Police Bhavan Kalaburagi

Police Bhavan Kalaburagi

Wednesday, May 25, 2016

KALABURAGI DISTRICT REPORTED CRIMES

ಅಪಹರಣ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ಚಂದ್ರಕಾಂತ ತಂದೆ ಸಾಯಿಬಗೌಡ ಕನ್ನೂರ ಸಾ:ಅತನೂರ ತಾ:ಅಫಜಲಪುರ ಹಾವ: ಅಕ್ಕಮಹಾದೇವಿ ಕಾಲೋನಿ ಹೈಕೊರ್ಟ ಹತ್ತಿರ ಕಲಬುರಗಿ ಇವರ ದಿನಾಂಕ : 08-05-2016 ರಂದು ರಾತ್ರಿ ಅಪ್ರಾಪ್ತ ಮಗಳಾದ ಕುಃ ಬಸಮ್ಮ ವಯಾ|| 15ವರ್ಷ ಇವಳು ತನ್ನ ಮನೆಯ ಮುಂದೆ ನೀರು ತುಂಬಲು ಹೋದಾಗ ಆಪಾದಿತರಾದ 1) ನಾರಾಯಣ 2) ವಿಮಲಾಬಾಯಿ ಸಾ|| ಗಂಗಾ ನಗರ ಕಲಬುರಗಿ ಇವರೀಬ್ಬರೂ ಕುಃ ಬಸಮ್ಮ ಇವಳಿಗೆ ಜಬರದಸ್ತಿಯಿಂದ ಒತ್ತಾಯ ಪೂರ್ವಕವಾಗಿ ಮೋ.ಸೈ ಮೇಲೆ ಕೂಡಿಸಿಕೊಂಡು ಅಪಹರಣ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನಿಂಬರ್ಗಾ ಠಾಣೆ : ಶ್ರೀ ಪರಶುರಾಮ ತಂದೆ ಕಲ್ಲಪ್ಪ ಜೋಗನ ಸಾ|| ಹಡಲಗಿ ಗ್ರಾಮ, ತಾ|| ಆಳಂದ ಇವರು ದಿನಾಂಕ 24/05/2016 ರಂದು ಹಡಲಗಿ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸದ ನಿಮಿತ್ಯ ಮತ್ತು ಗುಡಿ ಪೂಜಾರಿಕೆ ಚಾಜಾ ನಮ್ಮ ಹೆಸರಿಗೆ ಇರುವದರಿಂದ ನಾನು ಮತ್ತು ನನ್ನ ಹೆಂಡತಿಯಾದ ರೇಖಾ ಇಬ್ಬರೂ ಸಿಡಿ ಕಾರ್ಯಕ್ರಮ ನಿಮಿತ್ಯ ಅಂದಾಜ ಮಧ್ಯಾಹ್ನ 0230 ಗಂಟೆಗೆ ಗುಡಿಯ ಕಡೆಗೆ ಬಂದು ಸಿಡಿ ಕಾರ್ಯಕ್ರಮದಲ್ಲಿ ಇದ್ದು ಮನೆಯಲ್ಲಿ ನನ್ನ ಮಕ್ಕಳಾದ ರೇಣುಕಾ ವ|| 7 ವರ್ಷ, ರೋಹನ ವ|| 4 ವರ್ಷ, ರೋಹಿತ ವ|| 3 ವರ್ಷ, ಲಕ್ಷ್ಮಿ ವ|| 1 ವರ್ಷ ಇವರಷ್ಟೆ ಇದ್ದು, ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಜಾತ್ರೆಯಲ್ಲಿ ಸಿಡಿ ಕಾರ್ಯಕ್ರಮ ಮುಗಿಸಿಕೊಂಡು ಅಂದಾಜ ಸಾಯಂಕಾಲ 0600 ಗಂಟೆಗೆ ಮನೆಗೆ ಹೋಗಿ ನೋಡಿದ್ದು ನನ್ನ ಮಗನಾದ ರೋಹಿತ ವ|| 3 ವರ್ಷ, ಇತನು ಕಾಣದೆ ಇದ್ದುದರಿಂದ ನಾನು ಮತ್ತು ನನ್ನ ಹೆಂಡತಿ ಗಾಬರಿಯಾಗಿ ನಮ್ಮ ಮನೆಯ ಹಿಂದೆ, ಹಡಲಗಿ ಗ್ರಾಮದ ಜಾತ್ರಾ ಸ್ಥಳದಲ್ಲಿ ಹುಡುಕಾಡಲಾಗಿ ನನ್ನ ಮಗ ರೋಹಿತ ವ|| 3 ವರ್ಷ, ಪತ್ತೆಯಾಗಿರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :

ಜೇವರಗಿ ಠಾಣೆ : ಶ್ರೀ ಮಾಣಿಕ ರೆಡ್ಡಿ ತಂದೆ ಅಯ್ಯಪ್ಪಗೌಡ ಪಾಟೀಲ ಸಾಃ ದರ್ಶನಾಪೂರ ಇವರು ದಿನಾಂಕ 24.05.2016 ರಂದು ಮುಂಜಾನೆ ಕೆಲಸದ ನಿಮಿತ್ಯವಾಗಿ ನಾನು ನಮ್ಮೂರಿನಿಂದ ಕಲಬುರಗಿಗೆ ನನ್ನ ಗಳೆಯ ಸಂತೊಷ ರೆಡ್ಡಿ ನಡೆಸುವ ಕಾರ ನಂ ಕೆಎ- 28-ಎನ್-0864 ನೇದ್ದರಲ್ಲಿ ಕುಳಿತು ಕಲಬುರಗಿಗೆ ಬಂದು ಕೆಲಸ ಮುಗಿಸಿಕೊಂಡು ಕಲಬುರಗಿಯಿಂದ ಮರಳಿ ನಮ್ಮೂರಿಗೆ ಅದೇ ಕಾರಿನಲ್ಲಿ ಬರುತ್ತಿದ್ದೆನು ಕಾರನ್ನು ಸಂತೊಷ ರೆಡ್ಡಿ ಇತನು ನಡೆಸುತ್ತಿದ್ದನು. ಮದ್ಯಾಹ್ನ 2.30. ಗಂಟೆಯ ಸುಮಾರಿಗೆ ಚಿಗರಳ್ಳಿ ಕ್ರಾಸ್ ಸಮೀಪ್ ಜೇವರಗಿ ಶಹಾಪೂರ ರೊಡ ಮೇಲೆ ಸಂತೊಷನು ತನ್ನ ಕಾರನ್ನು  ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿದ್ದರಿಂದ ಕಾರಿನ ಮುಂದಿನ ಟಯಾರ ಬಸ್ಟಯಾಗಿ ಕಾರು ಪಲ್ಟಿಯಾಗಿದ್ದರಿಂದ ಕಾರಿನಲ್ಲಿ ಕುಳಿತ ನನಗೆ ಬಾರಿ ಗಾಯವಾಗಿದ್ದು ಮತ್ತು ಕಾರ ಚಾಲಕನಿಗೂ ಗಾಯವಾಗಿದ್ದು ಕಾರಣ ಸದರಿ ಕಾರ ಚಾಲಕನ ವಿರುದ್ದ ಕಾನೂನು ಕ್ರಮ ಕೈಕೊಳಬೇಕು  ಅಂತ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: