ಮಟಕಾ ಜೂಜಾಟ ಪ್ರಕರಣ:
ಅಫಜಲಪೂರ ಠಾಣೆ: ದಿನಾಂಕ
13-10-2015 ರಂದು ಅಫಜಲಪೂರದ ಅಕ್ಕಮಹಾದೇವಿ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ 1 ರೂಪಾಯಿಗೆ 80
ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ
ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿರುವ ಬಗ್ಗೆ
ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಆಫಜಲಪೂರ ಹಾಗೂ ಠಾಣೆಯಲ್ಲಿ ಹಾಜರಿದ್ದ ಜಗನ್ನಾಥ ಪಿಸಿ, ಸುರೇಶ ಪಿಸಿ
ಮತ್ತು ಪಂಚರಾದ 1) ಶಿವಪ್ಪ ತಂದೆ ಗಿರಿಮಲ್ಲಪ್ಪ ಕಡ್ಲೇವಾಡ 2) ಚಂದಪ್ಪ ತಂದೆ ರಮೇಶ ಕೋಳಿಗೇರಿ
ರವರೊಂದಿಗೆ ದಾಳಿ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ 1) ರೇವಣಸಿದ್ದಪ್ಪ ತಂದೆ
ಮಲ್ಕಪ್ಪ ನಾಗಣಸೂರ ಸಾ||ಅಫಜಲಪೂರ
ಹಾಗೂ ಮಟಕಾ ಬುಕ್ಕಿ 2) ರಾಜಕುಮಾರ ತಂದೆ ಗುಂಡೆರಾವ ಕುಲಕರ್ಣಿ ಸಾ|| ಅಫಜಲಪೂರ
ಇವರನ್ನು ದಸ್ತಗೀರ ಮಾಡಿ ಮಟಕಾ ಜೂಜಾಟಕ್ಕೆ
ಸಂಬಂದ ಪಟ್ಟ 1550/- ರೂ ನಗದು ಹಣ, ಒಂದು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ, ವಶಕ್ಕೆ
ತೆಗೆದುಕೊಂಡು ಆರೋಪಿರ ವಿರುದ್ದ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿ ತನಿಖೇ
ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಅಫಜಲಪೂರ ಠಾಣೆ: ಇಂದು
ದಿನಾಂಕ 13/10/2015 ರಂದು
ಶ್ರೀ ಬಾಬುಸಾಬ ತಂದೆ ದಸ್ತಗಿರಸಾಬ ಕೂಡಿ ಸಾ||ಘತ್ತರಗಾ ಇವರು ಠಾಣೆಗೆ ಹಾಜರಾಗಿ ತಾನು ಇಂದು ಬೆಳಿಗ್ಗೆ 7:00 ಗಂಟೆಗೆ
ನಮ್ಮ ಡಿಪೊದ ಸಂಚಾರಿ ನಿರೀಕ್ಷಕರು ನನಗೆ ಮತ್ತು
ನನ್ನ ಜೋತೆಗೆ ನಿರ್ವಾಹಕರಾದ ಶಿವಶರಣಪ್ಪ ಮೈನಾಳ ನಿರ್ವಾಹಕ ನಂ 860 ಇಬ್ಬರಿಗೂ
ಅಫಜಲಪೂರ ದಿಂದ ಘತ್ತರಗಾ, ಘತ್ತರಗಾ ದಿಂದ ಅಫಜಲಪೂರ ಹೀಗೆ ರೂಟ ನಂ 38/39 ಪ್ರಕಾರ ನಮಗೆ ಕರ್ತವ್ಯಕ್ಕೆ ನೇಮಿಸಿದ್ದು, ಅದರಂತೆ
ನಾವುಗಳು ಡಿಪೋದಿಂದ ಬಸ್ ನಂಬರ ಕೆಎ-32 ಎಫ್-1508 ನೇದ್ದು ತಗೆದುಕೊಂಡು ಬಂದು, ನಾಲ್ಕು
ಟ್ರೀಪ ಘತ್ತರಗಾಕ್ಕೆ ಹೋಗಿ ಮರಳಿ ಅಫಜಲಪೂರಕ್ಕೆ
ಬಂದು. ನಂತರ ಐದನೇ ಟ್ರೀಪ್ ಅಫಜಲಪೂರ ದಿಂದ ಘತ್ತರಗಾಕ್ಕೆ ಪ್ರಯಣಿಕರನ್ನು ಕುಡಿಸಿಕೊಂಡು ಘತ್ತರಗಾಕ್ಕೆ ಹೋಗುತ್ತಿರುವಾಗ ಬಸ್ ಘತ್ತರಗಾದ ಸಮೀಪ ಅಂಬಿಗರ ಚವಡಯ್ಯರವರ ಚೌಕ ಹತ್ತಿರ
ಬಂದಾಗ ನಮ್ಮ ಬಸ್ಸಿನ ಮುಂದೆ ಬಂದ ಇಬ್ಬರು ಮೋ ಸೈಕಲ ಸವಾರರು ತಮ್ಮ ಮೋಟಾರ ಸೈಕಲ ನಿಲ್ಲಿಸಿ
ಅವಾಚ್ಯ ಶಬ್ದಗಳಿಂಧ ಬಯ್ಯುತ್ತಾ ಇಬ್ಬರು ತಮ್ಮ ಮೋಟಾರ ಸೈಕಲದಿಂದ ಕೆಳಗೆ ಇಳಿದು ನನ್ನ ಹತ್ತಿರ
ಬಂದು ನನಗೆ ಎದೆಯ ಮೇಲಿನ ಅಂಗಿ ಹಿಡಿದು ಬಸ್ಸಿನಿಂದ ಕೆಳಗೆ ಜಗ್ಗಿ ಎಳೆದಾಡುತಿದ್ದಾಗ ನಮ್ಮ
ನಿರ್ವಾಹಕ ಶಿವಶರಣಪ್ಪ ಹಾಗೂ ಬಸ್ಸಿನಲಿದ್ದ ಪ್ರಯಾಣಿಕರಾದ ಗಂಗಾಧರ ಹಿರೇಮಠ,ಭಗವಂತ್ರಾಯ
ವಗ್ಗೆ,ಬಾಬುಸಾಬ
ಕೂಡಿ, ಶರಣು
ಮದಬಾವಿ, ಚಂದಪ್ಪ
ಬಟ್ಟರಗಾ ಇವರು ಬಸ್ಸಿನಿಂದ ಕೆಳಗೆ ಬಂದು ಸದರಿಯವರಿಗೆ ತಿಳುವಳಿಕೆ ಹೇಳುತಿದ್ದಾಗ ಕೇಳದೆ ನನಗೆ
ಅವಚ್ಯಾ ಶಬ್ದಗಳಿಂದ ಬೈಯುತಿದ್ದಾಗ ನಾನು ನಿಮ್ಮ ಹೆಸರೆನು ಅಂತ ಕೇಳಿದಾಗ ಅದರಲ್ಲಿ ಒಬ್ಬ
ಬೊಸಡಿಮಗನೆ ನನ್ನ ಹೆಸರ ಸಂದೀಪ ಇವ್ನ ಹೆಸರ ಸಚೀನ ಅದಾ ನಾವು ಇಲ್ಲೆ ದೇಸಾಯಿ ಕಲ್ಲೂರ ತಾಂಡಾದವರು
ಇದ್ದೇವೆ ಏನು ಮಾಡ್ತಿ ಮಾಡು ಎನ್ನುತ್ತಾ ಸಂದೀಪನು ನನಗೆ ತನ್ನ ಕೈ ಮುಷ್ಟಿ ಮಾಡಿ ನನ್ನ
ಹೊಟ್ಟೆಗೆ ಬೆನ್ನಿಗೆ ಹೊಡೆಯುತಿದ್ದಾಗ ಸಜೀನ ಇತನು ನನ್ನ ಅಂಗಿ ಹಿಡಿದು ಜಗ್ಗಿ ಎಳೆದಾಡಿ
ಹರಿದಿರುತ್ತಾನೆ ಆಗ ನಮ್ಮ ನಿರ್ವಾಹಕ ಹಾಗೂ ನಮ್ಮ ಬಸಗಸಿನ ಪ್ರಯಾಣಿಕರು ಬಿಡಿಸಿರುತ್ತಾರೆ
ಸದರಿಯವರು ಹೋಗುವಾಗ ಏ ಡೈವರ ಮಗನೆ ನಿ ಇನ್ನೋಮ್ಮೆ ಈ ರೂಟಿಗಿ ಬಾ ನಿನಗ ಖಲಾಸ ಮಾಡ್ತಿವಿ ಅಂತ
ಅಂದು ಹೋಗಿದ್ದು ನನ್ನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬಯ್ದು ಸರ್ಕಾರಿ ಕೆಲಸದಲ್ಲಿ ಅಡೆ
ತಡೆ ಮಾಡಿದ ಆರೋಪಿತ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾಠಾಂಶದ ಮೇಲಿಂದ
ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
No comments:
Post a Comment