ನ್ಯಾಯಾಲಯದಲ್ಲಿ ಬೆಂಕಿ
ಹಚ್ಚಿದ್ದರಿಂದ ವಸ್ತಗಳು ಭಸ್ಮ :
ಅಫಜಲಪೂರ ಠಾಣೆ : ಶ್ರಿ
ಗುರುಮೂರ್ತಿ ಆರ್.ಡಿ ಪ್ರಥಮ ದರ್ಜೆ ಸಹಾಯಕ ಪ್ರಭಾರಿ ನ್ಯಾಯಾಲಯ ಸೀರೇಸ್ತೆದಾರ ಮಾನ್ಯ ಸಿ.ಜೆ.
ಮತ್ತು ಜೆ.ಎಮ್.ಎಫ್.ಸಿ ಕೋರ್ಟ ಅಫಜಲಪೂರ ನಮ್ಮ ನ್ಯಾಯಾಲಯ ಸೀರೇಸ್ತೇದಾರರಾದ ವೈ.ಕೆ ನಡವೀನಕೇರಿ
ಇವರು ದಿನಾಂಕ 27-05-2016 ಮತ್ತು 28-05-2016 ರಂದು
ಆಕಸ್ಮಿಕ ರಜೆ ಹಾಕಿದ್ದು ನನಗೆ ಪ್ರಭಾರ ವಹಿಸಿರುತ್ತಾರೆ. ನಾನು ದಿನಾಂಕ 27-05-2016
ರಂದು ರಾತ್ರಿ ನಮ್ಮ ಮನೆಯಲ್ಲಿ ನಾನು ಮಲಗಿದ್ದಾಗ ಅಫಲಪೂರ ಪೊಲೀಸ್ ಠಾಣೆಯ ಪಿಸಿ ಸಂತೋಷ
ರವರು ನನ್ನ ಮೋಬಾಯಿಲಗೆ ಕರೆ ಮಾಡಿ ನಿಮ್ಮ ನ್ಯಾಯಾಲಯದಲ್ಲಿ ಬೆಂಕಿ ಹತ್ತಿಕೊಂಡಿದೆ ಬನ್ನಿ ಎಂದು
ತಿಳಿಸಿದರು. ಆಗ ನಾನು ತಕ್ಷಣ ಕೋರ್ಟಿ ಬಂದು ನೋಡಲಾಗಿ ನಮ್ಮ ನ್ಯಾಯಾಲಯದ ಸೀಪಾಯಿ ಯಾದ ಅಶೋಕ
ಸ್ಥಳದಲ್ಲಿ ಹಾಜರಿದ್ದು ನಾನು ಹೇಗೆ ಆಯಿತು ಎಂದು ಕೇಳಿದಾಗ ನನಗೆ ಗೊತ್ತಿಲ ಎಂದು ತಿಳಿಸಿದರು.
ಆಗ ನಾನು ಮತ್ತು ಸೀಪಾಯಿ ಅಶೋಕ ಮತ್ತು ಸಿಪಿಸಿ ಸಂತೋಷ, ಸಿಪಿಸಿ
ಅಕ್ತರಪಟೇಲ ಹಾಗೂ ಅಗ್ನಿ ಶಾಮಕದ ಸಿಬ್ಬಂದಿಗಳು ಸೇರಿಕೊಂಡು ಬೆಂಕಿಯನ್ನು ಆರೀಸಿದೇವು ತದನಂತರ
ತಿಳಿದು ಬಂದ ವಿಷಯ ಏನೆಂದರೆ ನಮ್ಮ ನ್ಯಾಯಾಲಯದ ಆವರಣದಲ್ಲಿರುವ ಕ್ಯಾಂಟೀನಗೆ ನುಗ್ಗಿ ಸೀಲೇಂಡರ
ತಗೆದುಕೊಂಡು ಬಂದು ನ್ಯಾಯಾಲಯದ ನ್ಯಾಯಾದೀಶ ಕೋಣೆ ಬಾಗಿಲನ್ನು ಮುರಿದು ಒಳ ಪ್ರವೇಶಿಸಿದಾಗ ಯಾರೋ ದುಷ್ಕರ್ಮೀಗಳು ಸಿಲೇಂಡರ
ಅನ್ನು ಸ್ಪೋಟಿಸಿ ಬೆಂಕಿ ಹಚ್ಚಿರುವುದು ಕಂಡು ಬಂದಿರುತ್ತೇ ಮತ್ತು ನ್ಯಾಯಾದೀಶರ ಕೋಣೆಯ ಎಲ್ಲಾ
ವಸ್ತುಗಳು ಸುಟ್ಟು ಭಸ್ಮ ವಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕೊಲೆ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ವೆಂಕಯ್ಯ ತಂದೆ ನೌಸಯ್ಯ ದೇವರಮನಿ ಸಾ:ಯಡ್ರಾಮಿ ರವರ ಹಿರಿಯ
ಮಗ ಹಣಮಂತ ಇತನ ಹೆಂಡತಿ ಈಗ ಮೂರು ವರ್ಷಗಳಿಂದ ಹೊಟ್ಟೆಪಾಡಿಗಾಗಿ ಮಂಗಳೂರಿಗೆ ಹೋಗಿರುತ್ತಾಳೆ.
ಅವರಿಗೆ ಮೂರು ಹೆಣ್ಣು ಮಕ್ಕಳು ಮತ್ತು ಮೂರು ಗಂಡು ಮಕ್ಕಳಿರುತ್ತಾರೆ. ಹಣಮಂತನ ಹಿರಿಯ ಮಗಳಾದ
ರೇಣುಖಾ ಇವಳಿಗೆ ಹುಬ್ಬಳ್ಳಿಯ ಶ್ರೀನಿವಾಸ ಪೂಜಾರಿ ಎಂಬುವನಿಗೆ ಕೊಟ್ಟು ಮದುವೆ ಮಾಡಿರುತ್ತೇವೆ.
ನನ್ನ ಮೊಮ್ಮಗಳಾದ ರೇಣುಖಾ ಇವಳು ತನ್ನ ಗಂಡನ ಮನೆಯಿಂದ ನಿನ್ನೆ ನಮ್ಮೂರಿಗೆ ಬಂದಿರುತ್ತಾಳೆ.
ನನ್ನ ಮಗ ಹಣಮಂತನು ಒಬ್ಬಂಟಿಗ ಇದ್ದು, ಅಲ್ಲಿ ಇಲ್ಲಿ ಬೇಡಿಕೊಂಡು ಉಪಜಿವನ ಮಾಡುತ್ತಿದ್ದನು.
ನನ್ನ ಮಗ ಹಣಮಂತ ಇತನು ರಾತ್ರಿ 9 ಗಂಟೆಗೆ ಮನೆಯಿಂದ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ. ದಿನಾಂಕ: 27-05-16 ರಂದು ಬೆಳಗ್ಗೆ ನಾನು ಮತ್ತು
ನನ್ನ ಹೆಂಡತಿ ಮನಯಲ್ಲಿದ್ದಾಗ ಓಣಿಯವರೆಲ್ಲರೂ ನಿನ್ನ ಮಗ ಹಣಮಂತನಿಗೆ ಯಾರೋ ಕೊಲೆ ಮಾಡಿ
ಕೋಣಸಿರಸಗಿ ರಸ್ತೆಗೆ ಹೊಂದಿಕೊಂಡಿರುವ ಮಹೆಬೂಬ ಪಟೇಲ ಮೊರಟಗಿ ರವರ ಹೊಲದಲ್ಲಿ ಬಿಸಾಕಿರುತ್ತಾರೆ
ಅಂತಾ ಹೆಳಿದ ಕೂಡಲೆ ನಾನು ಮತ್ತು ನನ್ನ ಹೆಂಡತಿ ಗಾಬರಿಗೊಂಡು ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ
ಮಗನಿಗೆ ಯಾರೋ ಕೇಲವು ಜನರು ಅವನ ಕೊರಳಲ್ಲಿದ್ದ ಟಾವೆಲನಿಂದ ಕುತ್ತಿಗೆಗೆ ಬಿಗಿದು ಕೊಲೆ
ಮಡಿರುತ್ತಾರೆ. ನಿನ್ನೆ ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 4 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ,
ಯಾವುದೋ ಉದ್ದೇಶಕ್ಕಾಗಿ ನನ್ನ ಮಗ ಹಣಮಂತನಿಗೆ ಕೊಲೆ ಮಾಡಿರುತ್ತಾರೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment