ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಭೂಸನೂರ ಗ್ರಾಮದ ಶಂಕರ ತಂದೆ ಸಿದ್ದಾರಾಮ ಸುತಾರ @ ಬಡಿಗೇರ ಇತನು ತನಗೆ
ನೀರಿಗೆ, ಕಾಲೇಜಿಗೆ ಹೋಗುವಾಗ ಹಿಂದೆ ಹಿಂದೆ ಬರುವದು, ಮನೆಯ ಮುಂದೆ ಬರುವದು ಮಾಡುತ್ತಾ ನಾನು ನಿನಗೆ
ಜೀವಕ್ಕಿಂತ ಹೆಚ್ಚಾಗಿ ಪ್ರಿತಿಸುತ್ತೇನೆ ಇಬ್ಬರೂ ಮದುವೆಯಾಗೋಣ ಅಂತ ನಂಬಿಸಿ ತಲೆ ಕೆಡಿಸಿ ಆಗಾಗ
ನನಗೆ ಮನಸ್ಸಿಲ್ಲದಿದ್ದರೂ ಸಹ ಗುಡದಮ್ಮ ದೇವಿಯ ಗುಡಿಯ ಹತ್ತಿರ ಇರುವ ಕೆನಲ ನಾಲಕ್ಕೆ ಒಯ್ದು
ಸುಮಾರು 5-6 ಬಾರಿ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ, ಕೊನೆಯದಾಗಿ ದಿನಾಂಕ 30/08/2015 ರಂದು ಮಧ್ಯಾಹ್ನ 1230 ಗಂಟೆಯಿಂದ 1330 ಗಂಟೆಯ ಮಧ್ಯದ
ಅವಧಿಯಲ್ಲಿ ಬಲವಂತವಾಗಿ ಸಂಭೋಗ ಮಾಡಿದ್ದು ಆ ನಂತರ ಬೆಂಗಳೂರಿಗೆ ಹೋದವನು ಇತ್ತಿಚೆಗೆ ಒಂದು
ತಿಂಗಳ ಹಿಂದೆ ಗ್ರಾಮಕ್ಕೆ ಬಂದಿದ್ದು 15-20 ದಿವಸಗಳ ಹಿಂದೆ ನಾನು ಆತನೊಂದಿಗೆ ಮೋಬೈಲದಲ್ಲಿ ಮಾತನಾಡುವ ವಿಚಾರ ತಿಳಿದು ನನ್ನ ಸೊದರ
ಮಾವನಾದ ಶಿವರಾಜನು ನನಗೆ ಮನೆಯಿಂದ ಹೊರ ಹಾಕಿದ್ದು ನಾನು ಈ ವಿಷಯ ಶಂಕರನಿಗೆ ತಿಳಿಸಿದ್ದು ಆತನು
ನಾನು ಮದುವೆ ಆಗುವದಿಲ್ಲ ಏನು ಬೇಕಾದರೂ ಮಾಡಕೊ ಅಂತ ಹಾರಿಕೆ ಉತ್ತರ ನೀಡಿರುತ್ತಾನೆ ಅಂತಾ
ಕುಮಾರಿ ಇವಳು ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ.ಸತೀಶ ತಂದೆ ಶರಣಬಸಪ್ಪಾ ಪಾಟೀಲ ಸಾ:ಬೇಡ್ಜರಗಿ ಹಾ.ವಾ:ಜಾರಿ
ಗಲ್ಲಿ ಆಳಂದ ಇವರ ಹೆಂಡತಿಯಾದ ಪಲ್ಲವಿ ವಯ:25 ವರ್ಷ ಇವಳು ದಿನಾಂಕ:29/01/2016 ರಂದು
ಬೇಳಗಿನ ಜಾವ 02:00 ಗಂಟೆಗೆ ಅವಳ ತವರು ಮನೆಯಾದ ಮಹಾದೇವಿ ಕಾಲೋನಿ ಆಳಂದದಿಂದ ಯಾರಿಗೂ ಹೇಳದೆ ಕೇಳದೆ ನಮ್ಮ 02 ವರ್ಷದ ಹೆಣ್ಣು ಮಗುವಾದ
ಸ್ಪಂದನಾಳಿಗೆ ತಗೆದುಕೊಂಡು ಹೋಗಿದ್ದು. ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಿದರೂ
ಸಿಕ್ಕಿರುವುದಿಲ್ಲ. ಕಾಣೆಯಾದ ನನ್ನ ಹೆಂಡತಿ ಮತ್ತು ಮಗುವನ್ನು ಪತ್ತೆ ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀ
ಹಣಮಂತ ಲಕ್ಷ್ಮಂಪುರ ಸಾ: ಆಂದೋಲಾ ಇವರು ದಿನಾಂಕ 01/02/2016 ರಂದು ರಾತ್ರಿ 8-00 ಗಂಟೆಗೆ ನಾವು
ಮನೆಯಲ್ಲಿದ್ದಾಗ 1] )ಹಣಮಂತ ತಂದೆ ಸಾಯಿಬಣ್ಣ
ದೋರಿ 2] ಸಕ್ರೆಪ್ಪ ತಂದೆ ಸಾಯಿಬಣ್ಣ ದೋರಿ 3] ಕರಣಪ್ಪ ತಂದೆ ಸಾಯಬಣ್ಣ ದೋರಿ 4] ವೆಂಕಟೇಶ ತಂದೆ
ಭೀಮರೆಡ್ಡಿ ಮುದಬಾಳ 5] ಸಾಯಿಬಣ್ಣ ತಂದೆ ಹಣಮಂತ ದೋರಿ 6] ಅಮಲಮ್ಮ 7] ಲಲಿತಮ್ಮ ಸಾ: ಎಲ್ಲರು ಆಂದೋಲಾ ಎಲ್ಲರು
ಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದು ನಿಂತು
ಗ್ರಾಮ ಪಂಚಾಯತಿ ಚುನಾವಣೆ ವಿಷಯದಲ್ಲಿ ನಮಗೆ ಅವಚ್ಯಾವಾಗಿ ಬೈಯುತ್ತಿದ್ದಾಗ ನಮ್ಮ ತಂದೆ
ತಾಯಿಯವರು ನಮಗೆ ಯಾಕೆ ಸುಮ್ಮನೆ ಬೈಯುತ್ತಿದ್ದಿರಿ ಅಂತಾ ಕೇಳೀದಕ್ಕೆ ಆರೋಪಿತರು ಕೈಯಿಂದ
ಬಡಿಗಡಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ನಮ್ಮ ತಂದೆ ಮುಂದು ಹೋಗದಂತೆ ತಡೆದು ನಿಲ್ಲಿಸಿ ಜೀವದ
ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ..
No comments:
Post a Comment