ಮಟಕಾ
ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ:06/04/2015 ರಂದು ಬೆಳಗ್ಗೆ ಠಾಣಾ ವ್ಯಾಪ್ತಿಯಲ್ಲಿ ಬರುವ ಎಂ.ಎಸ್.ಕೆ.ಮೀಲ್ ಬಡಾವಣೆಯ ಖದೀರ ಚೌಕ
ಹತ್ತಿರ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ರಾಘವೇಂದ್ರ ನಗರ
ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಹ್ಮದಿ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ
ಅಲ್ಲಿ ಒಬ್ಬ ಮನುಷ್ಯನು ರಸ್ತೆ ಪಕ್ಕದಲ್ಲಿ ನಿಂತು ಬಾಂಬೆ ಕಲ್ಯಾಣ ಮಟಕಾ ನಂಬರಕ್ಕೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇವೆ ಅಂತಾ ಕೂಗುತ್ತಾ ಸಾರ್ವಜನಿಕರಿಂದ
ಹಣ ಪಡೆದು ಮಟಕಾ ನಂಬರ ಚೀಟಿ ಬರೆಯುತ್ತಾ ಒಂದು ಚೀಟಿ ಸಾರ್ವಜನಿಕರಿಗೆ ಕೊಟ್ಟು ಇನ್ನೊಂದು ಚೀಟಿ
ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು ಇದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಆತನನ್ನು
ಹಿಡಿದು ಹೆಸರು ವಿಳಾಸ ವಿಚಾರಿಸಿದ್ದು ಅವನು ತನ್ನ ಹೆಸರು ಗೌಸಮೀಯಾ ತಂದೆ ಮಹೇಬೂಬಸಾಬ ನಾಗೂರ ಸಾ:ರಾಮಚಕ್ಕಿ
ಹತ್ತಿರ ಜಿಲಾನಾಬಾದ ಎಂ.ಎಸ್.ಕೆ.ಮೀಲ್ ಕಲಬುರಗಿ ಅಂತಾ ತಿಳಿಸಿದ್ದು ಆತನ ಹತ್ತಿರ ಮಟಕಾ
ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 2135/-ರೂ ಒಂದು ಬಾಲಪೇನ್ ಹಾಗೂ 5 ಮಟಕಾ ನಂಬರ ಬರೆದ ಚೀಟಿಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ
ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ
ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀ ನಿಂಗಪ್ಪ ತಂದೆ ಬಸಪ್ಪ ಬಿಜನಳ್ಳಿ ಸಾ:ಮಳಖೇಡ ರವರು ದಿನಾಂಕ: 05-04-15 ರಂದು ಬೆಣ್ಣೂರ(ಬಿ)
ಗ್ರಾಮದಲ್ಲಿ ನಾಟಕ ಇದುದ್ದರಿಂದ ನಾಟಕ ನೋಡಿಕೊಂಡು ಬರಲು ನಾನು ಹಾಗೂ ನಮ್ಮ ಓಣಿಯ ದೇವಪ್ಪ ತಂದೆ ರಾಯಪ್ಪ
ಇತನೂ ತನಗೆ ಪರಿಚಯದವರಾದ ಶಾಂತಪ್ಪಾ ತಂದೆ ಮಾಣೀಕಪ್ಪ ಮರಗೋಳ ಇತನ ಮೋಟರ ಸೈಕಲ ನಂ.ಕೆಎ-32-ಇಇ-8480
ನೇದ್ದನ್ನು ತೆಗೆದುಕೊಂಡು ಮಾರಿಗೆ ಮಳಖೇಡದಿಂದ ಸದರಿ ಮೋಟರ ಸೈಕಲ ಮೇಲೆ ನಾನು ಹಿಂದೆ ಕುಳಿತಿದ್ದು
ಮೋಟರ ಸೈಕಲ ದೇವಪ್ಪ ಇತನೂ ಚಲಾಯಿಸುತ್ತಿದ್ದು ಮುಗುಟಾ ಕ್ರಾಸ ಬಂದಾಗ ನಮ್ಮ ಗ್ರಾಮದ ಮಲ್ಲಪ್ಪ ತಂದೆ
ನರಸಪ್ಪಾ ನಾಚವಾರ ಇತನೂ ಸಿಕ್ಕಿದ್ದರಿಂದ ನಾವು ಮೋಟರ ಸೈಕಲ ರೋಡಿನ ಬದಿಗೆ ನಿಲ್ಲಿಸಿ ಮಲ್ಲಪ್ಪನ ಸಂಗಡ
ಮಾತನಾಡುತ್ತಾ ನಿಂತಿರುವಾಗ ಅಂದಾಜು 10-30 ಪಿಎಂದ ಸುಮಾರಿಗೆ ಸೇಡಂ ಕಡೆಯಿಂದ ಒಂದು ಕ್ರೂಜರ ಚಾಲಕ
ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ರೋಡಿನ ಬದಿಗೆ ಮಾತನಾಡುತ್ತಾ
ನಿಂತ ನಮ್ಮ 3 ಜನರಿಗೆ ಡಿಕ್ಕಿ ಪಡಿಸಿದ ಪರಿಣಾಮ ನನಗೆ ಬಲಗೈ ಹಸ್ತ ಬೆರಳಿಗೆ,ಹಣೆಗೆ ಭಾರಿ ರಕ್ತಗಾಯವಾಗಿದ್ದು ಬಲ ಮಗ್ಗಲಿಗೆ ಒಳಪೆಟ್ಟಾಗಿದ್ದು,ಎಡಗಾಲು ಮೊಳಕಾಲಿಗೆ ತೆರಚಿದ ಗಾಯವಾಗಿದ್ದು ಆಗ ಮಲ್ಲಪ್ಪನಿಗೆ
ನೋಡಲಾಗಿ ಆತನಿಗೂ ಸಹ ಬಲಗೈ ಮುಂಗೈ ಕೆಳಗಡೆ ಅಲ್ಲಲ್ಲಿ ಎಲುಬು ಮುರಿದು ರಕ್ತ ಸೋರುತ್ತಿದ್ದು ಬಲಭುಜಕ್ಕೆ
ತೆರಚಿದ ಗಾಯ ಎಡಗಾಲ ಮೊಳಕಾಲಿಗೆ ತೆರಚಿದ ಗಾಯ ಎಡಗೈ ಮೊಳಕೈಗೆ ತೆರಚಿದ ಗಾಯವಾಗಿದ್ದು ನಂತರ ದೇವಪ್ಪ
ಇತನಿಗೆ ನೋಡಲಾಗಿ ಆತನ ಬಲಗೈ ಭುಜದ ಹತ್ತಿರ ಸಂಪೂರ್ಣ ಕೈ ಕಡಿದು ಬೇರೆ ಕಡೆ ಬಿದ್ದು ಹಣೆಗೆ ಮತ್ತು
ತಲೆಗೆ ಭಾರಿ ರಕ್ತಗಾಯ ಹೊಂದಿ ಮೆದುಳು ಹೊರಗೆ ಬಿದ್ದು ನರಳಾಡುತ್ತಿದ್ದು ನಂತರ ಅಲ್ಲೆ ಮುಗುಟಾ ಕ್ರಾಸ
ಹತ್ತಿರ ಇದ್ದ ಕೇಲವು ಜನರೂ ಬಂದು ನೋಡಿ 108 ಅಂಬುಲೇನ್ಸಕ್ಕೆ ಫೋನ ಮಾಡಿ ತಿಳಿಸಿದ್ದು ನಂತರ ಅಲ್ಲೆ
ನಿಂತಿದ್ದ ಕ್ರೂಜರ ನಂ ನೋಡಲಾಗಿ ಎಂ.ಎಚ-17-ಎನ-1486 ಅಂತ ಇದ್ದು ಸದರಿ ಕ್ರೂಜರ ಚಾಲಕ ಜನರೂ ಬರುವುದನ್ನು
ನೋಡಿ ತನ್ನ ವಾಹನ ಸಮೇತ ಅಲ್ಲಿಂದ ಓಡಿ ಹೋದನು. ನಂತರ 108 ಅಂಬುಲೇನ್ಸ ಬರಲಿ ಅಲ್ಲೆ ಇದ್ದ ಕೇಲವು
ಜನರು ಅದರಲ್ಲಿ ನಮ್ಮ 3 ಜನರಿಗೆ ಹಾಕಿ ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಕಳಿಸಿದ್ದು ಸದರಿ ದೇವಪ್ಪಾ
ಇತನೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ:
05-04-2015 ರಂದು ನಾನು ಬಿದರಚೇಡ ಗ್ರಾಮಕ್ಕೆ ಹೋಗಿದ್ದು
ನನ್ನ ಮಗನು 1ನೇ ತರಗಿತಿಯಲ್ಲಿ ಅಲ್ಲಿಯೇ ಓದುತ್ತಿದ್ದು ಈಗ ಬೆಸಿಗೆ ರಜೆ ಇರುವುದರಿಂದ
ನಾನು ನಮ್ಮ ಮಗನಿಗೆ ನಮ್ಮೂರಿಗೆ ಕರೆದುಕೊಂಡು ಹೋಗುವ ಸಲುವಾಗಿ ಇಂದು ಬೆಳಿಗ್ಗೆ ನಾನು ಮತ್ತು
ನನ್ನ ಅಳಿಯನಾದ ಸಂತೋಷ ಹಾಗು ನನ್ನ ಮಗ ಪ್ರಜ್ವಲ್ ಕೂಡಿಕೊಂಡು ನನ್ನ ಅಳಿಯನ ಮೋಟಾರು ಸೈಕಲ್ ನಂ
ಕೆಎ-32-ಡ್ಬ್ಲೂ-2361 ನ್ನೇದ್ದರ ಮೇಲೆ ಬಿದರಚೇಡ ಗ್ರಾಮದಿಂದ ಸೇಡಂ ಕಡೆಗೆ ಬರುತ್ತಿದ್ದೆವು
ನಮ್ಮ ಮೋಟಾರು ಸೈಕಲ್ ಸಂತೋಷ ಇತನು ಲಾಯಿಸುತ್ತಿದ್ದನು. ನಮ್ಮ ಮೋಟಾರು ಸೈಕಲ್ ಮುಧೋಳ ಸೇಡಂ
ಮುಖ್ಯ ರಸ್ತೆಯ ಬಟಗೇರಾ(ಕೆ) ಗೇಟ್ ದಾಟಿ ಕಾಗಿಣಾ ನದಿಯ ಬ್ರಿಡ್ಜ್ ಮೇಲೆ ಮುಖ್ಯ ರಸ್ತೆಯ ಎಡಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು
ಬರುತ್ತಿರುವಾಗ ಸೇಡಂ ಕಡೆಯಿಂದ ಒಂದು ಮೋಟಾರು ಸೈಕಲ ಚಾಲಕನು ಅತಿವೇಗ ಹಾಗು ನಿಸ್ಕಾಳಜೀತನದಿಂದ
ರಸ್ತೆಯ ಬಲಬದಿಗೆ ರಾಂಗ್ ಸೈಡಿನಿಂದ ಚಲಾಯಿಸಿಕೊಂಡು ಬಂದು 09-45 ಎ.ಎಮ್.ದ ಸುಮಾರಿಗೆ ನಮ್ಮ
ಮೋಟಾರು ಸೈಕಲಿಗೆ ಮುಖಾಮುಖಿ ಡಿಕ್ಕಿ ಪಡಿಸಿದನು. ಆಗ ನಾವೆಲ್ಲರೂ ಕೆಳಗೆ ಬಿದ್ದೇವು. ಸದರಿ
ಅಪಘಾತದಲ್ಲಿ ನನ್ನ ಎರಡು ಕಾಲುಗಳಿಗೆ ತರಚಿದ ಗುಪ್ತ ಗಾಯ, ಮೈಗೆ ಒಳಪೆಟ್ಟು ಆಗಿರುತ್ತದೆ ಮತ್ತು
ಮೋಟಾರು ಸೈಕಲ ಮುಂದುಗಡೆ ಕುಳಿತ ನನ್ನ ಮಗನಿಗೆ ನೋಡಲಾಗಿ ಬಲಹಣೆಯ ಹುಬ್ಬಿನ ಹತ್ತಿರ ಭಾರಿ ರಕ್ತಗಾಯವಾಗಿ
ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಮತ್ತು ನಮ್ಮ ಮೋಟಾರು ಸೈಕಲ ಚಾಲಕ ಸಂತೋಷ ಇತನಿಗೆ ಬಲಗೈಗೆ
ಭಾರಿ ಗುಪ್ತ ಗಾಯ ಮುಖಕ್ಕೆ ರಕ್ತ ಗಾಯ ಮತ್ತು ಬಲಗಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ ಅವನು
ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲಾ ಸದರಿ ಅಪಘಾತ ಪಡಿಸಿದ ಮೋಟಾರು ಸೈಕಲ್ ನಂ ನೋಡಲಾಗಿ
ಕೆಎ-32-ಎಲ್- 4402 ನ್ನೇದ್ದು ಇದ್ದು ಚಾಲಕನ ಹೆಸರು ವಿಚಾರಿಸಲಾಗಿ ತನ್ನ ಹೆಸರು ಬಸವರಾಜ
ತಂದೆ ಸದಾಶಿವ ಸ್ವಾಮಿ ತೊನಸನ್ನಳ್ಳಿ ಸಾ:
ಕುರಕುಂಟಾ ಅಂತ ತಿಳಿಸಿದ್ದು ಅವನಿಗೆ ಬಲಗಾಲಿಗೆ
ಮತ್ತು ಎಡಗೈಗೆ ಭಾರಿ ರಕ್ತಗಾಯವಾಗಿರುತ್ತದೆ . ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಜೇವರ್ಗಿ ಠಾಣೆ : ದಿನಾಂಕ 22-03-2015 ರಂದು ಮನೆಯ ಮುಂದೆ ರೊಡಿನಲ್ಲಿ ಕು. ಭಾಗಮ್ಮ ಇವಳು
ನಡೆದುಕೊಂಡು ಬರುವಾಗ ಮಲ್ಲಿಕಾರ್ಜುನ ತಂದೆ ಯಲ್ಲಣ್ಣ ಇನಾಮದಾರ ಇತನು ತನ್ನ ಮೋಟಾರು ಸೈಕಲ್ ನಂ ಕೆ.ಎ32,ಎಕ್ಸ್1244 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ
ಚಲಾಯಿಸಿಕೊಂಡು ಬಂದು ಕು. ಬಾಗಮ್ಮ ಇವಳಿಗೆ ಡಿಕ್ಕಿಪಡಿಸಿ ಗಾಯಪೆಟ್ಟುಗೊಳಿಸಿರುತ್ತಾನೆ, ನಂತರ ಮೊಟಾರ ಸೈಕಲ ಸಮೇತ
ಓಡಿ ಹೊಗಿರುತ್ತಾನೆ ಅಂತಾ ಶ್ರೀಮತಿ ದೇವಕಿ ಗಂಡ ಹಣಮಂತ ತಳಗೇರಿ ಸಾಃ ನರಿಬೊಳ
ಗ್ರಾಮ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment