ಕೊಲೆ ಪ್ರಕರಣ :
ಯಡ್ರಾಮಿ
ಠಾಣೆ : ಶ್ರೀ ಶಾಂತಕುಮಾರ ತಂದೆ
ಶಿವಣ್ಣ ಹವಾಲ್ದಾರ ಸಾ|| ಗೂಗಿಹಾಳ ತಾ||
ಜೇವರ್ಗಿ, ಹಾ|| ವ|| ಕಲಬುರ್ಗಿ
ಇವರ ತಂದೆ ತಾಯಿಗೆ 1) ಶಿವಲೀಲಾ, 2) ಮಲ್ಲಣ್ಣ 3) ನಾನು 4) ಸಿದ್ರಾಮಪ್ಪ ಹೀಗೆ
ಮಕ್ಕಳಿರುತ್ತೆವೆ. ನನ್ನ ಅಕ್ಕಳಾದ ಶಿವಲೀಲಾ ಇವಳೀಗೆ ಮದುವೆ ಮಾಡಿಕೊಟ್ಟಿದ್ದು ಅವಳು ತನ್ನ ಗಂಡನ
ಮನೆಯಲ್ಲಿರುತ್ತಾಳೆ. ನನ್ನ ತಂದೆ ಇಗ ಸುಮಾರು 6-7 ವರ್ಷಗಳ ಹಿಂದೆ ಮೃತ ಪಟ್ಟಿದ್ದು ನಮ್ಮ ಹಿರಿಯ
ಅಣ್ಣ ಮಲ್ಲಣ್ಣ ತನ್ನ ಹೆಂಡತಿ ಮಕ್ಕಳೊಂದಿಗೆ ಬೇರೆಯಾಗಿದ್ದು ನಾನು ನನ್ನ ತಮ್ಮ ಸಿದ್ರಾಮಪ್ಪ
ಕೂಡಿಯೇ ಇರುತ್ತೆವೆ. ನನ್ನ ತಾಯಿಯೂ ಕೂಡ ನಮ್ಮ ಹತ್ತಿರ ಇರುತ್ತಾಳೆ. ನಾವು ಬೇರೆ-ಬೇರೆಯಾಗುವಾಗ
ನಮ್ಮ ತಾಯಿ ಶರಣಮ್ಮಳಿಗೆ ಹಾಗು ನಮ್ಮ ಸೊಹದರ ಅತ್ತೆ ಮಾಹಾದೇವಿ ಇವರ ಉಪ ಜೀವನಕ್ಕಾಗಿ ತಲಾ
ಎರಡು-ಎರಡು ಎಕರೆ ಹೊಲವು ಬಿಟ್ಟುಕೊಟ್ಟಿದ್ದು ಅವರು ಬಿದ್ದು ಹೋದ ನಂತರ ನಾವು ಮೂರು ಜನ
ಅಣ್ಣ-ತಮ್ಮಂದಿರರು ಹಂಚಿಕೆ ಮಾಡಿಕೊಳ್ಳುವ ವಿಷಯ ಮಾತಾಡಿ ಬಿಟ್ಟುಕೊಟ್ಟಿರುತ್ತೆವೆ. ನಾನು ನನ್ನ
ಮಕ್ಕಳ ವಿದ್ಯಾಬ್ಯಾಸಕ್ಕಾಗಿ ಕಲಬುರಗಿಯಲ್ಲಿ ಮನೆ ಮಾಡಿದ್ದು ಆಗಾಗ ನಾನು ನಮ್ಮ ಊರಿಗೆ ಬಂದು
ಹೋಗುತ್ತೆನೆ. ಇಗ ಸದ್ಯ ನನ್ನ ಮಕ್ಕಳ ಶಾಲೆಗಳು ರಜೆ ಇರುವದಿಂದ 8 ದಿವಸಗಳ ಹಿಂದೆ ಊರಿಗೆ
ಬಂದಿರುತ್ತೆನೆ. ನಮ್ಮ ತಾಯಿ ಮತ್ತು ಸೊಹದರ ಅತ್ತೆ ನಮ್ಮ ಹತ್ತಿರ ಇರುತ್ತಾರೆ. ಇಗ ಸುಮಾರು ಎರಡು
ವರ್ಷಗಳಿಂದ ನನ್ನ ಅಣ್ಣ ಮಲ್ಲಣ್ಣ ಇತನು ತಾಯಿ ಹಾಗು ಸೋಹದರ ಅತ್ತೆಗೆ ಬಿಟ್ಟ ಹೊಲ ಎಲ್ಲರೂ
ಹಂಚಿಕೊಳ್ಳೊಣ ಅಂತಾ ಅಂದಾಗ ನಮ್ಮೊಂದಿಗೆ ತಕರಾರು ಮಾಡುತ್ತಾ ನನ್ನ ತಾಯಿಯಾದ ಶರಣಮ್ಮ ಹಾಗು
ಸೊಹದರ ಅತ್ತೆ ಮಹಾದೇವಿಗೆ ಖಲಾಸ ಮಾಡಿಯೇ
ಬಿಡುತ್ತೆನೆ ಆ ವೇಳೆಗೆ ಹೊಲ ತೆಗೆದುಕೊಳ್ಳುತ್ತೆನೆ. ಅಂತಾ ಹೇಳುತ್ತಾ ಬಂದಿರುತ್ತಾನೆ. ಆದರು
ನನ್ನ ಅಣ್ಣ ಹಿಗೆಯೆ ಒದರಾಡುತ್ತಾನೆ ಅಂತಾ ನಾವು ಸುಮ್ಮನಿದ್ದೆವು. ದಿನಾಂಕ 13-05-2016 ರಂದು
ರಾತ್ರಿ 9 ಗಂಟೆಯ ಸುಮಾರಿಗೆ ನಾನು ನನ್ನ ತಾಯಿ ಶರಣಮ್ಮ ಹಾಗು ನನ್ನ ತಮ್ಮ ಸಿದ್ರಾಮಪ್ಪ
ಹಿಗೆಲ್ಲರೂ ಊಟ ಮಾಡಿ ಮನೆಲ್ಲಿದ್ದಾಗ ನಮ್ಮ ಅಣ್ಣ ಆತನ ಹೆಂಡತಿ ರೇಣುಕಾ, ಅವರ
ಮಕ್ಕಳಾದ ರವಿಂದ್ರ ಮತ್ತು ವಿಶಾಲ ಇವರೆಲ್ಲರೂ ಕೂಡಿಕೊಂಡು ಮನೆಯ ಮುಂದೆ ಬಂದು ಅವರಲ್ಲಿ ಮಲ್ಲಣ್ಣ
ಇತನು “ ಆ ಮೂದಿ ರಂಡಿ ಎಲ್ಲಿ ಇದ್ದಾಳೆ, ಅವಳಿಗೆ
ಇಂದು ಖಲಾಸ ಮಾಡಿ ಆ ಹೊಲವನ್ನು ತೆಗೆದುಕೊಳ್ಳುತ್ತೆನೆ”
ಅಂತಾ ಬೈಯುತ್ತಿದ್ದಾಗ ನನ್ನ ತಾಯಿ ಹೊರಗೆ ಬಂದು
ಯಾಕೆ ಬಯ್ಯುತ್ತಿದ್ದಿ ನಾನು ಸತ್ತ ನಂತರ ಆ ಹೊಲ ನಿಮಗೆ ಇರುತ್ತದೆ ಅಲ್ಲಾ, ಸತ್ತ
ಮೇಲೆ ನಾನೆನು ಹೊಲ ತೆಗೆದುಕೊಂಡು ಹೋಗುತ್ತೆನೆ. ಅಂತಾ ಅನ್ನುತ್ತಿದ್ದಾಗ ಮಲ್ಲಣ್ಣ ಇತನು
ಅಲ್ಲೆಯೇ ಬಿದ್ದ ಕಲ್ಲು ತೆಗೆದುಕೊಂಡು ಕೈ ಮುಷ್ಠಿಯಲ್ಲಿ ಹಿಡಿದು ನನ್ನ ತಾಯಿಯ ಎಡ ಮೆಲಕಿಗೆ
ಜೋರಾಗಿ ಹೊಡೆದನು. ಆಗ ನನ್ನ ತಾಯಿ ಕೇಳಗೆ ಬಿಳಲು ಎಬ್ಬಿಸಲು ಹೊದಾಗ ನನಗೆ ನನ್ನ ಅಣ್ಣ ಮಲ್ಲಣ್ಣ
ಇತನನು ಅದೆ ಕಲ್ಲಿನಿಂದ ನನ್ನ ಎಡ ಕಪಾಳಕ್ಕೆ ಮತ್ತು ಬಾಯಿಯ ಮೇಲೆ ಮತ್ತು ತೆಲೆಗೆ ಹೊಡೆದನು.
ವಿಶಾಲ ಮತ್ತು ರವಿಂದ್ರ ಇಬ್ಬರು ನನಗೆ ಕೈಯಿಂದ ಹೋಡೆ-ಬಡೆ ಮಾಡಿರುತ್ತಾರೆ. ಅಲ್ಲದೆ ರೇಣುಕಾ
ಇವಳು “ ಈ ಮೂದಿ ರಂಡಿಗಿ ಬಿಡಬ್ಯಾಡ್ರಿ ಖಲಾಸ ಮಾಡ್ರಿ” ಅಂತಾ ಒದರಾಡುತ್ತಿದ್ದಳು. ಆಗ ನನ್ನ ತಮ್ಮ ಸಿದ್ರಾಮಪ್ಪ
ನನ್ನ ಹೆಂಡತಿ ಮಮತಾ ತಮ್ಮ ಹೆಂಡತಿ ಅನಿತಾ ಅಲ್ಲಿಯೇ ಇದ್ದ ನಮ್ಮೂರಿನ ಅಶೋಕ ತಂದೆ ಚೆನ್ನಪ್ಪಗೌಡ, ಭೀಮರಾಯ
ತಂದೆ ನಿಂಗಣ್ಣಗೌಡ, ಅಯ್ಯಣ್ಣಗೌಡ ತಂದೆ ಬಸವಂತ್ರಾಯಗೌಡ ಹೀಗೆಲ್ಲರೂ
ಕೂಡಿಕೊಂಡು ಜಗಳವನ್ನು ಬಿಡಿಸಿಕೊಂಡರು ಆಗ ನನ್ನ ತಾಯಿಗೆ ನೋಡಲಾಗಿ, ಎಡ
ಮೆಲಕಿಗೆ ಭಾರಿ ಪೆಟ್ಟಾಗಿ ಕಂದು ಗಟ್ಟಿದಂತೆ ಆಗಿದ್ದು ನನಗೂ ಮುಖಕ್ಕೆ ಗಾಯವಾಗಿದ್ದು ನನ್ನ
ತಾಯಿಗೆ ಉಪಚಾರ ಕುರಿತು ನಾನು ನನ್ನ ತಮ್ಮ ಇಬ್ಬರೂ ಕೂಡಿಕೊಂಡು ಖಾಸಗಿ ವಾಹನದಲ್ಲಿ ತೆಗೆದುಕೊಂಡು
ಇಜೇರಿ ಆಸ್ಪತ್ರೆಗೆ ಹೋಗುವಾಗ ನಮ್ಮೂರಿನ ಮುಖ್ಯೆ ರಸ್ತೆಯ ಕ್ರಾಸಿನ ಹತ್ತಿರ ರಾತ್ರಿ 10 ಗಂಟೆಗೆ
ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಾಮೀಣ
ಠಾಣೆ : ಶ್ರೀ ಮಹಮ್ಮದ ಇರ್ಪಾನ ತಂದೆ ಮಹಮ್ಮದ ಇಸ್ಮಾಯಿಲ್ ಶೇಖ ಸಾ:ನೂರ ಇಲಾಹಿ ಮಜೀದ ಹತ್ತಿರ ಮಿಲತ್ತ ನಗರ ಕಲಬುರಗಿ ಇವರು ಇಬ್ರಾಹಿಂ ಇತನ ಹತ್ತಿರ ತೆಗೆದುಕೊಂಡ ಸಾಲದ ಹಣ ಕೊಡದೇ ಇದುದ್ದಕ್ಕೆ ಅದೇ ಉದ್ದೇಶದಿಂದ ಇಬ್ರಾಹಿಂ ತಂದೆ ಸಲಿಂಸಾಬ, ಮತ್ತು ಟಿಪ್ಪು ತಂದೆ ಸಿಕಂದರ ಹಾಗು ಇನ್ನು ಇಬ್ಬರು ಕೂಡಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಫಿರ್ಯಾದಿದಾರನಿಗೆ ತೆಡೆದು ನಿಲ್ಲಿಸಿ ಅವಾಚ್ಯವಾಗಿ ಬೈಯ್ದು ಕೊಡಲಿಯಿಂದ ಎಡ ಹೊಟ್ಟೆಯ ಕೆಳೆಗೆ ಸೊಂಟದ ಹತ್ತಿರ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕಲರಣ ದಾಖಲಾಗಿದೆ.
ಕಳವು ಪ್ರಕರಣಗಳು :
ನಿಂಬರ್ಗಾ ಠಾಣೆ : ದಿನಾಂಕ 14/05/2016
ರಂದು
0015 ಗಂಟೆಯಿಂದ 0615 ಗಂಟೆಯ ಮಧ್ಯದ
ಅವಧಿಯಲ್ಲಿ ಯಾರೋ ಕಳ್ಳರು ಫಿರ್ಯಾದಿಯ ಕಿರಾಣಿ ಅಂಗಡಿಯ ಬಾಗಿಲಿನ ಬೀಗ ಮುರಿದು ಒಳಗೆ ಹೋಗಿ
ಅದರಲ್ಲಿದ್ದ ನಗದು ಹಣ 9000/-, ಒಂದು ಹಣ ಇಟ್ಟಿದ್ದ ಹುಂಡಿ ಮತ್ತು ಕಿರಾಣಾ
ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಅಂತಾ ಶ್ರೀ ದೇವಾನಂದ
ತಂದೆ ಗುರುಭೀಮ ವಚ್ಚೆ ವ, ಸಾ|| ಯಳಸಂಗಿ ರವರು ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಸುಭಾಶ್ಚಂದ್ರ ತಂದೆ ಶಿವಶರಣಪ್ಪಾ ಪಾಟೀಲ ಸಾ :
ಅಫಜಲಪೂರ ರವರು 6-7 ವರ್ಷಗಳ ಹಿಂದೆ ಅಫಜಲಪೂರ
ಪಟ್ಟಣದ ರೇವಣಸಿದ್ದೇಶ್ವರ ಕಾಲೋನಿಯಲ್ಲಿ ಮನೆ ಕಟ್ಟಿ ಅಲ್ಲೆ ನಾನು ಮತ್ತು ನನ್ನ ಹೆಂಡತಿಯಾದ
ಸುಜಾತಾ ಹಾಗೂ ಮಕ್ಕಳಾದ ಸುಜಯ ಹಾಗೂ ಸುಶಾಂತ ಇವರೊಂದಿಗೆ ವಾಸವಾಗಿರುತ್ತೇನೆ,
ನನ್ನ
ಹೆಂಡತಿ ಮನೆಯಲ್ಲಿದ್ದ ಟ್ರಜರಿಯಲ್ಲಿ ಬಂಗಾರದ ಸಾಮಾನುಗಳು ಇಟ್ಟಿರುತ್ತಾಳೆ. ಈಗ ಬೆಸಿಗೆ ರಜೆ
ಇದ್ದರಿಂದ ಮೂರು ದಿನಗಳ ಹಿಂದೆ ನನ್ನ ಹೆಂಡತಿ ಮತ್ತು ಮಕ್ಕಳು ನಮ್ಮ ಸ್ವಂತ ಊರಾದ ಮಲ್ಲಾಬಾದಕ್ಕೆ
ಹೋಗಿರುತ್ತಾರೆ. ಇಂದು ದಿನಾಂಕ 13-05-2016 ರಂದು ಮದ್ಯಾಹ್ನ 12:30 ಗಂಟೆ ಸುಮಾರಿಗೆ ನಾನು
ನನ್ನ ಸ್ವಂತ ಕೆಲಸದದ ಪ್ರಯುಕ್ತ ಮನೆಯ ಬಾಗಿಲುಗಳನ್ನು ಮುಚ್ಚಿ ಕಿಲಿ ಹಾಕಿ ಹೊರಗಡೆ
ಹೋಗಿರುತ್ತೇನೆ. ಮರಳಿ ಸಾಯಂಕಾಲ 5:30 ಗಂಟೆ ಸುಮಾರಿಗೆ ಮನೆಗೆ ಬಂದು,
ಮನೆಯ
ಒಳಗೆ ಹೋದಾಗ ನಮ್ಮ ಮನೆಯ ಬೆಡ್ ರೂಮಿನಲ್ಲಿರುವ ಟ್ರಜರಿಯಲ್ಲಿದ್ದ ಸಾಮಾನಾಗುಳೆಲ್ಲವು ಚೆಲ್ಲಾ
ಪಿಲ್ಲಿಯಾಗಿ ಹೊರಗೆ ಬಿದ್ದಿದ್ದವು. ಆಗ ನಾನು ಗಾಬರಿಯಾಗಿ ಆಕಡೆ ಈಕಡೆ ನೋಡಲು ನಮ್ಮ ಮನೆಯ
ಹಿತ್ತಲು ಬಾಗಿಲದ ಚಿಲಕ ಉಚ್ಚಿತ್ತು. ಹಾಗೂ ಅಲ್ಲೆ ಬಾಜು ಇದ್ದ ಬಾತ್ ರೂಮಿಗೆ ಇದ್ದ ಕಿಡಕಿಯ
ಗ್ಲಾಸ ಸಹ ಉಚ್ಚಿತ್ತು, ನಂತರ ನಾನು
ಟ್ರಜರಿಯಲ್ಲಿಟ್ಟಿದ್ದ ಬಂಗಾರದ ಸಾಮಾನುಗಳನ್ನು ನೋಡಲು 2 ತೊಲೆ ಬಂಗಾರದ ಸಾಮಾನುಗಳನ್ನು ಯಾರೊ
ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅ ಸ್ವಾಭಾವಿಕ ಸಾವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ
ಸಿದ್ದೇಶ ತಂದೆ ಅಣ್ಣರಾವ ಕೋಡ್ಲೆ ಸಾ;ಶಹಾಬಜಾರ ಕಲಬುರಗಿ ಇವರು ತಾಜಸುಲ್ತಾನಪೂರ ಸೀಮಾಂತರದ
ವಿಶ್ವರಾಧ್ಯ ಗುಡಿಯ ಪಕ್ಕದ ಆಳಂದ ರೋಡಿನ ಬದಿಗೆ ವೇರ ಹೌಸ ಕಡೆಗೆ ಹೋಗುವಾಗ ಕೆ.ಇ.ಬಿ.ಟ್ರಾನ್ಸಫಾರಂ ಚಾಲರಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯ ಹೆಸರು ವಿಳಾಸ
ಗೊತ್ತಾಗಿರುವದಿಲ್ಲಾ ವಯಸ್ಸು ಅಂದಾಜು 55-60 ವರ್ಷದವನಿದ್ದು ಬಡಕಲು ಶರೀರ ಹೊಂದಿದ್ದು ,ಎತ್ತರ
5 ಫೀಟ , 6 ಇಂಚು ಇದ್ದು , ಸಾಧಗಪ್ಪು ಮೈಬಣ್ಣ
ಹೊಂದಿದ್ದು , ಮೈ ಮೇಲೆ ನೀಲಿ ಬಣ್ಣದ ಅಂಡರವಿಯರ ಮಾತ್ರ ಇದ್ದು ,
ಸದರಿಯವನು ಅಶಕ್ತನಾಗಿದ್ದು, ಬಿಸಿಲಿನಲ್ಲಿ ಹಸುವಿನಿಂದ, ಮಲಗಿದ ಸ್ಥಳದಲ್ಲಿಯೇ ದಿನಾಂಕ.12-5-2016
ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ. 13-5-2016 ರಂದು ಮದ್ಯಾನ 2-30 ಪಿ.ಎಂ.ದ ಮದ್ಯಾದ
ಅವಧಿಯಲ್ಲಿ ಮೃತ ಪಟ್ಟಂತೆ ಕಂಡು ಬಂದಿರುತ್ತದೆ. ಸದರಿ ವ್ಯಕ್ತಿಯ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ
,ಆದುದರಿಂದ ಸದರಿ ವ್ಯಕ್ತಿಯ ಅಪರಿಚಿತನಾಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಸುಲೆಪೇಟ
ಠಾಣೆ : ಶ್ರೀ ಸಣ್ಣರಾಮಪ್ಪ ತಂದೆ ಲಕ್ಷ್ಮಯ್ಯ ಗುಂಜೇರ ಸಾಃ
ಕರ್ಚಖೇಡ ಇವರು, ದಿನಾಂಕ 30/04/2016
ರಂದು ಮನೆಯಲ್ಲಿ ನನ್ನ ಹೆಂಡತಿಯಾದ ಯಂಕಮ್ಮಾ
ಇವಳಿಗೆ ಆರಾಮ ಇರದ ಕಾರಣ ನನ್ನ ಮಗಳಾದ ರೇಖಾ ತಂದೆ ಸಣ್ಣರಾಮಪ್ಪಾ ಗುಂಜೇರ ವಃ 19 ವರ್ಷ
ಜಾಃ ವಡ್ಡರ ಸಾಃ ಕರ್ಚಖೇಡ ಇವಳು ಚಿತ್ತಾಪುರದಿಂದ ನಮ್ಮ ಊರಿಗೆ ಬಂದಿದ್ದಳು . ದಿನಾಂಕಃ 10/05/2016 ರಾತ್ರಿ
11:00 ಗಂಟೆಯ ಸುಮಾರಿಗೆ ಎಲ್ಲರೂ ಮನೆಯಲ್ಲಿ ಊಟ ಮಾಡಿ ಮಲಗಿಕೊಂಡೇವು
. ನನಗೆ ರಾತ್ರಿ ಎಚ್ಚರವಾದಾಗ ನನ್ನ ಮಗಳಾದ ರೇಖಾ ತಂದೆ ಸಣ್ಣರಾಮಪ್ಪಾ ಗುಂಜೇರ ವಃ 19 ವರ್ಷ
ಜಾಃ ವಡ್ಡರ ಸಾಃ ಕರ್ಚಖೇಡ ಇವಳು ಮನೆಯಲ್ಲಿ
ಕಾಣಿಸಲಿಲ್ಲ ಆಗ ನಾನು ನನ್ನ ಹೆಂಡತಿಗೆ ಎಬ್ಬಿಸಿ ವಿಚಾರಿಸಲು ಅವಳು ಕೂಡ ಗಾಬರಿಯಾಗಿ ಎದ್ದಳು . ನಂತರ ನಾವಿಬ್ಬರೂ
ಕೂಡಿ ರಾತ್ರಿ ವೇಳೆಯಲ್ಲಿ ಓಣಿ ಹಾಗೂ ಊರೊಳಗೆ ಹುಡುಕಾಡಿದರೂ ಕಾಣಿಸಲಿಲ್ಲಾ . ನಮಗೆ ಸಂಶಯ
ಇರುವುದೆನೆಂದರೆ ನಮ್ಮ ಮಗಳು ಚಿತ್ತಾಪೂರದಲ್ಲಿ ಇದ್ದಾಗ ನಮ್ಮ ಸಂಭಂದಿಕನಾದ ತಿಮ್ಮಾ @ ತಿಮ್ಮಾರೆಡ್ಡಿ
ತಂದೆ ಹಣಮಂತ ವಾಡಿ ಸಾಃ ವಡ್ಡರಗಲ್ಲಿ ವಂಟಿಕಮಾನ ಹತ್ತಿರ ಚಿತ್ತಾಪೂರ ಇತನು ಅವಳಿಗೆ ಮದುವೆ
ಮಾಡಿಕೊಳ್ಳುತ್ತೇನೆ ಅಂತ ಚಿತ್ತಾಪೂರದಲ್ಲಿ ಅಂದ ಬಗ್ಗೆ ನಮ್ಮ ಮಗಳು ನನ್ನ ಮುಂದೆ ತಿಳಿಸಿದ್ದಳು.
ಅದರಿಂದ ಆತನು ಕೂಡ ಕರ್ಚಖೇಡ ಗ್ರಾಮಕ್ಕೆ ದಿನಾಂಕಃ 09/05/2016
ರಂದು ಊರಿಗೆ ಬಂದಿದ್ದನು ನಮ್ಮ ಮಗಳು ಹೋದ
ದಿವಸದಿಂದಲೇ ಆತನು ಕೂಡ ಕರ್ಚಖೆಡ ಗ್ರಾಮದಲ್ಲಿ ಹಾಗೂ ಚಿತ್ತಾಪೂರದಲ್ಲಿ ಕಾಣಿಸುತ್ತಿಲ್ಲಾ .
ಆದ್ದರಿಂದ ನಮ್ಮ ಮಗಳಾದ ರೇಖಾ ಇವಳಿಗೆ ತಿಮ್ಮಾ @ ತಿಮ್ಮಾರೆಡ್ಡಿ ತಂದೆ ಹಣಮಂತ ವಾಡಿ ಸಾಃ ವಡ್ಡರಗಲ್ಲಿ
ವಂಟಿಕಮಾನ ಹತ್ತಿರ ಚಿತ್ತಾಪೂರ ಇತನೇ ಅಪಹರಿಸಿಕೊಂಡು ಹೋಗಿರುತ್ತಾನೆ ಅಂತ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸುಲೆಪೇಟ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ
No comments:
Post a Comment