¢£ÀA¥Àæw
C¥ÀgÁzsÀUÀ¼À ªÀiÁ»w ¢£ÁAPÀ 15-05-2016
alUÀÄ¥Áà ¥ÉÆ°Ã¸À oÁuÉ UÀÄ£Éß £ÀA.
87/2016, PÀ®A 279, 338 L¦¹ :-
ಫಿರ್ಯಾದಿ ಗುರಪ್ಪಾ ತಂದೆ
ಮಲ್ಲಶೇಟೆಪ್ಪಾ ರಟಕಲ್ ವಯ: 65 ವರ್ಷ, ಜಾತಿ: ಲಿಂಗಾಯತ,
ಸಾ: ಎರಭಾಗ ರವರ ಹೊಲದಲ್ಲಿ ಸೌತಿಕಾಯಿ ಬೇಳೆ ಬೆಳೆದ್ದಿದ್ದು ಅದನ್ನು ಮಾರಾಟ ಮಾಡಲು ಪ್ರತಿ
ಶನಿವಾರ ಹಳ್ಳಿಖೇಡ(ಕೆ) ಸಂತೆಗೆ ಆಟೋದಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಮರಳಿ ಮನೆಗೆ
ಬರುತ್ತಿದ್ದು, ಹೀಗಿರುವಾಗ ದಿನಾಂಕ 14-05-2016 ರಂದು ಪ್ರತಿವಾರದಂತೆ ಫಿರ್ಯಾದಿಯು ತಮ್ಮೂರ ಉಮೇಶ ತಂದೆ ರಮೇಶ ಮೇತ್ರೆ ರವರ
ಅಪ್ಪಿ ಆಟೋ ನಂ. ಕೆಎ-56/1679 ನೇದರಲ್ಲಿ ಸೌತಿಕಾಯಿ
ತೆಗೆದುಕೊಂಡು ಹಳ್ಳಿಖೇಡ(ಕೆ) ಗ್ರಾಮಕ್ಕೆ ಬರುವಾಗ ಹಳ್ಳಿಖೇಡ(ಕೆ) ಗ್ರಾಮದ ಕೃಷಿ ಪತ್ತಿನ ಸಹಕಾರ
ಸಂಘ ನಿಯಮಿತ ಕಟ್ಟಡದ ಹತ್ತಿರ ಕಲಬುರ್ಗಿ-ಹುಮನಾಬಾದ ರೋಡಿನ ಮೇಲೆ ಎದುಗಡೆಯಿಂದ ಮೋಟರ
ಸೈಕಲ್ ನಂ. ಕೆಎ-32/ಇಇ-3291 ನೇದರ ಚಾಲಕನಾದ ಆರೋಪಿ ಸೈಯದ ವಲಿವುಲ್ಲಾ ತಂದೆ ಸೈಯದ ಯುಸುಫ ಹುಸೆನಿ ವಯ: 38 ವರ್ಷ, ಸಾ: ಕಿಣಿ(ಕೆ) ಇತನು ತನ್ನ ಮೋಟರ ಸೈಕಲ
ಮೆಲೆ 4 ಜನರನ್ನು ಕುಡಿಸಿಕೊಂಡು ಅತಿವೇಗ ಹಾಗೂ ನಿಷ್ಕಾಳಜಿಯಿಂದ ಓಡಿಸಿಕೊಂಡು ಬಂದು ಅಪ್ಪಿ
ಆಟೋಗೆ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಎಡಗಡೆ ಕಣ್ಣಿನ ಮೇಲೆ ರಕ್ತಗಾಯ, ಎರಡು ಮೋಳಕಾಲಿಗೆ ತರಚಿದ ಗಾಯ, ಎದೆಗೆ
ಗುಪ್ತಗಾಯವಾಗಿರುತ್ತದೆ, ಅಪ್ಪಿ ಆಟೋ ಚಾಲಕನಾದ ಉಮೇಶ ತಂದೆ ರಮೇಶ ಮೇತ್ರೆ ವಯ: 24 ವರ್ಷ, ಸಾ: ಎರಭಾಗ ರವರಿಗೆ ಎಡಗಡೆ ಕಣ್ಣಿನ ಕೆಳಗೆ, ಮೂಗಿನ ಮೇಲೆ ರಕ್ತಗಾಯ, ಎಡಗೈಮೋಳಕೈಗೆ ತರಚಿದ ಗಾಯ, ಬಲಗೈಮುಗೈಗೆ ಮತ್ತು ಎಡಕಾಲ
ತೊಡೆಗೆ ಗುಪ್ತಗಾಯವಾಗಿರುತ್ತದೆ, ಆರೋಪಿಯ ಎಡ
ಕೀವಿಯ ಮೆಲ್ಗಡೆ ತಲೆಗೆ ಭಾರಿ ರಕ್ತಗಾಯ, ಕೈಕಾಲುಗಳಿಗೆ ತರಚಿದ ಗಾಯ, ಎಡಗಾಲ ಪಾದಕ್ಕೆ ಗುಪ್ತಗಾಯವಾಗಿರುತ್ತದೆ ಮತ್ತು ಆರೋಪಿಯ ವಾಹನ ಮೆಲಿದ್ದ ಆಸಮಾ ತಂದೆ
ಸೈಯದ ಮೈನೊಲ್ಲಾ ವಯ: 20 ವರ್ಷ ಅವಳಿಗೆ ಬಲಮೋಳಕಾಲ
ಕೆಳಗೆ ಭಾರಿರಕ್ತಗಾಯ, ಎಡಗಡೆ ತಲೆಗೆ ಭಾರಿ ರಕ್ತಗಾಯವಾಗಿರುತ್ತದೆ, ನಿಹಾಲ ತಂದೆ ಸೈಯದ ವಲಿವುಲ್ಲಾ ವಯ 8 ವರ್ಷ ಅವನಿಗೆ ಹಣೆಯ ಮೇಲೆ ತರಚಿದ ಗಾಯ, ಎರಡು ಮೊಳಕೈಗೆ ತರಚಿದ ಗಾಯವಾಗಿರುತ್ತದೆ ಮತ್ತು
ಅಲ್ಲಮಾಸ ತಂದೆ ಸೈಯದ ವಲಿವುಲ್ಲಾ ವಯ 5 ವರ್ಷ
ಅವಳಿಗೆ ಎಡಮೊಳಕಾಲ ಕೆಳಗೆ ಮುರಿದಂತೆ ಭಾರಿ ಗುಪ್ತಗಾಯ, ಹಣೆಯ ಮೇಲೆ, ತಲೆಯ ಎಡಭಾಗಕ್ಕೆ ರಕ್ತಗಾಯವಾಗಿರುತ್ತದೆ ಹಾಗೂ ಅರಹಾನ
ತಂದೆ ಸೈಯದ ವಲಿವುಲ್ಲಾ ವಯ 2 ವರ್ಷ ಅವನಿಗೆ ಯಾವುದೇ
ಗಾಯವಾಗಿರುವುದಿಲ್ಲಾ ಅಂತ ಕೊಟ್ಟ ಫಿರ್ಯಾದು ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
No comments:
Post a Comment