Police Bhavan Kalaburagi

Police Bhavan Kalaburagi

Saturday, May 28, 2016

Kalaburagi District Press Reporte.

ಪತ್ರಿಕಾ ಪ್ರಕಟಣೆ


ದಿನಾಂಕ 05/03/2014 ರಂದು ಶಾಹಬಾದ ಪಟ್ಟಣದಿಂದ ಮಹಮ್ಮದ ಹಾಜಿ ತಂದೆ ಬಾಬುಮಿಯ್ಯ ವಯ -07ವರ್ಷ, ಸಾ|| ಇಂಜಿನ್ ಪೈಲ್ ಶಹಬಾದ ಬಡವಣೆಯಿಂದ ಕಾಣೆಯಾಗಿದ್ದು ಈ ವಿಷಯದಲ್ಲಿ ಮಗುವಿನ ತಾಯಿ ಶ್ರೀಮತಿ ಫಾತಿಮಾ ಗಂಡ ಬಾಬುಮಿಯ್ಯಾ ಸಾ|| ಇಂಜಿನ್ ಪೈಲ್ ಶಾಹಬಾದ ರವರು ಶಾಹಬಾದ ನಗರ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ಸಲ್ಲಿಸಿದರ ಮೇರೆಗೆ ಠಾಣೆ ಗುನ್ನೆ ನಂ 161/2014 ಕಲಂ 363(ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ. ಸುಮಾರು ದಿನಗಳಾದರೂ ಸದರ ಗುನ್ನೆ ಪತ್ತೆಯಾಗದೆ ಇರುವುದರಿಂದ ಈ ಗುನ್ನೆ ಹೆಚ್ಚಿನ ತನಿಖೆ ಕುರಿತು ಕಲಬುರಗಿಯ ಡಿಸಿಐಬಿ ಘಟಕಕ್ಕೆ ವರ್ಗಾಯಿಸಿದ್ದು ಇರುತ್ತದೆ.

        ಮಾನ್ಯ,ಎಸ್.ಎಸ್.ಹುಲ್ಲೂರು, ಡಿ.ಎಸ್.ಪಿ,  ಡಿ.ಸಿ.ಆರ.ಬಿ ರವರ ನಿರ್ದೇಶನದಲ್ಲಿ ಮತ್ತು ಶ್ರೀ ಕೆ.ಎಮ್ ಸತೀಶ ಪಿ.ಐ,  ಡಿಸಿಐಬಿ ಘಟಕ ಕಲಬುರಗಿ ರವರ ನೇತೃತ್ವದಲ್ಲಿ ಡಿಸಿಐಬಿ ಘಟಕ ಸಿಬ್ಬಂದಿಯವರಾದ ಶ್ರೀ ಬಸವರಾಜ ಎ.ಎಸ್.ಐ. ಶ್ರೀ, ದತ್ತಾತ್ರೇಯ ಎ.ಎಸ್.ಐ, ಶ್ರೀ ಆನಂದ ಪ್ರಸಾದ, ಶ್ರೀ, ಸೈಯದ ಅಯ್ಯುಬ, ಶ್ರೀ.ಪ್ರಕಾಶ, ಶ್ರೀ.ಅಂಬಾರಾಯ, ಶ್ರೀ ಚಂದ್ರಕಾಂತ, ಮತ್ತು ಶ್ರೀಮತಿ ಸವಿತಾ ರವರು ಪತ್ತೆ ಕಾರ್ಯದಲ್ಲಿ ನಿರತರಾಗಿ ಸದರ ಕಾಣೆಯಾದ ಮಗುವಿಗೆ ಇಂದು ದಿನಾಂಕ 28/05/2016 ರಂದು ಯಾದಗಿರ ಪಟ್ಟಣದಲ್ಲಿ ಪತ್ತೆ ಹಚ್ಚಿದ್ದು ಇರುತ್ತದೆ. ಈ ವಿಷಯವನ್ನು ತಿಳಿದ ಮಗುವಿನ ಪಾಲಕರು ಮಗುವನ್ನು ಕಂಡು ಸಂತೋಷಭರಿತರಾಗಿ ಪೊಲೀಸರು ಈ ಶ್ಲಾಘನೀಯ ಕೆಲಸಕ್ಕೆ ಪಾಲಕರು ಕೊಂಡ್ಡಾಡಿದರು. 

No comments: