ಜೇವರ್ಗಿ
ಪೊಲೀಸ್ ಠಾಣೆ : ದಿನಾಂಕ
24.05.2015 ರಂದು 17:00 ಗಂಟೆಗೆ ಠಾಣೆಯ ಶ್ರೀ.
ಬಸವರಾಜ ಸಿ.ಹೆಚ್.ಸಿ 160 ಇವರು ಕಲಬುರಗಿ ನಗರದ ಕಾಮರೆಡ್ಡಿ ಆಸ್ಪತ್ರೆಯಲ್ಲಿ ರಸ್ತೆಯ
ಅಪಘಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದು ಗಾಯಾಳುವಿನ ಫಿರ್ಯಾದಿ ಹೆಳಿಕೆಯನ್ನು ಠಾಣೆಗೆ
ತಂದು ಹಾಜರುಪಡಿಸಿದ್ದು ಸಾರಾಂಶವೆನೆಂದರೆ “ ನಿನ್ನೆ ದಿನಾಂಕ 23.05.2015 ರಂದು ಮುಂಜಾನೆ 10:30 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ಸಂಕಪ್ಪ
ಇಬ್ಬರು ಕೂಡಿಕೊಂಡು ನರಿಬೋಳ ಗ್ರಾಮದಿಂದ ರಾಜವಾಳ ಗ್ರಾಮಕ್ಕೆ ನಡೆದುಕೊಂಡು ಶಿವಣ್ಣ ರಾವೂರ
ಇವರ ಹೊಲದ ಹತ್ತಿರ ರೋಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ವೇಳೆಗೆ ಹಿಂದಿನಿಂದ ಮೋಟಾರು ಸೈಕಲ್ ನಂ ಕೆ.ಎ32ಇ.ಎಫ್8417 ನೇದ್ದರ ಸವಾರನು ತನ್ನ ಮೋಟಾರು ಸೈಕಲ್ನ್ನು ಅತಿ ವೇಗ ಮತ್ತು ಅಲಕ್ಷ್ಯತನದಿಂದ ನಡೆಸಿ ನನಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಾಯಪಡಿಸಿ ತನ್ನ ಮೋಟಾರು ಸೈಕಲ್ ಸಮೇತ ಓಡಿ ಹೋಗಿದ್ದು ಕಾರಣ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು” ಅಂತ ವಗೈರೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 145/2015 ಕಲಂ 279. 337 ಐ.ಪಿ.ಸಿ ಮತ್ತು 187 ಐ.ಎಮ್.ವಿ ಆಕ್ಟ್ ನೇದ್ದರ
ಅಡಿಯಲ್ಲಿ ಗುನ್ನೆ ದಾಖಲಾಗಿರುತ್ತದೆ.
ನಿಂಬರ್ಗಾ
ಪೊಲೀಸ ಠಾಣೆ : ದಿನಾಂಕ 24-05-2015 ರಂದು
16:00 ಗಂಟೆಗೆ ಶ್ರೀ ರಾಮಜೀ ಹೆಚ್.ಸಿ 394 ರವರು ಸರಕಾರಿ ಆಸ್ಪತ್ರೆ ಕಲಬುರಗಿ ಯಿಂದ ಶ್ರೀ ರಾಜಕುಮಾರ ತಂದೆ
ಶಿವಶಂಕರ @ ಶಂಕರ ರಂಜೇರಿ ವಯ: 30 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ ಸಾ: ಧುತ್ತರಗಾಂವ ಇವರು ಕೊಟ್ಟ
ಹೇಳಿಕೆ ಫೀರ್ಯಾದಿ ತಂದು ಹಾಜರುಪಡಿಸಿದ್ದು ಅದರ ಸಾರಾಂಶವೇನೆಂದರೆ ಹೊಲದ ಬಾಂದಾರಿ ಸಂಬಂಧ
ಫೀರ್ಯಾದಿದಾರನಿಗೆ ದಿನಾಂಕ 23-05-2015 ರಂದು
08:00 ಗಂಟೆಗೆ ಸಾಂಬಾಯಿ ಗಂಡ ರೇವಣಸಿದ್ದ ಸಿಂಗೇ ಸಂಗಡ ಇತರರು
ಅಕ್ರಮವಾಗಿ ಹೊಲಕ್ಕೆ ನುಗ್ಗಿ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ, ಕಲ್ಲಿನಿಂದ
ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಜೀವ ಭಯ ಪಡಿಸಿರುತ್ತಾರೆ. ಕಾರಣ ಸದರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ಕೊಟ್ಟ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆ
ಗುನ್ನೆ ನಂ. 71/2015 ಕಲಂ 341, 323, 447, 324, 504, 506, ಸಂ 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment