ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ
14-05-2016 ರಂದು ರಾತ್ರಿ ಕೃಷ್ಣಾ ತನ್ನ ಹಿರೋ ಹೊಂಡಾ ಸ್ಪೆಂಡರ ಕೆಎ 29 ಎಸ್ 7496 ಮೇಲೆ ಒಬ್ಬನೇ ಕುಳಿತುಕೊಂಡು ಕಾಂತಾ ಕಾಲನಿ
ಸ್ಮಶಾನ ಎದುರಿನ ಬಿದ್ದಾಪುರ ಕಾಲನಿಗೆ ಹೋಗುವ ರೋಡಿನಿಂದ ಹೋಗುತ್ತಿರುವಾಗ ಅವನ ಹಿಂದಿನಿಂದ ಟಂಟಂ
ಕೆಎ 32 ಬಿ 9972 ನೇದ್ದರ ಚಾಲಕ ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಬಂದು
ನನ್ನ ಮಗನ ಮೋಟಾರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಾಗ ಕೃಷ್ಣಾ ಇತನು ರೋಡ ಬದಿಯಲ್ಲಿ ಕೆದರಿದ
ಸ್ಥಳದಲ್ಲಿ ಉಸುಕು ತುಂಬಿ ಇಟ್ಟಿದ್ದ ದಿಬ್ಬಿಗೆ ಡಿಕ್ಕಿ ಹೊಡೆದು ಮೋಟಾರ ಸೈಕಲದೊಂದಿಗೆ ರೋಡಿನ
ಮೇಲೆ ಬಿದ್ದಿದ್ದು ಟಂಟಂ ಚಾಲಕ ಹಾಗೇ ಟಂಟಂ
ಓಡಿಸಿಕೊಂಡು ಹೋಗಿದ್ದು. ಇದರಿಂದಾಗಿ ನನ್ನ ಮಗ ಬಲಗಣ್ಣಿಗೆ, ಬಲಭಾಗದ ತಲೆಗೆ ಬಲ ಗಲ್ಲಕ್ಕೆ, ಬಲ
ಗಟ್ಟಬಾಯಿ ಎಡಗಣ್ಣಿನ ಹುಬ್ಬಿನ ಮೇಲೆ ಎದೆಗೆ ರಕ್ತಗಾಯ ಮತ್ತು ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿ
ಬೇಹುಷ ಆಗಿದ್ದು ಇರುತ್ತದೆ. ಅವನಿಗೆ ಉಪಚಾರ ಕುರಿತು 108 ಅಂಬುಲೈನ್ಸದಲ್ಲಿ ಕಾಮರಡ್ಡಿ ಆಸ್ಪತ್ರೆ ಕಲಬುರಗಿ ಒಯ್ದು ಸೇರಿಕೆ
ಮಾಡಿದ್ದು, ಅಲ್ಲಿನ ವೈದ್ಯರು ಚಿಕಿತ್ಸೆ ಸರಿಯಾಗಿ ಮಾಡುತ್ತಿಲ್ಲಾ ಎಂದು ಗೊತ್ತಾಗಿ ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ದಿನಾಂಕ 15-05-2016
ರಂದು ಬೆಳಗಿನ 4-40 ಗಂಟೆ ಸುಮಾರಿಗೆ ಯುನೈಟೆಡ ಆಸ್ಪತ್ರೆ ಕಲಬುರಗಿಗೆ ತಂದು ಸೇರಿಕೆ
ಮಾಡಿರುತ್ತೇನೆ. ಮೃತ ಕೃಷ್ಣಾ ಇತನು ನಿನ್ನೆ ದಿನಾಂಕ 14-05-2016 ರಂದು ರಾತ್ರಿ 08-30 ಗಂಟೆ
ಸುಮಾರಿಗೆ ಆದ ರಸ್ತೆ ಅಪಘಾತಗಳಿಂದ ಉಪಚಾರ ಹೊಂದುತ್ತಾ ಗುಣಮುಖವಾಗದೇ ಇಂದು ದಿನಾಂಕ 15-05-2016
ರಂದು ಮಧ್ಯಾಹ್ನ 04-30 ಗಂಟೆಗೆ ನನ್ನ ಮಗ ಕೃಷ್ಣಾ
ಯುನೈಟೆಡ ಆಸ್ಪತ್ರೆ ಕಲಬುರಗಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ಶ್ರೀಮಂತ ತಂದೆ
ವೀರಪ್ಪಾ ಹಳ್ಳನಕರ ಸಾ : ಹೀರಾಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಸೋಮಯ್ಯ ತಂದೆ ಬಸಯ್ಯ ಮಠಪತಿ ಸಾ:ಡೊರಜಂಬಗಾ ತಾ:ಜಿ:ಕಲಬುರಗಿ ಇಂದು ಮದ್ಯಾಹ್ನ
02-30 ಗಂಟೆಯ ಸೂಮಾರಿಗೆ ಹುಮನಾಬಾದನಲ್ಲಿ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸ
ನಮ್ಮೂರಿಗೆ ಹೋಗುವ ಸಂಬಂಧ ನಾನು ನನ್ನ ಹೆಂಡತಿ ಗೀತಾ ಮತ್ತು ನನ್ನ ಮಗ ಸುನೀಲಕುಮಾರ ಕೂಡಿಕೊಂಡು
ಸರಕಾರಿ ಬಸ್ಸನಲ್ಲಿ ಕುಳಿತು ರೋಡಕಿಣ್ಣಿಗೆ ಬಂದಿದ್ದು ಇರುತ್ತದೆ. ನಂತರ ರೋಡಕಿಣ್ಣಿಯಿಂದ
ಡೊರಜಂಬಗಾಕ್ಕೆ ಹೋಗುವ ಕುರಿತು ಕಲಬುರಗಿ ಹುಮನಾಬಾದ ಹೆದ್ದಾರಿಯ ಅಂಬಾಭವಾನಿ ಗುಡಿಯ
ಮುಂದಗಡೆಯಿಂದ ನಾನು ನನ್ನ ಹೆಂಡತಿ ಗೀತಾ ರೋಡ ದಾಟುತ್ತಿದ್ದು ಅದೇ ವೇಳೆಗೆ ನನ್ನ ಮಗ
ಸುನೀಲಕುಮಾರ ಈತನು ನಮ್ಮ ಮುಂದಗಡೆಯಿಂದ ರೋಡ ದಾಟುತ್ತಿದ್ದಾಗ ಮದ್ಯಾಹ್ನ 03-30 ಗಂಟೆಯ ಸೂಮಾರಿಗೆ ಹುಮನಾಬಾದ ಕಡೆಯಿಂದ ಒಬ್ಬ ಲಾರಿ ಟ್ಯಾಂಕರ ಚಾಲಕನು ತನ್ನ
ಟ್ಯಾಂಕರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮುಂದಿನಿಂದ ರೋಡ
ದಾಟುತ್ತಿದ್ದ ನನ್ನ ಮಗ ಸುನೀಲಕುಮಾರನಿಗೆ ಡಿಕ್ಕಿ ಹೋಡೆದು ಅಪಘಾತ ಪಡಿಸಿದ್ದು. ನಂತರ ಅದನ್ನು
ನೋಡಿ ನಾನು ನನ್ನ ಹೆಂಡತಿ ಹಾಗೂ ನಮ್ಮೂರ ಶ್ರೀಮಂತ ಕೋರವಿ ಅಂಬಾರಾವ ಪಾಟೀಲ ಕೂಡಿಕೊಂಡು ನನ್ನ ಮಗ
ಸುನೀಲಕುಮಾರನಿಗೆ ಎಬ್ಬಿಸಿ ನೋಡಲು ನನ್ನ ಮಗನ ಹೋಟ್ಟೆಯ ಮೇಲೆ ಭಾರಿ ಗುಪ್ತಗಾವಾಗಿದ್ದು. ಅಲ್ಲದೆ
ಅವನ ಮರ್ಮಾಂಗದ ಹತ್ತೀರ ಮೇಲ್ಬಾದಲ್ಲಿ ಭಾರಿ
ರಕ್ತಗಾವಾಗಿ ನನ್ನ ಮಗನ ಮರ್ಮಾಂಗದ ಜೋತು ಬಿದ್ದಿದ್ದು. ಹಾಗೂ ಮರ್ಮಾಂಗದ ಕೆಳಭಾಗದ ಹತ್ತೀರ ರಕ್ತ
ಗಾಯವಾಗಿದ್ದು ಇರುತ್ತದೆ. ನಂತರ ಅಪಘಾತ ಪಡಿಸಿದ ಟ್ಯಾಂಕರ ಚಾಲಕನು ತನ್ನ ಟ್ಯಾಂಕರನ್ನು ಅಲ್ಲೆ
ರೋಡಿನ ಸೈಡಿಗೆ ನಿಲ್ಲಿಸಿದ್ದು.ಅದರ ನಂಬರ ನೋಡಲು ಎಮಹೆಚ-12
ಎಲ.ಟಿ-3764 ನೇದ್ದು ಇರುತ್ತದೆ. ಅಪಘಾತವಾದ ಜಾಗದಲ್ಲಿ ಜನರು ಜಮಾ ಆಗುತ್ತಿದ್ದನ್ನು ನೋಡಿ
ಟ್ಯಾಂಕರ ಚಾಲಕನು ತನ್ನ ಟ್ಯಾಂಕರನ್ನು ಅಲ್ಲಿಂದ ತೆಗೆದುಕೊಂಡು ಓಡಿ ಹೋಗಿರುತ್ತಾನೆ. ಚಾಲಕನಿಗೆ
ನೋಡಿದಲ್ಲಿ ನಾನು ಗುರುತಿಸುತ್ತೇನೆ. ಆಮೇಲೆ ಅಂಬಾರಾವ ಪಾಟೀಲ ಇವರು 108 ಅಂಬುಲೆನ್ಸಗೆ ಫೊನ ಮಾಡಿ ಕರೆಯಿಸಿದ್ದು. ನನ್ನ ಮಗನಿಗೆ ಉಪಚಾರ ಕುರಿತು ನಾನು
ನನ್ನ ಹೆಂಡತಿ ಹಾಗೂ ಅಂಬಾಯ ಪಾಟೀಲ ಕೂಡಿಕೊಂಡು ಅಂಬುಲೆನ್ಸದಲ್ಲಿ ಹುಮನಾಬಾದ ಸರಕಾರಿ ದವಾಖಾನೆಗೆ
ತರುವಾಗ ಹುಮನಾಬಾದ ಚೆಕ್ಕ ಪೋಸ್ಟ ಹತ್ತೀರ 04-15
ಪಿ.ಎಮನ ಸೂಮಾರಿಗೆ ಮಾರ್ಗ ಮಧ್ಯದಲ್ಲಿ ನನ್ನ ಮಗ ಸುನೀಲ ಕುಮಾರನು ಮೃತ ಪಟ್ಟಿರುತ್ತಾನೆ. ಅಂತಾ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಸಿಕಂದರ ಪಟೇಲ ತಂದೆ ಮೊದಿನ ಪಟೇಲ ಜವಾರಿವಾಲೆ ಸಾಃ
ಪ್ಲಾಟ ನಂ.128 ಅಂಬಿಕಾ ನಗರ ಕಲಬುರಗಿ ಇವರ ಮಗ ಸಾಹೀಲ ಪಟೇಲ ತಂದೆ ಸಿಕಂದರ ಪಟೇಲ ವಯಃ 5 ವರ್ಷ ಈತನು
ದಿನಾಂಕ 07-05-2016 ರಂದು ಮುಂಜಾನೆ 9 ಗಂಟೆಗೆ ನಮ್ಮ ಮನೆಯ ಹತ್ತೀರ ಇರುವ ಇಸ್ತ್ರಿ ಅಂಗಡಿಗೆ ಇಸ್ತ್ರಿ
ಬಟ್ಟೆ ತರಲು ಹೋಗಿ ಮರಳಿ ಮನೆಗೆ ಬಂದಿರುವುದಿಲ್ಲಾ ಆಗ ನಾನು ಮತ್ತು ನನ್ನ ತಂದೆ ಮೊದೀನ ಪಟೇಲ ಕೂಡಿ
ಹೊರಗೆ ಬಂದು ಹುಡುಕಾಡಿ ಇಸ್ತ್ರಿ ಅಂಗಡಿಯವನಿಗೆ ವಿಚಾರಿಸಲು ಯಾವನೊ ಒಬ್ಬನು ಬಂದು ನಿಮ್ಮ ಹುಡುಗನಿಗೆ
ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು ನಿಮ್ಮ ತಂದೆಯವರ ಹತ್ತೀರ ಹೋಗೊಣ ಅಂತಾ ಕರೆದುಕೊಂಡು ಹೋಗಿರುತ್ತಾನೆ
ಅವನ ಹೆಸರು ಗೊತ್ತಿಲ್ಲಾ ನೋಡಿದರೆ ಗುರುತಿಸುತ್ತೇನೆ ಅಂತಾ ತಿಳಿಸಿದನು. ಆಗ ನಾವು ನನ್ನ ಮಗನಿಗೆ
ಅಂದಿನಿಂದ ಅಲ್ಲಲ್ಲಿ ಎಲ್ಲಾ ಕಡೆ ಹುಡುಕಾಡಿದರು ಕೂಡಾ ಸಿಕ್ಕಿರುವುದಿಲ್ಲಾ ಮತ್ತು ಸಂಬಂಧಿಕರಲ್ಲಿ
ವಿಚಾರಿಸಿದರು ಕೂಡಾ ನನ್ನ ಮಗ ಎಲ್ಲಿಯೂ ಸಿಕ್ಕಿರುವುದಿಲ್ಲಾ ನನ್ನ ಮಗ ಸಾಹೀಲ ಪಟೇಲ ಇವನಿಗೆ ಯಾರೋ
ಒಬ್ಬನು ಮನುಷ್ಯನು ಅಪಹರಿಸಿಕೊಂಡು ಹೋಗಿರುತ್ತಾನೆ. ನನ್ನ ಮಗನು ಮೈಬಣ್ಣ ಕೆಂಪು ಗೋಧಿ ಮೈಬಣ್ಣ, ಹಣೆಯ ಮೇಲೆ ಹಳೆ ಗಾಯದ ಗುರುತು ಇದೆ, ಅಂದಾಜು 3’ ಎತ್ತರ ಇದ್ದು, ಮೈ ಮೇಲೆ ಹಸಿರು ಬಣ್ಣದ ಟೀ-ಶರ್ಟ ಮತ್ತು ಬಿಳಿ ಬಣ್ಣದ
ನೈಟ ಪ್ಯಾಂಟ ಧರಿಸಿರುತ್ತಾನೆ ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾನೆ. ಅಂಥಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶಾಂತಕುಮಾರ್ ತಂದೆ ಗಣಪತಿ ಹತ್ತಿಗಳೆ ಸಾ: ಪಡಸಾವಳಿ ತಾ:
ಆಳಂದ ಹಾವ: ರುಕುಮ್‌ತೊಲಾ ದರ್ಗಾ ರೋಡ ಶಿವಲಿಂಗೇಶ್ವರ ಕಾಲೋನಿ ಕಲಬುರಗಿ, ರವರು 6 ತಿಂಗಳ ಹಿಂದೆ ಕ್ರೋಜರ್ ನಂ ಎಪಿ 29 ಐ
7317 ನೇದ್ದನ್ನು ಖರಿದಿ ಮಾಡಿರುತ್ತೇನೆ. ಸದರಿ ಕ್ರೋಜರ್
ಅನ್ನು ಕಲಬುರಗಿ – ಆಳಂದ ರೋಡ್ ಲೈನಿಗೆ ನಡೆಸಿಕೊಂಡು ಬರುತ್ತೇನೆ. ಸದರಿ
ಕ್ರೋಜರದ ಮಾಲೀಕ ಹಾಗೂ ಚಾಲಕನಿರುತ್ತೆನೆ. ರಾತ್ರಿ ಸಮಯದಲ್ಲಿ ನಮ್ಮ ಮನೆಯ ಮುಂದೆ ನಿಲ್ಲಿಸುತ್ತಿದ್ದು
ದಿನಾಂಕ: 20-04-2016 ರಂದು ರಾತ್ರಿ 10 ಗಂಟೆಗೆ ನಮ್ಮ ಮನೆಗೆ ಬಂದು ಸದರಿ ಕ್ರೋಜರ್ ಮನೆಯ
ಮುಂದೆ ನಿಲ್ಲಿಸಿ ಊಟ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಬ್ಯಾಸಿಗೆ ಇದ್ದ ಪ್ರಯುಕ್ತ ಮನೆಯ
ಮ್ಯಾಳಿಗೆಯ ಮೇಲೆ ಮಲಗಿಕೊಂಡಿರುತ್ತೇವೆ ಮರುದಿನ ದಿನಾಂಕ: 21-04-2016 ರಂದು ಬೆಳಿಗ್ಗೆ 06-30
ಗಂಟೆ ಸುಮಾರಿಗೆ ಎದ್ದು ಮ್ಯಾಳಿಗೆಯಿಂದ ಕೆಳಗೆ ಬಂದು ಸದರಿ ನಮ್ಮ ಕ್ರೋಜರ್ ನೋಡಲು ಕಾಣಲಿಲ್ಲ
ಅಲ್ಲಿಇಲ್ಲಿ ಹುಡುಕಾಡಿದರೂ ಕೂಡಾ ಸಿಗಲಿಲ್ಲ. ದಿನಾಂಕ: 20-04-2016 ರಂದು ರಾತ್ರಿ 10
ಗಂಟೆಯಿಂದ ದಿನಾಂಕ: 21-04-2016 ರಂದು ಬೆಳಿಗ್ಗೆ 06-30 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ
ಅಪರಿಚಿತ ಕಳ್ಳರು ಮನೆಯ ಮುಂದೆ ನಿಲ್ಲಿಸಿದ ಕ್ರೋಜರ್ ನಂ ಎಪಿ 29 ಐ
7317 ಅ.ಕಿ 4,00,000/-
ರೂ ಬೆಲೆ ಬಾಳುವುದನ್ನು ಕಳುವುಮಾಡಿಕೊಂಡು
ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.
No comments:
Post a Comment