Police Bhavan Kalaburagi

Police Bhavan Kalaburagi

Monday, November 28, 2016

BIDAR DISTRICT DAILY CRIME UPDATE 28-11-2016



ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 28-11-2016

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 330/2016, ಕಲಂ 279, 338 ಐಪಿಸಿ :-
ಫಿರ್ಯಾದಿ ಶಿವಕುಮಾರ ತಂದೆ ಪ್ರಭು ವಯ: 25 ವರ್ಷ, ಜಾತಿ: ಎಸ್.ಸಿ ದಲಿತ, ಸಾ:ಮಳಚಾಪೂರ ರವರು ಹಾಲಹಳ್ಳಿ(ಕೆ) ಗ್ರಾಮದ ರಾಜಕುಮಾರ ಈಡಗಾರ ರವರ ಲಾರಿಯ ಮೇಲೆ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ, ಫಿರ್ಯಾದಿಯ ಅಣ್ಣನಾದ ಬಲಭೀಮ ತಂದೆ ಪ್ರಭು ಪೊತೆನೊರ ವಯ: 28 ವರ್ಷ ಇವನು ಸಹ ಸದರಿ ರಾಜಕುಮಾರ ಈಡಗಾರ ಇವರ ಲಾರಿಯ ಮೇಲೆ ಲೆಬರ್ ಕೆಲಸ ಮಾಡಿಕೊಂಡಿರುತ್ತಾನೆ, ಇವರು ಪ್ರತಿ ದಿನ ತಮ್ಮೂರಿನಿಂದ ಹಾಲಹಳ್ಳಿ(ಕೆ) ಗ್ರಾಮಕ್ಕೆ ಹೋಗಿ ಬರುತ್ತಾರೆ, ಹೀಗಿರುವಲ್ಲಿ ದಿನಾಂಕ 26-11-2016 ರಂದು ಇಬ್ಬರು ಕೆಲಸದಿಂದ ಮರಳಿ ಮನೆಗೆ ಬರುವಾಗ ಕತ್ತಲಾಗಿದ್ದರಿಂದ ಮಾಲೀಕ ರಾಜಕುಮಾರ ಇವರು ಮನೆಗೆ ಹೋಗಲು ತಮ್ಮ ಮೋಟಾರ್ ಸೈಕಲ ನಂ:. ಕೆಎ-38/ಎಸ್-6167 ನೇದನ್ನು ಕೊಟ್ಟಿದ್ದು ಇಬ್ಬರು ರಾತ್ರಿ ಮನೆಗೆ ಬಂದಿರುತ್ತಾರೆ, ನಂತರ ದಿನಾಂಕ  27-11-2016 ರಂದು ಮಾಲೀಕರ ಮುನಿಮನಾದ ವೆಂಕಟ ಸಾ: ಮಳಚಾಪೂರ ರವರು 0500 ಗಂಟೆಗೆ ಫಿರ್ಯಾದಿಯ ಮನೆಗೆ ಬಂದು ಫಿರ್ಯಾದಿಗೆ ಕೆಲಸಕ್ಕೆಂದು ಕರೆದುಕೊಂಡು ಹೋಗಿರುತ್ತಾನೆ, ನಂತರ ಫಿರ್ಯಾದಿಯ ಅಣ್ಣ ಬಲಭೀಮನು ಇತನು ಮೋಟಾರ್ ಸೈಕಲ ನಂ. ಕೆಎ-38/ಎಸ್-6167 ನೇದರ ಮೇಲೆ ಕುಳಿತು ಮಳಚಾಪೂರದಿಂದ ಹಾಲಹಳ್ಳಿ(ಕೆ) ಕಡೆಗೆ ಬರುತ್ತಿರುವಾಗ ಹುಮನಾಬಾದಬೀದರ ರೋಡ ಮಳಚಾಪೂರ ಶಿವಾರದಲ್ಲಿ ಬ್ರೀಜಿನ ಹತ್ತಿರ ಅತೀವೆಗ ಹಾಗೂ ನಿಸ್ಕಾಳಜಿತನದಿಂದ ನಡೆಸುತ್ತಾ ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಗಾಡಿ ಸ್ಲೀಪ ಆಗಿ ಕೆಳಗೆ ಬಿದ್ದು ತಲೆಗೆ, ಮುಖದ ಮೇಲೆ ಭಾರಿ ರಕ್ತಗಾಯ,  ಹಣೆಯ ಮೇಲೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಬಲಗಾಲಿನ ಪಾದದ ಹತ್ತಿರ ರಕ್ತಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಅಂಬ್ಯುಲೆನ್ಸದಲ್ಲಿ ಚಿಕಿತ್ಸೆ ಕುರಿತು ಅಣ್ಣನಿಗೆ ಬೀದರ ಸರಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ಅಣ್ಣ ಮಾತಾಡುವ ಸ್ಥತಿಯಲ್ಲಿರಲಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 277/2016, ಕಲಂ 4, 5 ಪಿ..ಟಿ ಕಾಯ್ದೆ 1956 :-
ದಿನಾಂಕ 27-11-2016 ಭಾಲ್ಕಿಯ ಪ್ರಭು ಲಾಡ್ಜ ರೂಂ ನಂ. 103 ನೇದರಲ್ಲಿ ಒಬ್ಬ ಹೆಣ್ಣು ಮಗಳು ಸೂಳೆಗಾರಿಕೆ ಕುರಿತು ಬಂದು ಕುಳಿತ್ತಿದ್ದಾಳೆ ಅಂತ ಎನ್.ಬಿ.ಮಠಪತಿ ಪಿಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಮಾಹಿತಿ ಬಂದ ಮೇರೆಗೆ ಪಿಐ ರವರು ದಾಳಿ ಮಾಡುವ ಕುರಿತು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಪ್ರಭು ಲಾಡ್ಜಿಗೆ ಹೋಗಿ ವಿಕ್ಷಿಸಲಾಗಿ ರೂಮ ನಂ. 103 ರಲ್ಲಿ ಒಬ್ಬ ಗಂಡು ಹಾಗು ಒಬ್ಬ ಹೆಣ್ಣು ಮಗಳು ಸಂಭೋಗದಲ್ಲಿ ತೊಡಗಿರುವುದನ್ನು ಖಚಿತವಾದ ನಂತರ ಮಹಿಳಾ ಸಿಬ್ಬಂದಿ ಮತ್ತು ಸಾಕ್ಷಿದಾರರ ಸಹಾಯದಿಂದ ರೂ ನಂ. 103 ನೇದ ಬಾಗೀಲನ್ನು ತೆರೆಸಿ ರೂಮಿನಲ್ಲಿ ಹೋಗಿ ಪರಿಶೀಲಿಸಲಾಗಿ ರೂಮಿನಲ್ಲಿ ಒಬ್ಬ ಗಂಡು ಹಾಗು ಒಬ್ಬ ಹೆಣ್ಣು ಮಗಳು ಅರೆ ಬರೆ ಬಟ್ಟೆಯಲ್ಲಿ ಇರುವದನ್ನು ಗಮನಿಸಿ ಸದರಿ ಹೆಣ್ಣು ಮಗಳಿಗೆ ವಿಚಾರಿಸಲು ತನ್ನ ಹೆಸರು ಲಕ್ಷ್ಮಿಬಾಯಿ ಗಂಡ ಸೀತಾರಾಮ ಜಾಧವ ವಯ: 25 ವರ್ಷ, ಜಾತಿ: ರಡ್ಡಿ, ಸಾ: ಗೋಪಾಳ ನಗರ ಉದಗಿರ ಅಂತಾ ತಿಳಿಸಿ ತನಗೆ ಸಂಜಯ ತಂದೆ ಹಣಮಂತ ಕಾಸಲೆ ವಯ: 28 ವರ್ಷ, ಜಾತಿ: ವಡ್ಡರ, ಸಾ: ಫುಲೆ ನಗರ ಉದಗೀರ ಇವನು ಸಂಭೋಗದ ಸಲುವಾಗಿ ಲಾಡ್ಜಿಗೆ ಬರಲು ತಿಳಿಸಿದ್ದರಿಂದ ಲಾಡ್ಜಿಗೆ ಬಂದಿರುವದಾಗಿ ತಿಳಿಸಿರುತ್ತಾಳೆ, ಸದರಿಯವರು ಮಾಡುವ ಕೃತ್ಯ ಕಾನೂನ ಅಡಿಯಲ್ಲಿ ಅಪರಾಧವಾಗಿರುವುಧೃಈಮಧ ಅರೋಪಿ ಸಂಜಯ ತಂದೆ ಹಣಮಂತ ಕಾಸಲೆ ವಯ 28 ವರ್ಷ, ಜಾತಿ: ವಡ್ಡರ, ಸಾ: ಫೂಲೆ ನಗರ ಉದಗೀರ ಇತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 278/2016, PÀ®A 279, 338 L¦¹ :-
ದಿನಾಂಕ 27-11-2016 ರಂದು ಫಿರ್ಯಾದಿ ಬಾಲಾಜಿ ತಂದೆ ದತ್ತುರಾವ ಬಿರಾದಾರ ವಯ: 30 ವರ್ಷ, ಜಾತಿ: ಮರಾಠ, ಸಾ: ಲಿಂಗದಳ್ಳಿ, ತಾ: ಔರಾದ (ಬಿ) ರವರು ಮತ್ತು ಕ್ಲೀನರ್ ವೆಂಕಟ ಇಬ್ಬರೂ ಕೂಡಿ ಲಾರಿ ನಂ. ಎಮ್.ಎಚ್-22/ಎನ್-2354 ನೇದರಲ್ಲಿ ಭಾಲ್ಕಿಯ ಗಜಾನಂದ ಟ್ರೇಡರ್ಸನಲ್ಲಿ ಸೋಯಾಬಿನ ತುಂಬಿಕೊಂಡು ಉದಗೀರ ಮಾರ್ಗವಾಗಿ ನಾಂದೇಡಕ್ಕೆ ಹೋಗುವ ಕುರಿತು ಭಾಲ್ಕಿಯಿಂದ ಭಾಲ್ಕಿ-ಉದಗೀರ ರೋಡ ಮುಖಾಂತರ ಭಾಲ್ಕಿಯ ವಿವೆಕಾನಂದ ಚೌಕ ಹತ್ತಿರ ಬಂದಾಗ ಭಾತಂಬ್ರಾ ಕಡೆಯಿಂದ ಒಂದು ಬೋಲೆರೊ ನಂ. ಕೆಎ -32/ಟಿಆರ-1116 ನೇದರ ಚಾಲಕನಾದ ಆರೋಪಿಯು ತನ್ನ ಬೊಲೆರೊ ವಾಹನವನ್ನು ಅತಿ ವೇಗ ಹಾಗು ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ಫಿರ್ಯಾದಿಯ ಲಾರಿಗೆ ಡಿಕ್ಕಿ ಮಾಡಿ ಬೋಲೆರೊ ನಿಲ್ಲಿಸದೆ ಓಡಿಸಿಕೊಂಡು ಹೊದನು, ಸದರಿ ಡಿಕ್ಕಿಯಿಂದ ಫಿರ್ಯಾದಿಯ ತಲೆಯಲ್ಲಿ ತರಚಿದ ಗಾಯಗಳಾಗಿರುತ್ತವೆ ಅಂತ ಕೊಟ್ಟ ಫಿರ್ಯಾದಿಯ ಹೆಳಿಕೆ ಸಾರಾಂಶದ ಮೇರೆಗೆ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: