Police Bhavan Kalaburagi

Police Bhavan Kalaburagi

Tuesday, June 16, 2015

Raichur District Special Press Note

ಪತ್ರಿಕಾ ಪ್ರಕಟಣೆ.

ರಾಯಚೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಯರಮರಸ್ ಗ್ರಾಮದ ಹೊರವಲಯದಲ್ಲಿರುವ ಡಿ.ವಿ.ಆರ್. ರಿಕ್ರಿಯೇಷನ್ ಕ್ಲಬ್ ನಲ್ಲಿ ಮಾನ್ಯ ಉಚ್ಚ ನ್ಯಾಯಾಲಯ ಕಲಬುರುಗಿ ಸಕ್ಯೂðಟ್  ಬೆಂಚ್ ರಿಟ್ ಪೆಟಿಷನ್ ನಂಬರ 207054/2014 ರ ಷರತ್ತು 6 ರಲ್ಲಿ ನಮೂದಿಸಿದಂತೆ ರಾಯಚೂರು ಗ್ರಾಮೀಣ ವೃತ್ತದ ಸರ್ಕಲ್ ಇನ್ಸ್ ಪೆಕ್ಟರ ಆಫ ಪೊಲೀಸ್  ಮತ್ತು ಪೊಲೀಸ್ ತಂಡದವರು ಮಾನ್ಯ ಡಿ.ಎಸ್.ಪಿ. ರಾಯಚೂರು ರವರ ನೇತೃತ್ವದಲ್ಲಿ ಪೊಲೀಸ್ ತಂಡವು ದಿನಾಂಕ. 15-6-2015 ರಂದು 1940 ಗಂಟೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಸದರಿ ಕ್ಲಬ್ ನಲ್ಲಿ ನಿಯಮ ಬಾಹಿರವಾಗಿ ಕ್ಲಬ್ಬಿನ 37ಜನ ಸದಸ್ಯರು ಹಾಗೂ 25 ಜನ ಕ್ಲಬ್ಬಿನ ಸದಸ್ಯರಲ್ಲದವರು ಟೇಬಲ್ ಸುತ್ತಲು ಕುಳಿತು ಹಣಕ್ಕೆ ಪರಾಭಾರೆಯಾಗಿ ಪಡೆದ ಕಾಯಿನ್ ಗಳನ್ನು ಪಣಕ್ಕೆ (Stake) ಇಟ್ಟು ಇಸ್ಪೀಟ್ ಟದಲ್ಲಿ ತೊಡಗಿದ್ದು ಕಂಡು ಬಂದ ಮೇರೆಗೆ ಪಣಕ್ಕೆ ಇಟ್ಟ ಹಣ(Stake amount) ಒಟ್ಟು ರೂ.4,04,944/- ಮತ್ತು ಇತರೆ ಆಟದ ಸಲಕರಣೆಗಳನ್ನು ಜಪ್ತಿಪಡಿಸಿಕೊಂಡಿದ್ದು ಪರಿಶೀಲನೆಯಲ್ಲಿ ಉಚ್ಛ ನ್ಯಾಯಾಲಯವು ಸದರಿ ಕ್ಲಬ್ ನ ಬಗ್ಗೆ ವಿಧಿಸಿದ ಷರತ್ತು 02 ಮತ್ತು 03 ಗಳನ್ನು ಉಲ್ಲಂಘಿಸಿರುತ್ತಾರೆ. ಮತ್ತು ಷರತ್ತು ನಂ:04 ಪ್ರಕಾರ ಕ್ಲಬ್ ಸದಸ್ಯರು ಹಣವನ್ನು ಪಣಕ್ಕೆ ಇಟ್ಟು ಇಸ್ಪೀಟ್ ಆಟ ಆಡುವುದು ನಿರ್ಭಂಧಿಸಿದ್ದು ಇರುತ್ತದೆ. ಆದರೆ ಪರಿಶೀಲನೆಯಲ್ಲಿ ಸದಸ್ಯರು ಮತ್ತು ಸದ್ಯರಲ್ಲದವರು ಸದರಿ ಷರತ್ತುಗಳು ಉಲ್ಲಂಘನೆ ಮಾಡಿದ್ದು ಕಂಡು ಬಂದಿರುತ್ತದೆ. ಇತರೆ ಮನೋರಂಜನೆ ಕ್ರೀಡೆಗಳಲ್ಲಿ ಭಾಗವಹಿಸಿರುವುದಿಲ್ಲ. ವಿಚಾರಣೆ ಮುಂದುವರೆದಿದೆ.
     ಮೇರೆಗೆ ಸದರಿ ಕ್ಲಬ್ ನಲ್ಲಿ ಉಚ್ಚ ನ್ಯಾಯಾಲಯದ ನಿಯಮ ಹಾಗೂ ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಕ್ಲಬ್ ವ್ಯವಸ್ಥಾಪಕರಿಗೆ ಕ್ಲಬ್ ಅನ್ನು ಬಂದ್ ಮಾಢಲು ಸೂಚಿಸಿ ನೋಟಿಸ್ ನೀಡಲಾಗಿದೆ.






No comments: