ಅತ್ಯಾಚಾರ ಪ್ರಕರಣ :
ಅಫಜಲಪೂರ
ಠಾಣೆ : ಕುಮಾರಿ ಇವಳು ತಮ್ಮ ಸಮಾಜದ ಸಂಜೀವಕುಮಾರ ತಂದೆ ಖಾಜಪ್ಪ ನಿಂಬಾಳ ರವರ ಹೊಲಕ್ಕೆ ಕಸ ತಗೆಯಲು
ಹೋಗಿದ್ದು ಸಂಜಿವಕುಮಾರನ ಅಜ್ಜಿ ರತ್ನಾಬಾಯಿ ಇವಳು ಸಹ ಕಸ ತಗೆಯಲು ಬಂದಿದ್ದಳು. ಮದ್ಯಾಹ್ನ
ಎಲ್ಲರು ಊಟ ಮಾಡಿದ ನಂತರ 3:00 ಗಂಟೆ ಸುಮಾರಿಗೆ ಸಂಜಿವಕುಮಾರನು ನನ್ನ ಹತ್ತಿರ ಬಂದು, ನನಗೆ ನೀನು ಇಲ್ಲಿ ಕಸ ತಗೆಯಬೇಡ
ಪಕ್ಕದ ಹೊಲದಲ್ಲಿ ಕಸ ಜಾಸ್ತಿ ಬೇಳೆದಿದೆ ನೀನು ಅಲ್ಲಿ ಕಸ ತಗೆಯುವಿಯಂತೆ ನಡೆ ಎಂದು ಹೇಳಿದನು.
ನಾನು ಸಂಜಿವಕುಮಾರನೊಂದಿಗೆ ಪಕ್ಕದ ಹೊಲದಲ್ಲಿ ಹೋಗಿ ಅವನು ಹೇಳಿದ ಜಾಗದಲ್ಲಿ ಕಸ
ತಗೆಯುತ್ತಿದ್ದೇನು. ಆ ಸಮಯದಲ್ಲಿ ಸಂಜಿವ ಕುಮಾರನು ನನಗೆ ಇಬ್ಬರು ಮಲಗೋಣಾ ಬಾ ಅಂತಾ ಕರೆದನು, ಅದಕ್ಕೆ ನಾನು ಯಾಕ ಹಿಂಗ್ಯಾಕ
ಮಾತಾಡ್ತಿ ನನಗೆ ಏನ ತಿಳಕೊಂಡಿದ್ದಿ ಅಂತಾ ಅಂದಾಗ ಅವನು ನನಗೆ ಕೂಗಾಡದಂತೆ ನನ್ನ ಬಾಯಿ ಒತ್ತಿ
ಹಿಡಿದು ಚಾಕು ತೋರಿಸಿ ಕೂಗಾಡಿದರೆ ನಿನ್ನನ್ನು ಚಾಕುವಿನಿಂದ ಹೊಡೆದು ಕೊಲೆ ಮಾಡುತ್ತೇನೆ ಅಂದನು.
ನಾನು ಹೇದರಿ ಸುಮ್ಮನಾಗಿದ್ದರಿಂದ ಮರೆಯಲ್ಲಿ ಏಳೆದುಕೊಂಡು ಹೋಗಿ ನನ್ನನ್ನು ಮಲಗಿಸಿ ಬಲತ್ಕಾರದಿಂದ
ಸಂಭೋಗ ಮಾಡಿದನು. ಸಂಭೋಗ ಮಾಡಿದ ನಂತರ ಈ ವಿಷಯವನ್ನು ಯಾರಿಗಾದರು ಹೇಳಿದರೆ ನಿನಗೆ ಜೀವ ಸಹಿತ
ಬಿಡುವುದಿಲ್ಲ ಅಂತಾ ಹೇದರಿಸಿದನು. ನಾನು ಆತನಿಗೆ ಹೆದರಿ
ಈ ವಿಷಯವನ್ನು ಯಾರಿಗೂ ಹೇಳಿರುವುದಿಲ್ಲ. ಮುಂದೆ ಅವನು ನಾನು ಕೆಲಸಕ್ಕೆಂದು ಅವರ
ಹೊಲಕ್ಕೆ ಹೋದಾಗಲೆಲ್ಲ ಇದೆ ರೀತಿ ಇಲ್ಲಿಯವರೆಗೆ ನನಗೆ ಬಲತ್ಕಾರದಿಂದ ಸಂಬೋಗ ಮಾಡುತ್ತಾ
ಬಂದಿರುತ್ತಾನೆ. ಈಗ ಸುಮಾರು ಒಂದು ವಾರದ ಹಿಂದೆ ನನಗೆ
ಹೊಟ್ಟೆ ನೋವು ಆಗಿದ್ದರಿಂದ ನಾನು ನನ್ನ ತಾಯಿ ಮತ್ತು ನನ್ನ ಅಕ್ಕ ಇವರಿಗೆ ತಿಳಿಸಿದ್ದು ಅವರು ಕಲಬುರಗಿಯ ಯಾವುದೊ ಒಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ
ಅಲ್ಲಿನ ವೈದ್ಯರು ನನ್ನನ್ನು ತಪಾಸಣೆ ಮಾಡಿದ ನಂತರ ನೀನು ಗರ್ಬಿಣಿಯಾಗಿರುತ್ತಿ ಅಂತಾ
ತಿಳಿಸಿರುತ್ತಾರೆ, ವೈದ್ಯರು ತಿಳಿಸಿದ ನಂತರ ನನ್ನ ಅಕ್ಕ ಮತ್ತು ತಾಯಿ ನನ್ನನ್ನು ವಿಚಾರಿಸಿದಾಗ ದಿನಾಂಕ
15-05-2015 ರಂದು ಮದ್ಯಾಹ್ನ 3:30 ಗಂಟೆಯ ಸುಮಾರಿಗೆ ಸಂಜಿವಕುಮಾರ ನಿಂಬಾಳ ಎಂಬಾತನು ನನಗೆ
ದೇಸಾಯಿ ಕಲ್ಲೂರ ಸೀಮಾಂತರದಲ್ಲಿರುವ ತಮ್ಮ ಹೊಲದಲ್ಲಿ ಚಾಕು ತೋರಿಸಿ ಜೀವದ ಭಯ ಹಾಕಿ ಒತ್ತಾಯಪೂರ್ವಕವಾಗಿ
ಜಬರಿ ಸಂಭೋಗ ಮಾಡಿ, ಮುಂದೆ ಈ ವಿಷಯವನ್ನು ಯಾರಿಗಾದರು ಹೇಳಿದರೆ ನಿನ್ನ ಕೊಲೆ ಮಾಡುತ್ತೇನೆ ಅಂತಾ ಹೆದರಿಕೆ
ಹಾಕಿದ್ದರಿಂದ ನಾನು ಆತನಿಗೆ ಹೆದರಿ ಇಲ್ಲಿಯವರೆಗೆ ನಿಮಗೆ ತಿಳಿಸಿರುವುದಿಲ್ಲ. ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಅಶೋಕ ನಗರ
ಠಾಣೆ : ಡಾ|| ಶರಣೇಂದ್ರ ತಂದೆ ಬಸವಣ್ಣಪ್ಪಾ ಪಾಗಾ ಸಾ:ಮನೆ ನಂ. 9-953/5ಬಿ ಜನತಾ ಲೇ ಔಟ ಎಸ್‌ಬಿ ಟೆಂಪಲ್
ರೋಡ ಕಲಬುರಗಿ ರವರು ಸಲ್ಲಿಸಿದ ಫಿರ್ಯಾದಿ ಅರ್ಜಿಯ ಸಾರಾಂಶವೆನೆಂದರೆ ನಾನು ರಾಮ ಮಂದಿರ ಸರ್ಕಲ್ ಹತ್ತಿರ
ವಿಜಯಕುಮಾರ ಇವರ ಕಾಂಪ್ಲೆಕ್ಸದಲ್ಲಿ ಕಳೆದ 3 ವರ್ಷಗಳಿಂದ ಚೇತನಾ ಹೊಮಿಯೋಪಥಿ ಅಂತಾ ಆಸ್ಪತ್ರೆ
ತೆಗೆದದಿದ್ದು ಇರುತ್ತದೆ. ಆಸ್ಪತ್ರೆಯಲ್ಲಿ ನಮ್ಮ ಸಂಬಂದಿ ಈರಣ್ಣ ಅಂತಾ ಕಂಪೌಡರ್ ಇರುತ್ತಿದ್ದು
ರಾತ್ರಿ 9:30 ಗಂಟೆಗೆ ಮುಚ್ಚಿಕೊಂಡು ಮನೆಗೆ ಹೋಗಿದ್ದು 3 ದಿನಗಳ ಹಿಂದೆ ನಮ್ಮ ಆಸ್ಪತ್ರೆಯಲ್ಲಿ
ಕಾಸ್ಮೆಟಿಕ್ ಉಪಚಾರ ಮಾಡವ ಯಂತ್ರ ಅರ್ದ ಕಂತು
ಕೊಟ್ಟು ಖರಿದಿಸಿದ್ದು ದಿನಾಂಕ 12/10/2015 ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಾನು ಮತ್ತು
ನಮ್ಮ ಕಂಪೌಡರ್ ಈರಣ್ಣ ಇಬ್ಬರು ಕೂಡಿಕೊಂಡು ಆಸ್ಪತ್ರೆ ತೆರೆದಿರುತ್ತೆವೆ. ನಾನು ಕಾಸ್ಮೆಟಿಕ್
ಮಾಡುವ ಯಂತ್ರವನ್ನು ಖರಿದಿಸಿದ ಮಶಿನಿನ ಕಂತನ್ನು ಕಟ್ಟುವ ಕುರಿತು ಮನೆಯಿಂದ ನಗದು ಹಣ 75,000/- ರೂಗಳನ್ನು ತೆಗೆದುಕೊಂಡು ಬಂದಿರುತ್ತೆನೆ. ಸದರಿ
ಹಣವನ್ನು ಕಂತು ಕಟ್ಟಲು ಕಂಪನಿಯವರನ್ನು ಕರೆದಾಗ ಸದರಿಯವರು ನಾವು ಜರ್ನಿಯಲ್ಲಿ ಹೋಗುತ್ತೆವೆ, ನೀವು ನಾಳೆ ನಮ್ಮ
ಅಕೌಂಟಿಗೆ ಹಾಕ್ರಿ ಅಂತಾ ತಿಳಿಸಿದ್ದರಿಂದ ನಾನು ಮನೆಯಿಂದ ತೆಗೆದುಕೊಂಡು ಬಂದ ನಗದು ಹಣ 75,000/- ರೂಗಳನ್ನು ನಾಳೆ ಕಟ್ಟಿದರಾಯಿತು ಅಂತಾ ನನ್ನ
ಟೆಬಲಿನ ಡ್ರಾದಲ್ಲಿ ಇಟ್ಟು ಕೀಲಿ ಹಾಕಿರುತ್ತೆನೆ. ಅದರ ಜೋತೆಗೆ ನನ್ನ ಡೆಲ್ ಕಂಪನಿಯ
ಲ್ಯಾಪಟಾಪನ್ನು ಸಹ ಇಟ್ಟಿರುತ್ತೆನೆ. ಸದರಿ ಕೀಲಿ ಕೈಯನ್ನು ಟೆಬಲ್‌ನ ಕೆಳಗೆ ಪೆಪರಗಳಲ್ಲಿ
ಇಟ್ಟಿರುತ್ತೆನೆ. ನಂತರ ರಾತ್ರಿ 9:30 ಗಂಟೆಯ ಸುಮಾರಿಗೆ ಆಸ್ಪತ್ರೆಯ ಶೆಟರ್‌ನ್ನು ಮುಚ್ಚಿಕೊಂಡು
ಮನೆಗೆ ಹೋಗಿರುತ್ತವೆ. ಇಂದು ದಿನಾಂಕ:13/10/2015 ರಂದು 4:50 ಎಎಮ್ ಸುಮಾರಿಗೆ ಪೊಲೀಸ್‌ನವರು
ನನಗೆ ಫೊನ್ ಮಾಡಿ ನಿಮ್ಮ ಆಸ್ಪತ್ರೆಯ ಶೆಟರ್ ತೆಗೆದಿದೆ ನೀವು ಒಳಗಡೆ ಮಲಗುತ್ತಿರಾ ಹೇಗೆ ಅಂತಾ
ಕೇಳಿದಾಗ ಇಲ್ಲ ಅಂತ ತಿಳಿಸಿದ್ದು ಇರುತ್ತದೆ. ನಿಮ್ಮ ಆಸ್ಪತ್ರೆಯ ಶೆಟರ್ ತೆರೆದಿದೆ ಅಂತ
ಹೇಳಿದ್ದರಿಂದ ನಾನು ಅಲ್ಲಿಗೆ ಬಂದು ನೋಡಲಾಗಿ ನಮ್ಮ ಆಸ್ಪತ್ರೆಯ ಶೆಟರ್ ಕೀಲಿ ಮುರಿದು
ಶೆಟರನ್ನು ಹಿಗ್ಗಿಸಿದ್ದು ಇರುತ್ತದೆ. ನಂತರ ನಾನು ಪೊಲೀಸ್‌ನವರೊಂದಿಗೆ ಒಳಗಡೆ ಹೋಗಿ ನೋಡಲಾಗಿ
ನನ್ನ ಟೆಬಲ್‌ನ ಡ್ರಾದ ಕೀಲಿ ತೆಗದಿದ್ದು ಅದರಲ್ಲಿ ನಾನು ಇಟ್ಟಿದ್ದ ನಗದು ಹಣ 75,000/- ರೂಗಳು ಮತ್ತು ಒಂದು ಲ್ಯಾಪಟಾಪ ಯಾರೋ ಕಳ್ಳತನ
ಮಾಡಿಕೊಂಡು ಹೋಗಿದ್ದು ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ
ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 13-10-2015 ರಂದು ರಾತ್ರ ಅಫಜಲಪೂರ ಪಟ್ಟಣದ ಘತ್ತರಗಾ
ರೋಡಿಗೆ ಇರುವ ಲಕ್ಷ್ಮಿ ಗುಡಿ ಹತ್ತಿರ ಇದ್ದಾಗ ಬನ್ನಟ್ಟಿ ಕಡೆಯಿಂದ ಒಂದು ಟ್ರಾಕ್ಟರ ಬರುತಿದ್ದು
ನಾನು ಸದರಿ ಟ್ರಾಕ್ಟರ ಚಾಲಕನಿಗೆ ಟ್ರಾಕ್ಟರ ನಿಲ್ಲಿಸುವಂತೆ ಕೈ ಸೊನ್ನೆ ಮಾಡಿದಾಗ ಸದರಿ ಚಾಲಕನು
ನನಗೆ ನೋಡಿ ತನ್ನ ಟ್ತಾಕ್ಟರ ನಿಲ್ಲಿಸಿದ ತಕ್ಷಣ ಕತ್ತಲಲ್ಲಿ ಓಡಿ ಹೋಗಿರುತ್ತಾನೆ ಸದರಿ
ಟ್ರಾಕ್ಟರ ಟ್ರೈಲಿಯಲ್ಲಿ ಮರಳು ತುಂಬಿರುತ್ತದೆ ಅಂತ ರಾತ್ರಿ ಗಸ್ತು ಬಿಟ್ ನಂ 04 ರಲ್ಲಿ
ಕರ್ತವ್ಯದಲಿದ್ದ ಗುಂಡಪ್ಪ ಪಿಸಿ-339 ರವರು ನನಗೆ ನಿಸ್ತಂತು ಮೂಲಕ ಕಾಲ ಮಾಡಿ ತಿಳಿಸಿದ್ರ
ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಲಕ್ಷ್ಮಿ ಗುಡಿ ಹತ್ತಿರ
ಹೋಗಿ ನೋಡಲಾಗಿ ಒಂದು ಟ್ರಾಕ್ಟರ ಇದ್ದು ಅಲ್ಲಿ ನಮ್ಮ ಸಿಬ್ಬಂದಿಯಾದ ಗುಂಡಪ್ಪ ಪಿಸಿ-339, ರವರು ಹಾಜರಿದ್ದು ಸದರಿ ಟ್ರಾಕ್ಟರ ನೋಡಲಾಗಿ ಸದರಿ ಟ್ರಾಕ್ಟರ ಚಾಲಕನು ಟ್ರಾಕ್ಟರದಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳು
ತುಂಬಿದ್ದು ಇದ್ದಿದ್ದು ಪಂಚರ ಸಮಕ್ಷಮ ನಾನು ಟ್ರಾಕ್ಟರನ್ನು ಚಕ್ಕ ಮಾಡಲು, ಸ್ವರಾಜ ಕಂಪನಿಯ ಟ್ರಾಕ್ಟರ ಇದ್ದು ಅದರ ಇಂಜಿನ ನಂ 43.3008/ಎಸ್ ಆರ್
ಹೆಚ್ 08671 ಚೆಸ್ಸಿ ನಂ ಡಬ್ಲೂಎಸಿಹೆಚ್ 40906160567 ಅಂತ ಇದ್ದು, ಸದರಿ ಟ್ರಾಕ್ಟರದಲ್ಲಿ ಮರಳು
ತುಂಬಿದ್ದನ್ನು ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ
ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಗಿರೇಪ್ಪ ತಂದೆ ಗುಂಡಪ್ಪ ಶಾಖಾವ ಸಾ:ಬೆಳಕೋಟಾ ಆಎರ.ಸಿ ಕಮಲಾಪೂರ ತಾ:ಜಿ:ಕಲಬುರಗಿ ಇವರು ದಿನಾಂಕ: 11-10-2015 ರಂದು ರಾತ್ರಿ ತಮ್ಮ ಮಗ ಸಂತೋಷ ಈತನು ಕಮಲಾಪೂರ ಗ್ರಾಮದ ಅಯ್ಯುಬ ಧಾಭಾದ ಮುಂದಿನಿಂದ ತಮ್ಮ ಮನೆಯ ಕಡೆಗೆ ಹೋಗುವಾಗ ಆನಂದನು ಕುಡಿದ ನಶೆಯಲ್ಲಿ ಅವಾಚ್ಯವಾಗಿ ಬೈಯುತ್ತಿದ್ದಾಗ ಫಿರ್ಯಾಧಿ ಹಾಗೂ ಆರೋಪಿತರ ಮದ್ಯ ಬಾಯಿಮಾತಿನ ತಕರಾರು ಆಗಿದ್ದು. ಅಲ್ಲದೆ ರಾತ್ರಿ ಆರೋಪಿತರು ಫಿರ್ಯಾಧಿಯ ಮನೆಯ ಮುಂದೆ ಹೋಗಿ ಕಲ್ಲು ತುರಾಟ ಮಾಡಿ ಫಿರ್ಯಾಧಯವರ ಮನೆಯ ಮುಂದಗಡೆ ನಿಲ್ಲಿಸಿದ ಕಾರ ಜಖಂ ಮಾಡಿ ಜಗಳಾ ಮಾಡಿದ್ದು. ಅದೇ ವಿಷಯದಲ್ಲಿ ಇಂಧು ದಿನಾಂಕ: 12-10-2015 ರಂದು ಸಾಯಂಕಾಲ ಗಿರೇಪ್ಪ ಶಾಖಾ ಅವರ ಹೆಂಡತಿ ಮಲ್ಲಮ್ಮ ಹಾಗೂ ಮಗ ಸಂತೋಷ ಇವರು ಬೇಳಕೋಟಾ ಆರ.ಸಿ ಕಮಲಾಪೂರನ ತಮ್ಮಮನೆಯ ಮುಂದೆ ಮಾತನಾಡುತ್ತಾ ಕುಂತಾಗ ಪರಮೇಶ @ ಪಮ್ಮು ತಂದೆ ಪೀರಪ್ಪ ಗೌರೆ ಅರವಿಂದ ತಂದೆ ಪೀರಪ್ಪ ಗೌರೆ ಆನಂದ ತಂದೆ ಪೀರಪ್ಪ ಗೌರೆ ಅನೀಲ ತಂದೆ ಪೀರಪ್ಪ ಗೌರೆ ದಯಾನಂದ ಗೌರೆ ರಘು ಹಾಲು ರಾಜು ಹಾಲು ಅನೀಲ ಸೂಗೂರ ಅವಿನಾಶ ಹಾಲು ಜಗದೀಶ ಗೌರೆ ಹಾಗೂ ಅಂಬವ್ವ ಗೌರೆ ಸಾ:ಎಲ್ಲರೂ ಕಮಲಾಪೂರ ಇವರು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಚಿರಾಡುತ್ತಾ ಬಂದು ಫಿರ್ಯಾಧಿಗೆ ಅವನ ಹೆಂಡತಿಗೆ ಹಾಗೂ ಮಗನಿಗೆ ಹೋಡೆ ಬಡೆ ಮಾಡಿ ಫಿರ್ಯಾಧಿ ಹೆಂಡತಿ ಮಲ್ಲಮ್ಮಳಿಗೆ ತಲೆಯ ಕೂದಲು ಹಿಡಿದು ಎಳೆದಾಡಿ ಅವಮಾನ ಗೋಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ
ಮ,ಏಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment