ಅಪಘಾತ ಪ್ರಕರಣ
:
ಆಳಂದ ಠಾಣೆ : ಶ್ರೀ ಶರಣಪ್ಪ ತಂದೆ ಬಸಣ್ಣಾ ಪೂಜಾರಿ ಮು: ಶಖಾಪೂರ ತಾ: ಆಳಂದ ಇವರು
ಮತ್ತು ಮಗ ಶಿವಪ್ಪಾ ಇಬ್ಬರೂ ಕೂಡಿ ಜಿಡಗಾ ಕಮಾನ ಹತ್ತಿರ ಇರುವ ನಮ್ಮ ಹೊಲಕ್ಕೆ ಹೋಗಿ ಕೆಲಸ ಮಾಡಿ
ನಂತರ ಸಾಯಂಕಾಲ 07:00 ಗಂಟೆ ಸುಮಾರಿಗೆ ನಾವು ಮನೆಗೆ ನಡೆದುಕೊಂಡು ಆಳಂದ-ವಾಗದರಿ ರೋಡಿನ ಮೇಲೆ
ಬರುವಾಗ ನಮ್ಮ ಹಿಂದಿನಿಂದ ಅಂದರೆ ಸರಸಂಬಾ ಕಡೆಯಿಂದ ಒಬ್ಬ ಮೋಟರ್ ಸೈಕಲ ಚಾಲಕನು ಅತಿವೇಗ ಮತ್ತು
ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಅವನ ಹಿಂದೆ ಒಬ್ಬನಿಗೆ ಕೂಡಿಸಿಕೊಂಡು ಬಂದವನೆ ನನ್ನ ಮುಂದೆ
ಹೋಗುತ್ತಿದ್ದ ನನ್ನ ಮಗ ಶಿವಪ್ಪನಿಗೆ ಜೋರಾಗಿ ಡಿಕ್ಕಿಪಡಿಸಿ ಅವರು ಕೂಡಾ ಇಬ್ಬರು ಮುಂದೆ ಹೋಗಿ
ಬಿದಿದ್ದು ನಂತರ ನಾನು ನನ್ನ ಮಗನಿಗೆ ನೋಡಲು ತಲೆಗೆ ಭಾರಿಪೆಟ್ಟಾಗಿ ರಕ್ತಗಾಯವಾಗಿದ್ದು ಬಲಕಾಲು
ಮೋಳಕಾಲ ಕೆಳಗಡೆ, ಎರಡು ಕೈಗೆ ರಕ್ತಗಾಯ
ಮತ್ತು ಭಾರಿ ಗಾಯ ಆಗಿದ್ದು ಮುಂದೆ ಬಿದ್ದವರಿಗೆ ನೋಡಲು ಅದರಲ್ಲಿ ಒಬ್ಬನಿಗೆ ಬಲಕಾಲು ಮೋಳಕಾಲಿಗೆ
ಮಗ್ಗಲಿಗೆ ತರಚಿದ ಗಾಯ ಮತ್ತು ಗುಪ್ತಗಾಯವಾಗಿತ್ತು ಇನ್ನೊಬ್ಬನಿಗೆ ಮೂಗಿಗೆ ಬಡೆದು ಮೂಗಿನಿಂದ
ರಕ್ತ ಸೋರುತಿತ್ತು ನಂತರ ನನ್ನ ಮಗನಿಗೆ ಬಹಳಷ್ಟು ರಕ್ತ ಸೋರುತ್ತಿದು ನಂತರ ಯಾರೋ ಹಾದಿಗೆ
ಹೋಗುವವರು 108 ಅಂಬುಲೆಸ್ಸಗೆ ಪೋನ್ ಮಾಡಿದರಿಂದ ಅವರು ಬಂದರು ನಾನು ಅಲೆ ಬಿದಿದ್ದ ಮೋಟರ್ ಸೈಕಲ
ನಂಬರ ನೋಡಲು ಸುಜುಕಿ ಮೋಟರ್ ಸೈಕಲ ನಂಬರ ಮೇಲೆ 8 ಅಂತಾ ಇದ್ದು ಕೆಳಗಡೆ 6924 ಎಂದು ಬರೆದಿದ್ದು
ಇದೆ ನಂತರ ಬೇಹೊಷ ಆಗಿದ ನನ್ನ ಮಗನಿಗೆ ಅಂಬುಲೆನ್ಸ್ ದಲ್ಲಿ ಹಾಕಿಕೊಂಡು ಆಳಂದ ಸರಕಾರಿ
ಆಸ್ಪತ್ರೆಗೆ ತಂದಾಗ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಕಳಿಸಿದರಿಂದ ನಾವು ಯುನೈಟೆಡ್
ಆಸ್ಪತ್ರೆ ಕಲಬುರಗಿಗೆ ಬಂದು ಸೇರಿಕೆ ಮಾಡಿದ್ದು ಶಿವಪ್ಪ ತಂದೆ ಶರಣಪ್ಪಾ ಪೂಜಾರಿ ಉಪಚಾರ ಕುರಿತು
ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಚಿಕಿತ್ಸೆ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ
12/10/2016 ರಂದು ರಾತ್ರಿ 8:15 ಪಿಎಮ್ ಗಂಟೆಗೆ ಮೃತ ಪಟ್ಟಿರುತ್ತಾನೆ.ಅಂತಾ ಸಲ್ಲಿಸಿದ ದೂರು
ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ
ಪ್ರಕರಣ :
ಮುಧೋಳ ಠಾಣೆ : ದಿನಾಂಕ 12-10-2016 ರಂದು ರಾತ್ರಿ ನಮ್ಮುರ ಮಜೀದ ಹತ್ತಿರ ಮೊಹರಂ ಹಬ್ಬದಲ್ಲಿ ಅಲೈ
ಆಡುವಾಗ ನನ್ನ ಮಗನಾದ ವಿರೇಶ ತಂದೆ ನರಸಪ್ಪಾ ಇತನು ನಮ್ಮುರ ನಮ್ಮ ಕುಲದವರಾದ ಸಣ್ಣ ನಾಗಪ್ಪಾ
ತಂದೆ ಮಲ್ಲಪ್ಪಾ ಉಬ್ಬಪೋರ ಇತನ ಕಾಲು ತುಳಿದಿದ್ದರಿಂದ ಸದರಿ ಸಣ್ಣ ನಾಗಪ್ಪನು ನನ್ನ ಮಗನಾದ ವಿರೇಶನಿಗೆ ನನ್ನ ಕಾಲು ಯಾಕೆ ತುಳಿದಿದ್ದಿ
ಅಂತಾ ಜಗಳ ಮಾಡುತಿದ್ದಾಗ ಅಲ್ಲಿದ್ದ ಜನರು
ಅವಿಬ್ಬರಿಗೆ ಯಾಕೆ ಜಗಳಮಾಡಿಕೊಳ್ಳುತ್ತಿರಿ ಬಿಡಿರಿ ಅಂತಾ ಸಮದಾನ ಮಾಡಿದ್ದು ಅಷ್ಟಕ್ಕೆ ಅವರು
ಸುಮ್ಮನಿದ್ದು ರಾತ್ರಿ 11-30 ಗಂಟೆ ಸುಮಾರಿಗೆ ನನ್ನ ಇನ್ನೊಬ್ಬ ಮಗನಾದ ನರೇಶ ತಂದೆ ನರಸಪ್ಪಾ ಇತನು ಮನೆಯಿಂದ ಹೊರಗಡೆ ಸಂಡಾಸಕ್ಕೆ ಹೊಗಿದ್ದು ಅಗಾ ನಮ್ಮ
ಮನೆಯ ಹತ್ತಿರ ಹೊರಗಡೆ ಚಿರಾಡುವ ಸಪ್ಪಳ ಕೇಳಿ
ಬಂದು ನಾನು ಎನಾಯಿತು ಅಂತಾ ಮನೆಯಿಂದ ಹೊರಗಡೆ ಓಡಿ ಬಂದು ನೊಡಲಾಗಿ ನಮ್ಮ ಮನೆಯ ಹತ್ತಿರ ರಸ್ತೆಯಲ್ಲಿ ನಮ್ಮುರ 1] ಸಣ್ಣ ನಾಗಪ್ಪಾ ತಂದೆ
ಮಲ್ಲಪ್ಪಾ ಉಬ್ಬಪೋರ ಹಾಗು 2] ಶಿವಪ್ಪಾ ತಂದೆ ಮಲ್ಲಪ್ಪಾ ಉಬ್ಬಪೋರ 3] ಮಲ್ಲರೆಡ್ಡಿ @ ಮಲ್ಲಪ್ಪಾ ತಂದೆ ಮಲ್ಲಪ್ಪಾ ಉಬ್ಬಪೊರ 4] ಸಣ್ಣ ಈರಪ್ಪಾ ತಂದೆ ನಾಗಪ್ಪಾ ಸಕ್ರೇಮೊಳ 5]
ದೊಡ್ಡ ಈರಪ್ಪಾ ತಂದೆ ನಾಗಪ್ಪಾ ಸಕ್ರೇಮೊಳ 6] ನಾಗಪ್ಪಾ ತಂದೆ ತಿಪ್ಪಣ್ಣಾ ಸಕ್ರಮೋಳ ಇವರೆಲ್ಲೋರು
ಕೂಡಿ ನನ್ನ ಮಗ ನರೇಶನಿಗೆ ಸೂತ್ತುವರೆದು ಭೋಸಡಿ
ಮಗನೆ ನಿಮ್ಮ ಅಣ್ಣಾ ವಿರೇಶ ಎಲ್ಲಿದ್ದಾನೆ ಹೇಳು
ಅವನಿಗೆ ಬಿಡುವದಿಲ್ಲಾ ಹೊಡೆದು ಕೊಲೆ ಮಾಡುತ್ತವೆ ಅಂತಾ ನನ್ನ ಮಗನಿಗೆ ಜಗಳ ತೇಗೆದಿದ್ದು ನನ್ನ
ಮಗ ನರೇಶ ಇತನು ನಮ್ಮ ಅಣ್ಣಾ ಎಲ್ಲಿದ್ದಾನೋ ಗೊತ್ತಿರುವದಿಲ್ಲಾ ಅಂತಾ ಹೇಳಿದಾಗ ಸದರಿಯವರು ಭೋಸಡಿ
ಮನಗೆ ನಿನು ಸೂಳ್ಳು ಹೇಳುತ್ತಿ ನಿನಗೆ ಬಿಡುವದಿಲ್ಲಾ ಇಲ್ಲೆ ಹೊಡೆದು ಕೊಲೆ ಮಾಡುತ್ತವೆ ಅಂತಾ
ನನ್ನ ಮಗನಿಗೆ ಕೊಲೆ ಮಾಡುವ ಉದ್ದೆಶದಿಂದ 1] ಸಣ್ಣ ನಾಗಪ್ಪಾ ಇತನು ಅಲ್ಲೆ ಬಿದ್ದ ಒಂದು ಗುಂಡು
ಕಲ್ಲನ್ನು ತೇಗೆದುಕೊಂಡು ನನ್ನ ಮಗನ ತಲೆಗೆ ಹಿಂದುಗಡೆ ಹೊಡೆದು ಭಾರಿ ಗುಪ್ತಗಾಯ ಪಡಿಸಿದ್ದು
ಇದರಿಂದ ನನ್ನ ಮಗ ಕೇಳಗೆ ಕುಸಿದು ಬಿದ್ದಿದ್ದು ಆಗಾ 2] ಶಿವಪ್ಪಾ ಮತ್ತು 3] ಮಲ್ಲರೆಡ್ಡಿ ಇವರು
ನನ್ನ ಮಗನಿಗೆ ಕಾಲಿನಿಂದ ಎದೆಗೆ ಹಾಗು ಹೊಟ್ಟೆಗೆ ಇತರಕಡೆ ಒದ್ದು ಗುಪ್ತಗಾಯ ಪಡಿಸಿದ್ದು ಆಗಾ
ನನ್ನ ಮೈದುನನಾದ ಸಣ್ಣ ನರಸಪ್ಪಾ ಮತ್ತು ನಾನು ಕೂಡಿ ಸದರಿಯವರಿಗೆ ನನ್ನ ಮಗನಿಗೆ ಹೊಡೆಯಬೇಡಿರಿ
ಸಾಯುತ್ತನೆ ಬಿಡಿರಿ ಅಂತಾ ಬಿಡಿಸಲು ಹೊದಾಗ ನಮಗೆ 4] ಸಣ್ಣ ಈರಪ್ಪಾ ಮತ್ತು 5] ದೊಡ್ಡ ಈರಪ್ಪಾ ಇವರು ಭೋಸಡಿ ಮಕ್ಕಳೆ ನಿಮಗೆ
ಸೊಕ್ಕು ಬಂದಿದೆ ನಿಮ್ಮ ಮಗ ವಿರೇಶ ಎಲ್ಲಿದ್ದನೆ ಹೇಳಿರಿ ಅವನಿಗೆ ನಾವು ಜಿವಂತ ಬಿಡುವದಿಲ್ಲಾ
ಅಂತಾ ಇಬ್ಬರು ಕೂಡಿ ನನ್ನ ಮೈದುನಾದ ಸಣ್ಣ ನರಸಪ್ಪಾ ಇವರಿಗೆ ಕುಸ್ತಿಗೆ ಬಿದ್ದು ಎಳೆದಾಡಿ
ಕೈಯಿಂದ ತಲೇಯ ಮೆಲೆ ಹೊಡೆದಿದ್ದು ಮತ್ತು ಕಲ್ಲಿನಿಂದ ಬಲಕೈ ಬೆರಳುಗಳಿಗೆ ಹೊಡೆದು ರಕ್ತಗಾಯ
ಪಡಿಸಿದ್ದು ಅಷ್ಟರಲ್ಲಿ ಹೊರಗಡೆಯಿಂದ ನನ್ನ ಗಂಡ ನರಸಪ್ಪಾ ಇವರು ಬಂದು ಬಿಡಿಸಲು ಹೊದಾಗ ನನಗೆ
ಹಾಗು ನನ್ನ ಗಂಡನಿಗೆ 6] ನಾಗಪ್ಪಾ ತಂದೆ ತಿಪ್ಪಣ್ಣಾ ಸಕ್ರಮೋಳ ಇತನು ಭೋಸಡಿ ಮಗೆನೆ ರಂಡಿ ನಿನ್ನ
ಮಕ್ಕಳಿಗೆ ಬುದ್ದಿ ಹೇಳಲು ಬರುವದಿಲ್ಲಾ ಅವರು ನಮ್ಮ ಸಣ್ಣ ನಾಗಪ್ಪನಿಗೆ ಜಗಳ ಮಾಡಿದ್ದಾರೆ ಅಂತಾ
ನಮಗೆ ಹೊಡೆಯುವದಕ್ಕೆ ಬಂದಿದ್ದು ಆಗಾ ಅಕ್ಕಪಕ್ಕದ ಮನೆಯವರಾದ ರಮೇಶ ತಂದೆ ಮಲ್ಲಪ್ಪಾ
ಚಟ್ಟುಕಿಂದೆರ ಹಾಗು ಕಾಶಪ್ಪಾ ತಂದೆ ನರಸಪ್ಪಾ ಚಟ್ಟುಕಿಂದೆರ ಇತರ ಜನರು ಬಂದು ಸದರಿಯವರಿಗೆ ಬಿಡಿಸಿ ಕಳಿಸಿದರು ಸದರಿಯವರು
ನನ್ನ ಮಗನಿಗೆ ಗುಂಡು ಕಲ್ಲಿನಿಂದ ತಲೆಗೆ
ಹೊಡೆದಿದ್ದರಿಂದ ನನ್ನ ಮಗ ಭೆಹೊಸ ಆಗಿ ಬಿದ್ದಿದ್ದು ನನ್ನ ಮಗನಿಗೆ ನಾನು ಹಾಗು ನನ್ನ
ಗಂಡ ನರಸಪ್ಪಾ ಮತ್ತು ನಮ್ಮ ಮೈದುನನಾದ ಸಣ್ಣ
ನರಸಪ್ಪಾ ಕೂಡಿ ಒಂದು ಕ್ರೂಸರ ಗಾಡಿಯಲ್ಲಿ ಹಾಕಿಕೊಂಡು ಉಪಚಾರ ಕುರಿತು ರಾತ್ರಿ ಮುಧೋಳ ಸರಕಾರಿ
ದವಖಾನೆಗೆ ತೆಗೆದುಕೊಂಡು ಬಂದಿದ್ದು ಇಲ್ಲಿ ದವಖಾನೆಯಲ್ಲಿ ಡಾಕ್ಟರವರು ಇಲ್ಲದಿದ್ದರಿಂದ ನನ್ನ
ಮಗನಿಗೆ ಸೇಡಂ ಸರಕಾರಿ ದವಖಾನೆಯಲ್ಲಿ ರಾತ್ರಿ ತಂದು ಸೇರಿಕೆ ಮಾಡಿರುತ್ತೆನೆ ಅಂತಾ ಸಲ್ಲಿಸಿದ
ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ
ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸುಮಿತ್ರಾಬಾಯಿ ಗಂಡ ಸುಭಾಷ ಗಾಯಕವಾಡ ಸಾ: ಗಾಜಿಪೂರ
ಅಂಬೇಡ್ಕರ ನಗರ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ ಸಾರಾಂಶವೆನೆಂದರೆ
ನನಗೆ 4 ಜನ ಹೆಣ್ಣು ಮಕ್ಕಳಿದ್ದು,. ನಾನು ಕೆಲಸಕ್ಕೆ ಹೋದ ಸಮಯದಲ್ಲಿ ನಮ್ಮ ಓಣಿಯ
ರಾಧಾಬಾಯಿ ಇವರ ಮಗನಾದ ವಿಷ್ಣು ಎಂಬುವವನು ನಮ್ಮ ಮನೆಯ ಮುಂದೆ ಬಂದು ನಿಂತುಕೊಳ್ಳುವುದು ಮಗಳು
ಅಂಬಿಕಾ ಇವಳಿಗೆ ಚುಡಾಯಿಸುವುದು ಮತ್ತು ಅವಳು ಎಲ್ಲಿಗಾದರೂ ಹೊರಗೆ ಹೋದಲ್ಲಿ ಅವಳಿಗೆ
ಹಿಂಬಾಲಿಸುವುದು ವಗೈರೆ ಮಾಡುವುದು ಮಾಡುತ್ತಿದ್ದಾನೆ ಅಂತಾ ನಮ್ಮ ಮಗಳು ಅಂಬಿಕಾ ಇವಳು ಆಗಾಗ
ನಮ್ಮ ಮುಂದೆ ಹೇಳುತ್ತಿದ್ದಳು. ಆದರೂ ಕೂಡ ವಿಷ್ಣು
ತನ್ನ ಚಟವನ್ನೆ ಮುಂದುವರೆಸಿಕೊಂಡು ಬಂದಿದ್ದು ಇರುತ್ತದೆ. ನಾಂಕ;06,10,2016 ರಂದು ನಾನು ಕೆಲಸಕ್ಕೆ ಹೋಗಿದ್ದು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನನ್ನ ಹಿರಿಯ ಮಗಳಾದ ಶ್ರೂತಿ ಇವಳು
ನನಗೆ ಪೋನ ಮಾಡಿ ಅವಳು ಸ್ನಾನಕ್ಕೆ ಹೋದಾಗ ಮದ್ಯಾಹ್ನ 1 ಗಂಟೆಯ ಸುಮಾರಿಗೆ ವಿಷ್ಣು ಇತನು ನಮ್ಮ ಮನೆಯ ಹತ್ತಿರ ಬಂದು ಅಂಬಿಕಾ
ಇವಳಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ. ಅಲ್ಲಿಂದ ಇಲ್ಲಿಯವರೆಗೆ ಮಗಳು ಅಂಬಿಕಾ ಇವಳಿಗೆ
ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ ನನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಅಂಬಿಕಾ ಇವಳಿಗೆ ಅಪಹರಣ ಮಾಡಿಕೊಂಡು ಹೋದ ವಿಷ್ಣು
ಮತ್ತು ಅವನಿಗೆ ಅಪಹರಣ ಮಾಡು ಸಹಾಯ ಮಾಡಿದ ತಾಯಿ ರಾದಾಬಾಯಿ, ದೊಡ್ಡಮ್ಮ ಮಲ್ಲಮ್ಮ @ ಯಲ್ಲಮ್ಮ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ
ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments:
Post a Comment