ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಚೌಕ
ಠಾಣೆ : ದಿನಾಂಕ: 16.062015 ರಂದು ಠಾಣಾ ವ್ಯಾಪ್ತಿಯ ಗಂಜ ಬಸ್ ಸ್ಟ್ಯಾಂಡದ ಜಗದಂಭಾ ಹೊಟೇಲ
ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದುಕೊಂಡು 1 ರೂಪಾಯಿಗೆ 80 ರೂಪಾಯಿ ಕೊಡುವದಾಗಿ
ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ
ಬಾತ್ಮಿ ಬಂದಿದ್ದರಿಂದ ಶ್ರೀ ಮೋಹನ ಮಾನೆ ಪಿ.ಎಸ್.ಐ (ಅ.ವಿ) ಚೌಕ ಪೊಲೀಸ್ ಠಾಣೆ ಕಲಬುರಗಿ ರವರು ಸದರಿ ವಿಷಯವನ್ನು ನಮ್ಮ ಮೇಲಾಧಿಕಾರಿಗಳಾದ ಡಿ.ಎಸ್.ಪಿ
(ಬಿ) ಉಪ ವಿಭಾಗ ಇವರಿಗೆ ಮಾಹಿತಿ ತಿಳಿಸಿದ ಅವರ ಮಾರ್ಗದರ್ಶನದಂತೆ ನಮ್ಮ ಠಾಣೆಯ ಪಿ.ಐ ಸಾಹೇಬರಾದ
ಉಮಾಶಂಕರ ಬಿ. ರವರಿಗೆ ಸ್ಥಳಕ್ಕೆ ಬರುವಂತೆ ವಿನಂತಿಸಿಕೊಂಡು ಅವರ ನೇತೃತ್ವದಲ್ಲಿ ಸಿಬ್ಬಂದಿಯವರು
ಮತ್ತು ಪಂಚರೊಂದಿಗೆ ಗಂಜ ಬಸ್ ಸ್ಟ್ಯಾಂಡದ ಜಗದಂಭಾ ಹೊಟೇಲ ಹತ್ತಿರ ಗೋಡೆಯ ಮರೆಯಲ್ಲಿ ನಿಂತು
ನೋಡಲಾಗಿ ಒಬ್ಬ ವ್ಯಕ್ತಿ ಹೋಗಿ ಬರುವ ಸಾರ್ವಜನಿಕರಿಂದ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ
ಅಂತಾ ಹೇಳಿ ಬಾಂಬೆ ಮತ್ತು ಕಲ್ಯಾಣದ ಮಟಕಾ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ
ಪಡೆಸಿಕೊಂಡು ದಾಳಿಮಾಡಿ ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಮಹ್ಮದ
ಆರೀಫ್ ತಂದೆ ರಾಜಾ ಪಟೇಲ ಸಾ: ಬನ್ನೂರು (ಔರಾದ (ಬಿ) ತಾ:ಜಿ: ಕಲಬುರಗಿ ಹಾ.ವ: ಖಧೀರ ಬೈ ಇವರ
ಮನೆಯಲ್ಲಿ ಬಾಡಿಗೆ ಮಿಜಗುರಿ ಕಲಬುರಗಿ ಅಂತಾ ಹೆಸರು ವಿಳಾಸ ಹೇಳಿದ್ದು ಸದರಿ ವ್ಯಕ್ತಿಯ ಅಂಗ
ಜಪ್ತಿಮಾಡಲಾಗಿ ಅವನ ಹತ್ತಿರ ನಗದು ಹಣ 3040/-ರೂಪಾಯಿ, ಒಂದು ಮಟಕಾ ಚೀಟಿ , ಒಂದು ಬಾಲಪೆನ್, ಒಂದು ಮೋಬಾಯಿಲ್ ಕರಿಯ ಬಣ್ಣದ್ದು ಅ.ಕಿ. 500/- ರೂ, ಜೂಜಾಟಕ್ಕೆ ಸಂಬಂದ ಪಟ್ಟ
ಮುದ್ದೆಮಾಲನ್ನು ಜಪ್ತಿಮಾಡಿಕೊಂಡು ಸದರಿಯವನೊಂದಿಗೆ ಚೌಕ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ನರೋಣಾ
ಠಾಣೆ : ಶ್ರೀ. ವಿಶ್ವನಾಥ ತಂದೆ
ಸಿದ್ದಪ್ಪ ಮರಾಠ ಸಾ;ಲಾಡಚಿಂಚೋಳಿ ಹಾ:ವ:ಮುನ್ನಳ್ಳಿ ಇವರು ದಿನಾಂಕ
13/06/2015 ರಂದು ಮುಂಜಾನೆ ಅವರ ಮಗನಾದ ಸಿದ್ದರಾಮ ವಯಸ್ಸು 03 ವರ್ಷ ಇತನಿಗೆ ಗ್ರಾಮದ ಸಂತೆ
ಸೇರುವ ಸ್ಥಳದಲ್ಲಿ ಬಿಟ್ಟಿರುವಾಗ ಯಾರೋ ಸಂತೆಗೆ ಬಂದಿರುವ
ಜನರಲ್ಲಿ ಯಾರೋ ಯಾವದೋ ಉದ್ದೇಶದಿಂದ ಸಿದ್ದರಾಮನನ್ನು ಅಪಹರಿಸಿಕೊಂಡು ಹೋಗಿರುತ್ತಾರೆ
ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ
ಸಂಚಾರಿ ಠಾಣೆ : ದಿನಾಂಕ 16-06-2015
ರಂದು ರಾತ್ರಿ ಶ್ರೀ ರಮೇಶ ತಂದೆ ಮಲ್ಲೇಶಪ್ಪ ಚಿತ್ತಾಪೂರ ಸಾ: ಸುಂದರ ನಗರ ಕಲಬುರಗಿ ರವರು ಮತ್ತು ನನ್ನ ಗೆಳೆಯನಾದ
ಮಲ್ಲಿನಾಥ ಇಬ್ಬರೂ ಕೂಡಿಕೊಂಡು ಆತನ ಮೊಟಾರ ಸೈಕಲ ನಂ ಕೆಎ-32-ಕೆ-7332 ನೇದ್ದರ ಮೇಲೆ
ಶ್ರೀ ಶರಣ ಬಸವೆಶ್ವರ ದೆವಸ್ಥಾನಕ್ಕೆ ಹೋಗುವ
ಕುರಿತು ಮೋಟಾರ ಸೈಕಲ ನಾನು ಚಲಾಯಿಸುತ್ತಿದ್ದು ಮಲ್ಲಿನಾಥ ಇತನು ಹಿಂದೆ ಕುಳಿತಿಕೊಂಡು ಜಿ.ಜಿ.
ಹೆಚ್ ಸರ್ಕಲ, ಜಗತ ಸರ್ಕಲ ಮುಖಾಂತರವಾಗಿ ಶ್ರೀ ಶರಣ ಬಸವೇಶ್ವರ
ದಾವಸ್ಥಾನಕ್ಕೆ ಹೋಗುವಾಗ ದಾರಿ ಮದ್ಯ ಯಲ್ಲಮ್ಮ ಟೆಂಪಲ ಎದುರು ರೋಡ ಮೇಲೆ ಮೋಟಾರ ಸೈಕಲ ನಂ
ಕೆಎ-32-ಇಡಿ-9124 ನೇದ್ದರ ಸವಾರನು ತನ್ನ ಮೋಟಾರ ಸೈಕಲನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ
ಚಲಾಯಿಸಿಕೊಂಡು ಎದುರಿನಿಂದ ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ
ಮಾಡಿದ್ದರಿಂದ ನನಗೆ ಬಲಗಾಲು ಮೊಳಕಾಲಿಗೆ ಭಾರಿ
ರಕ್ತಗಾಯ, ಎಡಗಾಲು ಪಾದದ ಮೆಲ್ಬಾಗದಲ್ಲಿ ರಕ್ತಗಾಯ, ಎಡ ಕಿವಿಗೆ ರಕ್ತಗಾಯ
ಬಲಗೈ ಕಿರುಬೆರಳಿಗೆ ಗುಪ್ತಪೆಟ್ಟು, ಭಲ ಬುಜಕ್ಕೆ ತರಚಿದ ಗಾಯಗೊಳಿಸಿದ್ದು ಮಲ್ಲಿನಾಥ ಇತನಿಗೆ ಯಾವುದೆ ಗಾಯಗಳಾಗಿರುವದಿಲ್ಲ, ಅಪಘಾತಗೊಳಿಸಿದ ಮೋಟಾರ ಸೈಕಲ ಸಾವರನು ತನ್ನ ಮೋಟಾರ ಸೈಕಲ ಸಮೇತ ಓಡಿ
ಹೋಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಜೇವರ್ಗಿ ಠಾಣೆ : ಶ್ರೀಮತಿ ಸಂಗೀತಾ ಗಂಡ ನೀಲು ರಾಠೋಡ ಸಾ|| ಮುದಬಾಳ
ಬಿ ತಾಂಡಾ ದಿನಾಂಕ 16.06.2015 ರಂದು ಸಾಯಂಕಾಲ ತಾನು ಮತ್ತು ನಮ್ಮೂರ ಸಂಗೀತಾ ಗಂಡ ನೀಲು ರಾಠೋಡ, ಬಾಬು
ತಂದೆ ಬೋಜು ನಾಯಕ ರಾಠೋಡ ,ರೇಣುಕಾ
ಗಂಡ ಭೀಮು ರಾಠೋಡ ಎಲ್ಲರು ಕುಳಿತುಕೊಂಡು ಆರೋಪಿತನು ನಡೆಸುತ್ತಿದ್ದ ಟಂಟಂ ನಂ ಕೆ.ಎ33-9983 ನೇದ್ದರಲ್ಲಿ ಕೂಳಿತುಕೊಂಡು ಹೋಗುತ್ತಿದ್ದಾಗ ಸಂಗಮೇಶ
ಬಿರಾದಾರ ಸಾ|| ಅವರಾದ್ ಇವರ ಹೊಲದ ಹತ್ತಿರ ಜೇವರಗಿ ಶಹಾಪುರ ಮೇನ್ ರೋಡ್ ಮೇಲೆ ಹೋಗುತ್ತಿದ್ದಾಗ
ನಾವು ಕುಳಿತ ಟಂಟಂ ಚಾಲಕನು ಮುಂದೆ ಹೋಗುತ್ತಿದ್ದ ಬಸ್‌ಗೆ ಕಟ್ ಹೋಡೆಯಲು ಹೋಗಿ ಟಂಟಂ ಅನ್ನು
ಒಮ್ಮೇಲೆ ಕಟ್ ಹೊಡೆದಿದ್ದರಿಂದ ಟಂಟಂ ಪಲ್ಟಿ ಮಾಡಿ ನಮಗೆಲ್ಲರಿಗೆ ಗಾಯಪಡಿಸಿರುತ್ತಾನೆ ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ : ಶ್ರೀ ಶಿವಾನಂದ ತಂದೆ ಶಿವಶರಣಪ್ಪ ಸಂಗೋಳಗಿ ಸಾ:
ಜಿಡಿಎ ಕಾಲೋನಿ ಶಹಾಬಜಾರ ಕಲಬುರಗಿ ಇವರು ಖಾಸಗಿಯಾಗಿ ಗಾರ್ಡನ ಕೆಲಸ ಗುತ್ತಿಗೆ ಪಡೆದು ಕೆಲಸ
ಮಾಡಿಕೊಂಡು ತಾಯಿಯವರೊಂದಿಗೆ ವಾಸವಾಗಿರುತ್ತೇನೆ. ನನಗೆ ಇನ್ನೂ ಮದುವೆ ಆಗಿರುವುದಿಲ್ಲಾ.
ಮನೆಯಲ್ಲಿ ನಮ್ಮ ತಾಯಿ ಇವರು ಒಬ್ಬರೆ ಇರುತ್ತಾರೆ. ನನ್ನಂತೆ ಸಹ ನಮ್ಮ ಓಣಿಯಲ್ಲಿ ಶ್ರೀಕಾಂತ
ಮತ್ತು ಸುನೀಲ ಅನ್ನುವವರು ವಾಸವಿದ್ದು ಅವರ ಪರಿಚಯ ಇರುತ್ತದೆ. ಇಬ್ಬರು ಗೆಳೆಯರು ದಿನಾಂಕ
16.06.2015 ರಂದು ಸಾಯಂಕಾಲ 5-30 ಪಿ.ಎಂ.ಕ್ಕೆ ನಾನು ಸುನೀಲ ಇಬ್ಬರೂ ಸಿನಿಮಾ ನೋಡಿಕೊಂಡು
ಸರಾಯಿ ಕುಡಿದು ಮನೆಗೆ ಹೋಗುವ ಕುರಿತು ದರ್ಬಾರ ಹೊಟೇಲದ ಹಿಂದೆ ಇರುವ ರೋಡಿಗೆ ನಡೆದುಕೊಂಡು
ಬರುತ್ತಿದ್ದಾಗ ಎದುರುಗಡೆಯಿಂದ ಶ್ರೀಕಾಂತ ನನ್ನ ಗೆಳೆಯ ಸಿಕ್ಕಿದ್ದು ನನಗೆ ನೋಡಿ ನನಗೆ
ಕುಡಿಯಲಿಕ್ಕೆ ಸ್ವಲ್ಪ ಹಣ ಕೂಡು ಅಂತಾ ಕೇಳಿದಕ್ಕೆ ನಾನು ನನ್ನ ಹತ್ತಿರ ಸದ್ಯ ಹಣ ಇಲ್ಲಾ ಎಲ್ಲಾ
ಹಣ ಈಗ ನಾನು ಖರ್ಚು ಮಾಡಿರುತ್ತೆನೆ. ಅಂತಾ ಹೇಳಿದಕ್ಕೆ ಶ್ರೀಕಾಂತ ಇತನು ನನ್ನೊಂದಿಗೆ
ಜಗಳಕ್ಕೆ ಬಿದ್ದು ರಂಡಿ ಮಗನೇ ನನಗೆ ಕುಡಿಯಲಿಕ್ಕೆ ಹಣ ಕೊಡು ಅಂತಾ ಹೇಳಿದರೆ ಇಲ್ಲಾ
ಅನ್ನುತ್ತಿಯಾ ಬೋಸಡಿ ಮಗನೇ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಟ್ಟೆಗೆ ಬೆನ್ನಿಗೆ ಹೊಡೆದನು.
ಇದರಿಂದ ನಾನು ಕೂಡಾ ಸಿಟ್ಟಿನಲ್ಲಿ ಅವನಿಗೆ ಕೈಯಿಂದ 2-3 ಏಟು ಹೊಡೆಯಲು ಅವನು ನನಗೆ ಅಲ್ಲಿಯೆ
ಬಿದ್ದ ಒಂದು ಹಿಡಿಗಾತ್ರದ ದಪ್ಪ ಕಲ್ಲಿನಿಂದ ತಲೆಗೆ ಜೋರಾಗಿ ಹೊಡೆದಿದ್ದು ಇದರಿಂದ ನನ್ನ ತಲೆಗೆ
ಬಡಿದು ಒಮ್ಮೇಲೆ ರಕ್ತ ಸೊರಲಾರಬಿಂಸಿತ್ತು ಇದರಿಂದ ನಾನು ಚಿರಾಡಲು ದರ್ಬಾರ ಹೊಟೇಲ ರೋಡಿನ
ಬದಿಯಿಂದ ಬರುತ್ತಿದ್ದ ಕೆಲವು ಜನರು ಓಡಿ ಬರಲು ಸದರಿ ಶ್ರೀಕಾಂತ ಇತನು ನನಗೆ ಹೊಡೆದು ಅಲ್ಲಿಂದ
ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment