹೋಗಿದ್ದಾಗ,
ನನ್ನ ಗಂಡ ಬಂದವನೇ ಅವಾಚ್ಯ ಶಬ್ದಗಳಿಂದ ಬೈಯ್ದು ನನಗೆ ಹಣ ಕೊಡು ಅಂದರೆ ಕೊಡುತ್ತಿಲ್ಲ ಇವತ್ತು ನಿನಗೆ ಖಲಾಸ ಮಾಡಿ ಬಿಡುತ್ತೇನೆ ಅಂತಾ ಅಂದುತನ್ನ ಹತ್ತಿರವಿದ್ದ ಚಾಕುವಿನಿಂದ ನನ್ನ ಕುತ್ತಿಗೆಗೆ ಚುಚ್ಚಿದ್ದು ನನ್ನ ಗಂಡನ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಕೊಟ್ಟ ಹೇಳಿಕೆಯ ಸಾರಾಂಶದ ಮೇಲಿಂದ ಮಹಿಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಆಕಸ್ನಿಕ ಗುಂಡು ತಗುಲಿ ವ್ಯಕ್ತಿ ಸಾವು:
ಅಪಜಲಪೂರ ಠಾಣೆ: ದಿನಾಂಕ 27/04/2015
ರಂದು ಶ್ರೀ ಬಸಣ್ಣ ದೇಸಾಯಿ ಸಾ: ಬೋಸಗಾ ತಾ: ಅಫಜಲಪೂರ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ 27-04-2015
ರಂದು ನಮ್ಮೂರಲ್ಲಿ, ಹೊನ್ನಲಿಂಗೇಶ್ವರ ದೇವರ ಜಾತ್ರೆ ಇದ್ದು,
ಈ ಜಾತ್ರೆಗೆ ನಾನು ಮತ್ತು ನನ್ನ ಮಗ ಗಿರಿಮಲ್ಲ ಹಾಗು ನಮ್ಮೂರಿನ ರುದ್ರುಗೌಡ ಪಾಟೀಲ,
ತುಕಾರಾಮ ಮಾಶಾಳ,
ರಾಜು ಬಿರಾದಾರ,
ನಿಂಗಪ್ಪಾ ಕಲ್ಲೂರ,
ಮಲ್ಲಿಕಾರ್ಜುನ ಸುತಾರ ಹಾಗು ಇನ್ನಿತರರು
ಸೇರಿಕೊಂಡು ಹೊನ್ನ ಲಿಂಗೇಶ್ವರ ದೇವರ ಗುಡಿಯ ಮುಂದೆ ಅಗ್ಗಿ ಕುಣಿ ಹತ್ತಿರ ಇದ್ದಾಗ ಮದ್ಯಾಹ್ನ 1;30
ಗಂಟೆ ಸುಮಾರಿಗೆ ನಮ್ಮೂರ ಶಂಕರಗೌಡ ತಂದೆ ಸಾಹೆಬಗೌಡ ಪಾಟೀಲನು ತನ್ನ ಅಣ್ಣನಾದ ಸಿದ್ದನಗೌಡ ತಂದೆ ಸಾಹೇಬಗೌಡ ಪಾಟೀಲನ ಡಿ.ಬಿ.ಬಿ.ಎಲ್ (ಜೋಡಬಾರ) ಬಂದುಕನ್ನು ತೆಗೆದುಕೊಂಡು ಬಂದು ಗುಡಿಯ ಮುಂದೆ ಅಗ್ಗಿ ಕುಣಿಯ ಹತ್ತಿರ ನಿಂತು ಗಾಳಿಯಲ್ಲಿ ಗುಂಡು ಹಾರಿಸುವ ಸಲುವಾಗಿ ತನ್ನ ಕೈಯಲ್ಲಿದ್ದ ಬಂದುಕನ್ನು ಮೇಲೆ ಮಾಡಿ ಗುಂಡು ಹಾರಿಸಿದಾಗ ಗುಂಡು ಹಾರಲಿಲ್ಲಾ,
ನಂತರ ಬಂದುಕನ್ನು ಸ್ವಲ್ಪ ಕೆಳಗೆ ಮಾಡಿ ಅದರ ಬೋರನ್ನು ಒತ್ತಿ ಸರಿ ಪಡಿಸಿದಾಗ ಆಕಸ್ಮಿಕವಾಗಿ ಟ್ರಿಗರಗೆ ಕೈತಾಗಿ ಗುಂಡು ಹಾರಿದ್ದು,
ಸದರಿ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಾಗಿದ್ದರಿಂದ ಭಾರಿ ರಕ್ತಗಾಯ ಹೊಂದಿ ಅವನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ಶಂಕರಗೌಡ ತಂದೆ ಸಾಹೇಬಗೌಡ ಪಾಟೀಲನು ಯಾವುದೆ ತರಹದ ಅಧೀಕೃತ ಲೈಸನ್ಸ್ ವಗೈರೆ ಇಲ್ಲದೆ,
ಬಂದೂಕು ತರಬೇತಿ ಹೊಂದದೆ ಜನರ ಮದ್ಯ ನಿಂತುಕೊಂಡು ಗುಂಡು ಹಾರಿಸಿದರೆ ಯಾರಿಗಾದರು ತಗಲಿ ಸಾಯಬಹುದು
ಅಂತಾ ತಿಳುವಳಿಕೆ ಇದ್ದರು ಕೂಡ,
ಅದರಂತೆ ಸಿದ್ದನಗೌಡ ಪಾಟೀಲ ಇವನು ತನ್ನ ಹೆಸರಲ್ಲೆ ಇದ್ದ ಬಂದೂಕನ್ನು ಸುರಕ್ಷಿತವಾಗಿ ಇಟ್ಟುಕೊಳ್ಳದೆ ಅನವಶ್ಯಕವಾಗಿ ತನ್ನ ಸಹೋದರ ಶಂಕರಗೌಡನ ಕೈಯಲ್ಲಿ ಕೊಟ್ಟು,
ಈ ರೀತಿ ಆಕಸ್ಮಿಕ ಬಂದೂಕಿನ ಟ್ರಿಗರ್ ಒತ್ತಿದ್ದರಿಂದ ಬಂದೂಕಿನಿಂದ ಹಾರಿದ ಗುಂಡು ಪಕ್ಕದಲ್ಲಿ ನಿಂತಿದ್ದ ನನ್ನ ಮಗ ಗಿರಿಮಲ್ಲನ ತಲೆಗೆ ತಗಲಿ ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ,
ಕಾರಣ ಮಾನ್ಯ ರವರು ಶಂಕರಗೌಡ ಪಾಟೀಲ ಮತ್ತು ಸಿದ್ದನಗೌಡ ಪಾಟೀಲ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment